GDP: ಪ್ರಸಕ್ತ ಹಣಕಾಸು ವರ್ಷದಲ್ಲಿ ಎರಡಂಕಿಯ ಬೆಳವಣಿಗೆ ವಿಶ್ವಾಸ; ವಿತ್ತ ಸಚಿವಾಲಯದಿಂದ ಸರಣಿ ಟ್ವೀಟ್
2021-22ರ ಹಣಕಾಸು ವರ್ಷದಲ್ಲಿ ಭಾರತದ ಬೆಳವಣಿಗೆ ದರ ಎರಡಂಕಿಯನ್ನು ಮುಟ್ಟಲಿದೆ ಎಂದು ಹಣಕಾಸು ಸಚಿವಾಲಯ ನಿರೀಕ್ಷೆ ವ್ಯಕ್ತಪಡಿಸಿದೆ. ಅಷ್ಟೇ ಅಲ್ಲ, ಅಂಕಿ-ಅಂಶಗಳ ಸರಣಿ ಟ್ವೀಟ್ ಮಾಡಿದೆ.
2021-22ನೇ ಹಣಕಾಸು ವರ್ಷದ ಎರಡನೇ ತ್ರೈಮಾಸಿಕವಾದ ಜುಲೈನಿಂದ ಸೆಪ್ಟೆಂಬರ್ ತನಕದ ಜಿಡಿಪಿ ಬೆಳವಣಿಗೆ ದರವನ್ನು ನವೆಂಬರ್ 30ನೇ ತಾರೀಕಿನ ಮಂಗಳವಾರದಂದು ಬಿಡುಗಡೆ ಮಾಡಲಾಗಿದೆ. ಅದರ ಪ್ರಕಾರವಾಗಿ, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಜಿಡಿಪಿ ಶೇ 8.4ರಷ್ಟು ಪ್ರಗತಿ ದಾಖಲಿಸಿದೆ. ಇನ್ನು ಕೇಂದ್ರ ಹಣಕಾಸು ಸಚಿವಾಲಯದಿಂದ ಸರಣಿ ಟ್ವೀಟ್ಗಳನ್ನು ಮಾಡಿದ್ದು, ಪ್ರಸಕ್ತ ಹಣಕಾಸು ವರ್ಷದಲ್ಲಿ ಎರಡಂಕಿಯ ಬೆಳವಣಿಗೆ ದಾಖಲಿಸುವ ವಿಶ್ವಾಸ ವ್ಯಕ್ತಪಡಿಸಲಾಗಿದೆ. ಹಣದುಬ್ಬರವನ್ನು ನಿಯಂತ್ರಣದಲ್ಲಿ ಇಡುವ ಸಲುವಾಗಿ ಪೂರೈಕೆ ಹಾಗೂ ಬೇಡಿಕೆ ಎರಡರ ಮೇಲೂ ದೇಶದ ನೀತಿ ಗಮನ ಕೇಂದ್ರೀಕರಿಸಿದೆ. ಇದಕ್ಕೆ ವ್ಯತಿರಿಕ್ತವಾಗಿ ಜಾಗತಿಕ ಹಣಕಾಸು ಬಿಕ್ಕಟ್ಟಿನ ನಂತರ ಬೇಡಿಕೆ ಸೃಷ್ಟಿಯ ಕಡೆಗೆ ಮಾತ್ರ ನೀತಿಗಳು ಗಮನ ಕೇಂದ್ರೀಕರಿಸಿದ್ದರಿಂದ ಹಣದುಬ್ಬರ ಬಹಳ ಹೆಚ್ಚಾಯಿತು ಎನ್ನಲಾಗಿದೆ. ಪೂರೈಕೆ ಕಡೆಯ ಅಗತ್ಯ ಕ್ರಮಗಳು ಮತ್ತು ಬೇಡಿಕೆ ವಿಸ್ತರಣೆ ಈ ಎರಡೂ ಕಡೆ ಭಾರತದ ಗಮನ ಇದೆ. ಆದ್ದರಿಂದ ಹಣದುಬ್ಬರ ನಿಯಂತ್ರಣದಲ್ಲಿ ಇರಿಸಿಕೊಳ್ಳಲೇ ಬೇಕು ಎಂದು ಹೇಳಲಾಗಿದೆ.
ಮತ್ತೊಂದು ಟ್ವೀಟ್ನಲ್ಲಿ, ಭಾರತವೇನೋ ಪೂರೈಕೆ ಹಾಗೂ ಬೇಡಿಕೆ ಎರಡೂ ಕಡೆ ಗಮನ ಇಟ್ಟಿದೆ. ಆದರೆ ಜಾಗತಿಕವಾಗಿ ಹಣದುಬ್ಬರ ಕಾಣಿಸಿಕೊಳ್ಳಲು ಕಾರಣ ಏನೆಂದರೆ, ಈಗಲೂ ಬೇಡಿಕೆ ಕಡೆಯೇ ಎಕ್ಸ್ಕ್ಲೂಸಿವ್ ಆಗಿ ದೃಷ್ಟಿ ನೆಡಲಾಗಿದೆ. ಒಇಸಿಡಿ ಮೂಲಗಳನ್ನು ಉದಾಹರಿಸಿ ನೀಡಿರುವ ಅಂಕಿ-ಅಂಶದ ಪ್ರಕಾರ, ಭಾರತವನ್ನು ಹೊರತುಪಡಿಸಿದಂತೆ ಕೆನಡಾ, ಜರ್ಮನಿ, ಇಟಲಿ, ಬ್ರಿಜಿಲ್, ಮೆಕ್ಸಿಕೋ, ದಕ್ಷಿಣ ಆಫ್ರಿಕಾ, ರಷ್ಯಾ ಹಾಗೂ ಟರ್ಕಿ ಇಲ್ಲೆಲ್ಲ ಟ್ರೆಂಡ್ ಏರಿಕೆಯಲ್ಲೇ ಇದೆ.
ಪ್ರಸಕ್ತ ಹಣಕಾಸು ವರ್ಷದ ಪ್ರಥಮಾರ್ಧ, ಅಂದರೆ FY22-H1ರಲ್ಲಿ ಬಂಡವಾಳ ವೆಚ್ಚ ತುಂಬ ಜಾಸ್ತಿ ಮಾಡಲಾಗಿದೆ. ಈ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಶೇ 38.3ಕ್ಕೆ ಏರಿಕೆ ಆಗಿದೆ. FY20-H1ರಲ್ಲಿ ಇದು ಶೇ 22.3ರಷ್ಟಿತ್ತು. ಖಾಸಗಿಯಿಂದ ಬಂದ ಬಂಡವಾಳ ಹೂಡಿಕೆ ಕೂಡ ಇದರಲ್ಲಿ ಭಾಗವಾಗಿದೆ. ಸಂಘಟಿತ ವಲಯಗಳು (ಇದರ ಉತ್ಪಾದನೆ ಬಹುತೇಕ ಕಾರ್ಮಿಕರು ಮತ್ತು ಬಂಡವಾಳದ ಮೇಲೆ ನಿಂತಿರುವುದರಿಂದ ಹೆಚ್ಚು ದುರ್ಬಲವಾಗುತ್ತದೆ) ಕೊವಿಡ್ ನಂತರ ಹೆಚ್ಚು ಬಲಿಷ್ಠವಾಗಿದೆ. ಆದರೆ ಅಸಂಘಟಿತ ವಲಯಗಳ ಮೇಲೆ ಹೆಚ್ಚಿನ ಪ್ರಭಾವ ಬೀರಿದೆ. ಆದರೆ ಇದು ಮುಖ್ಯವಾಗಿ ಉತ್ಪಾದನೆಗಾಗಿ ಕಾರ್ಮಿಕರನ್ನೇ ಅವಲಂಬಿಸಿರುತ್ತದೆ.
ಹಣಕಾಸು ವಲಯವು ಪ್ರಬಲವಾಗಿ ಹೊರಹೊಮ್ಮಿದೆ. ಉತ್ತಮವಾದ ಆಸ್ತಿ ಗುಣಮಟ್ಟ, ಬ್ಯಾಡ್ ಲೋನ್ನಿಂದ ರಕ್ಷಣೆ ಪಡೆಯಲು ಅದ್ಭುತ ಪ್ರಾವಿಷನ್ ಕವರೇಜ್, ಜತೆಗೆ ಬಂಡವಾಳ ಕಾಪಾಡಿಕೊಳ್ಳಲು ಬೇಕಾದಂಥ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ. ಭವಿಷ್ಯದಲ್ಲಿ ಹೂಡಿಕೆಗೆ ಇದು ಮುಖ್ಯವಾಗಲಿದೆ. ಸಾರ್ವಜನಿಕ ಬ್ಯಾಂಕ್ಗಳ ಲಾಭ 2021ರ ಜೂನ್ನಲ್ಲಿ 14,012 ಕೋಟಿ ರೂಪಾಯಿ ಇತ್ತು. 2020ರ ಜೂನ್ಗೆ ಹೋಲಿಸಿದರೆ ಇದು ಶೇ 140ರಷ್ಟು ಹೆಚ್ಚು, ಇನ್ನು 2019ರ ಜೂನ್ಗೆ ಹೋಲಿಸಿದರೆ ಶೇ 255ರಷ್ಟು ಜಾಸ್ತಿ. ಇನ್ನು ಗ್ರಾಸ್ ಎನ್ಪಿಎ 2018ರ ಮಾರ್ಚ್ನಲ್ಲಿ ಇದ್ದ ಶೇ 11.2ರಿಂದ 2021ರ ಜೂನ್ನಲ್ಲಿ ಶೇ 7.4ಕ್ಕೆ ಬಂದಿದೆ. ನಿವ್ವಳ ಎನ್ಪಿಎ ಇದೇ ಅವಧಿಯಲ್ಲಿ ಶೇ 5.9ರಿಂದ ಶೇ 2.4ಕ್ಕೆ ಇಳಿದಿದೆ. ಪಿಸಿಎಆರ್ ಶೇ 62.7ರಿಂದ ಶೇ 84ಕ್ಕೆ ಹೆಚ್ಚಳವಾಗಿದೆ.
✅ India likely to have double digit growth in FY21-22
✅ India’s policy focused on both Supply & demand to ensure inflation under control. In contrast, post GFC, runaway inflation manifested because of the policy focused only on demand (1/6) pic.twitter.com/Flg7Ml7PXU
— Ministry of Finance (@FinMinIndia) November 30, 2021
ಕ್ಯಾಪಿಟಲ್ ಅಡಿಕ್ವಸಿ: ಎಸ್ಸಿಬಿಗಳ ಸಿಆರ್ಎಆರ್ ಸಾರ್ವಜನಿಕ ಗರಿಷ್ಠ ಮಟ್ಟವಾದ ಶೇ 16.4ರಷ್ಟಿದೆ. ಜೂನ್ 30, 2021ಕ್ಕೆ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ಗಳ ಸಿಆರ್ಎಆರ್ ಶೇ 14.3ರಷ್ಟಿತ್ತು. ಹಣಕಾಸು ವರ್ಷ 20-21ರಲ್ಲಿ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ಗಳು 58,697 ಕೋಟಿ ರೂಪಾಯಿ ಬಂಡವಾಳ ನಿಧಿ ಸಂಗ್ರಹಿಸಿವೆ. ಒಂದು ಹಣಕಾಸು ವರ್ಷದಲ್ಲಿ ಸಂಗ್ರಹಿಸಿದ ಅತಿ ಹೆಚ್ಚಿನ ಮೊತ್ತ ಇದು.
2005-2010 ಹಾಗೂ 2010ರಿಂದ 2015ರಂತೆ ಅಲ್ಲದೆ, 2015ರಿಂದ 2019ರ ಅವಧಿಯಲ್ಲಿ ಭಾರತದಲ್ಲಿನ ಉತ್ಪಾದನಾ ಬೆಳವಣಿಗೆ ಚೀನಾವನ್ನೂ ಮೀರಿಸಿದೆ. ವಿದ್ಯುತ್, ಸರಕು ಸಾಗಣೆ ಬೆಲೆಯಲ್ಲಿನ ಇಳಿಕೆ ಮತ್ತು ಇತರ ದೇಶಗಳ ಆರ್ಥಿಕತೆಗೆ ಹೋಲಿಸಿದರೆ ಸ್ಪರ್ಧಾತ್ಮಕ ಎನಿಸುವ ತೆರಿಗೆ ಪರಿಸರದಿಂದಾಗಿ ಇದು ಸಾಧ್ಯವಾಗಿದೆ ಎನ್ನಲಾಗಿದೆ.
ಇದನ್ನೂ ಓದಿ: GDP: ಜುಲೈನಿಂದ ಸೆಪ್ಟೆಂಬರ್ ಎರಡನೇ ತ್ರೈಮಾಸಿಕ ಜಿಡಿಪಿ ಶೇ 8.4ರಷ್ಟು ಬೆಳವಣಿಗೆ