AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Space Centre: ಇಸ್ರೋದ ಎರಡನೇ ಅತಿದೊಡ್ಡ ಬಾಹ್ಯಾಕಾಶ ಕೇಂದ್ರ ಗುಜರಾತ್​​ನಲ್ಲಿ ನಿರ್ಮಾಣ

ISRO to build its second largest space station in Gujarat: ಗುಜರಾತ್​​ನ ಡಿಯು ಸಮೀಪ ಇಸ್ರೋದಿಂದ ಮೂರನೇ ಸ್ಪೇಸ್ ಸೆಂಟರ್ ನಿರ್ಮಾಣವಾಗಲಿದೆ. 10,000 ಕೋಟಿ ರೂ ವೆಚ್ಚದಲ್ಲಿ ಸಿದ್ಧವಾಗಲಿರುವ ಇದು ಇಸ್ರೋದ ಎರಡನೇ ಅತಿದೊಡ್ಡ ಬಾಹ್ಯಾಕಾಶ ಕೇಂದ್ರವಾಗಲಿದೆ. ಆಂಧ್ರದ ಶ್ರೀಹರಿಕೋಟಾದಲ್ಲಿ ಅತಿದೊಡ್ಡ ಸ್ಪೇಸ್ ಸೆಂಟರ್ ಇದೆ. ಮತ್ತೊಂದು ಸ್ಪೇಸ್ ಸೆಂಟರ್ ಕೇರಳದ ತಿರುವನಂತಪುರಂನಲ್ಲಿದೆ.

Space Centre: ಇಸ್ರೋದ ಎರಡನೇ ಅತಿದೊಡ್ಡ ಬಾಹ್ಯಾಕಾಶ ಕೇಂದ್ರ ಗುಜರಾತ್​​ನಲ್ಲಿ ನಿರ್ಮಾಣ
ಇಸ್ರೋ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 06, 2025 | 6:08 PM

Share

ನವದೆಹಲಿ, ಜುಲೈ 6: ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾದ ಇಸ್ರೋ ಗುಜರಾತ್​​ನಲ್ಲಿ ಸ್ಪೇಸ್ ಸೆಂಟರ್ (ISRO space centre) ನಿರ್ಮಿಸುತ್ತಿದೆ. ಇದು ಇಸ್ರೋದ ಮೂರನೇ ಬಾಹ್ಯಾಕಾಶ ಕೇಂದ್ರ ಎನಿಸಲಿದೆ. ಆಂಧ್ರದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಸ್ಪೇಸ್ ಸೆಂಟರ್ ಬಿಟ್ಟರೆ ಗುಜರಾತ್​​ನದ್ದು ಇಸ್ರೋದ ಅತಿದೊಡ್ಡ ಬಾಹ್ಯಾಕಾಶ ಕೇಂದ್ರ ಎನಿಸಲಿದೆ. 10,000 ಕೋಟಿ ರೂ ವೆಚ್ಚದಲ್ಲಿ ಸ್ಪೇಸ್ ಸೆಂಟರ್ ನಿರ್ಮಾಣವಾಗಲಿದೆ.

ವರದಿಗಳ ಪ್ರಕಾರ, ಗುಜರಾತ್​​ನ ಡಿಯು (Diu) ಮತ್ತು ವೇರಾವಲ್ (Verawal) ನಡುವೆ ಈ ಬಾಹ್ಯಾಕಾಶ ಕೇಂದ್ರದ ನಿರ್ಮಾಣ ಮಾಡಲಾಗುತ್ತದೆ. ಇಲ್ಲಿ ಎಸ್​​ಎಎಲ್​​ವಿ ಮತ್ತು ಪಿಎಸ್​​ಎಲ್​​ವಿ ರಾಕೆಟ್​​ಗಳನ್ನು ಉಡಾವಣೆ ಮಾಡುವ ಉದ್ದೇಶ ಇದೆ. ಕಮ್ಯುನಿಕೇಶನ್, ನ್ಯಾವಿಗೇಶನ್ ಮತ್ತು ರಿಮೋಟ್ ಸೆನ್ಸಿಂಗ್ ಸಿಸ್ಟಂಗಳ ಸೆಟಿಲೈಟ್​​ಗಳನ್ನು ಇಲ್ಲಿಂದಲೇ ನಭಕ್ಕೆ ಹಾರಿಸಲು ಆದ್ಯತೆ ಸಿಗಬಹುದು.

ಇದನ್ನೂ ಓದಿ: ಆದಾಯ ಸಮಾನತೆಯಲ್ಲಿ ಭಾರತಕ್ಕೆ 4ನೇ ಸ್ಥಾನ; ವಿಶ್ವಬ್ಯಾಂಕ್ ಗಿನಿ ಇಂಡೆಕ್ಸ್​​ನಲ್ಲಿ ಅಮೆರಿಕ, ಚೀನಾಗಿಂತಲೂ ಭಾರತ ಮುಂದು

ಈಕ್ವಟರ್ ರೇಖೆಗೆ ಗುಜರಾತ್ ಸಮೀಪ ಇರುವುದರಿಂದ ಸೆಟಿಲೈಟ್​​ಗಳನ್ನು ಭೂಕಕ್ಷೆಗೆ ಸೇರಿಸಲು ಇಲ್ಲಿಂದಲೇ ಉಡಾವಣೆ ಮಾಡಲು ಉತ್ತಮ ಸ್ಥಳ ಆಯ್ಕೆ ಆಗಿರುತ್ತದೆ.

ಭಾರತದಲ್ಲಿ ಈಗಾಗಲೇ ಎರಡು ಸ್ಪೇಸ್ ಸೆಂಟರ್​​ಗಳಿವೆ. ಒಂದು ಆಂದ್ರದಲ್ಲಿ ಇದ್ದರೆ, ಇನ್ನೊಂದು ಕೇರಳದಲ್ಲಿದೆ. ಆಂಧ್ರದ ಶ್ರೀಹರಿಕೋಟಾ ದ್ವೀಪದಲ್ಲಿ ಸತೀಶ್ ಧವನ್ ಸ್ಪೇಸ್ ಸೆಂಟರ್ ಇದೆ. ಇದು ಇಸ್ರೋದ ಅತಿದೊಡ್ಡ ಬಾಹ್ಯಾಕಾಶ ಕೇಂದ್ರ. ಇಸ್ರೋದ ಬಹುತೇಕ ಉಡಾವಣೆಗಳು ಸದ್ಯ ಇಲ್ಲಿಂದಲೇ ಆಗುತ್ತಿರುವುದು.

ಇನ್ನೊಂದು ಬಾಹ್ಯಾಕಾಶ ಕೇಂದ್ರವು ತಿರುವನಂತಪುರಂನ ತುಂಬಾ ಎಂಬಲ್ಲಿದೆ. ವೈಜ್ಞಾನಿಕ ಸಂಶೋಧನೆ ಉದ್ದೇಶಕ್ಕೆ ಬಳಸಲಾಗುವ ರಾಕೆಟ್​​ಗಳನ್ನು ಇಲ್ಲಿಂದ ಉಡಾವಣೆ ಮಾಡಲಾಗುತ್ತಿದೆ.

ಇದನ್ನೂ ಓದಿ: Infosys: ಇನ್ಫೋಸಿಸ್​​ನಲ್ಲಿ ವಾರಕ್ಕೆ 70 ಗಂಟೆ ಅಲ್ಲ 46 ಗಂಟೆ ಮೀರಿ ಕೆಲಸ ಮಾಡಿದರೆ ಬರುತ್ತೆ ಎಚ್​ಆರ್ ವಾರ್ನಿಂಗ್

ಅಗಾಧವಾಗಿ ಬೆಳೆಯುತ್ತಿರುವ ಭಾರತದ ಬಾಹ್ಯಾಕಾಶ ಕ್ಷೇತ್ರ

ಭಾರತವು ಬಾಹ್ಯಾಕಾಶ ಕ್ಷೇತ್ರವನ್ನು ಖಾಸಗಿಗೂ ತೆರೆದಿದೆ. ಬಹಳಷ್ಟು ಖಾಸಗಿ ಕಂಪನಿಗಳು ಬಾಹ್ಯಾಕಾಶ ಯೋಜನೆಗಳಲ್ಲಿ ನಿರತವಾಗಿವೆ. ಸಂವಹನ, ಮಿಲಿಟರಿ ಇತ್ಯಾದಿ ಉದ್ದೇಶಗಳಿಗೆ ಸೆಟಿಲೈಟ್​ಗಳನ್ನು ಸಾಕಷ್ಟು ಪ್ರಮಾಣದಲ್ಲಿ ತಯಾರಿಸಲಾಗುತ್ತಿದೆ. ರಾಕೆಟ್ ನಿರ್ಮಿಸುತ್ತಿರುವ ಖಾಸಗಿ ಕಂಪನಿಗಳು ಹಲವಿವೆ. ಹೀಗಾಗಿ, ಭಾರತಕ್ಕೆ ಹಲವು ಬಾಹ್ಯಾಕಾಶ ಕೇಂದ್ರಗಳ ಅಗತ್ಯತೆ ಇದೆ. ಜಾಗತಿಕವಾಗಿಯೂ ಸೆಟಿಲೈಟ್​​ಗಳ ಉಡಾವಣೆಗೆ ಬೇಡಿಕೆ ಹೆಚ್ಚುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಿಸೆಪ್ಷನಿಸ್ಟ್​​ಗೆ ಒದ್ದು, ಕೂದಲು ಎಳೆದಾಡಿದ ರೋಗಿಯ ವಿಡಿಯೋ ವೈರಲ್
ರಿಸೆಪ್ಷನಿಸ್ಟ್​​ಗೆ ಒದ್ದು, ಕೂದಲು ಎಳೆದಾಡಿದ ರೋಗಿಯ ವಿಡಿಯೋ ವೈರಲ್
ಸಂಸತ್ತಿನಲ್ಲಿ ವಿರೋಧಪಕ್ಷ ವಿನಾಕಾರಣ ಗದ್ದಲವೆಬ್ಬಿಸುತ್ತಿದೆ: ಸೋಮಣ್ಣ
ಸಂಸತ್ತಿನಲ್ಲಿ ವಿರೋಧಪಕ್ಷ ವಿನಾಕಾರಣ ಗದ್ದಲವೆಬ್ಬಿಸುತ್ತಿದೆ: ಸೋಮಣ್ಣ
ಜೈಲಿನಲ್ಲಿ ಇರುವ ಕೈದಿಗೆ ಹಾಡುವ ಅವಕಾಶ ನೀಡಿದ ಕೆ. ಕಲ್ಯಾಣ್
ಜೈಲಿನಲ್ಲಿ ಇರುವ ಕೈದಿಗೆ ಹಾಡುವ ಅವಕಾಶ ನೀಡಿದ ಕೆ. ಕಲ್ಯಾಣ್
ಮಚ್ಚಿನೊಂದಿಗೆ ಆರೋಪಿ ನ್ಯಾಯಾಲಯ ಪ್ರವೇಶಿಸಿದ್ದು ಪೊಲೀಸರ ಕರ್ತವ್ಯಲೋಪ
ಮಚ್ಚಿನೊಂದಿಗೆ ಆರೋಪಿ ನ್ಯಾಯಾಲಯ ಪ್ರವೇಶಿಸಿದ್ದು ಪೊಲೀಸರ ಕರ್ತವ್ಯಲೋಪ
‘ಜೂನಿಯರ್’ ಸಿನಿಮಾದ ಯಶಸ್ಸು, ನಿರ್ದೇಶಕ ರಾಧಾಕೃಷ್ಣ ಹೇಳಿದ್ದೇನು?
‘ಜೂನಿಯರ್’ ಸಿನಿಮಾದ ಯಶಸ್ಸು, ನಿರ್ದೇಶಕ ರಾಧಾಕೃಷ್ಣ ಹೇಳಿದ್ದೇನು?
ಏನೂ ಅರಿಯದ ಮಗುವನ್ನು ಸಾಯಿಸುವ ಮಾನಸಿಕತೆಗೆ ಏನೆನ್ನಬೇಕು?
ಏನೂ ಅರಿಯದ ಮಗುವನ್ನು ಸಾಯಿಸುವ ಮಾನಸಿಕತೆಗೆ ಏನೆನ್ನಬೇಕು?
ಸ್ಟಂಟ್ ದೃಶ್ಯಕ್ಕೆ ಎಷ್ಟು ಶ್ರಮ ಪಟ್ಟಿದ್ದಾರೆ ಕಿರೀಟಿ: ವಿಡಿಯೋ ನೋಡಿ
ಸ್ಟಂಟ್ ದೃಶ್ಯಕ್ಕೆ ಎಷ್ಟು ಶ್ರಮ ಪಟ್ಟಿದ್ದಾರೆ ಕಿರೀಟಿ: ವಿಡಿಯೋ ನೋಡಿ
ರೌಡಿಶೀಟರ್ ಬಿಕ್ಲು ಶಿವ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ರೌಡಿಶೀಟರ್ ಬಿಕ್ಲು ಶಿವ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಸಿದ್ದರಾಮಯ್ಯ ಗಾವುದ ದೂರ: ಮಹದೇವಪ್ಪ
ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಸಿದ್ದರಾಮಯ್ಯ ಗಾವುದ ದೂರ: ಮಹದೇವಪ್ಪ
ಖಜಾನೆ ತುಂಬಿಸಿಕೊಳ್ಳಲು ರಾಜ್ಯ ಸರ್ಕಾರ ವಾಮಮಾರ್ಗ ಅನುಸರಿಸಿದೆ: ಸಿಟಿ ರವಿ
ಖಜಾನೆ ತುಂಬಿಸಿಕೊಳ್ಳಲು ರಾಜ್ಯ ಸರ್ಕಾರ ವಾಮಮಾರ್ಗ ಅನುಸರಿಸಿದೆ: ಸಿಟಿ ರವಿ