Rules Change in July 2023: ಎಲ್​ಪಿಜಿ ಬೆಲೆ ಸೇರಿದಂತೆ ಜುಲೈ ತಿಂಗಳಲ್ಲಿ ನೀವು ಗಮನಿಸಬೇಕಾದ ಕೆಲ ಬದಲಾವಣೆಗಳು

Petrol Price Reduction Likely: ಜುಲೈ ತಿಂಗಳಲ್ಲಿ ಬ್ಯಾಂಕುಗಳ ರಜಾ ದಿನ, ಪಿಎಂ ಕಿಸಾನ್ ಯೋಜನೆಯ 14ನೇ ಕಂತಿನ ಹಣ ಬಿಡುಗಡೆ, ಎಲ್​ಪಿಜಿ, ಸಿಎನ್​ಜಿ, ಪೆಟ್ರೋಲ್, ಡೀಸೆಲ್ ಇತ್ಯಾದಿ ಬೆಲೆಯಲ್ಲಿ ವ್ಯತ್ಯಾಸಗಳಾಗುವ ನಿರೀಕ್ಷೆ ಇದೆ. ಈ ಬಗ್ಗೆ ಒಂದು ಸಂಕ್ಷಿಪ್ತ ವರದಿ.

Rules Change in July 2023: ಎಲ್​ಪಿಜಿ ಬೆಲೆ ಸೇರಿದಂತೆ ಜುಲೈ ತಿಂಗಳಲ್ಲಿ ನೀವು ಗಮನಿಸಬೇಕಾದ ಕೆಲ ಬದಲಾವಣೆಗಳು
ಎಲ್​ಪಿಜಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
| Updated By: Digi Tech Desk

Updated on:Jun 30, 2023 | 12:36 PM

ಬೆಂಗಳೂರು: 2023 ರ ವರ್ಷದ ಅರ್ಧಭಾಗ ಕಳೆದೇಹೋಯಿತು. ಜೂನ್ ಹೋಗಿ ಜುಲೈ ಬರುತ್ತಿದೆ. ಜುಲೈನಲ್ಲಿ ನಮ್ಮ ಸ್ಥಿತಿ ಹೇಗಿರಲಿದೆ ಎಂಬ ಕುತೂಹಲ ಹಲವರಲ್ಲಿ ಇರಬಹುದು. ಇದೇನೂ ಜ್ಯೋತಿಷ್ಯವಲ್ಲ, ಆದರೆ ಜುಲೈ ತಿಂಗಳಲ್ಲಿ ಆಗುವ ಮತ್ತು ಆಗಬೇಕಿದ್ದ ಕೆಲ ಪ್ರಮುಖ ನಿಯಮ ಬದಲಾವಣೆಗಳು (Rule Changes), ವ್ಯಾವಹಾರಿಕ ಬದಲಾವಣೆಗಳನ್ನು ಇಲ್ಲಿ ಕ್ರೋಢೀಕರಿಸಿ ತಿಳಿಸುವ ಪ್ರಯತ್ನ ಇದೆ. ಪೆಟ್ರೋಲ್ ಡೀಸೆಲ್ ಎಲ್​ಪಿಜಿ ದರ ಬದಲಾವಣೆಗಳು, ಕೆಲ ನಿಯಮ ಬದಲಾವಣೆಗಳು, ಗಡುವು ಇತ್ಯಾದಿ ವಿವರ ಇಲ್ಲಿದೆ.

ಎಲ್​ಪಿಜಿ, ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ವ್ಯತ್ಯಯ

ಭಾರತದ ತೈಲ ಕಂಪನಿಗಳು ಪ್ರತೀ ತಿಂಗಳ ಮೊದಲ ದಿನದಿಂದ ಎಲ್​ಪಿಜಿ ದರಗಳನ್ನು ಪರಿಷ್ಕರಿಸುತ್ತವೆ. ಮೇ ಮತ್ತು ಜೂನ್ ತಿಂಗಳಲ್ಲಿ 19 ಕಿಲೋ ಕಮರ್ಷಿಯಲ್ ಎಲ್​ಪಿಜಿ ಸಿಲಿಂಡರ್ ದರಗಳನ್ನು ಇಳಿಸಲಾಗಿತ್ತು. ಆದರೆ, ಅಡುಗೆ ಅನಿಲದ ಸಿಲಿಂಡರ್ ಬೆಲೆಯಲ್ಲಿ ಯಾವ ಬದಲಾವಣೆ ಆಗಿರಲಿಲ್ಲ. ಈಗ ಜುಲೈ ತಿಂಗಳಲ್ಲಿ 14 ಕಿಲೋ ಎಲ್​ಪಿಜಿ ಅಡುಗೆ ಅನಿಲದ ಬೆಲೆ ಇಳಿದು ಮನೆಮಂದಿಗೆ ಖುಷಿ ತರುತ್ತಾ ನೋಡಬೇಕು.

ಎಲ್​ಪಿಜಿ ಜೊತೆಗೆ ವಾಹನಗಳಿಗೆ ಬಳಸುವ ಸಿಎನ್​ಜಿ ಮತ್ತು ಪಿಎನ್​ಜಿ ದರಗಳೂ ಕೂಡ ಪ್ರತೀ ತಿಂಗಳ ಮೊದಲ ವಾರದಂದು ಪರಿಷ್ಕರಣೆಗೊಳ್ಳುತ್ತವೆ. ಜುಲೈನಲ್ಲಿ ಇವೆರಡರ ದರದಲ್ಲಿ ಬದಲಾವಣೆ ಆಗುವ ಸಾಧ್ಯತೆ ಇದೆ.

ಇದನ್ನೂ ಓದಿOriginal Documents: ಬ್ಯಾಂಕ್​ನವರು ನಿಮ್ಮ ಮೂಲಪತ್ರ ಹಿಂದಿರುಗಿಸದಿದ್ದರೆ ಏನು ಮಾಡಬೇಕು? ಇಲ್ಲಿವೆ ಮಾರ್ಗೋಪಾಯಗಳು

ಇನ್ನು, ಜುಲೈ ತಿಂಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆಯಾಗುವ ನಿರೀಕ್ಷೆ ಇದೆ. ಅಂತಾರಾಷ್ಟ್ರೀಯ ತೈಲ ಬೆಲೆಗಳು ಇಳಿಯುತ್ತಿರುವ ಹಿನ್ನೆಲೆಯಲ್ಲಿ ಭಾರತದಲ್ಲೂ ಇದು ಪರಿಣಾಮ ಬೀರಿ, ಪೆಟ್ರೋಲ್ ಮತ್ತು ಡೀಸೆಲ್ ತುಸು ಅಗ್ಗಗೊಳ್ಳಬಹುದು.

ಐಟಿ ರಿಟರ್ನ್ಸ್ ಫೈಲ್ ಮಾಡಲು ಕೊನೆಯ ದಿನ

ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಜುಲೈ 31ರಂದು ಕೊನೆಯ ದಿನವಾಗಿದೆ. ಈ ಗಡುವು ಮೀರಿದರೆ ದಂಡ ಕಟ್ಟಬೇಕಾಗಬಹುದು.

ಪಾದುಕೆಗಳ ಕಂಪನಿಗಳಿಗೆ ಕ್ಯೂಸಿಒ ಕಡ್ಡಾಯ

2023, ಜುಲೈ 1ರಿಂದ ಉತ್ತಮ ಗುಣಮಟ್ಟದ ಪಾದರಕ್ಷೆಗಳ ಮಾರಾಟಕ್ಕೆ ಮಾತ್ರ ಭಾರತದಲ್ಲಿ ಅನುಮತಿ ಇರಲಿದೆ. ಕಡಿಮೆ ಗುಣಮಟ್ಟದ ಪಾದುಕೆಗಳ ತಯಾರಿಕೆ ಮತ್ತು ಮಾರಾಟವನ್ನು ನಿಷೇಧಿಸಲಾಗಿದೆ. ಭಾರತದಲ್ಲಿ ತಯಾರಾಗುವ ಪಾದರಕ್ಷೆಯಾಗಲೀ, ಆಮದು ಮಾಡಿಕೊಳ್ಳಲಾದ ಪಾದರಕ್ಷೆಯಾಗಲೀ ನಿಗದಿತ ಮಾನದಂಡದ ಪ್ರಕಾರ ಗುಣಮಟ್ಟ ಹೊಂದಿರಬೇಕು. ವಿಶ್ವ ವ್ಯಾಪಾರ ಸಂಸ್ಥೆ (ಡಬ್ಲ್ಯುಟಿಒ) ನಿಯಮದ ಅನುಸಾರ ಕೇಂದ್ರ ಸರ್ಕಾರವು ಫೂಟ್​ವೇರ್ ಕಂಪನಿಗಳಿಗೆ ಕ್ವಾಲಿಟಿ ಕಂಟ್ರೋಲ್ ಆರ್ಡರ್ ಅನ್ನು ಜಾರಿಗೊಳಿಸಬೇಕೆಂದು ಆದೇಶಿಸಿತ್ತು.

ಜುಲೈನಲ್ಲಿ 15 ದಿನ ಬ್ಯಾಂಕ್ ರಜೆ

ಆರ್​ಬಿಐ ಹೊರಡಿಸಿರುವ ರಜಾದಿನಗಳ ಪಟ್ಟಿ ಪ್ರಕಾರ ಜುಲೈ ತಿಂಗಳಲ್ಲಿ ದೇಶದ ವಿವಿಧೆಡೆ ಒಟ್ಟು 15 ದಿನಗಳ ರಜೆ ಇದೆ. ಇದರಲ್ಲಿ 3 ಶನಿವಾರ ಮತ್ತು 5 ಭಾನುವಾರದ ರಜೆಗಳೂ ಒಳಗೊಂಡಿವೆ. ಕರ್ನಾಟಕದಲ್ಲಿ ಬ್ಯಾಂಕುಗಳು ಒಟ್ಟು 9 ದಿನ ರಜೆ ಹೊಂದಿರಲಿವೆ.

ಇದನ್ನೂ ಓದಿIT Returns: ಐಟಿ ರಿಟರ್ನ್ಸ್​ಗೆ ನೊಂದಾಯಿಸುವುದು ಹೇಗೆ, ಐಟಿಆರ್ ಫೈಲಿಂಗ್ ಮಾಡುವುದು ಹೇಗೆ? ಇಲ್ಲಿದೆ ಡೀಟೇಲ್ಸ್

ಅಂತಾರಾಷ್ಟ್ರೀಯ ಕ್ರೆಡಿಟ್ ಕಾರ್ಡ್ ವೆಚ್ಚಕ್ಕೆ ತೆರಿಗೆ ಜುಲೈ ಬದಲು ಆಗಸ್ಟ್​ನಿಂದ ಜಾರಿ

ವಿದೇಶಗಳಿಗೆ ಹೋಗಿ ಅಲ್ಲಿ ಅಂತಾರಾಷ್ಟ್ರೀಯ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಸಿ ನಾವು ಮಾಡುವ ವೆಚ್ಚದ ಮೇಲೆ ಟಿಸಿಎಸ್ ತೆರಿಗೆ ವಿಧಿಸುವುದಾಗಿ ಸರ್ಕಾರ ಹೇಳಿತ್ತು. ಜುಲೈ 1ರಿಂದ ಇದು ಜಾರಿಯಾಗುವುದಿತ್ತು. ಆದರೆ, ಜೂನ್ 28ರಂದು ಹೊರಡಿಸಿದ ಪ್ರಕಟಣೆ ಪ್ರಕಾರ ಇಂಟರ್ನ್ಯಾಷನಲ್ ಕ್ರೆಡಿಟ್ ಕಾರ್ಡ್​ನ ವೆಚ್ಚವನ್ನು ಎಲ್​ಆರ್​ಎಸ್ ಸ್ಕೀಮ್ ಅಡಿಯಲ್ಲಿ ಸದ್ಯಕ್ಕೆ ತರದಿರಲು ನಿರ್ಧರಿಸಿದೆ. ಇದರೊಂದಿಗೆ ವಿದೇಶಗಳಲ್ಲಿ ಕ್ರೆಡಿಟ್ ಕಾರ್ಡ್ ಬಳಸಿ ಮಾಡುವ ವೆಚ್ಚಕ್ಕೆ ಟಿಸಿಎಸ್ ತೆರಿಗೆ ಅನ್ವಯ ಆಗುವುದಿಲ್ಲ.

ಇನ್ನು, ಎಲ್​ಆರ್​ಎಸ್ ಸ್ಕೀಮ್ ಅಡಿಯಲ್ಲಿ ವಿದೇಶಗಳಿಗೆ ನಾವು ಕಳುಹಿಸುವ ಹಣಕ್ಕೆ ಟಿಸಿಎಸ್ ಇದೆ. ಇದರ ದರ ಪರಿಷ್ಕರಣೆಯನ್ನು ಸರ್ಕಾರ ಮಾಡಿದೆ. ಇದು ಜುಲೈ 1ರಿಂದ ಜಾರಿಯಾಗಬೇಕಿತ್ತು. ಅದನ್ನು ಅಕ್ಟೋಬರ್ 1ಕ್ಕೆ ಮುಂದೂಡಲಾಗಿದೆ.

ಶಿಕ್ಷಣ ಮತ್ತು ವೈದ್ಯಕೀಯ ವೆಚ್ಚಗಳಿಗೆ ಈ ಹಿಂದೆ ಇದ್ದ ನಿಯಮಗಳೇ ಮುಂದುವರಿಯಲಿವೆ. ಬೇರೆ ಉದ್ದೇಶಗಳಿಗೆ ಎಲ್​ಆರ್​ಎಸ್ ಸ್ಕೀಮ್​ನಲ್ಲಿ ವರ್ಷಕ್ಕೆ 7 ಲಕ್ಷ ರೂಗಿಂತ ಹೆಚ್ಚು ವ್ಯಯವಾದಲ್ಲಿ ಶೇ. 20ರಷ್ಟು ಟಿಸಿಎಸ್ ಕಟ್ಟಬೇಕಾಗುತ್ತದೆ. ಇದು ಟೂರ್ ಪ್ಯಾಕೇಜ್​ಗೂ ಅನ್ವಯ ಆಗುತ್ತದೆ.

ಇದನ್ನೂ ಓದಿTCS: ವಿದೇಶಗಳಿಗೆ ಕಳುಹಿಸುವ ಹಣಕ್ಕೆ ತೆರಿಗೆ ಹೆಚ್ಚಳ; ಹೊಸ ದರ ಜುಲೈ 1 ಬದಲು ಅಕ್ಟೋಬರ್ 1ರಿಂದ ಅನ್ವಯ

ಪಿಎಂ ಕಿಸಾನ್ ಯೋಜನೆಯ 14ನೇ ಕಂತಿನ ಹಣ ಬಿಡುಗಡೆ

ಕೇಂದ್ರ ಸರ್ಕಾರದ ಪಿಎಂ ಕಿಸಾನ್ ಯೋಜನೆಯ 14ನೇ ಕಂತಿನ ಹಣ ಜುಲೈ ತಿಂಗಳಲ್ಲಿ ಬಿಡುಗಡೆ ಆಗಲಿದೆ. 13ನೇ ಕಂತಿನ ಹಣ ಮಾರ್ಚ್ 27ರಂದು ಬಿಡುಗಡೆ ಮಾಡಲಾಗಿತ್ತು. ಇದು ವರ್ಷಕ್ಕೆ 3 ಬಾರಿ, ಅಂದರೆ ನಾಲ್ಕು ತಿಂಗಳಿಗೊಮ್ಮೆ ಕಂತಿನ ಹಣ ಬಿಡುಗಡೆ ಆಗುತ್ತದೆ. ಅದರ ಪ್ರಕಾರ ಜುಲೈ ತಿಂಗಳಲ್ಲಿ ಈ ಹಣ ರಿಲೀಸ್ ಆಗುವ ಸಾಧ್ಯತೆ ದಟ್ಟವಾಗಿದೆ. ಕೇಂದ್ರ ಸರ್ಕಾರ ಈ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 10:43 am, Fri, 30 June 23

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್