ಚೀನಾದ ಸಿಲ್ಕ್ ರೋಡ್ ಪ್ರಾಜೆಕ್ಟ್​ನಿಂದ ಹೊರಬೀಳಲು ಇಟಲಿ ಅಣಿ; ಹಿಂದಿನ ಸರ್ಕಾರದ ಕ್ರಮವನ್ನು ದುರುಳತನ ಎಂದು ಟೀಕಿಸಿದ ಸಚಿವ

Italy vs China: ಚೀನಾದ ಬೆಲ್ಟ್ ಅಂಡ್ ರೋಡ್ ಇನಿಷಿಯೇಟಿವ್ ಯೋಜನೆಗೆ ಸೇರಲು ಹಿಂದಿನ ಇಟಲಿ ಸರ್ಕಾರ ಕೈಗೊಂಡ ನಿರ್ಧಾರ ದುರುಳತನದ್ದು ಎಂದು ಹಾಲಿ ಸರ್ಕಾರ ರಕ್ಷಣಾ ಸಚಿವ ಜಿಯುಡೋ ಕ್ರೋಸೆಟ್ಟೋ ಟೀಕಿಸಿದ್ದಾರೆ.

ಚೀನಾದ ಸಿಲ್ಕ್ ರೋಡ್ ಪ್ರಾಜೆಕ್ಟ್​ನಿಂದ ಹೊರಬೀಳಲು ಇಟಲಿ ಅಣಿ; ಹಿಂದಿನ ಸರ್ಕಾರದ ಕ್ರಮವನ್ನು ದುರುಳತನ ಎಂದು ಟೀಕಿಸಿದ ಸಚಿವ
ಗ್ಯೂಡೋ ಕ್ರೋಸೆಟ್ಟೋ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 31, 2023 | 11:38 AM

ರೋಮ್, ಜುಲೈ 31: ಚೀನಾದ ಮಹತ್ವಾಕಾಂಕ್ಷಿ ಬೆಲ್ಟ್ ಅಂಡ್ ರೋಡ್ ಇನಿಷಿಯೇಟಿವ್ (BRI- Belt and Road Initiative) ಎಂಬ ಜಾಗತಿಕ ಇನ್​ಫ್ರಾಸ್ಟ್ರಕ್ಚರ್ ಯೋಜನೆಯಿಂದ ಇಟಲಿ ಹೊರಬೀಳಲು ಸಜ್ಜಾದಂತಿದೆ. ಇಟಲಿಯ ರಕ್ಷಣಾ ಸಚಿವ ಜುಯಿಡೋ ಕ್ರೋಸೆಟ್ಟೋ (Guido Crosetto) ಈ ಬಗ್ಗೆ ಸುಳಿವು ನೀಡಿದ್ದಾರೆ. ಚೀನಾ ಜೊತೆ ಸ್ನೇಹ ಸಂಬಂಧ ಉಳಿಸಿಕೊಂಡು ಈ ಬಿಆರ್​ಐ ಯೋಜನೆಯಿಂದ ಹೊರಬರುವುದು ಹೇಗೆ ಎಂದು ಯೋಚಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ. ಮಾಧ್ಯಮದೊಂದಿಗೆ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಗ್ಯೂಡೋ ಕ್ರೋಸೆಟ್ಟೋ ಅವರು ಚೀನಾ ಮತ್ತು ಇಟಲಿ ನಡುವಿನ ಭವಿಷ್ಯದ ಸಂಬಂಧದ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದಾರೆ.

ಚೀನಾ ನಮಗೆ ಪ್ರತಿಸ್ಪರ್ಧಿ ದೇಶವಾಗಿದೆ. ಹಾಗೆಯೇ ಅದು ನಮಗೆ ಸಹಭಾಗಿ ದೇಶವೂ ಹೌದು ಎಂದು ಹೇಳಿದ ಗ್ಯೂಡೋ ಕ್ರೋಸೆಟ್ಟೋ, ಬಿಆರ್​ಐ ಯೋಜನೆಯಲ್ಲಿ ಷಾಮೀಲಾಗದೆಯೇ ಚೀನಾ ಜೊತೆ ಇಟಲಿ ಒಳ್ಳೆಯ ಸಂಬಂಧದಲ್ಲಿರಲು ಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: Pakistan: ಪಾಕಿಸ್ತಾನದ ಬಜೌರ್ ನಗರದಲ್ಲಿ ಬಾಂಬ್ ಸ್ಫೋಟ, ಸಾವಿನ ಸಂಖ್ಯೆ 40ಕ್ಕೆ ಏರಿಕೆ

ಹಿಂದಿನ ಸರ್ಕಾರದ ದುರುಳ ಕೃತ್ಯ ಎಂದು ಜರಿದ ಕ್ರೋಸೆಟ್ಟೋ

ಚೀನಾದ ಮಹತ್ವಾಕಾಂಕ್ಷಿ ಸಿಲ್ಕ್ ರೋಡ್ ಪ್ರಾಜೆಕ್ಟ್​ಗೆ 2019ರಲ್ಲಿ ಇಟಲಿ ಸೇರಿದ್ದು ಬಹಳ ಅಚ್ಚರಿ ಮೂಡಿಸಿತ್ತು. ಚೀನಾದ ಬಿಆರ್​ಐ ಯೋಜನೆಗೆ ಸೇರಿದ ಯೂರೋಪ್​ನ ಮೊದಲ ಪ್ರಮುಖ ದೇಶ ಇಟಲಿ. ಹಾಗೆಯೇ, ಜಿ7 ಗುಂಪಿನ ಮೊದಲ ದೇಶವೂ ಅದಾಗಿತ್ತು. ಅಂದು ಆಡಳಿತದಲ್ಲಿದ್ದ ಜ್ಯೂಸೆಪ್ಪೆ ಕಾಂಟೆ ನೇತೃತ್ವದ ಸರ್ಕಾರ ತೆಗೆದುಕೊಂಡ ಈ ನಿರ್ಧಾರ ಪಾಶ್ಚಿಮಾತ್ಯ ಮೈತ್ರಿಕೂಟಗಳಿಗೆ ಅಚ್ಚರಿ ಮೂಡಿಸಿತ್ತು.

ಈಗ ಇಟಲಿಯಲ್ಲಿ ಜಾರ್ಜಿಯಾ ಮೆಲೋನಿ (Georia Meloni) ನೇತೃತ್ವದಲ್ಲಿ ಬಲಪಂಥೀಯ ಸರ್ಕಾರ ಅಸ್ತಿತ್ವದಲ್ಲಿದೆ. ಚೀನಾದ ಬಿಆರ್​ಐ ಸ್ಕೀಮ್​ನಿಂದ ಹೊರಬೀಳಲು ಇಟಲಿ ಸರ್ಕಾರ ತೆಗೆದುಕೊಂಡ ನಿರ್ಧಾರ ಹಲವರಿಗೆ ಅಚ್ಚರಿ ತಂದಿಲ್ಲ. ಈ ವೇಳೆ, ಜ್ಯೂಡೋ ಕ್ರೋಸೆಟ್ಟೋ ಅವರು ಜ್ಯೂಸೆಪ್ಪೆ ಕಾಂಟೆ (Giuseppe Conte) ಸರ್ಕಾರದ ನಿರ್ಧಾರವನ್ನು ‘ದುರುಳ ಕೃತ್ಯ’ (Wicked Act) ಎಂದು ಹೀಗಳೆದಿದ್ದಾರೆ.

ಇದನ್ನೂ ಓದಿ: Young Genius: 11 ವರ್ಷದ ಈ ಪೋರಿ ಒಂದು ಕಂಪನಿಯ ಸಿಇಒ; 12ನೇ ಜನ್ಮದಿನಾಚರಣೆ ಜೊತೆಗೆ ಬ್ಯುಸಿನೆಸ್​ಗೂ ವಿದಾಯ ಹೇಳಲಿರುವ ಬಾಲಕಿ; ಕಾರಣ?

ನಾವು 1 ಲೋಡ್ ಕಿತ್ತಳೆ ಕಳುಹಿಸಿದರೆ, ಚೀನಾ ರಫ್ತು 3 ಪಟ್ಟು ಹೆಚ್ಚಾಯಿತು ಎಂದ ಕ್ರೋಸೆಟ್ಟೋ

ವಿಶ್ವಾದ್ಯಂತ ತನ್ನ ವ್ಯಾಪಾರ ವಹಿವಾಟು ಸುಗಮಗೊಳಿಸಲು ಚೀನಾ ಈ ಬೆಲ್ಟ್ ಅಂಡ್ ರೋಡ್ ಇನಿಷಿಯೇಟಿವ್ ಯೋಜನೆ ಕೈಗೊಂಡಿದೆ. ಚೀನಾದ ದೊಡ್ಡ ಮಾರುಕಟ್ಟೆ ದೊರಕುವ ಉಮೇದಿನಲ್ಲಿ ಇಟಲಿ ಈ ಬಿಆರ್​ಐ ಯೋಜನೆಯಲ್ಲಿ ಸೇರಿಕೊಂಡಿತ್ತು. ಚೀನಾದೊಂದಿಗೆ ವ್ಯಾಪಾರ ಕೊರತೆ (Trade Deficit) ನೀಗಬಹುದು ಎಂಬುದು ಇಟಲಿ ಭಾವನೆಯಾಗಿತ್ತು. ಆದರೆ, ವಾಸ್ತವದಲ್ಲಿ ಆಗಿದ್ದೇ ಬೇರೆ. ಈ ಬಗ್ಗೆ ಮಾತನಾಡಿದ ಜಿಯೂಸೆಪ್ಪೆ ಕಾಂಟೆ, ‘ನಾವು ಒಂದು ಲೋಡ್ ಕಿತ್ತಳೆಯನ್ನು ಚೀನಾಗೆ ರಫ್ತು ಮಾಡಿದೆವು. ಅವರು ಇಟಲಿಗೆ ಮಾಡುತ್ತಿದ್ದ ರಫ್ತನ್ನು 3 ವರ್ಷದಲ್ಲಿ 3 ಪಟ್ಟು ಹೆಚ್ಚಿಸಿದರು’ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ಇಟಲಿಯ ಟ್ರೇಡ್ ಏಜೆನ್ಸಿ ಪ್ರಕಾರ 2019ರಿಂದ 2022ರವರೆಗೂ ಇಟಲಿಗೆ ಚೀನಾದ ರಫ್ತುಗಳು ಶೇ. 51ರಷ್ಟು ಹೆಚ್ಚಿದೆ. ಅದೇ ಅವಧಿಯಲ್ಲಿ ಇಟಲಿಯಿಂದ ಚೀನಾ ರಫ್ತು ಶೇ. 26ರಷ್ಟು ಮಾತ್ರ ಹೆಚ್ಚಾಗಿದೆಯಂತೆ.

ಇದನ್ನೂ ಓದಿ: Developed India: ಭಾರತ ಮುಂದುವರಿದ ದೇಶವಾಗಲು 4 ಐ ಸೂತ್ರ ಬಿಚ್ಚಿಟ್ಟ ನಿರ್ಮಲಾ ಸೀತಾರಾಮನ್

ಸಿಲ್ಕ್ ರೋಡ್ ಪ್ರಾಜೆಕ್ಟ್ ಎಂದು ಯಾಕೆ ಹೆಸರು?

ಚೀನಾದ ಬೆಲ್ಟ್ ಅಂಡ್ ರೋಡ್ ಇನಿಷಿಯೇಟಿವ್ ಯೋಜನೆಯನ್ನು ಸಿಲ್ಕ್ ರೋಡ್ ಪ್ರಾಜೆಕ್ಟ್ ಎಂದೂ ಕರೆಯಲಾಗುತ್ತದೆ. ಇದರ ಹಿಂದಿರುವ ಇತಿಹಾಸ ಗಮನ ಸೆಳೆಯುವಂಥದ್ದು. ಕ್ರಿ.ಶ. 3ನೇ ಶತಮಾನದಲ್ಲಿ ಚೀನಾದಲ್ಲಿ ಸಾಮ್ರಾಜ್ಯ ಸ್ಥಾಪಿಸಿದ್ದ ಹಾನ್ ವಂಶ ವ್ಯಾಪಾರ ವಹಿವಾಟು ಹೆಚ್ಚಿಸುವ ಉದ್ದೇಶದಿಂದ ಹಲವು ಮಧ್ಯ ಏಷ್ಯನ್ ದೇಶಗಳ ಜಾಲ ನಿರ್ಮಿಸಿ ಯೂರೋಪ್​ವರೆಗೂ ಮಾರ್ಗ ವಿಸ್ತರಣೆ ಮಾಡಿತ್ತು. ಆಗ ಚೀನಾದಲ್ಲಿ ಹೇರಳವಾಗಿ ಲಭ್ಯ ಇದ್ದ ರೇಷ್ಮೆ ಮತ್ತಿತರ ವಸ್ತುಗಳನ್ನು ಸೆಂಟ್ರಲ್ ಏಷ್ಯಾ ಹಾಗೂ ಯೂರೋಪ್​ಗೆ ರಫ್ತು ಮಾಡಲು ಚೀನಾಗೆ ಸಾಧ್ಯವಾಗುತ್ತಿತ್ತು. ಆ ಭಾಗಗಳಿಂದ ಚೀನಾಗೆ ಚಿನ್ನ ಮತ್ತಿತರ ಅಮೂಲ್ಯ ಲೋಹಗಳು ಸಿಗುತ್ತಿದ್ದವು.

ಚೀನಾದ ಈಗಿನ ಅಧ್ಯಕ್ಷ ಕ್ಸೀ ಜಿನ್​ಪಿಂಗ್ ಅವರು ಮತ್ತೆ ಆ ಐತಿಹಾಸಿಕ ನೆಟ್ವರ್ಕ್ ಸ್ಥಾಪಿಸುತ್ತಿದ್ದಾರೆ. 2013ರಲ್ಲಿ ಅವರು ಮೊದಲ ಬಾರಿಗೆ ಈ ಯೋಜನೆ ಘೋಷಿಸಿದರು. ಭೂಮಾರ್ಗ ಮತ್ತು ಸಮುದ್ರಮಾರ್ಗ ಹೀಗೆ ಎರಡು ರೀತಿಯ ಸಿಲ್ಕ್ ರೋಡ್ ಪ್ರಾಜೆಕ್ಟ್​ಗಳನ್ನು ಸೇರಿಸಿ ಬೆಲ್ಟ್ ಅಂಡ್ ರೋಡ್ ಇನಿಷಿಯೇಟಿವ್ ಎಂದು ಯೋಜನೆಯನ್ನು ಹೆಸರಿಸಲಾಗಿದೆ.

ಮೊದಲಿಗೆ ಚೀನಾದ ಈ ಯೋಜನೆ ಯೂರೋಪ್​ವರೆಗೂ ಇತ್ತು. ಬಳಿಕ ಅಮೆರಿಕ ಖಂಡಗಳು ಹಾಗೂ ಆಫ್ರಿಕಾವರೆಗೂ ವಿಸ್ತರಣೆ ಆಗಿದೆ. ಇದು ವಿಶ್ವದ ಮೇಲೆ ಚೀನಾ ಅಧಿಪತ್ಯ ಸಾಧಿಸುವ ಷಡ್ಯಂತ್ರ ಎಂಬ ಟೀಕೆಗಳಿಗೂ ಕಾರಣವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್