ಚಿಕ್ಕ ವಯಸ್ಸಿನಿಂದಲೇ ಹೂಡಿಕೆ ಶುರು ಮಾಡಬೇಕು ಎಂಬುದು ಬಹುತೇಕರು ಹೇಳುವ ಮೂಲ ಮಂತ್ರ. ಏಕೆಂದರೆ ರಿಸ್ಕ್ ತೆಗೆದುಕೊಳ್ಳುವ ಸಾಮರ್ಥ್ಯ ಹೆಚ್ಚಿರುತ್ತದೆ ಎಂಬ ಕಾರಣಕ್ಕೆ ಹೀಗೆ ಸಲಹೆ ನೀಡಲಾಗುತ್ತದೆ. ಆದರೆ 20 ವರ್ಷ ವಯಸ್ಸಿನೊಳಗೆ ಇರುವವರಿಗೆ ಯಾವುದೇ ನಿರ್ದಿಷ್ಟ ಮಾನದಂಡ ಇಲ್ಲ. ಆದರೆ ಮೂಲಭೂತ ಸಿದ್ಧಾಂತಗಳು ಒಂದೇ ಥರ ಇರುತ್ತದೆ. ಸಾಲ ತಂದ ಹಣದಲ್ಲಿ ಹೂಡಿಕೆ ಮಾಡಬಾರದು, ಪೆನ್ನಿ ಸ್ಟಾಕ್ನಲ್ಲಿ ಟ್ರೇಡ್ ಮಾಡಬಾರದು, ವೈವಿಧ್ಯಮಯವಾದ ಹೂಡಿಕೆ ಮಾಡಬೇಕು ಮತ್ತು ಹೂಡಿಕೆಗೆ ಮುಂಚಿತವಾಗಿ ಚೆನ್ನಾಗಿ ರೀಸರ್ಚ್ ಮಾಡಿರಬೇಕು. ಅತಿ ಹೆಚ್ಚು ರಿಟರ್ನ್ಸ್ ಸಿಗುತ್ತದೆ ಅನ್ನೋ ಆಮಿಷದಿಂದ ದೂರ ಇರಬೇಕು. -ಇವೆಲ್ಲ ಸಾಮಾನ್ಯ ಸಲಹೆಗಳೇ ಅಲ್ಲವೆ?
20 ವರ್ಷ ಮತ್ತು ಅದರೊಳಗೆ ಇರುವವರು ಇನ್ನೂ ವಿದ್ಯಾರ್ಥಿಗಳಿರುತ್ತಾರೆ ಮತ್ತು ಪೋಷಕರ ಮೇಲೆ ಅವಲಂಬಿತರಾಗಿರುತ್ತಾರೆ. ಹೂಡಿಕೆ ದೊಡ್ಡ ಮಟ್ಟದ್ದು ಅಲ್ಲದಿರಬಹುದು. ಆದ್ದರಿಂದ ನಷ್ಟದ ಪ್ರಮಾಣ ಕೂಡ ಕಡಿಮೆ ಇರುತ್ತದೆ. ಅಪ್ರಾಪ್ತ ಹೂಡಿಕೆದಾರರಿಗೆ ಕೆಲವು ನಿರ್ಬಂಧಗಳಿರುತ್ತವೆ. ಬ್ಯಾಂಕ್ ಖಾತೆ ತೆರೆಯುವಂತೆ ಇರುವುದಿಲ್ಲ. ಪಾವತಿ ಮಾಡುವಂತಿಲ್ಲ- ಇವೇ ಮುಂತಾದ ತಡೆಗಳಿರುತ್ತವೆ. ಇದಕ್ಕಿಂತ ಹೆಚ್ಚಾಗಿ ಗಳಿಸಿದ ಆದಾಯ ಪೋಷಕರ ಆದಾಯಕ್ಕೆ ಸೇರ್ಪಡೆ ಆಗುತ್ತದೆ. ವಹಿವಾಟಿನ ಒಪ್ಪಂದದದ ಸಿಂಧುತ್ವವು ಕೂಡ ಅಪ್ರಾಪ್ತ ಹೂಡಿಕೆದಾರರಿಗೆ ಸಮಸ್ಯೆಗೆ ಕಾರಣ ಆಗುತ್ತದೆ. ಇಂಥ ಚಟುವಟಿಕೆಗಳ ಬಗ್ಗೆ ತಮ್ಮ ಪೋಷಕರಿಗೂ ಈ ಬಗ್ಗೆ ಮಾಹಿತಿ ಕೊಟ್ಟಿರಬೇಕು.
20 ವರ್ಷದೊಳಗಿನ ಹೂಡಿಕೆದಾರರು ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ 5 ಸಂಗತಿಗಳಿವು:
1. 20 ವರ್ಷದೊಳಗಿನವರು ಸಕ್ರಿಯವಾಗಿ ಟ್ರೇಡಿಂಗ್ ಮಾಡುವ ಮುಂಚೆ ಪರೀಕ್ಷಾರ್ಥವಾಗಿ ಕೆಲವು ಟ್ರೇಡ್ ಮಾಡಬೇಕು. ತಮ್ಮ ಕೌಶಲವನ್ನು ಪರೀಕ್ಷಿಸಿಕೊಳ್ಳಲು ಇದೊಂದು ಅವಕಾಶ. ದೀರ್ಘಾವಧಿಗೆ ಹೂಡಿಕೆ ಮಾಡಬೇಕು ಎಂದಿರುವವರು ಈಕ್ವಿಟಿ ರೀಸರ್ಚ್ ಮಾಡಬೇಕು. ಪ್ರಾಕ್ಟಿಕಲ್ ಟ್ರೇಡಿಂಗ್ಗೆ ಆ ನಂತರ ಪ್ರಯತ್ನಿಸಬೇಕು.
2. ಹೊಸ ಹೂಡಿಕೆದಾರರು ಸಣ್ಣ ಪ್ರಮಾಣದಲ್ಲಿ ಹೂಡಿಕೆಯನ್ನು ಆರಂಭಿಸಬೇಕು. ಆಗ ಟ್ರೇಡಿಂಗ್ ಆರ್ಡರ್ಸ್, ತೀರುವಳಿ, ಡಿಪಿ ಖಾತೆ ಮತ್ತು ಷೇರು ಮಾರುಕಟ್ಟೆಯ ಏರಿಳಿತಗಳು ಅರ್ಥ ಮಾಡಿಕೊಳ್ಳಲು ಸಹಾಯ ಆಗುತ್ತದೆ.
3. 20 ವರ್ಷದೊಳಗಿನ ಹೂಡಿಕೆದಾರರಿಗೆ ಹೆಚ್ಚಿನ ಸಮಯವನ್ನು ಇದಕ್ಕಾಗಿಯೇ ಮೀಸಲಿಡಲು ಸಾಧ್ಯವಿಲ್ಲ. ನಿತ್ಯದ ಬೆಳವಣಿಗೆಯನ್ನು ಫಾಲೋ ಮಾಡಲು ಸಹ ಸಾಧ್ಯವಿಲ್ಲ.ಯಾರು ಇತರ ಚಟುವಟಿಕೆಗಳಲ್ಲಿ ಇರುತ್ತಾರೋ ಅಂಥವರು ಮಧ್ಯಮಾವಧಿಯಿಂದ ದೀರ್ಘಾವಧಿಗೆ ಹೂಡಿಕೆ ಮಾಡಲು ನೋಡಬಹುದು.
4. ಯುವ ಹೂಡಿಕೆದಾರರಿಗೆ ಆರ್ಥಿಕತೆ, ವಲಯಗಳು, ಕಂಪೆನಿಗಳು ಮತ್ತು ಮಾರ್ಕೆಟ್ ಬಗ್ಗೆ ನೋಟವೊಂದು ದೊರೆಯುತ್ತದೆ. ಟ್ರೇಡ್ ಮಾಡುವುದು ಹೇಗೆ ಮತ್ತು ಹೂಡಿಕೆಯನ್ನು ಯುವ ಹೂಡಿಕೆದಾರರು ಕಲಿಯಬಹುದು. ಇನ್ನು ಫಂಡ್ ಮ್ಯಾನೇಜರ್ ಆಗಿಯೇ ತಮ್ಮ ವೃತ್ತಿಯನ್ನು ಆರಿಸಿಕೊಳ್ಳಬಹುದು. ಇನ್ನು ಯುವ ಹೂಡಿಕೆದಾರರಾಗಿ ತಮ್ಮ ಪರ್ಸನಲ್ ಫೈನಾನ್ಸ್ ಚೆನ್ನಾಗಿ ನಿರ್ವಹಣೆ ಮಾಡುವುದಕ್ಕೆ ಅನುಕೂಲ ಆಗುತ್ತದೆ. ಖರ್ಚು ಮಾಡುವ ಬಗೆಯಲ್ಲಿ ಬಹಳ ಎಚ್ಚರಿಕೆಯಿಂದ ಮುಂದಕ್ಕೆ ಹೆಜ್ಜೆ ಇಡುತ್ತಾರೆ.
5. ಒಟ್ಟಾರೆ ಹೇಳಬೇಕೆಂದರೆ, 20 ವರ್ಷದೊಳಗೆ ವಯಸ್ಸು ಇರುವವರು ಹೂಡಿಕೆ ಮಾಡುವುದು ಅತ್ಯುತ್ತಮವಾದಂಥ ಆಯ್ಕೆ ಆಗುತ್ತದೆ. ಏಕೆಂದರೆ ತಮ್ಮ ವೃತ್ತಿ ಬದುಕಿನ ಕಲಿಕೆ ಹಂತದಲ್ಲಿ ಇರುತ್ತಾರೆ. ಯುವಕ/ಯುವತಿಯರಿದ್ದಾಗಲೇ ಹೂಡಿಕೆ ಮಾಡುವುದಕ್ಕೆ ಆರಂಭಿಸಿದರೆ ಹಣಕಾಸು ನಿರ್ವಹಣೆಯಲ್ಲಿ ಇನ್ನಷ್ಟು ಜವಾಬ್ದಾರಿಯಿಂದ ಇರುತ್ತಾರೆ.
ಇದನ್ನೂ ಓದಿ: Tax free interest income: ಈ ಐದು ಹೂಡಿಕೆಗಳ ಮೇಲಿನ ಬಡ್ಡಿ ಆದಾಯಕ್ಕೆ ಯಾವುದೇ ತೆರಿಗೆ ಇಲ್ಲ ಎಂಬ ಸಂಗತಿ ಗೊತ್ತೆ?
(ಮೂಲ: ಮನಿ9.ಕಾಮ್
ಲೇಖಕರು: ಎಸ್. ರವಿ)