Millets Production In Karnataka: ಕರ್ನಾಟಕವು ರಾಗಿಯಂತಹ ಕಿರುಧಾನ್ಯ ಉತ್ಪಾದನೆ ಹೆಚ್ಚಿಸಬೇಕೆಂದ ಕೇಂದ್ರ ಆಹಾರ ಕಾರ್ಯದರ್ಶಿ
ಕರ್ನಾಟಕವು ರಾಗಿಯಂಥ ಕಿರು ಧಾನ್ಯಗಳ ಉತ್ಪಾದನೆಯನ್ನು ಹೆಚ್ಚಿಸಬೇಕು ಎಂದು ಆಹಾರ ಕಾರ್ಯದರ್ಶಿ ಸುಧಾಂಶು ಪಾಂಡೆ ಹೇಳಿದ್ದಾರೆ.
ಕರ್ನಾಟಕ ರಾಜ್ಯವು ರಾಗಿಯ ದೊಡ್ಡ ಉತ್ಪಾದಕ ಆಗಿದ್ದು, ಈ ಕಿರು ಧಾನ್ಯದ ಉತ್ಪಾದನೆಯನ್ನು ಹೆಚ್ಚಿಸಬೇಕು ಮತ್ತು ಇತರ ರಾಜ್ಯಗಳ ಅಗತ್ಯವನ್ನು ಸಹ ಪೂರೈಸಬೇಕು ಎಂದು ಕೇಂದ್ರ ಆಹಾರ ಕಾರ್ಯದರ್ಶಿ ಸುಧಾಂಶು ಪಾಂಡೆ ಅವರು ಶನಿವಾರ ರಾಜ್ಯ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಹೇಳಿದ್ದಾರೆ. ರಾಜ್ಯದ ಮುಖ್ಯ ಕಾರ್ಯದರ್ಶಿ ಮತ್ತು ಇತರ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಪಾಂಡೆ, ಕರ್ನಾಟಕ ಸರ್ಕಾರವು ಸ್ಟಾರ್ಟ್ ಅಪ್‌ಗಳ ಮೂಲಕ ರಾಗಿ ಉತ್ಪನ್ನಗಳ ಮಾರುಕಟ್ಟೆ ಪ್ರವೇಶವನ್ನು ಹೆಚ್ಚಿಸಲು ಹೈದರಾಬಾದ್‌ನಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮಿಲೆಟ್‌ನೊಂದಿಗೆ ಸಹ ಒಪ್ಪಂದ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ. “ಇತರ ರಾಜ್ಯಗಳ ಕಿರು ಧಾನ್ಯದ ಅಗತ್ಯವನ್ನು ಕೇಂದ್ರದ ಜತೆಗೂಡಿ ಕರ್ನಾಟಕವು ಎಲ್ಲ ನಿರ್ವಹಣೆ ಮತ್ತು ಸಾಗಣೆ ವೆಚ್ಚವನ್ನು ಭರಿಸುವುದರೊಂದಿಗೆ ಪೂರೈಸಬಹುದು ಎಂದು ಆಹಾರ ಕಾರ್ಯದರ್ಶಿ ತಿಳಿಸಿದ್ದಾರೆ,” ಎಂಬುದಾಗಿ ಅಧಿಕೃತ ಹೇಳಿಕೆ ತಿಳಿಸಿದೆ.
2023ನೇ ಇಸವಿಯನ್ನು ಅಂತಾರಾಷ್ಟ್ರೀಯ ಕಿರು ಧಾನ್ಯ ವರ್ಷವೆಂದು ಘೋಷಿಸಿರುವುದರಿಂದ ರಾಜ್ಯವು ಕಿರು ಧಾನ್ಯ ಉತ್ಪಾದನೆಯನ್ನು ಹೆಚ್ಚಿಸಬೇಕು ಎಂದು ಅವರು ಹೇಳಿದ್ದಾರೆ. ಕೇಂದ್ರ ಆಹಾರ ಕಾರ್ಯದರ್ಶಿಗಳು ರಾಜ್ಯ ಸರ್ಕಾರಕ್ಕೆ ಸ್ಥಳೀಯವಾಗಿ ಬಲವರ್ಧಿತ ಅಕ್ಕಿಯನ್ನು ಖರೀದಿಸಲು ಮತ್ತು ಮಿಲ್ಲಿಂಗ್ ಹಂತದಲ್ಲಿಯೇ ಅಕ್ಕಿಯನ್ನು ಫೋರ್ಟಿಫಿಕೇಶನ್ ಮಾಡಲು ಸೂಚಿಸಿದ್ದಾರೆ.
ಮಹತ್ವಾಕಾಂಕ್ಷೆಯ ಮತ್ತು ಭಾರೀ ಹೊರೆಯ ಜಿಲ್ಲೆಗಳಿಗೆ ಶೇ 100ರ ಬಲವರ್ಧಿತ ಅಕ್ಕಿಯ ದೀರ್ಘಾವಧಿಯ ಉದ್ದೇಶವನ್ನು ಸಾಧಿಸಲು FRK (ಫೋರ್ಟಿಫೈಡ್ ರೈಸ್ ಕೆರ್ನಲ್) ಘಟಕಗಳನ್ನು ಸ್ಥಾಪಿಸಲಾಗುವುದು ಎಂದು ಅವರು ಹೇಳಿದ್ದಾರೆ. ಅಲ್ಲದೆ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಮತ್ತು ಮಧ್ಯಾಹ್ನದ ಊಟದ ಯೋಜನೆಯಡಿಯಲ್ಲಿ ಫಲವತ್ತಾದ ಅಕ್ಕಿ ವಿತರಣೆಯನ್ನು ಕೈಗೊಳ್ಳುವ ಅಡಿಯಲ್ಲಿ ಪ್ರಯೋಜನಗಳನ್ನು ಪಡೆಯಲು ಮಕ್ಕಳ ಆರೋಗ್ಯ ಅಭಿವೃದ್ಧಿಯನ್ನು ಮೇಲ್ವಿಚಾರಣೆ ಮಾಡಲು ಆರೋಗ್ಯ ಇಲಾಖೆಯನ್ನು ರಾಜ್ಯ ಸರ್ಕಾರವು ಒಳಗೊಳ್ಳುವಂತೆ ಪಾಂಡೆ ಕೇಳಿಕೊಂಡಿದ್ದಾರೆ.
ಇದಲ್ಲದೆ, ರಾಜ್ಯವು ಸ್ವಯಂ ಬಳಕೆಗಾಗಿ ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ಸ್ಥಳೀಯ ಭತ್ತವನ್ನು ಖರೀದಿಸಲು ಕೇಂದ್ರ ಸರ್ಕಾರ ಈಗಾಗಲೇ ಅನುಮೋದನೆ ನೀಡಿದೆ ಎಂದು ಪಾಂಡೆ ಹೇಳಿದ್ದಾರೆ. ಮುಂಗಡ ಸಬ್ಸಿಡಿಯನ್ನು ಬಿಡುಗಡೆ ಮಾಡಲು ರಾಜ್ಯದ ಕೋರಿಕೆಯ ಮೇರೆಗೆ ಕೇಂದ್ರ ಆಹಾರ ಕಾರ್ಯದರ್ಶಿಯವರು ಕರ್ನಾಟಕ ಸರ್ಕಾರಕ್ಕೆ ತಮ್ಮ ತಾತ್ಕಾಲಿಕ ವೆಚ್ಚವನ್ನು ಸಲ್ಲಿಸಲು ಕೇಳಿದ್ದಾರೆ. ಅದರ ಆಧಾರದ ಮೇಲೆ ಮುಂಗಡಗಳನ್ನು ಬಿಡುಗಡೆ ಮಾಡಬಹುದು.
ರಾಜ್ಯ ಸರ್ಕಾರವು ಸಂಗ್ರಹಣೆ ಕಾರ್ಯಾಚರಣೆಗಳಿಗಾಗಿ ಒಂದು ಏಕೀಕೃತ ಸಾಫ್ಟ್‌ವೇರ್ ಅನ್ನು ಹೊಂದಲು ಸಲಹೆ ನೀಡಿದ್ದು, ಅದು ಪರಿಗಣನೆಯಲ್ಲಿದೆ ಎಂದು ಪಾಂಡೆ ಹೇಳಿದ್ದಾರೆ. ಕರ್ನಾಟಕವು ಸಕ್ಕರೆಯ ಅತಿದೊಡ್ಡ ಉತ್ಪಾದಕ ರಾಜ್ಯಗಳಲ್ಲಿ ಒಂದಾಗಿರುವುದರಿಂದ, ಮಹಾನಗರಗಳಲ್ಲಿ 100 ಎಥೆನಾಲ್ ಬಂಕ್‌ಗಳನ್ನು ಪರಿಚಯಿಸಲು ಗುರುತಿಸಲಾದ ಎಂಟು ರಾಜ್ಯಗಳಲ್ಲಿ ಕರ್ನಾಟಕವು ಒಂದಾಗಿರುವುದರಿಂದ ಎಥೆನಾಲ್ ಉತ್ಪಾದನೆ ಮತ್ತು ಮಿಶ್ರಣವನ್ನು ಉತ್ತೇಜಿಸಲು ಪಾಂಡೆ ಸಲಹೆ ನೀಡಿದ್ದಾರೆ. ವಲಸೆ ಕಾರ್ಮಿಕರು, ಕಾಫಿ ತೋಟದ ಕಾರ್ಮಿಕರು ಮತ್ತು ನಿರ್ಮಾಣ ಚಟುವಟಿಕೆಗಳಲ್ಲಿ ತೊಡಗಿರುವ ಇತರ ಕಾರ್ಮಿಕರಿಗೆ ‘ಒನ್ ನೇಷನ್ ಒನ್ ರೇಷನ್ ಕಾರ್ಡ್’ ಅನ್ನು ಬಡವರ ನಿಜವಾದ ಪ್ರಯೋಜನಕ್ಕಾಗಿ ರಾಜ್ಯ ಸರ್ಕಾರವು ಸಕ್ರಿಯವಾಗಿ ಕೈಗೆತ್ತಿಕೊಳ್ಳಬಹುದು ಎಂದು ಅವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಹಣಕಾಸು ವರ್ಷ 22ರಲ್ಲಿ ಆಹಾರ ಸಬ್ಸಿಡಿ 4 ಲಕ್ಷ ಕೋಟಿ ರೂಪಾಯಿಗಿಂತ ಸ್ವಲ್ಪ ಕಡಿಮೆ ಎಂದ ಆಹಾರ ಕಾರ್ಯದರ್ಶಿ ಸುಧಾಂಶು ಪಾಂಡೆ