ಕಳೆದ ಎರಡು ವರ್ಷಗಳಿಂದ ಲೇ ಆಫ್, ರಾಜೀನಾಮೆಗಳು ಭಾರತದ ಕಾರ್ಪೊರೇಟ್ ವಲಯವನ್ನು ಅಲುಗಾಡಿಸುತ್ತಾ ಬರುತ್ತಿದೆ. ಕಂಪನಿ ತನಗೆ ಉಪಯೋಗವಲ್ಲ ಎನಿಸಿದ ಉದ್ಯೋಗಿಗಳನ್ನು ಕೆಲಸದಿಂದ ಲೇ ಆಫ್ ಮಾಡುತ್ತವೆ. ಆದರೆ, ಉದ್ಯೋಗಿಗಳು ರಾಜೀನಾಮೆ (Resignation) ನೀಡಲು ಏನು ಕಾರಣ? ಉದ್ಯೋಗಿಗಳು ಹೆಚ್ಚು ಸಂಬಳದ ಆಸೆಗೆ ಕೆಲಸ ಬದಲಿಸುತ್ತಾರೆ ಎಂಬ ಅಭಿಪ್ರಾಯವನ್ನೇ ಸಾಮಾನ್ಯೀಕರಿಸಲಾಗುತ್ತದೆ. ಆದರೆ, ಕೆಟ್ಟ ಬಾಸ್ (Toxic Boss) ಹಾಗು ಕೆಟ್ಟ ಕೆಲಸದ ವಾತಾವರಣವೇ (Toxic Work Environment) ಕಾರ್ಪೊರೇಟ್ ಜಗತ್ತಿನಲ್ಲಿ ಉದ್ಯೋಗಿಗಳು ಕೆಲಸ ಬಿಡಲು ಕಾರಣ ಎಂಬ ಅಂಶ ಸಮೀಕ್ಷೆಯೊಂದರಲ್ಲಿ ಬೆಳಕಿಗೆ ಬಂದಿದೆ.
ಹರಪ್ಪ ಇನ್ಸೈಟ್ಸ್ (Harappa Insights) ಎಂಬ ಸಂಸ್ಥೆ 2022ರ ಮೇ ಮತ್ತು ಜೂನ್ ಅವಧಿಯಲ್ಲಿ ವೃತ್ತಿಪರ ಉದ್ಯೋಗಿಗಳ ಸಮೀಕ್ಷೆ ನಡೆಸಿ ಒಂದಷ್ಟು ಕುತೂಹಲಕಾರಿ ಮಾಹಿತಿ ಕಲೆ ಹಾಕಿದೆ. ಅದರ ಪ್ರಕಾರ ಕೆಟ್ಟ ಬಾಸ್ ಮತ್ತು ಕೆಟ್ಟ ಕೆಲಸದ ವಾತಾರಣ ಉದ್ಯೋಗಿಗಳ ರಾಜೀನಾಮೆಗೆ ಪ್ರಮುಖ ಎರಡು ಕಾರಣಗಳಂತೆ. ಹೆಚ್ಚಿನ ಸಂಬಳದ ಆಸೆಗೆ ಕೆಲಸ ಬಿಡುವವರ ಸಂಖ್ಯೆ ನಿರೀಕ್ಷಿಸಿದಷ್ಟಿಲ್ಲ ಎಂಬುದು ಹರಪ್ಪ ಇನ್ಸೈಟ್ಸ್ ಸಂಸ್ಥೆಯ ಸಮೀಕ್ಷೆಯಿಂದ ಗೊತ್ತಾಗುತ್ತದೆ.
ಇದನ್ನೂ ಓದಿ: Startups: ಬೆಂಗಳೂರಾ, ಮುಂಬೈಯಾ? ಕಂಪನಿ ನಡೆಸಲು ಕಷ್ಟವಾಗುವ ನಗರ ಯಾವುದು? ಸಿಇಒಗಳು ಹೇಳೋದಿದು
ಇನ್ನೊಂದು ಕುತೂಹಲ ಸಂಗತಿ ಎಂದರೆ ವೃತ್ತಿ ಮತ್ತು ವೈಯಕ್ತಿಕ ಜೀವನ ಎರಡಕ್ಕೂ ಅನುಕೂಲವಾಗುವಂತಹ ಕೆಲಸದ ಅವಕಾಶ ಸಿಕ್ಕರೆ ಕಡಿಮೆ ಸಂಬಳಕ್ಕೂ ಹೋಗಲು ಸಿದ್ಧ ಎಂದು ಹೇಳುವವರ ಸಂಖ್ಯೆ ಶೇ. 61ರಷ್ಟಿದೆಯಂತೆ. ಆದರೆ, ಬ್ಯುಸಿನೆಸ್, ಟಾರ್ಗೆಟ್, ಕಾಂಪಿಟೀಶನ್ ಮಂತ್ರಗಳನ್ನು ಹೇಳುವ ಕಾರ್ಪೊರೇಟ್ ಕಂಪನಿಗಳು ವರ್ಕ್ ಲೈಫ್ ಬ್ಯಾಲನ್ಸ್ ಬಗ್ಗೆ ತಲೆಕೆಡಿಸಿಕೊಳ್ಳುವುದು ಕಡಿಮೆ ಎನ್ನುವುದು ಹೌದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ