2047ರೊಳಗೆ 1 ಟ್ರಿಲಿಯನ್ ಡಾಲರ್ ಗಾತ್ರದ್ದಾಗಲಿದೆ ಭಾರತದ ಔಷಧ ಉದ್ಯಮ

India, the pharmacy of the world: 55 ಬಿಲಿಯನ್ ಡಾಲರ್ ಗಾತ್ರದ್ದಾಗಿರುವ ಭಾರತದ ಫಾರ್ಮಾ ಕ್ಷೇತ್ರ 2030ರಲ್ಲಿ 130 ಬಿಲಿಯನ್ ಗಾತ್ರಕ್ಕೆ ಹೆಚ್ಚಬಹುದು ಎಂದು ನಿರೀಕ್ಷಿಸಲಾಗಿದೆ. 2047ರ ವೇಳೆಗೆ ಇದು 1 ಟ್ರಿಲಿಯನ್ ಡಾಲರ್ ಗಾತ್ರದ್ದಾಗಬಹುದು ಎಂದು ಪರಿಣಿತರು ಹೇಳುತ್ತಾರೆ. ಅತಿಹೆಚ್ಚು ಔಷಧ ತಯಾರಿಕೆಯಲ್ಲಿ ಭಾರತ 3ನೇ ಸ್ಥಾನದಲ್ಲಿದೆ. ಲಸಿಕೆಯಲ್ಲಿ ಭಾರತ ನಂಬರ್ ಒನ್.

2047ರೊಳಗೆ 1 ಟ್ರಿಲಿಯನ್ ಡಾಲರ್ ಗಾತ್ರದ್ದಾಗಲಿದೆ ಭಾರತದ ಔಷಧ ಉದ್ಯಮ
ಫಾರ್ಮಾ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 28, 2024 | 2:47 PM

ನವದೆಹಲಿ, ನವೆಂಬರ್ 28: ಭಾರತದಲ್ಲಿ ಔಷಧ ಉತ್ಪಾದನಾ ಕ್ಷೇತ್ರ ಪ್ರಬಲವಾಗಿ ಬೆಳೆಯುತ್ತಿದ್ದು ಈಗಾಗಲೇ ವಿಶ್ವದ ಫಾರ್ಮಸಿ ಎನ್ನುವ ಹೆಗ್ಗಳಿಕೆ ಸಂಪಾದಿಸಿದೆ. ಮುಂದಿನ ವರ್ಷಗಳಲ್ಲಿ ಈ ಬಿರುದು ಇನ್ನಷ್ಟು ನಿಚ್ಚಲವಾಗಲಿದೆ. ವರದಿಯೊಂದರ ಪ್ರಕಾರ 2047ರೊಳಗೆ ಭಾರತದ ಫಾರ್ಮಾ ಉದ್ಯಮದ ಗಾತ್ರ ಬರೋಬ್ಬರಿ 1 ಟ್ರಿಲಿಯನ್ ಡಾಲರ್ ಗಾತ್ರದ್ದಾಗಿರಲಿದೆ. ಅಂದರೆ 85 ಲಕ್ಷ ಕೋಟಿ ರೂನಷ್ಟು ಬೃಹತ್ ಗಾತ್ರದ ಉದ್ಯಮವೆನಿಸಲಿದೆ. ದೆಹಲಿಯ ಬಳಿಕ ನೋಯ್ಡಾದಲ್ಲಿ ನಡೆದ ಸಿಪಿಎಚ್​ಐ ಮತ್ತು ಪಿಎಂಇಸಿ ಇಂಡಿಯಾ ಎಕ್ಸ್​ಪೋ ಸಮಾವೇಶದಲ್ಲಿ ಫಾರ್ಮಾ ಕ್ಷೇತ್ರದ ಪರಿಣಿತರು, ಉದ್ಯಮನಾಯಕರು ಪಾಲ್ಗೊಂಡು ಚರ್ಚೆ ನಡೆಸಿದರು.

ಸದ್ಯ ಭಾರತದ ಫಾರ್ಮಾ ಕ್ಷೇತ್ರವು 55 ಬಿಲಿಯನ್ ಡಾಲರ್​​ನಷ್ಟಿದೆ. 2030ರಳಗೆ ಅದು 130 ಬಿಲಿಯನ್ ಡಾಲರ್ ಅಗಬಹುದು. 2047ಕ್ಕೆ 1 ಟ್ರಿಲಿಯನ್ ಡಾಲರ್ ಗಡಿ ದಾಟಬಹುದು ಎಂದು ನಿರೀಕ್ಷಿಸಲಾಗಿದೆ. ಅಂದರೆ, ಭಾರತದ ಫಾರ್ಮಾ ಉದ್ಯಮವು ಇನ್ನು 25 ವರ್ಷದಲ್ಲಿ ಹೆಚ್ಚೂಕಡಿಮೆ 20 ಪಟ್ಟು ಹೆಚ್ಚು ಬೆಳೆಯುವ ನಿರೀಕ್ಷೆ ಇದೆ.

ಇದನ್ನೂ ಓದಿ: ಬೀಸುವ ಒಂದು ದೊಣ್ಣೆಯಿಂದ ಸ್ಪೈಸ್​ಜೆಟ್ ಪಾರು; ಇನ್​ಸಾಲ್ವನ್ಸಿ ಕೇಸ್ ಹಿಂಪಡೆದ ಏರ್​ಕ್ಯಾಸಲ್

ಬಯೋಲಾಜಿಕ್ಸ್, ಸ್ಪೆಷಾಲಿಟಿ ಜೆನೆರಿಕ್ಸ್ ಮತ್ತು ಎಐ ಟೆಕ್ನಾಲಜಿ ಬೆಳವಣಿಗೆಯಿಂದಾಗಿ ಜಾಗತಿಕ ಹೆಲ್ತ್​ಕೇರ್ ಸ್ವರೂಪ ಬದಲಾಗುತ್ತಿದೆ. ಈಗಾಗಲೇ ಜಾಗತಿಕ ಫಾರ್ಮಾದಲ್ಲಿ ಪ್ರಾಬಲ್ಯ ಹೊಂದಿರುವ ಭಾರತದ ಔಷಧ ಕ್ಷೇತ್ರ ಇನ್ನೂ ಅಗಾಧವಾಗಿ ಬೆಳೆಯುವ ಸಾಧ್ಯತೆ ಇದೆ ಎಂದು ತಜ್ಞರು ಗುರುತಿಸಿದ್ದಾರೆ.

ಭಾರತದ ಫಾರ್ಮಾ ಕಂಪನಿಗಳು ಲಸಿಕೆ ತಯಾರಿಕೆಯಲ್ಲಿ ಸೈ ಎನಿಸಿವೆ. ವಿಶ್ವದ ಬಹುತೇಕ ಲಸಿಕೆಗಳು ಭಾರತದಲ್ಲೇ ತಯಾರಾಗುತ್ತವೆ. ಇನ್ನು ಇತರ ಔಷಧಗಳ ತಯಾರಿಕೆಯಲ್ಲೂ ಭಾರತೀಯ ಕಂಪನಿಗಳು ಮುಂದಿವೆ. ಕಡಿಮೆ ಬೆಲೆಯ ಗುಣಮಟ್ಟದ ಔಷಧಗಳನ್ನು 200ಕ್ಕೂ ಹೆಚ್ಚು ದೇಶಗಳಿಗೆ ರಫ್ತು ಮಾಡುತ್ತಿವೆ. ಅತಿಹೆಚ್ಚು ಔಷಧಗಳನ್ನು ತಯಾರಿಸುವ ದೇಶಗಳ ಸಾಲಿನಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. ಉತ್ಪಾದನೆಯಾಗುವ ಔಷಧಗಳ ಮೌಲ್ಯವನ್ನು ಪರಿಗಣಿಸಿದರೆ ಭಾರತ 14ನೇ ಸ್ಥಾನದಲ್ಲಿದೆ.

ಇದನ್ನೂ ಓದಿ: 50 ಲಕ್ಷ ರೂ ಸಂಬಳದ ಕೆಲಸ ಬಿಟ್ಟು ಸ್ವಂತ ಕಂಪನಿ ಕಟ್ಟಿ ಪರಿತಪಿಸುತ್ತಿರುವ ವ್ಯಕ್ತಿ

ಭಾರತದ ಫಾರ್ಮಾ ಉದ್ಯಮವು ದೇಶದ ಜಿಡಿಪಿಗೆ ಶೇ. 1.72ರಷ್ಟು ಕೊಡುಗೆ ನೀಡುತ್ತಿದೆ. ಕಡಿಮೆ ವೆಚ್ಚದಲ್ಲಿ ಔಷಧಗಳನ್ನು ತಯಾರಿಸುವ ಸಾಮರ್ಥ್ಯ ಇರುವುದು ಭಾರತೀಯ ಫಾರ್ಮಾ ಕಂಪನಿಗಳಿಗೆ ವಿದೇಶಗಳಿಂದ ಹೆಚ್ಚು ಆರ್ಡರ್​ಗಳು ಸಿಗಲು ಪ್ರಮುಖ ಕಾರಣ. ಇಲ್ಲಿ ಔಷಧ ತಯಾರಿಕೆಗೆ ಅಗತ್ಯ ಇರುವ ಆರ್ ಅಂಡ್ ಡಿ ವ್ಯವಸ್ಥೆ ಬಲವಾಗಿದೆ. ಇದೂ ಕೂಡ ಭಾರತೀಯ ಕಂಪನಿಗಳಿಗೆ ಪ್ಲಸ್ ಪಾಯಿಂಟ್.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಯತ್ನಾಳ್ ತಂಡದ ವಿರುದ್ದ 2 ಪತ್ರ ಬರೆದರೂ ವರಿಷ್ಠರಿಂದ ಕ್ರಮವಿಲ್ಲ: ಡಿವಿಎಸ್
ಯತ್ನಾಳ್ ತಂಡದ ವಿರುದ್ದ 2 ಪತ್ರ ಬರೆದರೂ ವರಿಷ್ಠರಿಂದ ಕ್ರಮವಿಲ್ಲ: ಡಿವಿಎಸ್
ನನ್ನ ಹಾಗೂ ನನ್ನ ಮಗನ ವಿರುದ್ಧ ಒಂದೇ ಒಂದು ದೂರು ದಾಖಲಾಗಿಲ್ಲ: ದೇವೇಗೌಡ
ನನ್ನ ಹಾಗೂ ನನ್ನ ಮಗನ ವಿರುದ್ಧ ಒಂದೇ ಒಂದು ದೂರು ದಾಖಲಾಗಿಲ್ಲ: ದೇವೇಗೌಡ
ತೆಂಗಿನಕಾಯಿ ವ್ಯಾಪಾರಿಯ ಮದುವೆ ಊಟದ ವ್ಯವಸ್ಥೆ ಕಂಡು ನೆಟ್ಟಿಗರು ಫಿದಾ
ತೆಂಗಿನಕಾಯಿ ವ್ಯಾಪಾರಿಯ ಮದುವೆ ಊಟದ ವ್ಯವಸ್ಥೆ ಕಂಡು ನೆಟ್ಟಿಗರು ಫಿದಾ
Video: ಮಹಿಳೆಯ ಜಡೆ ಹಿಡಿದು ಎಳೆದೊಯ್ದ ಪೊಲೀಸ್​ ಅಧಿಕಾರಿ
Video: ಮಹಿಳೆಯ ಜಡೆ ಹಿಡಿದು ಎಳೆದೊಯ್ದ ಪೊಲೀಸ್​ ಅಧಿಕಾರಿ
ಬೇರೆ ಖಾತೆ ನೀಡಿದರೂ ಚಿಂತೆಯಿಲ್ಲ, ನಿಷ್ಠೆಯಿಂದ ಕೆಲಸ ಮಾಡುವೆ: ಪರಮೇಶ್ವರ್
ಬೇರೆ ಖಾತೆ ನೀಡಿದರೂ ಚಿಂತೆಯಿಲ್ಲ, ನಿಷ್ಠೆಯಿಂದ ಕೆಲಸ ಮಾಡುವೆ: ಪರಮೇಶ್ವರ್
ಕೇರಳದ ಸೀರೆ ತೊಟ್ಟು, ಸಂವಿಧಾನದ ಪುಸ್ತಕ ಹಿಡಿದು ಪ್ರಿಯಾಂಕಾ ಪ್ರಮಾಣವಚನ
ಕೇರಳದ ಸೀರೆ ತೊಟ್ಟು, ಸಂವಿಧಾನದ ಪುಸ್ತಕ ಹಿಡಿದು ಪ್ರಿಯಾಂಕಾ ಪ್ರಮಾಣವಚನ
ಅರಣ್ಯ ಇಲಾಖೆ ಸಿಬ್ಬಂದಿಯ ನಿಷ್ಕ್ರಿಯತೆ ವಿರುದ್ಧ ಗ್ರಾಮಸ್ಥರ ಆಕ್ರೋಶ
ಅರಣ್ಯ ಇಲಾಖೆ ಸಿಬ್ಬಂದಿಯ ನಿಷ್ಕ್ರಿಯತೆ ವಿರುದ್ಧ ಗ್ರಾಮಸ್ಥರ ಆಕ್ರೋಶ
ಖಾಲಿಯಿದ್ದಾಗೆಲ್ಲ ಇಬ್ರಾಹಿಂ ಗಾಳಿಯಲ್ಲಿ ಗುಂಡು ಹಾರಿಸುತ್ತಾರೆ: ಮಂಜುನಾಥ
ಖಾಲಿಯಿದ್ದಾಗೆಲ್ಲ ಇಬ್ರಾಹಿಂ ಗಾಳಿಯಲ್ಲಿ ಗುಂಡು ಹಾರಿಸುತ್ತಾರೆ: ಮಂಜುನಾಥ
‘ಬುರುಡೆ ಒಡೆಯುತ್ತೀನಿ’ ಎಂದ ರಜತ್​ಗೆ ಉಗ್ರಂ ಮಂಜು ಪ್ರತ್ಯುತ್ತರ
‘ಬುರುಡೆ ಒಡೆಯುತ್ತೀನಿ’ ಎಂದ ರಜತ್​ಗೆ ಉಗ್ರಂ ಮಂಜು ಪ್ರತ್ಯುತ್ತರ
ಊಟ ಮಾಡುವಾಗ ಮಾತನಾಡಬಾರದು ಯಾಕೆ? ಇಲ್ಲಿದೆ ಆಧ್ಯಾತ್ಮಿಕ ಹಿನ್ನೆಲೆ
ಊಟ ಮಾಡುವಾಗ ಮಾತನಾಡಬಾರದು ಯಾಕೆ? ಇಲ್ಲಿದೆ ಆಧ್ಯಾತ್ಮಿಕ ಹಿನ್ನೆಲೆ