Stock Trading: ನೀವು ಇನ್ವೆಸ್ಟ್ ಮಾಡುತ್ತಿದ್ದಂತೆಯೇ ಷೇರುಬೆಲೆ ಕುಸಿದುಬಿಟ್ಟಿತಾ? ನಿಮ್ಮೊಬ್ಬರಿಗಲ್ಲ ಈ ಅನುಭವ; ಹೀಗಾಗಲು ಏನು ಕಾರಣ?

Share Investment Mistakes: ಷೇರು ಖರೀದಿಸಿದ ಬಳಿಕ ಅದರ ಬೆಲೆ ಕುಸಿಯುತ್ತದೆ ಎಂದು ಹಲವರು ಹೇಳುವುದು ನಿಜವಾ? ಒಂದಷ್ಟು ಮಟ್ಟಕ್ಕೆ ಅದು ಹೌದು. ಈ ರೀತಿ ಒಬ್ಬರು, ಇಬ್ಬರಲ್ಲ, ಹಲವರಿಗೆ ಆಗಿರುವ ಅನುಭವ. ಇಂಥ ವಿಚಿತ್ರ ಸಂಗತಿಗೆ ಕಾರಣವೂ ಇದೆ.

Stock Trading: ನೀವು ಇನ್ವೆಸ್ಟ್ ಮಾಡುತ್ತಿದ್ದಂತೆಯೇ ಷೇರುಬೆಲೆ ಕುಸಿದುಬಿಟ್ಟಿತಾ? ನಿಮ್ಮೊಬ್ಬರಿಗಲ್ಲ ಈ ಅನುಭವ; ಹೀಗಾಗಲು ಏನು ಕಾರಣ?
ಷೇರುಮಾರುಕಟ್ಟೆImage Credit source: Image by Sergei Tokmakov, Esq. https://Terms.Law from Pixabay
Follow us
|

Updated on: Aug 04, 2023 | 11:50 AM

ಷೇರುಮಾರುಕಟ್ಟೆ (Stock Market) ಒಂದು ರೀತಿಯಲ್ಲಿ ಸೋಜಿಗದ ಸಂತೆ. ಬಹಳ ಮಂದಿ ಲಾಭ ಮಾಡಿಕೊಂಡಿದ್ದಾರೆ. ಹಲವು ಮಂದಿ ನಷ್ಟ ಮಾಡಿಕೊಂಡಿದ್ದಾರೆ. ಅದೆಷ್ಟೋ ಮಂದಿ, ತಾವು ಷೇರುಪೇಟೆ ವ್ಯವಹಾರಕ್ಕೆ ಇಳಿದು ಕೈಸುಟ್ಟುಕೊಂಡು ಅದರ ಸಹವಾಸ ಬಿಟ್ಟಿದ್ದೇವೆ ಎನ್ನುವುದನ್ನು ಕೇಳಿರಬಹುದು. ಇವರ ಸಾಮಾನ್ಯ ಅನುಭವ ಬಹಳ ಕುತೂಹಲಕಾರಿಯಾಗಿದೆ. ಷೇರುಗಳ ಮೇಲೆ ಹೂಡಿಕೆ (Share Investment) ಮಾಡಿದ ಕೆಲ ಹೊತ್ತಿನಲ್ಲೇ ಅದರ ಬೆಲೆ ಕುಸಿಯತೊಡಗುತ್ತಿರುತ್ತದೆ. ಅದನ್ನು ಕಂಡು ಗಾಬರಿಯಿಂದ ಇವರು ಕಡಿಮೆ ಬೆಲೆಗೆ ಮಾರಿ ನಷ್ಟ ಮಾಡಿಕೊಳ್ಳುತ್ತಾರೆ. ಅದೇ ರೀತಿ ಮತ್ತೊಂದು ದೊಡ್ಡ ಕಂಪನಿಯ ಷೇರಿಗೆ ಹಣ ಹಾಕಿ ಗೆಲ್ಲಲು ನೋಡುವ ಇವರಿಗೆ, ಆ ಷೇರುಬೆಲೆಯೂ ಕುಸಿಯತೊಡಗುತ್ತದೆ. ಅಲ್ಲಿಯೂ ಇವರು ಷೇರು ಮಾರಿ ನಷ್ಟ ಮಾಡಿಕೊಳ್ಳುತ್ತಾರೆ. ಇಂಥದ್ದು ನಾಲ್ಕೈದು ಬಾರಿ ಆಗಿಹೋದರೆ ಷೇರುಪೇಟೆ ಸಹವಾಸ ಸಾಕೆಂದು ಕೈತೊಳೆದು ಸುಮ್ಮನಾಗಿಬಿಡುತ್ತಾರೆ ಇವರು.

ಹೂಡಿಕೆ ಮಾಡಿದ ಬಳಿಕ ಷೇರುಬೆಲೆ ಯಾಕೆ ಕಡಿಮೆ ಆಗುತ್ತದೆ?

ಷೇರುಗಳ ಮೇಲೆ ಹೂಡಿಕೆ ಮಾಡಿದ ಬಳಿಕ ಅದರ ಬೆಲೆ ಇಳಿಕೆಯಾಗುವುದು ಸಹಜವೂ ಅಲ್ಲ ಅಸಹಜವೂ ಅಲ್ಲ. ಅದೊಂದು ಮಾರುಕಟ್ಟೆ ನಿರ್ದೇಶಿತ ಟ್ರೆಂಡ್. ಬೇಡಿಕೆ ಮತ್ತು ಸರಬರಾಜು ಮೇಲೆ ಷೇರುಗಳ ಬೆಲೆ ವ್ಯತ್ಯಯವಾಗುತ್ತದೆ. ಆದರೂ ಹೂಡಿಕೆ ಮಾಡಿದ ಬಳಿಕ ಷೇರುಬೆಲೆ ಇಳಿಕೆ ಆಗುವುದರ ಹಿಂದೆ ಕುತೂಹಲದ ಕಾರಣವೂ ಇದೆ.

ಇದನ್ನೂ ಓದಿ: Ancestral Property: ಪಿತ್ರಾರ್ಜಿತವಾಗಿ ಪಡೆಯುವ ಆಸ್ತಿಗೆ ತೆರಿಗೆ ಕಟ್ಟಬೇಕಾ? ಮಾರಿದಾಗ ಎಷ್ಟು ಟ್ಯಾಕ್ಸ್ ಪಾವತಿಸಬೇಕು?

ಸಾಮಾನ್ಯವಾಗಿ ಅನುನುಭವಿಯಾಗಿರುವ ರೀಟೇಲ್ ಹೂಡಿಕೆದಾರನು ಪತ್ರಿಕೆಯೋ ಅಥವಾ ಟಿವಿಯಲ್ಲೋ ನೀಡಲಾದ ಶಿಫಾರಸಿನ ಮೇಲೆ ಒಂದು ಕಂಪನಿಯ ಷೇರನ್ನು ಖರೀದಿಸಲು ಹೋಗುತ್ತಾನೆ. ಅದೇ ಹೊತ್ತಿನಲ್ಲಿ ಇನ್ನೂ ಬಹಳಷ್ಟು ಮಂದಿ ಕೂಡ ಆ ಷೇರು ಖರೀದಿಸಲು ಹೋಗುತ್ತಾರೆ. ಈಗ ಮಾರುವವರಿಗಿಂತ ಖರೀದಿಸುವವರ ಸಂಖ್ಯೆ ಹೆಚ್ಚುತ್ತದೆ. ಪರಿಣಾಮವಾಗಿ ಬೆಲೆ ಹೆಚ್ಚುತ್ತದೆ. ಇವರು ಹೆಚ್ಚಿನ ಬೆಲೆಗೆ ಆ ಷೇರುಗಳನ್ನು ಖರೀದಿಸುತ್ತಾರೆ. ಷೇರುಬೆಲೆ ಹೆಚ್ಚುತ್ತಿರುವಂತೆಯೇ ಇತರ ಹಲವು ಹೂಡಿಕೆದಾರರು ಮಾರಲು ಮುಂದಾಗುತ್ತಾರೆ.

ಆಗ ಖರೀದಿಸುವವರಿಗಿಂತ ಮಾರುವವರ ಸಂಖ್ಯೆ ಹೆಚ್ಚಾದರೆ ಷೇರುಬೆಲೆ ಕಡಿಮೆ ಆಗಿಹೋಗುತ್ತದೆ. ಈ ಸಂದರ್ಭದಲ್ಲಿ ಮೊದಲು ಹೆಚ್ಚಿನ ಬೆಲೆಗೆ ಖರೀದಿ ಮಾಡಿದ ಹೂಡಿಕೆದಾರರು ಷೇರುಬೆಲೆ ಇಳಿಕೆಯಿಂದ ಕಂಗಾಲಾಗಿ ಹೋಗುತ್ತಾರೆ. ಈಗ ಇವರೇನಾದರೂ ಷೇರು ಮಾರಿದರೆ ನಷ್ಟ ಮಾಡಿಕೊಂಡು ಪರಿತಪಿಸಬೇಕಾಗುತ್ತದೆ.

ಇದನ್ನೂ ಓದಿ: England: ಇಂಗ್ಲೆಂಡ್​ನಲ್ಲಿ ಬಡ್ಡಿದರ 25 ಬೇಸಿಸ್ ಅಂಕಗಳಷ್ಟು ಹೆಚ್ಚು; ಕಳೆದ 15 ವರ್ಷದಲ್ಲೇ ಗರಿಷ್ಠ ಮಟ್ಟ

ಷೇರುಪೇಟೆ ಅನುಭವಿಗಳ ಪ್ರಕಾರ, ಯಾವುದೇ ಹೂಡಿಕೆದಾರ ಷೇರಿನ ಮೇಲೆ ಹಣ ಹಾಕುವ ಮೊದಲು ಆ ಕಂಪನಿಯ ಬಗ್ಗೆ ಮತ್ತದರ ಆಡಳಿತವರ್ಗದ ಬಗ್ಗೆ ಮಾಹಿತಿ ಕಲೆಹಾಕಬೇಕು. ಆ ಕಂಪನಿಯ ಆದಾಯ, ನಷ್ಟ, ಭವಿಷ್ಯದ ಸ್ಥಿತಿ ಇವೆಲ್ಲವನ್ನೂ ಪರಿಗಣಿಸಿ, ಆ ಬಳಿಕ ಹೂಡಿಕೆ ಮಾಡುವುದೋ ಬೇಡವೋ ಎಂದು ನಿರ್ಧರಿಸಬೇಕು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ