ಬಯೋಡೀಸೆಲ್ ಗಿಡ ಎಂದೇ ಪ್ರಸಿದ್ಧಿ ಪಡೆಯುತ್ತಿರುವ ಜಟ್ರೋಫಾವನ್ನು (Jatropha) ಇದೀಗ ಬರಡು ಭೂಮಿಯ ಬಂಗಾರ ಎಂದು ಪರಿಗಣಿಸಡ್ಡಿ ಇಲ್ಲ. ಭಾರತದ ಬಹಳಷ್ಟು ಕಡೆ ರೈತರು ಜಟ್ರೋಫಾ ಬೆಳೆಯುತ್ತಿದ್ದಾರೆ. ಯಾವುದೇ ಹವಾಮಾನದಲ್ಲೂ ಬೆಳೆಯುವ ಜಟ್ರೋಫಾ, ರೈತರಿಗೆ ಕೈತುಂಬ ಆದಾಯ ತರುತ್ತಿದೆ. ಬಹಳ ಕಡಿಮೆ ನೀರನ್ನು ಬೇಡುವ ಈ ಗಿಡದಿಂದ ಬಹೂಪಯೋಗಗಳಿವೆ. ಅದರಲ್ಲಿ ಪ್ರಮುಖವಾದುದು, ಇದರ ಬೀಜಗಳಿಂದ ಜೈವಿಕ ಇಂಧನ ಅಥವಾ ಬಯೋಡೀಸಲ್ ತಯಾರಿಸಬಹುದು. ಮಳೆ ಬಹಳ ಕಡಿಮೆ ಬೀಳುವ ಪ್ರದೇಶಗಳಲ್ಲಿ ಅಥವಾ ಬಂಜರು ನೆಲದಲ್ಲಿ ಈ ಗಿಡಗಳನ್ನು ನೆಟ್ಟು ನಿಯಮಿತವಾಗಿ ಆದಾಯ ಬರುವ ಮೂಲ ಸೃಷ್ಟಿಸಿಕೊಳ್ಳಬಹುದು. ಒಮ್ಮೆ ಇದನ್ನು ನೆಟ್ಟರೆ 30 ವರ್ಷಗಳವರೆಗೂ ಫಲ ನೀಡುತ್ತಿರುತ್ತದೆ.
ಜಟ್ರೋಫಾ ಬೆಳೆಯ ಮಹತ್ವವನ್ನು ಸರ್ಕಾರ ಹಲವ ವರ್ಷಗಳ ಹಿಂದೆಯೇ ಗುರುತಿಸಿತ್ತು. 2009ರಲ್ಲಿ ಅಂದಿನ ಸರ್ಕಾರ ನ್ಯಾಷನಲ್ ಬಯೋಡೀಸಲ್ ಮಿಷನ್ ಅನ್ನು ಆರಂಭಿಸಿತ್ತು. ಆಗ ಜೈವಿಕ ಇಂಧನ ತಯಾರಿಕೆಗೆ ಅನುಕೂಲವಾಗಬಹುದೆಂದು ಪರಿಗಣಿಸಲಾದ ಸಸ್ಯಗಳಲ್ಲಿ ಜಟ್ರೋಫಾ ಪ್ರಮುಖವಾದುದು. ಅದರ ಕೃಷಿಗೆ 4,00,000 ಚದರ ಕಿಮೀ ಭೂಮಿಯನ್ನು ಹಂಚಿಕೆ ಮಾಡಲಾಯಿತು. ಮಾಜಿ ರಾಷ್ಟ್ರಪತಿ ದಿವಂಗತ ಡಾ. ಅಬ್ದುಲ್ ಕಲಾಂ ಅವರೂ ಕೂಡ ಜಟ್ರೋಫಾ ಬೆಳೆಯ ಬೆಂಬಲಿಗರಾಗಿದ್ದವರು.
ಇದನ್ನೂ ಓದಿ: ಒಂದು ಎಕರೆಯಲ್ಲಿ ಈ ಮರಗಳನ್ನು ನೆಟ್ಟರೆ 12 ಲಕ್ಷ ರೂ ಆದಾಯ; ನಿಮ್ಮಲ್ಲಿ ಜಮೀನಿದ್ದರೆ ಈ ಮರದ ತೋಪು ನಿರ್ಮಿಸಿ
ಜಟ್ರೋಫಾ ಗಿಡ ಬಂಜರು ಭೂಮಿಯಲ್ಲೂ ಬೆಳೆಯಬಲ್ಲಂಥದ್ದು. ಅಚ್ಚರಿ ಎಂದರೆ ಇದು ಬಂಜರು ಭೂಮಿಯನ್ನೂ ಫಲವತ್ತಾದ ನೆಲವಾಗಿ ಮಾಡಬಲ್ಲ ಶಕ್ತಿ ಹೊಂದಿದೆ. ಮಣ್ಣಿನ ಸವಕಳಿಯನ್ನು ಇದು ತಪ್ಪಿಸಲು ನೆರವಾಗುತ್ತದೆ. ಬಂಜರು ಭೂಮಿಯಲ್ಲಿ ಏನು ಬೆಳೆಯಬೇಕೆಂದು ತೋಚದೆ ದಿಕ್ಕೆಟ್ಟವರು ಜಟ್ರೋಫಾದ ದಾರಿ ಹಿಡಿಯಬಹುದು.
ಇದನ್ನೂ ಓದಿ: ಟೊಮ್ಯಾಟೋ ಬಳಿಕ ಗಗನಕ್ಕೇರಿದ ದಾಳಿಂಬೆ ಬೆಲೆ; 1 ಕೆಜಿಗೆ ಬರೋಬ್ಬರಿ 800 ರೂ!
ದಕ್ಷಿಣ ಅಮೆರಿಕದ ಮೂಲದ್ದೆಂದು ನಂಬಲಾದ ಜಟ್ರೋಫಾ ಒಂದು ರೀತಿಯಲ್ಲಿ ಹರಳೀ ಗಿಡದ ಜಾತಿಗೆ ಸೇರಿದ್ದು. ಎಲ್ಲಾ ಹವಾಮಾನ ಮತ್ತು ಪರಿಸ್ಥಿತಿಯಲ್ಲೂ ಇದು ಬೆಳೆಯಬಲ್ಲುದು. ಬಂಜರು ಪ್ರದೇಶದಲ್ಲಿ ಇದು ಹೆಚ್ಚು ಸೂಕ್ತ ಎಂದು ಹೇಳಲಾಗುತ್ತದೆ. ಈಗಾಗಿ, ಬರಡು ನೆಲ ಹೆಚ್ಚಿರುವ ಗುಜರಾತ್, ರಾಜಸ್ಥಾನ, ಕರ್ನಾಟಕ, ಆಂಧ್ರ, ಮಹಾರಾಷ್ಟ್ರ ಮೊದಲಾದ ಕೆಲ ರಾಜ್ಯಗಳಲ್ಲಿ ಇದನ್ನು ಬೆಳೆಯುವುದು ಹೆಚ್ಚು ಅನುಕೂಲಕರ ಎಂದು ನಂಬಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ