AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತ ಮುಂದುವರಿದ ದೇಶವಾಗಬೇಕಾದರೆ ಎಷ್ಟು ವೇಗದಲ್ಲಿ ಬೆಳೆಯಬೇಕು ಗೊತ್ತಾ? ಇಲ್ಲಿದೆ ಸಂಶೋಧಾನಾ ವರದಿ

How India Can Become Developed Nation: ಅತಿದೊಡ್ಡ ಆರ್ಥಿಕತೆಯ ದೇಶಗಳಲ್ಲಿ ಒಂದಾದರೂ ಭಾರತ ಮುಂದುವರದಿದ ದೇಶವಾಗಬೇಕಾದರೆ ಅದರ ತಲಾದಾಯ ಸೇರಿದಂತೆ ಮಾನವ ಸಂಪನ್ಮೂಲ ಅಂಶಗಳು ಉಚ್ಚವಾಗಿರಬೇಕು. ಈ ಮಟ್ಟಕ್ಕೆ ಮುಂದುವರಿಯಲು ಭಾರತದ ಜಿಡಿಪಿ 25 ವರ್ಷದಲ್ಲಿ ಶೇ. 7.6ರ ದರದಲ್ಲಿ ಬೆಳೆಯಬೇಕಂತೆ...

ಭಾರತ ಮುಂದುವರಿದ ದೇಶವಾಗಬೇಕಾದರೆ ಎಷ್ಟು ವೇಗದಲ್ಲಿ ಬೆಳೆಯಬೇಕು ಗೊತ್ತಾ? ಇಲ್ಲಿದೆ ಸಂಶೋಧಾನಾ ವರದಿ
ಭಾರತ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 04, 2023 | 4:43 PM

ಭಾರತ ಸದ್ಯ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯುಳ್ಳ (Big Economy) ದೇಶವಾಗಿದೆ. ಆದರೂ ಕೂಡ ಭಾರತ ಇನ್ನೂ ಅಭಿವೃದ್ಧಿಶೀಲ ದೇಶವಾಗಿಯೇ (Developing nation) ಇದೆ. ಅಮೆರಿಕ, ಬ್ರಿಟನ್ ಇತ್ಯಾದಿಯಂತೆ ಮುಂದುವರಿದ ದೇಶವಾಗಬೇಕಾದರೆ ಬೇರೆ ಮಾನದಂಡಗಳಿವೆ. ದೇಶದ ಒಟ್ಟು ಸಂಪತ್ತು ಎಷ್ಟು ಎಂಬುದು ಮುಖ್ಯವಾದರೂ ಅದು ಮುಂದುವರಿದ ದೇಶವೆಂದು ಪರಿಗಣಿಸಬೇಕಾದರೆ ತಲಾದಾಯ (Per Capita Income) ಸೇರಿದಂತೆ ವಿವಿಧ ಮಾನವ ಅಭಿವೃದ್ಧಿ ಸೂಚಿಗಳು ಉಚ್ಚತಮವಾಗಿರಬೇಕು. ವಿಶ್ವ ಬ್ಯಾಂಕ್ ನಿಗದಿಪಡಿಸಿರುವ ಮಾನದಂಡದ ಪ್ರಕಾರ ದೇಶದ ವಾರ್ಷಿಕ ತಲಾದಾಯ 21,664 ಡಾಲರ್ (18 ಲಕ್ಷ ರೂ) ಇರಬೇಕು. ಭಾರತಕ್ಕೆ ಈ ಮಟ್ಟದ ತಲಾದಾಯ ಮಟ್ಟ ಮುಟ್ಟಲು ಸಾಧ್ಯವಾ?

ಭಾರತ ಮುಂದುವರಿದ ದೇಶವಾಗಲು ಎಷ್ಟು ವೇಗದಲ್ಲಿ ಅಭಿವೃದ್ಧಿಯಾಗಬೇಕು?

ಭಾರತದ ಈಗಿನ ಸರಾಸರಿ ವಾರ್ಷಿಕ ತಲಾದಾಯ 2,500 ಡಾಲರ್ (2.07 ಲಕ್ಷ ರೂ) ಇದೆ. ಮುಂದುವರಿದ ದೇಶವಾಗಲು 21,664 ಡಾಲರ್ ಮಟ್ಟಕ್ಕೆ ಅದು ಹೋಗಬೇಕು. ಅಂದರೆ, ತಲಾದಾಯ 10 ಪಟ್ಟು ಹೆಚ್ಚಾಗಬೇಕು. 2047ಕ್ಕೆ, ಅಂದರೆ ಇನ್ನು 25 ವರ್ಷಕ್ಕೆ ಭಾರತದ ಜಿಡಿಪಿ ವಿಶ್ವದ 3ನೇ ಸ್ಥಾನಕ್ಕೆ ಹೋಗುವ ನಿರೀಕ್ಷೆಯನ್ನು ಹಲವು ಆರ್ಥಿಕ ತಜ್ಞರು ವ್ಯಕ್ತಪಡಿಸಿದ್ದಾರೆ. ಈ 25 ವರ್ಷದಲ್ಲಿ ಭಾರತ ಮುಂದುವರಿದ ದೇಶವಾಗಲು ಸಾಧ್ಯವಾ ಎಂಬ ಪ್ರಶ್ನೆಗೆ ಇತ್ತೀಚೆಗೆ ಬಿಡುಗಡೆ ಆದ ಆರ್​ಬಿಐನ ಸಂಶೋಧನಾ ವರದಿ ಉತ್ತರ ನೀಡಿದೆ.

ಇದನ್ನೂ ಓದಿ: Stock Trading: ನೀವು ಇನ್ವೆಸ್ಟ್ ಮಾಡುತ್ತಿದ್ದಂತೆಯೇ ಷೇರುಬೆಲೆ ಕುಸಿದುಬಿಟ್ಟಿತಾ? ನಿಮ್ಮೊಬ್ಬರಿಗಲ್ಲ ಈ ಅನುಭವ; ಹೀಗಾಗಲು ಏನು ಕಾರಣ?

2047ಕ್ಕೆ ಭಾರತದ ತಲಾದಾಯ ವಿಶ್ವ ಬ್ಯಾಂಕ್ ನಿಗದಿ ಮಾಡಿದ ಪ್ರಮಾಣವನ್ನು ತಲುಪಲು ಸಾಧ್ಯ. ಆದರೆ, ಆದು ಸಾಧ್ಯವಾಗಬೇಕಾದರೆ ಭಾರತದ ಆರ್ಥಿಕತೆ ಪ್ರತೀ ವರ್ಷ ಸರಾಸರಿಯಾಗಿ 7.8ರಷ್ಟು ಬೆಳೆಯಬೇಕು. ಭಾರತದ ರಿಯಲ್ ಜಿಡಿಪಿಯ ಸಿಎಜಿಆರ್ ಶೇ 7.6 ಇರಬೇಕು ಎಂದು ಆರ್​ಬಿಐನ ಎಕನಾಮಿಕ್ ರಿಸರ್ಚ್ ಡಿಪಾರ್ಟ್ಮೆಂಟ್​ನ ಅಧ್ಯಯನ ವರದಿಯೊಂದು ಹೇಳಿದೆ.

ಈ ಮಟ್ಟಕ್ಕೆ ಸ್ಥಿರ ಬೆಳವಣಿಗೆಯನ್ನು ಭಾರತ ಸಾಧಿಸಲು ಸಾಧ್ಯವಾ ಎಂಬುದು ಪ್ರಶ್ನೆ. ಭಾರತ ಈ ಹಿಂದೆ ಇಂಥದ್ದೊಂದು ಅಮೋಘ ಬೆಳವಣಿಗೆಯ ಹಂತವನ್ನು ಕಂಡಿದೆ ಎನ್ನುವುದು ಸಕಾರಾತ್ಮಕವಾದ ಸಂಗತಿ. 1993-94ರಿಂದ 2017-18ರವರೆಗಿನ 25 ವರ್ಷದಲ್ಲಿ ಭಾರತದ ಆರ್ಥಿಕತೆಯು ಶೇ. 8.1ರ ಸಿಎಜಿಆರ್ ದರದಲ್ಲಿ ಬೆಳೆದಿದ್ದಿದೆ.

ಇದನ್ನೂ ಓದಿ: England: ಇಂಗ್ಲೆಂಡ್​ನಲ್ಲಿ ಬಡ್ಡಿದರ 25 ಬೇಸಿಸ್ ಅಂಕಗಳಷ್ಟು ಹೆಚ್ಚು; ಕಳೆದ 15 ವರ್ಷದಲ್ಲೇ ಗರಿಷ್ಠ ಮಟ್ಟ

ಆ ಮಟ್ಟದ ಬೆಳವಣಿಗೆಯನ್ನು ಭಾರತ ಈಗ ಸತತವಾಗಿ ಕಾಣಬೇಕಾದರೆ ವಿವಿಧ ಕ್ಷೇತ್ರಗಳಲ್ಲಿ ಸುಧಾರಣೆಗಳಾಗಬೇಕು. ಅದರಲ್ಲೂ ಮುಖ್ಯವಾಗಿ ಶಿಕ್ಷಣ, ಇನ್​ಫ್ರಾಸ್ಟ್ರಕ್ಚರ್, ಆರೋಗ್ಯ ಮತ್ತು ತಂತ್ರಜ್ಞಾನ ವಲಯಗಳಲ್ಲಿ ಸುಧಾರಣಾ ಕ್ರಮಗಳಾಗಬೇಕು. ಅಗಣಿತವಾದ ಬಂಡವಾಳ ಹೂಡಿಕೆಯಾಗಬೇಕು ಎಂದು ಆರ್​ಬಿಐನ ಅಧ್ಯಯನಾ ವರದಿ ಅಭಿಪ್ರಾಯಪಟ್ಟಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು
ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು
‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ
‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ