AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೆರಿಕದ ಚಿಪ್​ಟೂಲ್ ತಯಾರಿಸುವ ಲ್ಯಾಮ್ ರಿಸರ್ಚ್​ನಿಂದ 10,000 ಕೋಟಿ ರೂ ಹೂಡಿಕೆ; ಇನ್ವೆಸ್ಟ್ ಕರ್ನಾಟಕಕ್ಕೆ ಉದ್ಯಮವಲಯದಿಂದ ನಿರೀಕ್ಷೆಮೀರಿ ಸ್ಪಂದನೆ

Invest Karnataka 2025: ಫೆಬ್ರುವರಿ 14ರವರೆಗೆ ನಡೆಯಲಿರುವ ಇನ್ವೆಸ್ಟ್ ಕರ್ನಾಟಕ ಹೂಡಿಕೆ ಸಮಾವೇಶಕ್ಕೆ ಒಳ್ಳೆಯ ಸ್ಪಂದನೆ ಸಿಕ್ಕಿದೆ. ಸಾಕಷ್ಟು ಕಂಪನಿಗಳು ಕರ್ನಾಟಕದಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರಿವೆ. ಅಮೆರಿಕದ ಚಿಪ್ ಟೂಲ್ ಮೇಕರ್ ಲ್ಯಾಮ್ ರಿಸರ್ಚ್ ಮುಂದಿನ ಐದು ವರ್ಷ ರಾಜ್ಯದಲ್ಲಿ 10,000 ಕೋಟಿ ರು ಹೂಡಿಕೆ ಮಾಡುವುದಾಗಿ ಎಂಒಯುಗೆ ಸಹಿ ಮಾಡಿದೆ. ಹತ್ತಕ್ಕೂ ಹೆಚ್ಚು ಕಂಪನಿಗಳು ರಿನಿವಬಲ್ ಎನರ್ಜಿ ತಯಾರಕಾ ಘಟಕಗಳನ್ನು ಆರಂಭಿಸಲಿವೆ.

ಅಮೆರಿಕದ ಚಿಪ್​ಟೂಲ್ ತಯಾರಿಸುವ ಲ್ಯಾಮ್ ರಿಸರ್ಚ್​ನಿಂದ 10,000 ಕೋಟಿ ರೂ ಹೂಡಿಕೆ; ಇನ್ವೆಸ್ಟ್ ಕರ್ನಾಟಕಕ್ಕೆ ಉದ್ಯಮವಲಯದಿಂದ ನಿರೀಕ್ಷೆಮೀರಿ ಸ್ಪಂದನೆ
ಹೂಡಿಕೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 12, 2025 | 11:41 AM

Share

ಬೆಂಗಳೂರು, ಫೆಬ್ರುವರಿ 12: ಇಂದಿನಿಂದ ಮೂರು ದಿನಗಳ ಕಾಲ ನಡೆಯುತ್ತಿರುವ ಇನ್ವೆಸ್ಟ್ ಕರ್ನಾಟಕ ಹೂಡಿಕೆ ಸಮಾವೇಶಕ್ಕೆ ನಿರೀಕ್ಷೆಮೀರಿದ ಉತ್ಸಾಹದ ಸ್ಪಂದನೆ ಸಿಗುತ್ತಿದೆ. ಈ ಸಮಾವೇಶದಲ್ಲಿ ರಾಜ್ಯಕ್ಕೆ ಏಳೂವರೆ ಲಕ್ಷ ಕೋಟಿ ರೂ ಬಂಡವಾಳ ಸಿಗುವ ನಿರೀಕ್ಷೆ ಇತ್ತಾದರೂ, ಈಗಾಗಲೇ ಅದನ್ನು ಮೀರಿಸುವಷ್ಟು ಬಂಡವಾಳ ಹರಿದುಬರುವ ಸಾಧ್ಯತೆ ಇದೆ. ಮೊದಲ ದಿನವೇ ಮೂರು ಲಕ್ಷ ಕೋಟಿ ರೂಗೂ ಅಧಿಕ ಮೊತ್ತದ ಬಂಡವಾಳ ಹೂಡಿಕೆಗೆ ಒಪ್ಪಂದಗಳಾಗಿರುವುದು ತಿಳಿದುಬಂದಿದೆ.

ನವೀಕರಣ ಇಂಧನ ಅಭಿವೃದ್ಧಿ ನಿಗಮ (ಕೆಆರ್​ಇಡಿಎಲ್) 13 ಪ್ರಮುಖ ಕಂಪನಿಗಳೊಂದಿಗೆ ತಿಳಿವಳಿಕೆ ಒಪ್ಪಂದ ಮಾಡಿಕೊಂಡಿದೆ. ರಾಜ್ಯದಲ್ಲಿ ಪರ್ಯಾಯ ಇಂಧನ (renewable energy) ಉತ್ಪಾದನೆಗೆ ಈ ಕಂಪನಿಗಳಿಂದ 3.43 ಲಕ್ಷ ಕೋಟಿ ರೂ ಹೂಡಿಕೆ ಆಗುವ ಸಾಧ್ಯತೆ ಇದೆ. ರಾಜ್ಯಾದ್ಯಂತ ಮತ್ತಷ್ಟು ಸೌರಶಕ್ತಿ, ವಾಯುಶಕ್ತಿ ಘಟಕಗಳು ನಿರ್ಮಾಣವಾಗಲಿವೆ. ಜೆಎಸ್​ಡಬ್ಲ್ಯು ನಿಯೋ ಎನರ್ಜಿಯಿಂದ 56,000 ಕೋಟಿ ರೂ; ರಿನ್ಯೂ ಪ್ರೈ ಲಿ ಹಾಗು ಟಾಟಾ ಪವರ್ ರಿನಿವಬಲ್ ಎನರ್ಜಿ ಲಿ ಸಂಸ್ಥೆಗಳಿಂದ ತಲಾ 50,000 ಕೋಟಿ ರೂ ಹೂಡಿಕೆ ಬರಲಿದೆ.

ಇದನ್ನೂ ಓದಿ: ವ್ಹೀಲ್​ ಚೇರ್​ನಲ್ಲಿ ಇನ್ವೆಸ್ಟ್ ಕರ್ನಾಟಕ ಸಮಾವೇಶಕ್ಕೆ ಬಂದ ಸಿಎಂ

ಅಮೆರಿಕದ ಚಿಪ್​ಟೂಲ್ ತಯಾರಕರಿಂದ ಹೂಡಿಕೆ

ಭಾರತದ ಸೆಮಿಕಂಡಕ್ಟರ್ ಉದ್ಯಮಕ್ಕೆ ಬಹಳ ಅಗತ್ಯವಾಗಿರುವ ಚಿಪ್​ಟೂಲ್ ಸಾಮಗ್ರಿಗಳನ್ನು ತಯಾರಿಸುವಂತಹ ಕಂಪನಿ ಕರ್ನಾಟಕಕ್ಕೆ ಆಗಮಿಸುತ್ತಿದೆ. ಅಮೆರಿದಕ ಲ್ಯಾಮ್ ರಿಸರ್ಚ್ ಸಂಸ್ಥೆ ಮುಂದಿನ ಕೆಲ ವರ್ಷಗಳಲ್ಲಿ ಕರ್ನಾಟಕದಲ್ಲಿ 1.2 ಬಿಲಿಯನ್ ಡಾಲರ್ (ಸುಮಾರು 10,000 ಕೋಟಿ ರೂ) ಹೂಡಿಕೆ ಮಾಡಲು ಬದ್ಧವಾಗಿದೆ. ಈ ಸಂಬಂಧ ಕೆಐಎಡಿಬಿ ಜೊತೆ ಅದು ಎಂಒಯು ಮಾಡಿಕೊಂಡಿದೆ.

ಇನ್ವೆಸ್ಟ್ ಕರ್ನಾಟಕ: ರಾಜ್ಯ ಸರ್ಕಾರದ ಹೊಸ ಕೈಗಾರಿಕಾ ನೀತಿ…

ಕರ್ನಾಟಕ ಸರ್ಕಾರ ಮುಂದಿನ ಐದು ವರ್ಷ ಕಾಲ ರಾಜ್ಯದಲ್ಲಿ ಉದ್ಯಮಗಳಿಗೆ ಉತ್ತೇಜನ ನೀಡಲು ಪೂರಕವಾಗಿ ಹೊಸ ಕೈಗಾರಿಕಾ ನೀತಿ ಜಾರಿಗೆ ತರುತ್ತಿದೆ. ಕೈಗಾರಿಕಾ ಬೆಳವಣಿಗೆಗೆ ಮೂರು ವಲಯಗಳನ್ನು ಸೃಷ್ಟಿಸಲಾಗುತ್ತದೆ. ಸನ್​ರೈಸ್ ವಲಯ (ಉದಯೋನ್ಮುಖ ಕ್ಷೇತ್ರಗಳು) ಹಾಗೂ ಲೋಕಲ್ ಮ್ಯಾನುಫ್ಯಾಕ್ಚರಿಂಗ್​ಗೆ ಒತ್ತು ಕೊಡಲಾಗುತ್ತದೆ. ಹಿಂದುಳಿದಿರುವ ಪ್ರದೇಶಗಳಲ್ಲಿ ಕೈಗಾರಿಕಾ ವಲಯಗಳನ್ನು ಸ್ಥಾಪಿಸುವ ಯೋಜನೆ ಇದೆ.

ಇದನ್ನೂ ಓದಿ: ನೊಂದಾಯಿತ ಸ್ಟಾರ್ಟಪ್​ಗಳ ಸಂಖ್ಯೆ 10 ಲಕ್ಷಕ್ಕೆ ಏರಿಸುವ ಗುರಿ: ಪಿಯೂಶ್ ಗೋಯಲ್

ಎಂಎಸ್​ಎಂಇಗಳಿಗೆ ಶೇ. 30ರಷ್ಟು ಸ್ಥಳಾವಕಾಶ ಕೊಡಲಾಗುತ್ತದೆ. ಆರ್ ಅಂಡ್ ಡಿಗೆ ಪ್ರಧಾನ್ಯತೆ ಕೊಡಲಾಗುತ್ತದೆ. ಖಾಸಗಿ ಕೈಗಾರಿಕಾ ಪಾರ್ಕ್​ಗಳ ಅಭಿವೃದ್ಧಿಗೆ ಅವಕಾಶ ಕೊಡಲಾಗುವುದು. ಹೀಗೆ ವಿವಿಧ ಆಲೋಚನೆಗಳು ಕರ್ನಾಟಕ ಸರ್ಕಾರದ ಹೊಸ ಕೈಗಾರಿಕಾ ನೀತಿಯಲ್ಲಿ ಅಡಕವಾಗಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬ್ಲಿಂಕಿಟ್ ಡೆಲಿವರಿ ಬಾಯ್ ಆದ ಪರಿಣಿತಿ ಚೋಪ್ರಾ ಗಂಡ ರಾಘವ್ ಚಡ್ಡಾ
ಬ್ಲಿಂಕಿಟ್ ಡೆಲಿವರಿ ಬಾಯ್ ಆದ ಪರಿಣಿತಿ ಚೋಪ್ರಾ ಗಂಡ ರಾಘವ್ ಚಡ್ಡಾ
5NB,6,4,6,6,4.. ಗ್ರೇಸ್ ಹ್ಯಾರಿಸ್ ಸಿಡಿಲಬ್ಬರದ ಅರ್ಧಶತಕ
5NB,6,4,6,6,4.. ಗ್ರೇಸ್ ಹ್ಯಾರಿಸ್ ಸಿಡಿಲಬ್ಬರದ ಅರ್ಧಶತಕ
ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ