ಕನ್ನಡ ರಾಜ್ಯೋತ್ಸವ: ಕರ್ನಾಟಕ ಆರ್ಥಿಕತೆ ಹೇಗಿದೆ? ಯಾವ್ಯಾವ ವಲಯದಲ್ಲಿ ರಾಜ್ಯದ ಸಾಧನೆ ಹೇಗಿದೆ?

Karnataka Rajyotsava 2023: ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಪ್ರಕಟವಾಗಿರುವ ಪುಟ್ಟ ವಿಶೇಷ ಲೇಖನ. ಇಲ್ಲಿ ಕರ್ನಾಟಕದ ಆರ್ಥಿಕ, ಹಣಕಾಸು ಮತ್ತು ಔದ್ಯಮಿಕ ಸಾಧನೆಗಳ ಕೆಲ ಪ್ರಮುಖ ಅಂಶಗಳನ್ನು ನೀಡಲಾಗಿದೆ. ಕರ್ನಾಟಕದ ಅರ್ಥಿಕ ವಿಸ್ತಾರ, ಜಿಡಿಪಿ ದರ, ಬ್ಯಾಂಕಿಂಗ್ ವೈಭವ, ಐಟಿ ಕ್ಷೇತ್ರಗಳ ಸಾಧನೆ ಇತ್ಯಾದಿ ಹಲವು ಅಂಶಗಳನ್ನು ನೋಡಬಹುದು.

ಕನ್ನಡ ರಾಜ್ಯೋತ್ಸವ: ಕರ್ನಾಟಕ ಆರ್ಥಿಕತೆ ಹೇಗಿದೆ? ಯಾವ್ಯಾವ ವಲಯದಲ್ಲಿ ರಾಜ್ಯದ ಸಾಧನೆ ಹೇಗಿದೆ?
ಕರ್ನಾಟಕ ಆರ್ಥಿಕತೆ
Follow us
|

Updated on: Oct 31, 2023 | 12:33 PM

Karnataka Achievements: ಭಾರತದ ಅತ್ಯಂತ ಸಿರಿವಂತ ಪ್ರದೇಶಗಳಲ್ಲಿ ಕರ್ನಾಟಕವೂ ಒಂದು. ಐತಿಹಾಸಿಕವಾಗಿಯೂ ಕರ್ನಾಟಕ ಬಹಳಷ್ಟು ವರ್ಷಗಳಿಂದ ಸಂಪದ್ಭರಿತ ಪ್ರದೇಶವಾಗಿತ್ತು. 1973ರ ನವೆಂಬರ್ 1ರಂದು ಮೈಸೂರು ರಾಜ್ಯಕ್ಕೆ ಕರ್ನಾಟಕವೆಂದು ನಾಮಕರಣ ಮಾಡಲಾಯಿತಾದರೂ ವಿಜಯನಗರ ಅರಸರ ಕಾಲದಲ್ಲೇ ಕರ್ನಾಟಕ ನಾಡೆಂದು (Karnataka Region) ಹೆಸರಾಗಿತ್ತು. ಒಳ್ಳೊಳ್ಳೆಯ ಆಡಳಿತಗಾರರು, ಆರ್ಥಿಕ ತಜ್ಞರು, ಉದ್ಯಮಿಗಳು, ಹಣಕಾಸು ತಜ್ಞರನ್ನು ಕರ್ನಾಟಕ ಈ ದೇಶಕ್ಕೆ ಕೊಡುಗೆಯಾಗಿ ನೀಡಿದೆ. ಕರ್ನಾಟಕದ ಆರ್ಥಿಕತೆ ಹಾಗೂ ಇತರ ಕೆಲ ಹಣಕಾಸು ಸಾಧನೆಗಳ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ:

ಕರ್ನಾಟಕದ ಆರ್ಥಿಕ, ಹಣಕಾಸು ಮತ್ತು ಔದ್ಯಮಿಕ ಸಾಧನೆಗಳು

  • ಅತಿಹೆಚ್ಚು ಜಿಡಿಪಿ ಇರುವ ರಾಜ್ಯಗಳಲ್ಲಿ ಮಹಾರಾಷ್ಟ್ರದ ನಂತರದ ಸ್ಥಾನ ಕರ್ನಾಟಕದ್ದು
  • ಕರ್ನಾಟಕ ರಾಜ್ಯದ ಒಟ್ಟು ಜಿಡಿಪಿ 2022-23ರಲ್ಲಿ 22.4 ಲಕ್ಷಕೋಟಿ ರೂ ಇದೆ. ಕಳೆದ ಏಳು ವರ್ಷಗಳಲ್ಲಿ ಸರಾಸರಿಯಾಗಿ ಆರ್ಥಿಕತೆ ಶೇ. 11.51ರ ದರದಲ್ಲಿ ಬೆಳೆದಿದೆ. 2023-24ರಲ್ಲಿ ರಾಜ್ಯದ ಆರ್ಥಿಕತೆ 28.3 ಲಕ್ಷಕೋಟಿಗೆ ಏರುವ ನಿರೀಕ್ಷೆ ಇದೆ.
  • ಕಳೆದ ಒಂದು ದಶಕದಲ್ಲಿ ಎಲ್ಲಾ ರಾಜ್ಯಗಳದ್ದಕ್ಕಿಂತ ಕರ್ನಾಟಕದ ಆರ್ಥಿಕತೆ ಅತಿ ಹೆಚ್ಚು ವೇಗದಲ್ಲಿ ಬೆಳೆದಿದೆ.

ಇದನ್ನೂ ಓದಿ: ವಿಸ್ಟ್ರಾನ್ ಘಟಕದಲ್ಲಿ ಟಾಟಾ ಕಾರ್ಯಾಚರಣೆ ಅಧಿಕೃತ; ಮೊದಲ ಬಾರಿಗೆ ಭಾರತೀಯ ಕಂಪನಿಯಿಂದ ಆ್ಯಪಲ್ ಐಫೋನ್ ತಯಾರಿಕೆ

  • ಅತಿಹೆಚ್ಚು ಜಿಎಸ್​ಟಿ ತೆರಿಗೆ ಸಂಗ್ರಹಿಸುವ ರಾಜ್ಯಗಳ ಪೈಕಿ ಮಹಾರಾಷ್ಟ್ರ ಬಿಟ್ಟರೆ ಕರ್ನಾಟಕವೇ ಹೆಚ್ಚು.
  • ದೇಶದಲ್ಲಿ ಮೊದಲು ಬ್ಯಾಂಕುಗಳು ಸ್ಥಾಪನೆಯಾಗಿದ್ದು ಕರ್ನಾಟಕದಲ್ಲಿ. ಕೆನರಾ ಬ್ಯಾಂಕ್, ಕರ್ಣಾಟಕ ಬ್ಯಾಂಕ್, ವಿಜಯ ಬ್ಯಾಂಕ್, ಕಾರ್ಪೊರೇಶನ್ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ವೈಶ್ಯ ಬ್ಯಾಂಕ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಈ ಬ್ಯಾಂಕುಗಳು 1906ರಿಂದ 1913ರ ಅವಧಿಯೊಳಗೆ ಕರ್ನಾಟಕದಲ್ಲಿ, ಅದರಲ್ಲೂ ಹೆಚ್ಚಾಗಿ ಕರಾವಳಿ ಭಾಗದಲ್ಲಿ ಆರಂಭಗೊಂಡಿದ್ದವು.
  • ಐಟಿ ಉದ್ಯಮ ಅಡಿ ಇಡುವ ಮುನ್ನ ಕರ್ನಾಟಕ ದೊಡ್ಡ ಕೈಗಾರಿಕೆಗಳ ನಗರಿಯಾಗಿ ಖ್ಯಾತವಾಗಿತ್ತು. ಬಿಇಎಲ್, ಬಿಎಚ್​ಇಎಲ್, ಹೆಚ್​​ಎಎಲ್, ಬಿಇಎಂಎಲ್, ಎಚ್​ಎಂಟಿ ಮೊದಲಾದ ಸಂಸ್ಥೆಗಳ ಮುಖ್ಯಕಚೇರಿ ಬೆಂಗಳೂರಿನಲ್ಲಿ ಇದೆ. ಕರ್ನಾಟಕದಲ್ಲಿ ಉಕ್ಕಿನ ಕಾರ್ಖಾನೆ, ಸಾಬೂನು ಕಾರ್ಖಾನೆ ಇತ್ಯಾದಿ ದೊಡ್ಡ ಉದ್ದಿಮೆಗಳು ನೆಲೆ ನಿಂತಿವೆ.
  • ಭಾರತದ ಬಹುತೇಕ ಐಟಿ ಕಂಪನಿಗಳು ಬೆಂಗಳೂರಿನಲ್ಲಿ ನೆಲಸಿವೆ. ಇನ್ಫೋಸಿಸ್, ವಿಪ್ರೋ ಮೊದಲಾದವು ಉದಾಹರಣೆ.
  • ಭಾರತದ ಬಹುತೇಕ ಸ್ಟಾರ್ಟಪ್​​ಗಳು ಬೆಂಗಳೂರಿನಲ್ಲಿವೆ. ಹಲವು ಯೂನಿಕಾರ್ನ್​ಗಳಿವೆ. ಓಲಾ, ಫ್ಲಿಪ್​ಕಾರ್ಟ್ ಇತ್ಯಾದಿಗಳ ಮುಖ್ಯ ಕಚೇರಿ ಬೆಂಗಳೂರಿನಲ್ಲೇ ಇದೆ.
  • ಕರ್ನಾಟಕದಲ್ಲಿ 34 ಎಸ್​ಇಝಡ್​ಗಳು ಕಾರ್ಯನಿರ್ವಹಣೆಯಲ್ಲಿವೆ. 61 ಎಸ್​ಇಝಡ್​ಗಳು ಅಧಿಕೃತವಾಗಿ ಅನುಮೋದನೆ ಪಡೆದಿವೆ. 50 ಎಸ್​ಇಝಡ್​ಗಳಿಗೆ ಅಧಿಸೂಚನೆ ಕೊಡಲಾಗಿದೆ.

ಇದನ್ನೂ ಓದಿ: ಆನ್​ಲೈನ್​ ಮೂಲಕವೇ ಉಚಿತವಾಗಿ ಕನ್ನಡ ಕಲಿಯಿರಿ: ಹೇಗೆ ಅಂತೀರಾ? ಇಲ್ಲಿದೆ ನೋಡಿ

  • ಕರ್ನಾಟಕದಲ್ಲಿ ಅತಿದೊಡ್ಡ ಟೆಕ್ನಾಲಜಿ ಕ್ಲಸ್ಟರ್ ಇದೆ. ಇದು ವಿಶ್ವದಲ್ಲೇ ನಂ. 4.
  • ಕರ್ನಾಟಕ ಸಾಫ್ಟ್​ವೇರ್ ರಫ್ತಿನಲ್ಲಿ ಸೈ ಎನಿಸಿದೆ. ಉತ್ಪಾದನಾ ವಲಯದಲ್ಲೂ ಮಿಂಚುತ್ತಿದೆ. ಐಫೋನ್ ಫ್ಯಾಕ್ಟರಿಗಳಾಗಿವೆ. ಸೆಮಿಕಂಡಕ್ಟರ್ ಘಟಕಗಳು ತಲೆ ಎತ್ತುತ್ತಿವೆ. ಬಯೋಟೆಕ್ ಕಂಪನಿಗಳಿವೆ.
  • ಕರ್ನಾಟಕದ ಜಿಡಿಪಿಗೆ ಅತಿಹೆಚ್ಚು ಕೊಡುಗೆ ಸರ್ವಿಸ್ ಸೆಕ್ಟರ್​ನಿಂದ ಸಿಗುತ್ತದೆ. ಐಟಿ ಉದ್ಯಮ ಸೇರಿದಂತೆ ಸರ್ವಿಸ್ ಸೆಕ್ಟರ್​ನಿಂದ ರಾಜ್ಯ ಜಿಡಿಪಿಯಲ್ಲಿ ಶೇ. 66ರಷ್ಟು ಪಾಲು ಇದೆ. ಕೈಗಾರಿಕೆಗಳಿಂದ ಶೇ. 19ರಷ್ಟು ಕೊಡುಗೆ ಇದೆ.
  • ಕರ್ನಾಟಕ ಸರ್ಕಾರದ ಸಾಲವು ರಾಜ್ಯ ಜಿಡಿಪಿಯ ಶೇ. 28ರಷ್ಟಿದೆ.

ಇನ್ನಷ್ಟು ರಾಜ್ಯೋತ್ಸವ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ