ಅಮೆರಿಕ, ಯೂರೋಪ್ನಲ್ಲಿ ಬಜೆಟ್ ಕಡಿಮೆ ಆದರೂ ನಾರ್ಡಿಕ್ ದೇಶಗಳಿಂದ ಭಾರತೀಯ ಐಟಿ ಕಂಪನಿಗಳಿಗೆ ಸಖತ್ ಬಿಸಿನೆಸ್
Nordic companies IT service business: ಭಾರತೀಯ ಐಟಿ ವಲಯಕ್ಕೆ ಹೆಚ್ಚು ಬಿಸಿನೆಸ್ ಆಗುವುದು ಅಮೆರಿಕ ಮತ್ತು ಐರೋಪ್ಯ ಒಕ್ಕೂಟ ದೇಶಗಳಲ್ಲಿ. ಆದರೆ, ಅಲ್ಲೀಗ ಆರ್ಥಿಕ ಹಿನ್ನಡೆ ಹಿನ್ನೆಲೆಯಲ್ಲಿ ಬಜೆಟ್ ಕಡಿತ ಆಗಿದೆ. ಅದರ ಪರಿಣಾಮ, ಭಾರತೀಯ ಐಟಿ ಸರ್ವಿಸ್ ಕಂಪನಿಗಳಿಗೆ ಸಿಗುವ ಪ್ರಾಜೆಕ್ಟ್ ಮೊತ್ತ ಕಡಿಮೆ ಆಗಿದೆ. ಇದೇ ವೇಳೆ ಸ್ವೀಡನ್ ಇತ್ಯಾದಿ ನಾರ್ಡಿಕ್ ದೇಶಗಳಲ್ಲಿ ಮಾತ್ರ ಭಾರತೀಯ ಐಟಿ ಕಂಪನಿಗಳಿಗೆ ಉತ್ತಮ ಬಿಸಿನೆಸ್ ಮುಂದುವರಿಯುತ್ತಿದೆ.
ನವದೆಹಲಿ, ನವೆಂಬರ್ 14: ಯೂರೋಪ್ನ ನಾರ್ಡಿಕ್ ಪ್ರದೇಶದ ದೇಶಗಳು (Nordic countries) ಭಾರತೀಯ ಐಟಿ ಸಂಸ್ಥೆಗಳಿಗೆ ಹೆಚ್ಚು ಬಿಸಿನೆಸ್ ನೀಡುವುದು ಮುಂದುವರಿದಿದೆ. ಕುತೂಹಲವೆಂದರೆ, ಭಾರತೀಯ ಐಟಿ ವಲಯಕ್ಕೆ ಹೆಚ್ಚು ಬಿಸಿನೆಸ್ ಆಗುವುದು ಅಮೆರಿಕ ಮತ್ತು ಐರೋಪ್ಯ ಒಕ್ಕೂಟ ದೇಶಗಳಲ್ಲಿ. ಆದರೆ, ಅಲ್ಲೀಗ ಆರ್ಥಿಕ ಹಿನ್ನಡೆ ಹಿನ್ನೆಲೆಯಲ್ಲಿ ಬಜೆಟ್ ಕಡಿತ ಆಗಿದೆ. ಅದರ ಪರಿಣಾಮ, ಭಾರತೀಯ ಐಟಿ ಸರ್ವಿಸ್ ಕಂಪನಿಗಳಿಗೆ ಸಿಗುವ ಪ್ರಾಜೆಕ್ಟ್ ಮೊತ್ತ ಕಡಿಮೆ ಆಗಿದೆ. ಇದೇ ವೇಳೆ ಸ್ವೀಡನ್ ಇತ್ಯಾದಿ ನಾರ್ಡಿಕ್ ದೇಶಗಳಲ್ಲಿ ಮಾತ್ರ ಭಾರತೀಯ ಐಟಿ ಕಂಪನಿಗಳಿಗೆ ಉತ್ತಮ ಬಿಸಿನೆಸ್ ಮುಂದುವರಿಯುತ್ತಿದೆ.
ಯಾವುವಿವು ನಾರ್ಡಿಕ್ ದೇಶಗಳು?
ನಾರ್ಡಿಕ್ ಎಂದರೆ ಉತ್ತರದ ಪ್ರದೇಶ. ಯೂರೋಪ್ ಖಂಡದ ಉತ್ತರ ಭಾಗದ ದೇಶಗಳನ್ನು ನಾರ್ಡಿಕ್ ದೇಶಗಳೆನ್ನುತ್ತಾರೆ. ಸ್ವೀಡನ್, ಡೆನ್ಮಾರ್ಕ್, ನಾರ್ವೇ, ಫಿನ್ಲ್ಯಾಂಡ್, ಫರೂ ಐಲ್ಯಾಂಡ್ಸ್, ಗ್ರೀನ್ಲ್ಯಾಂಡ್ ಇತ್ಯಾದಿ ಇವೆ. ಇವನ್ನು ಸ್ಕ್ಯಾಂಡಿನೇವಿಯನ್ ದೇಶಗಳೆಂದೂ ಕರೆಯುತ್ತಾರೆ.
ಇದನ್ನೂ ಓದಿ: ಅರ್ಜೆಂಟೀನಾದಲ್ಲಿ ಭೀಕರ ಹಣದುಬ್ಬರ; ಉಟ್ಟ ಉಡುಗೆ ಮಾರಿ ಜೀವನ ನಡೆಸಬೇಕಾದ ಸ್ಥಿತಿ
ನೊಕಿಯಾ, ಎರಿಕ್ಸನ್, ಟೆಲಿನಾರ್, ವೋಲ್ವೋ, ಈಕ್ವಿನಾರ್, ನೆಸ್ಲೆ ಮೊದಲಾದ ಹಲವು ದೊಡ್ಡ ಕಂಪನಿಗಳು ಈ ಪ್ರದೇಶದ್ದಾಗಿವೆ. ಬ್ರಿಟನ್ ಹಾಗೂ ಇತರ ಐರೋಪ್ಯ ಪ್ರದೇಶಕ್ಕೆ ಹೋಲಿಸಿದರೆ ನಾರ್ಡಿಕ್ ಪ್ರದೇಶದ ಐಟಿ ಸರ್ವಿಸ್ ಮಾರುಕಟ್ಟೆ ಅಷ್ಟು ದೊಡ್ಡದಲ್ಲ. ಆದರೆ, 2018ರಲ್ಲಿ ನಾರ್ಡಿಕ್ನ ಐಟಿ ಸರ್ವಿಸ್ ಮಾರುಕಟ್ಟೆ ಗಾತ್ರ 24.4 ಬಿಲಿಯನ್ ಮೊತ್ತ ಇತ್ತು. ಇದೀಗ 29.5 ಬಿಲಿಯನ್ ಡಾಲರ್ಗೆ ಹೆಚ್ಚಾಗಿದೆ.
ನಾರ್ಡಿಕ್ ಕಂಪನಿಗಳು ಐಟಿ ಸರ್ವಿಸ್ಗೆ ಭಾರತೀಯ ಐಟಿ ಸಂಸ್ಥೆಗಳಿಗೆ ಹೆಚ್ಚು ಆದ್ಯತೆ ಕೊಡುತ್ತವೆ. ಭಾರತೀಯ ಐಟಿ ಕಂಪನಿಗಳು ಈ ದೇಶಗಳಲ್ಲಿ ಕಚೇರಿಗಳನ್ನು ತೆರೆದು ಸೇವೆ ನೀಡುತ್ತಿವೆ. ಟಿಸಿಎಸ್ ಮತ್ತು ಇನ್ಫೋಸಿಸ್ ಸಂಸ್ಥೆಗಳಿಗೆ ಹೆಚ್ಚು ಬಿಸಿನೆಸ್ ಸಿಗುತ್ತವೆ. ಇವಲ್ಲದೇ ಎಚ್ಸಿಎಲ್ ಟೆಕ್ನಾಲಜೀಸ್, ವಿಪ್ರೋ, ಟೆಕ್ ಮಹೀಂದ್ರ ಕಂಪನಿಗಳೂ ನಾರ್ಡಿಕ್ ದೇಶದಲ್ಲಿ ಉತ್ತಮ ಬಿಸಿನೆಸ್ ಕಾಣುತ್ತಿವೆ.
ಭಾರತದ ಅತಿದೊಡ್ಡ ಐಟಿ ಸಂಸ್ಥೆ ಟಿಸಿಎಸ್ ನಾರ್ಡಿಕ್ ಪ್ರದೇಶದಲ್ಲಿ 20,000 ಉದ್ಯೋಗಿಗಳನ್ನು ಹೊಂದಿದೆ. ಟೆಲಿನಾರ್ನಂತಹ ದೈತ್ಯ ಸಂಸ್ಥೆ ಟಿಸಿಎಸ್ನಿಂದ ಐಟಿ ಸರ್ವಿಸ್ ಪಡೆಯುತ್ತದೆ. ಇನ್ನು, ಇನ್ಫೋಸಿಸ್ ಸಂಸ್ಥೆ ಇಲ್ಲಿ 2,500 ಉದ್ಯೋಗಿಗಳನ್ನು ಹೊಂದಿದೆ. ವಿಪ್ರೋ 2,000 ಮತ್ತು ಎಚ್ಸಿಎಲ್ 1,600 ಉದ್ಯೋಗಿಗಳನ್ನು ಹೊಂದಿದೆ.
ಇದನ್ನೂ ಓದಿ: ಈ ಹಬ್ಬದ ಸೀಸನ್ನಲ್ಲಿ ರೀಟೇಲ್ ಮಾರುಕಟ್ಟೆಯಲ್ಲಿ 3.75 ಲಕ್ಷಕೋಟಿ ರೂ ವಹಿವಾಟು; ಇದು ಹೊಸ ದಾಖಲೆ
ಭಾರತೀಯ ಐಟಿ ಕಂಪನಿಗಳಿಗೆ ಏಕೆ ಪ್ರಾಶಸ್ತ್ಯ?
ಐಟಿ ಸರ್ವಿಸ್ ಕೊಡಲು ಸ್ಥಳೀಯ ಮತ್ತು ಜಾಗತಿಕ ಟೆಕ್ ಕಂಪನಿಗಳಿವೆ. ಆದರೆ, ನಾರ್ಡಿಕ್ ದೇಶಗಳು ಮಾತ್ರವಲ್ಲ, ವಿಶ್ವದ ಹಲವು ಪ್ರಮುಖ ಕಂಪನಿಗಳು ಐಟಿ ಸರ್ವಿಸ್ಗೆ ಭಾರತೀಯ ಕಂಪನಿಗಳಿಗೇ ಹೆಚ್ಚು ಆದ್ಯತೆ ಕೊಡಲು ಕಾರಣಗಳಿವೆ. ಬೇರೆ ಐಟಿ ಕಂಪನಿಗಳಿಗೆ ಹೋಲಿಸಿದರೆ ಭಾರತೀಯ ಕಂಪನಿಗಳು ತಂತ್ರಜ್ಞಾನವನ್ನು ಉನ್ನತೀಕರಿಸುತ್ತಲೇ ಇರುತ್ತವೆ. ಸರ್ವಿಸ್ ವೆಚ್ಚವೂ ಕಡಿಮೆ ಇರುತ್ತದೆ. ಬೇರೆ ಕಂಪನಿಗಳಿಗೆ ಹೋಲಿಸಿದರೆ ಇವು ಶೇ 10ರಿಂದ 18ರಷ್ಟು ಬೆಲೆ ವ್ಯತ್ಯಾಸ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ