ಲಾಕ್​ಡೌನ್​ನಿಂದ ಆದಾಯ ಖೋತಾ: ಕರ್ನಾಟಕ ಸರ್ಕಾರದ ಸಾಲದ ಪ್ರಮಾಣ ಶೇ 31ರಷ್ಟು ಏರಿಕೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 14, 2021 | 11:31 PM

ಲಾಕ್‌ಡೌನ್​ನಿಂದ ಆದಾಯ ಕೊರತೆ ಉಂಟಾದ ಹಿನ್ನೆಲೆಯಲ್ಲಿ ಸಂಕಷ್ಟ ಪರಿಸ್ಥಿತಿ ನಿರ್ವಹಿಸಲು ರಾಜ್ಯ ಸರ್ಕಾರವು ಹೆಚ್ಚುವರಿ ಸಾಲ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು

ಲಾಕ್​ಡೌನ್​ನಿಂದ ಆದಾಯ ಖೋತಾ: ಕರ್ನಾಟಕ ಸರ್ಕಾರದ ಸಾಲದ ಪ್ರಮಾಣ ಶೇ 31ರಷ್ಟು ಏರಿಕೆ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಕರ್ನಾಟಕ ರಾಜ್ಯದ ಸಾರ್ವಜನಿಕ ಸಾಲ ಶೇ 31.38ರಷ್ಟು ಏರಿಕೆಯಾಗಿದೆ ಎಂದು ವಿಧಾನಸಭೆಯಲ್ಲಿ ಮಂಡನೆಯಾದ ಲೆಕ್ಕ ಪರಿಶೋಧಕರ (Comptroller and Auditor General – CAG) ವರದಿಯಲ್ಲಿ ಉಲ್ಲೇಖಿಸಲಾಗಿದೆ. ಲಾಕ್‌ಡೌನ್​ನಿಂದ ಆದಾಯ ಕೊರತೆ ಉಂಟಾದ ಹಿನ್ನೆಲೆಯಲ್ಲಿ ಸಂಕಷ್ಟ ಪರಿಸ್ಥಿತಿ ನಿರ್ವಹಿಸಲು ರಾಜ್ಯ ಸರ್ಕಾರವು ಹೆಚ್ಚುವರಿ ಸಾಲ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. 2019-20ರಲ್ಲಿ ₹ 2.34 ಲಕ್ಷ ಕೋಟಿ ಸಾಲ ಮಾಡಿತ್ತು. ಈ ಮೊತ್ತವು 2020-21ನೇ ಸಾಲಿನಲ್ಲಿ ₹ 3.07 ಲಕ್ಷ ಕೋಟಿಗೆ ಏರಿಕೆಯಾಗಿದೆ. 2019-20ರಲ್ಲಿ ರಾಜ್ಯದ ಜಿಎಸ್​ಟಿ ಸಂಗ್ರಹ ₹ 42,147 ಕೋಟಿ ಇತ್ತು. 2020-21ರಲ್ಲಿ ಇದು ₹ 37,711 ಕೋಟಿಗೆ ಇಳಿಕೆಯಾಗಿದೆ ಎಂದು ವರದಿಯು ಹೇಳಿದೆ.

2020-21ನೇ ಸಾಲಿನಲ್ಲಿ ಸಾಲದ ಪ್ರಮಾಣವು ₹ 96,506 ಕೋಟಿ ಇತ್ತು. ರಾಜ್ಯದ ತೆರಿಗೆ ಆದಾಯದಲ್ಲಿ ಕೊರತೆಯಾದ ಹಿನ್ನೆಲೆಯಲ್ಲಿ ಆದಾಯ ಸಂಗ್ರಹದಲ್ಲಿ ₹ 14,535 ಕೋಟಿ ಕೊರತೆ ಕಾಣಿಸಿಕೊಂಡಿದೆ. 2019-20ರಿಂದ 2020-21ರವರೆಗೆ ಸಾಲದ ಪ್ರಮಾಣವು ಹೆಚ್ಚುತ್ತಲೇ ಇದೆ. 2021ರಲ್ಲಿ ಸಾಲದ ಪ್ರಮಾಣವು ₹ 78,000 ಕೋಟಿ ಹೆಚ್ಚಾಗಿದೆ. ಎಸ್​ಜಿಎಸ್​ಟಿ, ರಾಜ್ಯ ಅಬಕಾರಿ ಸುಂಕ, ಮಾರಾಟ ತೆರಿಗೆ, ಮುದ್ರಾಂಕ ತೆರಿಗೆ ಮತ್ತು ನೋಂದಣಿ ತೆರಿಗೆ, ವಾಹನ ತೆರಿಗೆ ಸಂಗ್ರಹದಲ್ಲಿಯೂ ಭಾರಿ ನಷ್ಟವಾಗಿದೆ. ಇದರಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ಸಾಲ ಪಡೆಯುವುದು ಅನಿವಾರ್ಯವಾಗಿದೆ. ಸಾಲದ ಪ್ರಮಾಣ ಹೆಚ್ಚಾಗಿರುವ ಕುರಿತು ಸಿಎಜಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಕಾಮಗಾರಿಗಳು ಆರಂಭವಾಗಿ ಐದು ವರ್ಷವಾದರೂ ನೀರಾವರಿ ಇಲಾಖೆಯ 13 ಯೋಜನೆಗಳು ಹಾಗೂ 41 ರಸ್ತೆ ಯೋಜನೆ, 2 ಕಟ್ಟಡ ಯೋಜನೆ, 3 ಸೇತುವೆ ಕಾಮಗಾರಿಗಳು ಅಪೂರ್ಣವಾಗಿರುವ ಬಗ್ಗೆ ವರದಿಯು ಆಕ್ಷೇಪಿಸಿದೆ. ಕೇಂದ್ರ ಸರ್ಕಾರಕ್ಕೆ ₹ 68.65 ಕೋಟಿ ಹೆಚ್ಚುವರಿ ಮೊತ್ತವನ್ನು ಮರುಪಾವತಿ ಮಾಡಿರುವ ಬಗ್ಗೆಯೂ ವರದಿಯಲ್ಲಿ ಆಕ್ಷೇಪಿಸಲಾಗಿದೆ.

ಮುಂಗಡ ಮೊತ್ತ ಪರಿಷ್ಕಾರ
ಸರ್ಕಾರಿ ನೌಕರರಿಗೆ ಹಬ್ಬದ ಮುಂಗಡ ಮೊತ್ತ ಪರಿಷ್ಕರಣೆ ಮಾಡಿ ರಾಜ್ಯ ಸರ್ಕಾರವು ಆದೇಶ ಹೊರಡಿಸಿದೆ. ಪ್ರಸ್ತುತ ₹ 10,000 ಮುಂಗಡ ನೀಡಲಾಗುತ್ತಿತ್ತು. ಇದನ್ನು ಸರ್ಕಾರವು ₹ 25,000ಕ್ಕೆ ಪರಿಷ್ಕರಿಸಿದೆ.

ಇದನ್ನೂ ಓದಿ: ಸಿಎಜಿ ಕಚೇರಿಯಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆ ಅನಾವರಣಗೊಳಿಸಿದ ಪ್ರಧಾನಿ ಮೋದಿ
ಇದನ್ನೂ ಓದಿ: Petrol and Diesel Tax Collection: 3 ಹಣಕಾಸು ವರ್ಷದಲ್ಲಿ ಪೆಟ್ರೋಲ್, ಡೀಸೆಲ್ ತೆರಿಗೆಯ 8.02 ಲಕ್ಷ ಕೋಟಿ ರೂ. ಸಂಗ್ರಹ