ಇವರ ಉತ್ಪನ್ನ ತಿರಸ್ಕರಿಸಿದ ಅದೇ ಬಿಸಿನೆಸ್ ರಿಯಾಲಿಟಿ ಶೋಗೆ ಜಡ್ಜ್ ಆಗಿ ಹೋದ ಬಿಸಿನೆಸ್​ಮ್ಯಾನ್

Jamie Siminoff and Shark Tank Rejection: ಅಮೆರಿಕದ ಬಿಸಿನೆಸ್ ರಿಯಾಲಿಟಿ ಶೋ ಆದ ಶಾರ್ಕ್ ಟ್ಯಾಂಕ್​ನಲ್ಲಿ ಯುವ ಬಿಸಿನೆಸ್​ಮ್ಯಾನ್​ಗಳು ತಮ್ಮ ಕಂಪನಿಗೆ ಬಂಡವಾಳ ಪಡೆಯಲು ಅವಕಾಶ ಇದೆ. ಅವರ ಉತ್ಪನ್ನ ಇಷ್ಟವಾದರೆ ಕಾರ್ಯಕ್ರಮದಲ್ಲಿರುವ ಶಾರ್ಕ್​ ಅಥವಾ ಹೂಡಿಕೆದಾರರು ಬಂಡವಾಳ ಕೊಡಲು ಮುಂದೆ ಬರುತ್ತಾರೆ. ಹಿಂದೊಮ್ಮೆ 2013ರಲ್ಲಿ ಈ ಶೋನದಲ್ಲಿ ಬಂಡವಾಳಕ್ಕೆಂದು ಹೋಗಿದ್ದ ಜೇಮೀ ಸಿಮಿನಾಫ್ ಎಂಬುವವರು ರಿಜೆಕ್ಟ್ ಆಗಿ ಬರಿಗೈಲಿ ಮರಳಿದ್ದರು. ಆದರೆ, ನಂತರ ಅವರ ಬಿಸಿನೆಸ್ ಸಕ್ಸಸ್ ಆಯಿತು. ಈಗ ಅವರು ಅದೇ ರಿಯಾಲಿಟಿ ಶೋಗೆ ಅತಿಥಿ ಜಡ್ಜ್ ಆಗಿ ಹೋಗಿದ್ದಾರೆ.

ಇವರ ಉತ್ಪನ್ನ ತಿರಸ್ಕರಿಸಿದ ಅದೇ ಬಿಸಿನೆಸ್ ರಿಯಾಲಿಟಿ ಶೋಗೆ ಜಡ್ಜ್ ಆಗಿ ಹೋದ ಬಿಸಿನೆಸ್​ಮ್ಯಾನ್
ಜೇಮೀ ಸಿಮಿನಾಫ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 12, 2024 | 12:35 PM

ನವದೆಹಲಿ, ಏಪ್ರಿಲ್ 12: ಸೋನಿ ಲೈವ್​ನಲ್ಲಿ ನೀವು ಶಾರ್ಕ್ ಟ್ಯಾಂಕ್ ಇಂಡಿಯಾ ಕಾರ್ಯಕ್ರಮ ನೋಡಿರಬಹುದು. ಅಮೆರಿಕದ ಮಾಧ್ಯಮದಲ್ಲಿ ಬಹಳ ಹಿಂದಿನಿಂದಲೇ ಶಾರ್ಕ್ ಟ್ಯಾಂಕ್ (Shark tank) ಎಂಬ ರಿಯಾಲಿಟಿ ಶೋ ನಡೆಯುತ್ತಾ ಬಂದಿದೆ. ಇದರಲ್ಲಿ ಸ್ಟಾರ್ಟಪ್​ಗಳ ಮುಖ್ಯಸ್ಥರು ತಮ್ಮ ಉತ್ಪನ್ನಗಳನ್ನು ಪ್ರಸ್ತುತಪಡಿಸುತ್ತಾರೆ. ಕಾರ್ಯಕ್ರಮದಲ್ಲಿ ಹಿರಿಯ ಉದ್ಯಮಿಗಳು ಜಡ್ಜ್ ಅಥವಾ ಶಾರ್ಕ್​ಗಳಾಗಿ ಬಂದಿರುತ್ತಾರೆ. ಇವರು ಶಾರ್ಟ್ ಟ್ಯಾಂಕ್ ಪಿಚರ್ (Shark Tank Pitcher) ಅಥವಾ ಸ್ಟಾರ್ಟಪ್ ಪ್ರತಿನಿಧಿಗಳು ಪ್ರಸ್ತುಪಡಿಸುವ ಉತ್ಪನ್ನವನ್ನು ನೋಡಿ, ಆ ಕಂಪನಿಗೆ ಹೂಡಿಕೆ ಮಾಡಬೇಕೋ ಬೇಡವೋ ಎಂದು ನಿರ್ಧರಿಸುತ್ತಾರೆ. ಯಾವ ಶಾರ್ಕ್ ಬೇಕಾದರೂ ಹೂಡಿಕೆ ಮಾಡಬಹುದು. 2013ರಲ್ಲಿ ಜೇಮೀ ಸಿಮಿನಾಫ್ (Jamie Siminoff) ಎಂಬ ವ್ಯಕ್ತಿ ಶಾರ್ಕ್ ಟ್ಯಾಂಕ್ ಪಿಚರ್ ಆಗಿ ಕಾರ್ಯಕ್ರಮಕ್ಕೆ ಹೋಗಿ ರಿಜೆಕ್ಟ್ ಆಗಿ ಬಂದಿದ್ದರು. ಇದೀಗ ಅದೇ ಕಾರ್ಯಕ್ರಮಕ್ಕೆ ಜೇಮೀ ಶಾರ್ಕ್ ಆಗಿ ಪಾಲ್ಗೊಂಡಿದ್ದಾರೆ. ಅವರ ಆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕುತೂಹಲ ಎಂದರೆ ಶಾರ್ಕ್ ಟ್ಯಾಂಕ್​ನಲ್ಲಿ ಜೇಮೀ ಅವರಿಗೆ ಯಾವ ಬಂಡವಾಳ ಗೀಟಲಿಲ್ಲವಾದರೂ ಆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ದೆಸೆಯಿಂದಾಗಿ ಅವರ ಬಿಸಿನೆಸ್ ಹೆಚ್ಚಾಗಿದ್ದು ಹೌದು.

ಜೇಮೀ ಸಿಮಿನಾಫ್ ಅವರು ಡೋರ್​ಬಾಟ್ ಎಂಬ ಕಂಪನಿಯ ಸಂಸ್ಥಾಪಕರು. ಸ್ಮಾರ್ಟ್ ವಿಡಿಯೋ ಡೋರ್​ಬೆಲ್ ಉತ್ಪನ್ನ ತಯಾರಿಸುತ್ತಾರೆ. 2013ರ ಸೆಪ್ಟಂಬರ್​ನಲ್ಲಿ ಶಾರ್ಕ್ ಟ್ಯಾಂಕ್ ಎಂಬ ಅಮೆರಿಕನ್ ಬಿಸಿನೆಸ್ ರಿಯಾಲಿಟಿ ಶೋನಲ್ಲಿ ಪಾಲ್ಗೊಂಡಿದ್ದರು. ಅವರಿಗೆ 7,00,000 ಡಾಲರ್ ಬಂಡವಾಳ ಬೇಕಾಗಿತ್ತು. ಆ ಶೋನದಲ್ಲಿ ಪಾಲ್ಗೊಳ್ಳುವಾಗಲೇ ಅವರ ಕಂಪನಿ ವರ್ಷಕ್ಕೆ ಒಂದು ಮಿಲಿಯನ್ ಡಾಲರ್ ಮೌಲ್ಯದ ಬಿಸಿನೆಸ್ ಮಾಡುತ್ತಿತ್ತು. ಬಿಸಿನೆಸ್ ವಿಸ್ತರಣೆಗೆ ಅವರಿಗೆ ಹೆಚ್ಚುವರಿ ಬಂಡವಾಳ ಬೇಕಿತ್ತು. ಅದಕ್ಕಾಗಿ ಶಾರ್ಕ್ ಟ್ಯಾಂಕ್​ಗೆ ಹೋಗಿದ್ದರು.

ಇದನ್ನೂ ಓದಿ: ಇವನಿಂದೇನು ಪ್ರಯೋಜನ ಇಲ್ಲ, ತೊಲಗಿಸಿ ಎಂದಿದ್ದರು ನಂಟರು; ಈ ಹುಟ್ಟಾ ಕುರುಡ ಇವತ್ತು ಸಿಇಒ

ಕಾರ್ಯಕ್ರಮದಲ್ಲಿ ಇವರು ತಮ್ಮ ಉತ್ಪನ್ನವನ್ನು ಪ್ರಸ್ತುತಪಡಿಸುತ್ತಾರೆ. ಕೆವಿನ್ ಓಲೀರಿ ಬಿಟ್ಟು ಅಲ್ಲಿದ್ದ ಯಾವ ಶಾರ್ಕ್ (ಹೂಡಿಕೆ ಮಾಡುವವರು) ಕೂಡ ಆಸಕ್ತಿ ತೋರುವುದಿಲ್ಲ. ಕೆವಿನ್ 7 ಲಕ್ಷ ಡಾಲರ್ ಬಂಡವಾಳ ಕೊಡಲು ಒಪ್ಪುತ್ತಾರಾದರೂ, ಸಾಲ ಮರುಪಾವತಿ ಆಗುವವರೆಗೂ ಪ್ರತೀ ಉತ್ಪನ್ನ ಮಾರಾಟದಲ್ಲೂ ಶೇ. 10ರಷ್ಟು ಕಮಿಷನ್ ತಮಗೆ ಬರಬೇಕು ಎನ್ನುತ್ತಾರೆ. ಅಷ್ಟೇ ಅಲ್ಲ, ಭವಿಷ್ಯದಲ್ಲಿ ನಡೆಯುವ ಮಾರಾಟದಲ್ಲಿ ಶೇ. 7ರಷ್ಟು ರಾಯಲ್ಟಿ, ಹಾಗೂ ಕಂಪನಿಯಲ್ಲಿ ಶೇ. 5ರಷ್ಟು ಷೇರುಪಾಲು ಕೊಡಬೇಕು ಎಂದು ಕಂಡೀಷನ್ ಹಾಕುತ್ತಾರೆ. ಇದಕ್ಕೆ ಜೇಮೀ ಸಿಮಿನಾಫ್ ಒಪ್ಪುವುದಿಲ್ಲ. ಶಾರ್ಕ್ ಆಫರ್ ಅನ್ನು ರಿಜೆಕ್ಟ್ ಮಾಡಿ ಬರುತ್ತಾರೆ.

ಅದಾದ ಬಳಿಕ ಸಿಮಿನಾಫ್ ತಮ್ಮ ಕಂಪನಿಯ ಹೆಸರನ್ನು ರಿಂಗ್ ಎಂದು ಬದಲಿಸುತ್ತಾರೆ. ಶಾರ್ಕ್ ಟ್ಯಾಂಕ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪರಿಣಾಮ ಅವರ ಬಿಸಿನೆಸ್ ಹೆಚ್ಚಾಗುತ್ತದೆ. 2018ರಲ್ಲಿ ಅಮೇಜಾನ್ ಸಂಸ್ಥೆ ಒಂದು ಬಿಲಿಯನ್ ಡಾಲರ್​ಗೆ ರಿಂಗ್ ಅನ್ನು ಖರೀದಿಸುತ್ತದೆ. ಅಲ್ಲಿಗೆ ಜೇಮೀ ಸಿಮಿನಾಫ್ ಬಿಲಿಯನೇರ್ ಎನಿಸುತ್ತಾರೆ.

ಇದನ್ನೂ ಓದಿ: ಇದು ಅವರಲ್ಲ, ಅವರಲ್ಲ..! ಎನ್​ಎಸ್​ಇ ಸಿಇಒ ಆಶೀಶ್​ಕುಮಾರ್ ಚೌಹಾಣ್ ಡೀಪ್​ಫೇಕ್ ವಿಡಿಯೋ

ಹೂಡಿಕೆದಾರರೂ ಆಗಿರುವ ಜೇಮೀ ಸಿಮಿನಾಫ್ ಅವರನ್ನು ಶಾರ್ಕ್ ಟ್ಯಾಂಕ್ ಕಾರ್ಯಕ್ರಮದ ಆಯೋಜಕರು ಅತಿಥಿ ಶಾರ್ಕ್ ಆಗಿ ಬರಬೇಕೆಂದು 2018ರಲ್ಲಿ ಆಹ್ವಾನಿಸುತ್ತಾರೆ. ಹಿಂದೊಮ್ಮೆ ತಮ್ಮನ್ನು ರಿಜೆಕ್ಟ್ ಮಾಡಿದ್ದ ರಿಯಾಲಿಟಿ ಶೋಗೆ ಜೇಮೀ ಐದು ವರ್ಷದ ಬಳಿಕ ಜಡ್ಜ್ ಆಗಿ ಕಂಬ್ಯಾಕ್ ಮಾಡುತ್ತಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ