Tax Target: ಬಜೆಟ್​ಗಾಗಿ ಕರ್ನಾಟಕ ಸರ್ಕಾರ ಎಲ್ಲಿಂದ ಆದಾಯ ಸೃಷ್ಟಿಸುತ್ತದೆ? ಇಲ್ಲಿದೆ ವಿವಿಧ ಇಲಾಖೆಗಳಿಗೆ ಸರ್ಕಾರ ನೀಡಿರುವ ತೆರಿಗೆ ಗುರಿ

Karnataka Budget 2023: ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹಿಂದಿನ ವರ್ಷದಕ್ಕಿಂತ ಬಹಳ ಡೊಡ್ಡ ಗಾತ್ರದ ಬಜೆಟ್ ಮಂಡಿಸಿದ್ದಾರೆ. ಇಷ್ಟು ಹಣವನ್ನು ಸರ್ಕಾರ ಹೇಗೆ ಹೊಂದಿಸುತ್ತದೆ ಎಂಬುದು ಕುತೂಹಲ. ವಿವಿಧ ಇಲಾಖೆಗಳಿಗೆ ತೆರಿಗೆ ಸಂಗ್ರಹದ ಗುರಿಯನ್ನು ಸರ್ಕಾರ ನೀಡಿದೆ.

Tax Target: ಬಜೆಟ್​ಗಾಗಿ ಕರ್ನಾಟಕ ಸರ್ಕಾರ ಎಲ್ಲಿಂದ ಆದಾಯ ಸೃಷ್ಟಿಸುತ್ತದೆ? ಇಲ್ಲಿದೆ ವಿವಿಧ ಇಲಾಖೆಗಳಿಗೆ ಸರ್ಕಾರ ನೀಡಿರುವ ತೆರಿಗೆ ಗುರಿ
ಸಿಎಂ ಸಿದ್ದರಾಮಯ್ಯ
Follow us
|

Updated on: Jul 07, 2023 | 2:18 PM

ಬೆಂಗಳೂರು: ಕರ್ನಾಟಕ ಸರ್ಕಾರ ಈ ಬಾರಿ ದಾಖಲೆಯ 3.27 ಲಕ್ಷ ಕೋಟಿ ರೂ ಗಾತ್ರದ ಬಜೆಟ್ (Karnataka Budget 2023) ನೀಡಿದೆ. ಹಿಂದಿನ ಸರ್ಕಾರದ 2.65 ಲಕ್ಷ ಕೋಟಿ ರೂ ಬಜೆಟ್ ಗಾತ್ರಕ್ಕಿಂತ ಈ ಬಾರಿ ಶೇ. 20ಕ್ಕಿಂತಲೂ ಹೆಚ್ಚಿದೆ. ಇದರಲ್ಲಿ 5 ಗ್ಯಾರಂಟಿ ಯೋಜನೆಗಳಿಗೆಯೇ 52,000 ಕೋಟಿ ರೂ ಅನುದಾನ ಕೊಡಲಾಗಿದೆ. ಈ ಬಜೆಟ್ ಹಣದಲ್ಲಿ ಸಾಲ ಪಾವತಿಗಳಿಗೆಯೇ 22,441 ಕೋಟಿ ರೂ ವೆಚ್ಚವಾಗುತ್ತದೆ. ಬಂಡವಾಳ ಹೂಡಿಕೆ ವೆಚ್ಚ 54,374 ಕೋಟಿ ರೂ ಇದೆ. ಈಗ ಬಜೆಟ್​ಗೆ ಇಷ್ಟೊಂದು ಹಣವನ್ನು ಸರ್ಕಾರ ಹೇಗೆ ಹೊಂದಿಸುತ್ತದೆ ಎಂಬುದು ಕುತೂಹಲ. ಅಬಕಾರಿ ಸುಂಕವನ್ನು ಶೇ. 20ರಷ್ಟು ಹೆಚ್ಚಿಸಲಾಗಿದೆ. ವಾಣಿಜ್ಯ ಇಲಾಖೆಗೆ ಈ ಬಾರಿ ತೆರಿಗೆ ಗುರಿ 1 ಲಕ್ಷ ಕೋಟಿ ರೂಗಿಂತ ಹೆಚ್ಚು ಇಡಲಾಗಿದೆ. ಸರ್ಕಾರದ ಬಹುತೇಕ ಆದಾಯ ಕಮರ್ಷಿಯಲ್ ಟ್ಯಾಕ್ಸ್​ಗಳಿಂದ ಬರುತ್ತದೆ. ಕಳೆದ ವರ್ಷಕ್ಕಿಂತ ಈ ಬಾರಿ ವಾಣಿಜ್ಯ ಇಲಾಖೆಗೆ ಶೇ. 20ಕ್ಕಿಂತ ಹೆಚ್ಚು ತೆರಿಗೆ ಗುರಿ ಕೊಡಲಾಗಿದೆ. ಅಬಕಾರಿ ಇಲಾಖೆ, ನೊಂದಣಿ ಮುದ್ರಾಂಕ ಮತ್ತು ಸಾರಿಗೆ ಇಲಾಖೆಗೂ ಹೆಚ್ಚಿನ ತೆರಿಗೆ ಗುರಿ ನೀಡಲಾಗಿದೆ.

ಸರ್ಕಾರದಿಂದ 2023-24ಕ್ಕೆ ತೆರಿಗೆ ಗುರಿ

ಒಟ್ಟು ರಾಜಸ್ವ ನಿರೀಕ್ಷೆ: 1,62,000 ಕೋಟಿ ರೂ

  • ವಾಣಿಜ್ಯ ತೆರಿಗೆ ಇಲಾಖೆ: 1,01,000 ಕೋಟಿ ರೂ
  • ಅಬಕಾರಿ ಇಲಾಖೆ: 36,000 ಕೋಟಿ ರೂ
  • ನೊಂದಣಿ ಮತ್ತು ಮುದ್ರಾಂಕ ಇಲಾಖೆ: 25,000 ಕೋಟಿ ರೂ
  • ಸಾರಿಗೆ ಇಲಾಖೆ: 11,500 ಕೋಟಿ ರೂ
  • ಇತರೆ ಮೂಲಗಳಿಂದ: 2,153 ಕೋಟಿ ರೂ

ಇದನ್ನೂ ಓದಿKarnataka Budget 2023 Size: ಕರ್ನಾಟಕ ಬಜೆಟ್ ಗಾತ್ರ 3.27 ಲಕ್ಷ ಕೋಟಿ ರೂ; 5 ಗ್ಯಾರಂಟಿಗಳ ಜಾರಿಗೆ 52,000 ಕೋಟಿ ರೂ

2022-23ರ ಬಜೆಟ್​ನಲ್ಲಿ ಇದ್ದ ತೆರಿಗೆ ಗುರಿ

  • ವಾಣಿಜ್ಯ ತೆರಿಗೆ ಇಲಾಖೆ: 77,017 ಕೋಟಿ ರೂ
  • ರಾಜ್ಯ ಅಬಕಾರಿ ಇಲಾಖೆ: 29,000 ಕೋಟಿ ರೂ
  • ನೊಂದಣಿ ಮತ್ತು ಮುದ್ರಾಂಕ ಶುಲ್ಕ: 15,000 ಕೋಟಿ ರೂ
  • ಸಾರಿಗೆ ಇಲಾಖೆ: 8,007 ಕೋಟಿ ರೂ

ಈ ಮಧ್ಯೆ ಹೆಚ್ಚು ವಿತ್ತೀಯ ಕೊರತೆ ಎದುರಾಗದ ರೀತಿ ಬಜೆಟ್ ಆಶ್ವಾಸನೆಗಳನ್ನು ಈಡೇರಿಸಬೇಕಾದ ಕಠಿಣ ಹೊಣೆಗಾರಿಗೆ ಸಿದ್ದರಾಮಯ್ಯ ಹೆಗಲಿಗಿದೆ. ನಿರೀಕ್ಷಿಸಿದಷ್ಟು ತೆರಿಗೆ ಸಂಗ್ರಹ ಆಗುತ್ತದಾ ಎಂಬುದು ಕುತೂಹಲ ಮೂಡಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ