Indian Railways: ಇ-ಕಾಮರ್ಸ್ ಸಂಸ್ಥೆಗಳ ರೀತಿಯಲ್ಲೇ ಭಾರತೀಯ ರೈಲ್ವೆಯಿಂದ ಶೀಘ್ರದಲ್ಲೇ ಸರಕುಗಳ ಹೋಮ್ ಡೆಲಿವರಿ

ಇ-ಕಾಮರ್ಸ್​ ಸಂಸ್ಥೆಗಳು ಹೇಗೆ ಮನೆ ಬಾಗಿಲಿಗೆ ಸರಕನ್ನು ತಲುಪಿಸುತ್ತವೆಯೋ ಅದೇ ರೀತಿಯಲ್ಲಿ ಭಾರತೀಯ ರೈಲ್ವೆ ಕೂಡ ಶೀಘ್ರದಲ್ಲೇ ಆರಂಭ ಮಾಡಲಿದೆ.

Indian Railways: ಇ-ಕಾಮರ್ಸ್ ಸಂಸ್ಥೆಗಳ ರೀತಿಯಲ್ಲೇ ಭಾರತೀಯ ರೈಲ್ವೆಯಿಂದ ಶೀಘ್ರದಲ್ಲೇ ಸರಕುಗಳ ಹೋಮ್ ಡೆಲಿವರಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Feb 16, 2022 | 3:35 PM

ಎಲ್ಲೋ ದೂರದ ಬಿಹಾರದಿಂದ ಅಕ್ಕಿ ತರಿಸಿಕೊಳ್ಳಬೇಕಾ? ಅಥವಾ ಗುಜರಾತ್​ನಿಂದ ಸೀರೆಗಳನ್ನು ತರಿಸಿಕೊಳ್ಳಬೇಕಾ? ವಸ್ತುಗಳ ರವಾನೆಗೆ ಭಾರತೀಯ ರೈಲ್ವೆಯಿಂದ ಈ ಅನುಕೂಲ ಮಾಡಿಕೊಡಲಾಗುವುದು. “ಅಸಾಂಪ್ರದಾಯಿಕವಾದ” ಸರಕು ಸಾಗಣೆಗಾಗಿ ಸರ್ಕಾರಿ ಸ್ವಾಮ್ಯದ ಭಾರತೀಯ ರೈಲ್ವೆಯಿಂದ (Indian Railways) ಮನೆಮನೆ ಬಾಗಿಲಿಗೆ ಡೆಲಿವರಿ ಸೇವೆ ನೀಡುವುದನ್ನು ಪ್ರಾಯೋಗಿಕವಾಗಿ ಮಾಡಲಾಗುತ್ತಿದೆ. ವೈಯಕ್ತಿಕವಾಗಿ ಹಾಗೂ ದೊಡ್ಡ ಪ್ರಮಾಣದಲ್ಲಿ ಖರೀದಿ ಮಾಡಬೇಕು ಅಂದುಕೊಳ್ಳುವವರಿಗೆ ಇದರ ಅನುಕೂಲ ಆಗಲಿದೆ. ಹೇಗೆ ಕೊರಿಯರ್​ ಕಂಪೆನಿಗಳು ಮತ್ತು ಇ-ಕಾಮರ್ಸ್​ಗಳು ಕಾರ್ಯ ನಿರ್ವಹಿಸುತ್ತವೆಯೋ ಅದೇ ಬಗೆಯಲ್ಲಿ ರೈಲ್ವೇಸ್ ಕೂಡ ವೈಯಕ್ತಿಕ ಮತ್ತು ದೊಡ್ಡ ಪ್ರಮಾಣದ ಗ್ರಾಹಕರಿಗೆ ಮನೆ-ಮನೆ ಬಾಗಿಲಿಗೆ ಡೆಲಿವರಿ ಸೇವೆ ನೀಡುವುದಕ್ಕೆ ಯೋಜನೆ ಹಾಕಿಕೊಂಡಿದೆ ಎಂದು ಟೈಮ್ಸ್​ ಆಫ್ ಇಂಡಿಯಾ ವರದಿ ಮಾಡಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಭಾರತೀಯ ರೈಲ್ವೇಸ್, ಪ್ರಾಥಮಿಕವಾದ ಯೋಜನೆ ಏನೆಂದರೆ, ಒಂದು ಆ್ಯಪ್ ಹೊಂದುವುದು ಮತ್ತು ಬಳಕೆದಾರರ ರಸೀದಿಯನ್ನು ಕ್ಯೂಆರ್​ ಕೋಡ್​ ಒಳಗೊಂಡಂತೆ ನೀಡುವುದು, ಆ ಮೂಲಕ ಸರಕು ಎಲ್ಲಿದೆ ಎಂಬುದನ್ನು ತಿಳಿಯುವುದಕ್ಕೆ ಸಹಾಯ ಆಗುತ್ತದೆ. ಇದನ್ನು ಹೊರತುಪಡಿಸಿ, ಆ್ಯಪ್ ಅಥವಾ ವೆಬ್​ಸೈಟ್ ರವಾನೆಗೆ ಅಂದಾಜು ಶುಲ್ಕ ಮತ್ತು ಡೆಲಿವರಿ ಸಮಯ ತಿಳಿಯುತ್ತದೆ. ವರದಿಯಲ್ಲಿ ತಿಳಿಸಿರುವಂತೆ, ರೈಲ್ವೇಸ್ ಸಾಗಣೆದಾರ ರೀತಿ ಇರುತ್ತದೆ. ಡೆಲಿವರಿಗಾಗಿ ಇಂಡಿಯಾ ಪೋಸ್ಟ್ ಮತ್ತು ಇತರರ ಸಹಯೋಗ ಮಾಡಲಿದೆ. ಕೆಲವು ರೈಲ್ವೆ ವಲಯಗಳಿಗೆ ಮಾಡ್ಯುಲ್ ಅಭಿವೃದ್ಧಿಗೊಳಿಸುವಂತೆ ಕೇಳಲಾಗಿದೆ.

ವರದಿಯಲ್ಲಿ ಇನ್ನು ಮುಂದುವರಿದು ತಿಳಿಸಿದಂತೆ, ರೈಲ್ವೇಸ್​ನಿಂದ ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ ಕಾರ್ಪೊರೇಷನ್ (DFCC) ಆರಂಭಿಸಿದೆ. ಇದು ಮೊದಲ ಸೇವೆಯನ್ನು ಜೂನ್​- ಜುಲೈನಲ್ಲಿ ದೆಹಲಿ- ಎನ್​ಸಿಆರ್​ ಮತ್ತು ಗುಜರಾತ್​ನ ಸನಂದ್​ನಲ್ಲಿ​ ಆರಂಭವಾಗಲಿದೆ. ಇದನ್ನು ಹೊರತುಪಡಿಸಿ, ಇನ್​-ಹೌಸ್ ಪ್ರಾಯೋಗಿಕ ಸೇವೆಯನ್ನು ಡಿಎಫ್​ಸಿಸಿಯಿಂದ ಆರಂಭವಾಗಲಿದೆ. ದೆಹಲಿ-ಎನ್​ಸಿಆರ್​ ಮತ್ತು ಗುಜರಾತ್​ ನಂತರದಲ್ಲಿ ಪ್ರಾಯೋಗಿಕ ಯೋಜನೆಯನ್ನು ಮುಂಬೈನಲ್ಲಿ ಯೋಜಿಸಲಾಗಿದೆ.

ಡಿಎಫ್​ಸಿಸಿ ತಿಳಿಸಿರುವಂತೆ, ಅಧಿಕಾರಿಗಳು ವೈಟ್​ ಗೂಡ್ಸ್ ಮತ್ತು ಸಣ್ಣ ವಸ್ತುಗಳ ಮೇಲೆ ಗಮನ ಕೇಂದ್ರೀಕರಿಸಲಿದ್ದಾರೆ. ಈ ಹೊಸ ಸೇವೆಯನ್ನು ರೈಲ್ವೇಸ್​ನಿಂದ ಪಡೆಯಬೇಕೆಂದರೆ, ಗ್ರಾಹಕರು ನಿರ್ದಿಷ್ಟ ಸ್ಥಳದಲ್ಲಿ ಪ್ಯಾಕೇಜ್​ ಅನ್ನು ಇಳಿಸಬೇಕು ಅಥವಾ ನಿರ್ದಿಷ್ಟ ಮನೆ ಅಥವಾ ಕಚೇರಿ ವಿಳಾಸದಿಂದ ಪಡೆದುಕೊಳ್ಳಬೇಕು. ಡಿಎಫ್​ಸಿಸಿ ಅಧಿಕಾರಿಗಳು ತಿಳಿಸುವಂತೆ, ಟ್ರಾನ್ಸಿಟ್ ಅಶ್ಯುರೆನ್ಸ್ ಸ್ಕೀಮ್ ಆಧಾರದಲ್ಲಿ ಸೇವೆ ಇರುತ್ತದೆ. ಈಚೆಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮಾತನಾಡಿ, ಸಾಗಣೆ ಲೋಡಿಂಗ್​ ಕಾರ್ಗೋ 2022-23ರಲ್ಲಿ ಅಂದಾಜು 1,475 ಮಿಲಿಯನ್​ ಟನ್​ಗಳನ್ನು ದಾಟಲಿದ್ದೇವೆ ಎಂಬ ವಿಶ್ವಾಸ ಇದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಭಾರತೀಯ ರೈಲ್ವೆ ಹೊಸ ಪ್ರಯತ್ನ: ರಿಸರ್ವೇಶನ್ ಇಲ್ಲದ ಎಕ್ಸ್​ಪ್ರೆಸ್ ರೈಲುಗಳ ಸಂಚಾರ