AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

India Defense: ಭಾರತಕ್ಕೆ ಐಫೋನ್ ಸಕ್ಸಸ್ ಸ್ಟೋರಿ ಆಯ್ತು, ಈಗ ಮಿಸೈಲ್, ಯುದ್ಧನೌಕೆ, ಹೆಲಿಕಾಪ್ಟರ್​ಗಳ ಸರದಿ

Made in India defense: ಭಾರತದ ರಕ್ಷಣಾ ಉತ್ಪನ್ನಗಳನ್ನು ಈಗ ಹೆಚ್ಚಾಗಿ ಭಾರತದಲ್ಲೇ ತಯಾರಿಸಲಾಗುತ್ತಿದೆ. ಇದರ ಜೊತೆಗೆ ವಿದೇಶಗಳಿಗೆ ಭಾರತದಿಂದ ಇವುಗಳ ರಫ್ತು ಕೂಡ ಕ್ರಮೇಣ ಹೆಚ್ಚುತ್ತಿದೆ. ಭಾರತವು ಸುಲಭ ಸಾಲದ ವ್ಯವಸ್ಥೆ ರೂಪಿಸಿದ್ದು, ಈ ಮೂಲಕ ಮಿಲಿಟರಿ ಶಸ್ತ್ರಾಸ್ತ್ರಗಳ ಮಾರಾಟಕ್ಕೆ ಪುಷ್ಟಿ ಕೊಡಲು ಯೋಜಿಸಿದೆ.

India Defense: ಭಾರತಕ್ಕೆ ಐಫೋನ್ ಸಕ್ಸಸ್ ಸ್ಟೋರಿ ಆಯ್ತು, ಈಗ ಮಿಸೈಲ್, ಯುದ್ಧನೌಕೆ, ಹೆಲಿಕಾಪ್ಟರ್​ಗಳ ಸರದಿ
ಹೌವಿಟ್ಜರ್ ಗನ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 17, 2025 | 5:30 PM

Share

ನವದೆಹಲಿ, ಏಪ್ರಿಲ್ 17: ಕೆಲವೇ ವರ್ಷಗಳ ಹಿಂದಿನವರೆಗೂ ಭಾರತಕ್ಕೆ ಬೇಕಾದ ಶೇ. 90ಕ್ಕೂ ಅಧಿಕ ಸ್ಮಾರ್ಟ್​​ಫೋನ್​​ಗಳು ಆಮದಾಗುತ್ತಿದ್ದುವು. ಈಗ ಹೆಚ್ಚಿನ ಫೋನ್​​ಗಳು ಮೇಡ್ ಇನ್ ಇಂಡಿಯಾ ಆಗಿವೆ. ಅದರಲ್ಲೂ, ಯಾರೂ ಊಹಿಸದ ಆ್ಯಪಲ್ ಐಫೋನ್​​ಗಳು ಭಾರತದಲ್ಲಿ ತಯಾರಾಗಿ ಅಮೆರಿಕ, ಯೂರೋಪ್ ಮೊದಲಾದ ಕಡೆ ರಫ್ತಾಗುತ್ತಿವೆ. ವಿಶ್ವದ ಶೇ. 20ಕ್ಕೂ ಅಧಿಕ ಐಫೋನ್​​ಗಳು ಭಾರತದಲ್ಲಿ ತಯಾರಾಗಿವೆ. ಐಫೋನ್ ಅಷ್ಟೇ ಅಲ್ಲ, ಭಾರತವು ವಿಶ್ವದ ಫಾರ್ಮಸಿ ಎಂದೂ ಹೆಸರು ಪಡೆದಿದೆ. ಈ ಐಫೋನ್ ಮತ್ತು ಫಾರ್ಮಸಿ ಸಕ್ಸಸ್ ಸ್ಟೋರಿಯನ್ನು ಇತರ ಕ್ಷೇತ್ರಗಳಿಗೂ ವಿಸ್ತರಿಸಲು ಸರ್ಕಾರ ಯೋಜಿಸಿದೆ. ಕ್ಷಿಪಣಿ, ಹೆಲಿಕಾಪ್ಟರ್, ಯುದ್ಧನೌಕೆಗಳನ್ನು ಬೇರೆ ಬೇರೆ ದೇಶಗಳಿಗೆ ಮಾರುವ (India’s defense export) ದೊಡ್ಡ ಯೋಜನೆಯನ್ನು ಕೇಂದ್ರ ಸರ್ಕಾರ ಹಮ್ಮಿಕೊಳ್ಳುತ್ತಿದೆ.

ರಾಯ್ಟರ್ಸ್​​​ನಲ್ಲಿ ಬಂದ ವರದಿ ಪ್ರಕಾರ, ಮಿಲಿಟರಿ ಉಪಕರಣಗಳಿಗಾಗಿ ರಷ್ಯಾ ಮೇಲೆ ಅವಲಂಬಿತವಾಗಿರುವ ದೇಶಗಳನ್ನು ಭಾರತ ಆರಂಭದಲ್ಲಿ ಟಾರ್ಗೆಟ್ ಮಾಡುತ್ತಿದೆ. ಸರ್ಕಾರಿ ಸ್ವಾಮ್ಯದ ಎಕ್ಸ್​​ಪೋರ್ಟ್ ಇಂಪೋರ್ಟ್ ಬ್ಯಾಂಕ್ (ಎಕ್ಸಿಮ್) ಮೂಲಕ ಸುಲಭ ಬಡ್ಡಿದರದಲ್ಲಿ ಸಾಲ ನೀಡಿ ಈ ಶಸ್ತ್ರಾಸ್ತ್ರಗಳನ್ನು ಮಾರಲು ಎಣಿಸಿದೆ. ರಾಯ್ಟರ್ಸ್ ಸುದ್ದಿಸಂಸ್ಥೆ ತನ್ನ ವಿವಿಧ ಮೂಲಗಳನ್ನು ಉಲ್ಲೇಖಿಸಿ ಈ ಕುತೂಹಲಕಾರಿ ವರದಿ ಪ್ರಕಟಿಸಿದೆ.

ಸ್ಮಾರ್ಟ್​​ಫೋನ್ ರೀತಿ, ಮಿಲಿಟರಿ ಉಪಕರಣಗಳ ವಿಚಾರದಲ್ಲೂ ಭಾರತ ಆಮದುದಾರನಿಂದ ರಫ್ತುದಾರ ದೇಶವಾಗಿ ಪರಿವರ್ತನೆಯ ಹಾದಿಯಲ್ಲಿದೆ. 2023-24ರಲ್ಲಿ 14.8 ಬಿಲಿಯನ್ ಡಾಲರ್ ಮೌಲ್ಯದ ಶಸ್ತ್ರಾಸ್ತ್ರವನ್ನು ಭಾರತದಲ್ಲಿ ತಯಾರಿಸಲಾಗಿದೆ. 2020ಕ್ಕೆ ಹೋಲಿಸಿದರೆ ಡಿಫೆನ್ಸ್ ಮ್ಯಾನುಫ್ಯಾಕ್ಚರಿಂಗ್ ಶೇ. 62ರಷ್ಟು ಹೆಚ್ಚಾಗಿದೆ.

ಇದನ್ನೂ ಓದಿ
Image
ಒಂದು ವರ್ಷದಲ್ಲಿ 250 ಪೇಟೆಂಟ್ ದಾಖಲಿಸಿದ ಟಾಟಾ ಮೋಟಾರ್ಸ್
Image
ಬೋಯಿಂಗ್​​ಗೆ ಚೀನಾ ಕತ್ತರಿ; ಭಾರತಕ್ಕೆ ಲಾಭ
Image
ಅಮೆರಿಕಕ್ಕೆ ಭಾರತದ ರಫ್ತಿನಲ್ಲಿ ಹೆಚ್ಚಳ
Image
ಅಮೆರಿಕ ಸಾವಾಸ ಮಾಡಿ ಕೆಟ್ಟವರೇ ಹೆಚ್ಚು: ಸ್ಯಾಕ್ಸ್

ಇದನ್ನೂ ಓದಿ: ಕಂಪನಿ ದುಡ್ಡಲ್ಲಿ ಶೋಕಿ; ಜೆನ್ಸಾಲ್, ಬ್ಲೂಸ್ಮಾರ್ಟ್ ಮುಖ್ಯಸ್ಥರಿಗೆ ಸೆಬಿ ತಪರಾಕಿ; ಏನಿದು ವಿವಾದ?

ದಶಕದ ಹಿಂದೆ ಭಾರತದ ವಾರ್ಷಿಕ ಡಿಫೆನ್ಸ್ ರಫ್ತು 230 ಮಿಲಿಯನ್ ಡಾಲರ್​​ನಷ್ಟು ಇತ್ತು. ಈಗ ಅದು 3.5 ಬಿಲಿಯನ್ ಡಾಲರ್​​ಗೆ ಏರಿದೆ. 2029ರಲ್ಲಿ ಇದು 6 ಬಿಲಿಯನ್ ಡಾಲರ್​​ಗೆ ಏರಬೇಕು ಎನ್ನುವುದು ಸರ್ಕಾರ ಮಾಡಿರುವ ಗುರಿಯಾಗಿದೆ.

ಭಾರತಕ್ಕೆ ಅಲ್ಪ ಬೆಲೆಯಲ್ಲಿ ಶಸ್ತ್ರಾಸ್ತ್ರ ತಯಾರಿಸುವ ಸಾಮರ್ಥ್ಯ

ಅಮೆರಿಕ ಮತ್ತು ಐರೋಪ್ಯ ದೇಶಗಳು ತಯಾರಿಸುವ ಕೆಲ ಶಸ್ತ್ರಾಸ್ತ್ರಗಳನ್ನು ಭಾರತ ಬಹಳ ಕಡಿಮೆ ಬೆಲೆಗೆ ತಯಾರಿಸುವ ಸಾಮರ್ಥ್ಯ ಹೊಂದಿದೆ. ಉದಾಹರಣೆಗೆ, ಒಂದು 155 ಎಂಎಂ ಆರ್ಟಿಲರಿ ಸ್ಫೋಟಕವನ್ನು ಭಾರತ 300ರಿಂದ 400 ಡಾಲರ್​ ವೆಚ್ಚದಲ್ಲಿ ತಯಾರಿಸಬಲ್ಲುದಂತೆ. ಇದೇ ಆರ್ಟಿಲರಿಯನ್ನು ಯೂರೋಪಿಯನ್ ಕಂಪನಿಗಳು 3,000 ಡಾಲರ್​​ಗೆ ಮಾರುತ್ತವೆ.

ಭಾರತ ಒಂದು ಹೌವಿಟ್ಜರ್ ಗನ್ ಅನ್ನು 3 ಮಿಲಿಯನ್ ಡಾಲರ್​​ಗೆ ಮಾರುತ್ತದೆ. ಇದೇ ಗುಣಮಟ್ಟದ ಹೌವಿಟ್ರಜರ್ ಅನ್ನು ಯೂರೋಪಿಯನ್ ಕಂಪನಿಗಳು ಸುಮಾರು 6 ಮಿಲಿಯನ್ ಡಾಲರ್​​ಗೆ ಮಾರುತ್ತವೆ.

ಮಿಲಿಟರಿ ರಫ್ತಿನಲ್ಲಿ ಸಾಲಕ್ಕೆ ಮಹತ್ವ ಇದೆ…

ಬಹಳಷ್ಟು ದೇಶಗಳಿಗೆ ಶಸ್ತ್ರಾಸ್ತ್ರ ಸಂಗ್ರಹಿಸುವ ಇರಾದೆ ಇರುತ್ತದೆ. ಆದರೆ, ಅಧಿಕ ಫಂಡಿಂಗ್ ಅವಶ್ಯಕತೆ ಇರುವುದರಿಂದ ಆಮದು ಮಾಡಿಕೊಳ್ಳಲು ಹೆದರುತ್ತವೆ. ಆದರೆ, ಚೀನಾ, ಫ್ರಾನ್ಸ್, ಟರ್ಕಿಯಂತಹ ದೇಶಗಳು ತಮ್ಮ ಟಾರ್ಗೆಟ್ ದೇಶಗಳಿಗೆ ಶಸ್ತ್ರಾಸ್ತ್ರ ಮಾರಾಟದ ಭಾಗವಾಗಿ ಫೈನಾನ್ಸಿಂಗ್ ಪ್ಯಾಕೇಜ್ ನೀಡುತ್ತವೆ. ಅಂದರೆ, ಸುಲಭ ಸಾಲದ ವ್ಯವಸ್ಥೆ ಮಾಡುತ್ತವೆ.

ಇದನ್ನೂ ಓದಿ: ಅಮೆರಿಕದ ಬೋಯಿಂಗ್ ವಿಮಾನಕ್ಕೆ ಚೀನಾ ಕತ್ತರಿ ಹಾಕಿದ್ದು ಭಾರತಕ್ಕೆ ಅನುಕೂಲವಾಯ್ತಾ?

ಇದು ಯಾಕೆ ಮುಖ್ಯ ಎಂದರೆ, ಬಹಳಷ್ಟು ರಾಜಕೀಯ ಸೂಕ್ಷ್ಮ ದೇಶಗಳ ಕ್ರೆಡಿಟ್ ಪ್ರೊಫೈಲ್ ಬಹಳ ಕೆಳಗೆ ಇರುತ್ತದೆ. ಈ ಕಾರಣಕ್ಕೆ ಹಣಕಾಸು ಸಂಸ್ಥೆಗಳು ಸಾಲ ಕೊಡಲು ಹೆದರುತ್ತವೆ. ಭಾರತೀಯ ಬ್ಯಾಂಕುಗಳು ಕೂಡ ಇತ್ತೀಚಿನವರೆಗೂ ಇದೇ ಧೋರಣೆ ಹೊಂದಿದ್ದುವು. ಈಗ ಸರ್ಕಾರವೇ ಮುತುವರ್ಜಿ ವಹಿಸಿ ಸುಲಭ ಸಾಲಕ್ಕೆ ವ್ಯವಸ್ಥೆ ಮಾಡುತ್ತಿದೆ.

ಭಾರತ ತನ್ನ ಡಿಫೆನ್ಸ್ ಎಕ್ಸ್​​ಪೋರ್ಟ್​​​ಗೆ ದೊಡ್ಡ ಮಾರುಕಟ್ಟೆಗೆ ಟಾರ್ಗೆಟ್ ಮಾಡಿರುವುದು ಬ್ರೆಜಿಲ್ ಅನ್ನೇ. ಆಕಾಶ್ ಕ್ಷಿಪಣಿಗಳ್ನು ಮಾರಲು ಆ ದೇಶದ ಜೊತೆ ಮಾತುಕತೆ ನಡೆಸುತ್ತಿದೆ. ಯುದ್ಧನೌಕೆಗಳನ್ನೂ ನಿರ್ಮಿಸಿಕೊಡಲು ಡೀಲ್ ನಡೆಯುತ್ತಿದೆ ಎಂದು ಮೂಲಗಳು ಹೇಳುತ್ತಿವೆ.

ಆಲ್ಜೀರಿಯಾ, ಮೊರಾಕ್ಕೋ, ಗಯಾನ, ತಾಂಜಾನಿಯಾ, ಅರ್ಜೆಂಟೀನಾ, ಎಥಿಯೋಪಿಯಾ, ಕಾಂಬೋಡಿಯಾ ಮೊದಲಾದ 20ಕ್ಕೂ ಹೆಚ್ಚು ದೇಶಗಳನ್ನು ತನ್ನ ಮಿಲಿಟರಿ ಉಪಕರಣಗಳ ಮಾರಾಟಕ್ಕೆ ಭಾರತವು ಟಾರ್ಗೆಟ್ ಮಾಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ