ಸರ್ಕಾರಿ ಸ್ವಾಮ್ಯದ ಇಂಡಿಯನ್ ರೈಲ್ವೆ ಫೈನಾನ್ಸ್ ಕಾರ್ಪೋರೇಷನ್ (IRFC) ಐಪಿಒಗೆ ಬಿಡ್ ಮಾಡಲು ನಾಳೆಯಿಂದ ಸಾರ್ವಜನಿಕರಿಗೆ ಅವಕಾಶ ಮುಕ್ತವಾಗಲಿದೆ. ಬಿಡ್ ಮಾಡಲು ಜನವರಿ 20 ಕೊನೆಯ ದಿನಾಂಕ. ಇದು 2021ರ ಮೊದಲ ಐಪಿಒ ಅನ್ನೋದು ವಿಶೇಷ.
ಆರಂಭಿಕವಾಗಿ IRFC ಸುಮಾರು 1,78 ಕೋಟಿ (1,78,20,69,000) ಷೇರುಗಳನ್ನು ಮಾರುಕಟ್ಟೆಗೆ ಬಿಡುತ್ತಿದೆ. ಈ ಪೈಕಿ ಸುಮಾರು 1,18 ಕೋಟಿ (1,18,80,46,000) ಹೊಸ ಷೇರುಗಳಾದರೆ, ಸುಮಾರು 59 ಕೋಟಿ (59,40,23,000) ಷೇರುಗಳನ್ನು ಸರ್ಕಾರ ಮಾರಾಟ ಮಾಡುತ್ತಿದೆ.
ಷೇರುಗಳ ಬ್ಯಾಂಡ್ ತುಂಬಾನೇ ಕಡಿಮೆ ದರದಲ್ಲಿ ಸಾರ್ವಜನಿಕರಿಗೆ ಲಭ್ಯವಾಗುತ್ತಿದೆ. ಪ್ರತಿ ಷೇರುಗಳ ಬ್ಯಾಂಡ್ ಅನ್ನು 25-26 ರೂಪಾಯಿ ಎಂದು ನಿಗದಿ ಮಾಡಲಾಗಿದೆ. ಕನಿಷ್ಠ ಬಿಡ್ ದರ 14,950 ರೂಪಾಯಿ (1 ಲಾಟ್) ಹಾಗೂ ಗರಿಷ್ಠ ಬಿಡ್ ದರ 1,94,350 (13 ಲಾಟ್) ರೂಪಾಯಿ. ಅಂದರೆ, ಒಂದು ಲಾಟ್ನಲ್ಲಿ 575 ಷೇರುಗಳು ಇರಲಿವೆ. ಭವಿಷ್ಯದಲ್ಲಿ ಉಂಟಾಗುವ ಹಣದ ಅವಶ್ಯಕತೆಗಳಿಗೆ IRFC ಈ ಹಣ ಬಳಕೆ ಮಾಡಿಕೊಳ್ಳಲಿದೆ.
ಕಂಪೆನಿ ಕೆಲಸ ಏನು?
ಭಾರತೀಯ ರೈಲ್ವೆಗೆ IRFC ಸಾಲ ನೀಡುವ ಕೆಲಸ ಮಾಡುತ್ತದೆ. ಅಂದರೆ, ಬಜೆಟ್ನಲ್ಲಿ ರೈಲ್ವೆಗೆ ಒಂದಷ್ಟು ಹಣವನ್ನು ಸರ್ಕಾರ ಮೀಸಲಿಡುತ್ತದೆ. ಕೊರತೆ ಆಗುವ ಹಣವನ್ನು IRFC ಬಳಿ ಭಾರತೀಯ ರೈಲ್ವೆ ಸಾಲ ಪಡೆಯಲಿದೆ. ಬೋಗಿ ಹಾಗೂ ಇತರ ಅವಶ್ಯಕತೆ ಎದುರಾದಾಗ ಭಾರತೀಯ ರೈಲ್ವೆ IRFC ಸಂಪರ್ಕಿಸುತ್ತದೆ. IRFC ಬೋಗಿಯನ್ನು 30 ವರ್ಷಗಳ ಗುತ್ತಿಗೆ ನೀಡುತ್ತದೆ. ಭಾರತೀಯ ರೈಲ್ವೆಯಿಂದ IRFC ಗುತ್ತಿಗೆ ಹಣವನ್ನೂ ಪಡೆಯುತ್ತದೆ. ಇದು IRFCಯ ಪ್ರಮುಖ ಕೆಲಸ.
ವರ್ಷದಿಂದ ವರ್ಷಕ್ಕೆ ಈ ಸಂಸ್ಥೆಯ ಆದಾಯ ಹೆಚ್ಚುತ್ತಿದೆ. 2018ರಲ್ಲಿ IRFC ನಿವ್ವಳ ಆದಾಯ 2,569 ಕೋಟಿ ರೂಪಾಯಿ ಇತ್ತು. 2019ರಲ್ಲಿ ಈ ಆದಾಯ 2,804 ಕೋಟಿ ರೂಪಾಯಿಗೆ ಏರಿಕೆ ಆಗಿತ್ತು. 2020ರಲ್ಲಿ ಈ ಆದಾಯ 3,258ಕ್ಕೆ ಜಿಗಿದಿದೆ. ವರ್ಷದಿಂದ ವರ್ಷಕ್ಕೆ ನಿವ್ವಳ ಆದಾಯ ಹೆಚ್ಚುತ್ತಿದೆ.
ಚಿಕ್ಕ ರೌಂಡ್ ಅಪ್:
ಐಪಿಒ ಹೆಸರು: ಇಂಡಿಯನ್ ರೈಲ್ವೇ ಫೈನಾನ್ಸ್ ಕಾರ್ಪೋರೇಷನ್
ಬಿಡ್ ದಿನಾಂಕ: 181-2021ರಿಂದ 20-01-2021ರವರೆಗೆ
ಷೇರುಗಳ ಬೆಲೆ: ಪ್ರತಿ ಷೇರಿಗೆ 25-26 ರೂಪಾಯಿ
ಬಿಡ್ ದರ: ಕನಿಷ್ಠ ಬಿಡ್ ದರ 14, 950 ರೂಪಾಯಿ (1 ಲಾಟ್) ಹಾಗೂ ಗರಿಷ್ಠ ಬಿಡ್ ದರ 1,94,350 (13 ಲಾಟ್) ರೂಪಾಯಿ
ಹಂಚಿಕೆ ಆಗಲಿರುವ ಒಟ್ಟು ಷೇರುಗಳು: 1,78,20,69,000
ನೀವು ಈಗಷ್ಟೇ ಕೆಲಸಕ್ಕೆ ಸೇರಿ ಹಣ ಉಳಿಸುವ ಕುರಿತು ಯೋಚಿಸುತ್ತಿದ್ದರೆ ಈ ಲೇಖನ ಓದಿ ಬಿಡಿ..
ಕಾಸಿದ್ರೆ ಕೈಲಾಸ | 15 ಸಾವಿರ ಸಂಬಳದಲ್ಲಿ 12 ಸಾವಿರದ ಮೊಬೈಲ್ ಕೊಳ್ಳೋದು ಹೇಗೆ?