Explained: ಇಸ್ರೇಲ್ ಯುದ್ಧದ ಮಧ್ಯೆಯೂ ಕಚ್ಛಾ ತೈಲ ಬೆಲೆ ಇಳಿದಿರುವುದು ಯಾಕೆ? ಇಲ್ಲಿವೆ ಕಾರಣಗಳು

|

Updated on: Nov 17, 2023 | 4:46 PM

Crude Oil Prices: ಕಳೆದ ಒಂದು ತಿಂಗಳ ಅವಧಿಯಲ್ಲಿ ಒಂದು ಬ್ಯಾರಲ್​ಗೆ 15 ಡಾಲರ್​ನಷ್ಟು ಬೆಲೆ ಇಳಿಕೆ ಆಗಿದೆ. ಅಕ್ಟೋಬರ್ 17ರಂದು ಬ್ರೆಂಟ್ ಕ್ರೂಡ್ ಫ್ಯೂಚರ್ಸ್​ನಲ್ಲಿ ಒಂದು ಬ್ಯಾರಲ್​ಗೆ 92.30 ಡಾಲರ್ ಬೆಲೆ ಇತ್ತು. ಆದರೆ, ಒಂದು ತಿಂಗಳ ಬಳಿಕ (ನವೆಂಬರ್ 17) ಬೆಲೆ ಇದೀಗ ಅದರ ಬೆಲೆ 77.50 ಡಾಲರ್​ಗೆ ಬಂದಿದೆ.

Explained: ಇಸ್ರೇಲ್ ಯುದ್ಧದ ಮಧ್ಯೆಯೂ ಕಚ್ಛಾ ತೈಲ ಬೆಲೆ ಇಳಿದಿರುವುದು ಯಾಕೆ? ಇಲ್ಲಿವೆ ಕಾರಣಗಳು
ಕಚ್ಛಾ ತೈಲ
Follow us on

ನವದೆಹಲಿ, ನವೆಂಬರ್ 17: ತೈಲ ಉತ್ಪಾದನೆ ಹೆಚ್ಚು ಇರುವ ಪಶ್ಚಿಮ ಏಷ್ಯಾ ಭಾಗದಲ್ಲಿ ಇಸ್ರೇಲ್ ಯುದ್ಧ ದೆಸೆಯಿಂದ ಸೂಕ್ಷ್ಮ ಪರಿಸ್ಥಿತಿ ಇದೆ. ಎಲ್ಲರೂ ಕೂಡ ತೈಲ ಸರಬರಾಜು ಕಡಿಮೆ ಆಗಿ ಪೆಟ್ರೋಲಿಯಂ ಬೆಲೆ ಹೆಚ್ಚಾಗಬಹುದು ಎಂದು ನಿರೀಕ್ಷಿಸಿದ್ದರು. ಆದರೆ ವಾಸ್ತವವಾಗಿ ಕಚ್ಛಾ ತೈಲ ಬೆಲೆ (Crude Oil Prices) ಇಳಿಮುಖವಾಗಿದೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ಒಂದು ಬ್ಯಾರಲ್​ಗೆ 15 ಡಾಲರ್​ನಷ್ಟು ಬೆಲೆ ಇಳಿಕೆ ಆಗಿದೆ. ಅಕ್ಟೋಬರ್ 17ರಂದು ಬ್ರೆಂಟ್ ಕ್ರೂಡ್ ಫ್ಯೂಚರ್ಸ್​ನಲ್ಲಿ (brent crude futures) ಒಂದು ಬ್ಯಾರಲ್​ಗೆ 92.30 ಡಾಲರ್ ಬೆಲೆ ಇತ್ತು. ಆದರೆ, ಒಂದು ತಿಂಗಳ ಬಳಿಕ (ನವೆಂಬರ್ 17) ಬೆಲೆ ಇದೀಗ ಅದರ ಬೆಲೆ 77.50 ಡಾಲರ್​ಗೆ ಬಂದಿದೆ.

ಗಾಜಾದಲ್ಲಿ ಇಸ್ರೇಲ್ ಮತ್ತು ಹಮಾಸ್ ಮಧ್ಯೆ ಯುದ್ಧವಾಗುತ್ತಿದೆ. ಇಸ್ರೇಲ್ ಆಗಲೀ, ಗಾಜಾ ಆಗಲೀ ತೈಲ ಉತ್ಪಾದಕ ರಾಷ್ಟ್ರಗಳಲ್ಲ. ಆದರೆ, ಈ ಯುದ್ಧದ ಬಿಸಿ ಸುತ್ತಲಿನ ಅರಬ್ ದೇಶಗಳನ್ನು ಆವರಿಸಿರುವುದು ಹೌದು. ಇರಾನ್, ಇರಾಕ್, ಕತಾರ್, ಸೌದಿ ಅರೇಬಿಯಾ ಮೊದಲಾದ ದೇಶಗಳು ಈ ಯುದ್ಧದ ಜೊತೆ ಭಾವನಾತ್ಮಕವಾಗಿ ಬೆಳೆದುಕೊಂಡಿವೆ. ಪಶ್ಚಿಮ ಏಷ್ಯಾ ಭಾಗದಲ್ಲಿ ಉತ್ಪಾದನೆಯಾಗುವ ಕಚ್ಛಾ ತೈಲವು ವಿಶ್ವದ ಒಟ್ಟು ಉತ್ಪಾದನೆಯ ಮೂರನೇ ಒಂದು ಭಾಗದಷ್ಟಿದೆ. ಹೀಗಾಗಿ, ಈ ಭಾಗದಲ್ಲಿ ತೈಲ ಉತ್ಪಾದನೆ ಕುಂಠಿತಗೊಂಡು ಜಾಗತಿಕ ಕಚ್ಛಾ ತೈಲ ಬೆಲೆ ಏರಿಕೆ ಆಗಬಹುದು ಎಂಬ ಭೀತಿ ಇತ್ತು. ಅಕ್ಟೋಬರ್ 7ರಂದು ಹಮಾಸ್ ದಾಳಿ ಬಳಿಕ ಕೆಲ ದಿನಗಳ ಕಾಲ ತೈಲ ಬೆಲೆ ಹೆಚ್ಚಳವಾಗಿದ್ದು ಹೌದು. ಸೌದಿ ಮತ್ತು ರಷ್ಯಾ ದೇಶಗಳು ತೈಲ ಸರಬರಾಜನ್ನು ಕಡಿಮೆ ಮಾಡಿದ್ದವು. ಆದರೆ, ನಂತರದ ದಿನಗಳಲ್ಲಿ ಕ್ರ್ಯೂಡ್ ಆಯಿಲ್ ದರ ಹೆಚ್ಚಳ ಆಗುವುದು ನಿಂತಿತು. ಮಾತ್ರವಲ್ಲ, ಬೆಲೆ ಕಡಿಮೆ ಕೂಡ ಆಗತೊಡಗಿತು.

ಇದನ್ನೂ ಓದಿ: ಮಿಂಚುತ್ತಿದೆ ‘ಬ್ರ್ಯಾಂಡ್’ ಶಮಿ; ಜಾಹೀರಾತಿಗಾಗಿ ಎಡೆತಾಕುತ್ತಿರುವ ಕಂಪನಿಗಳು; ಮೊಹಮ್ಮದ್ ಶಮಿಗೆ ಹರಿದುಬರುತ್ತಿದೆ ಹಣದ ಹೊಳೆ

ಕಚ್ಛಾ ತೈಲ ಬೆಲೆ ಯಾಕೆ ಇಳಿದಿದೆ?

ವಿಶ್ವದ ಪ್ರಮುಖ ಆರ್ಥಿಕತೆಗಳು ಹಿನ್ನಡೆ ಅನುಭವಿಸಿರುವುದರಿಂದ ಪೆಟ್ರೋಲ್ ಬೇಡಿಕೆ ಕಡಿಮೆ ಆಗಿರಬಹುದು. ಅದರಲ್ಲೂ ಅತಿಹೆಚ್ಚು ಪೆಟ್ರೋಲಿಯಂ ಆಮದುದೇಶ ಚೀನಾದಲ್ಲಿ ಆರ್ಥಿಕತೆ ತುಸು ಕಷ್ಟಕ್ಕೆ ಸಿಲುಕಿರುವುದರಿಂದ ಪೆಟ್ರೋಲ್ ಆಮದು ಕಡಿಮೆ ಆಗಿದೆ.

ಪೆಟ್ರೋಲ್ ರಫ್ತು ದೇಶಗಳ ಸಂಘಟನೆಯಾದ ಒಪೆಕ್​ನ ಸದಸ್ಯದೇಶ ವೆನಿಜುವೆಲಾ ಮೇಲೆ ಅಮೆರಿಕ ವಿಧಿಸಿದ್ದ ನಿರ್ಬಂಧವನ್ನು ತೆರವುಗೊಳಿಸಲಾಗಿರುವುದು.

ಇದನ್ನೂ ಓದಿ: ಕಾರವಾರ ಕೇಣಿ ಬೇಲೆಕೇರಿ ಬಂದರು; ಅದಾನಿ ಕಂಪನಿ ಹಿಂದಿಕ್ಕಿದ ಜೆಎಸ್​ಡಬ್ಲ್ಯುಗೆ ಪೋರ್ಟ್ ಪ್ರಾಜೆಕ್ಟ್

ಭಾರತಕ್ಕೇನು ಪರಿಣಾಮ?

ಹೆಚ್ಚಿನ ಅಂತಾರಾಷ್ಟ್ರೀಯ ತೈಲ ಬೆಲೆಗಳಿಂದಾಗಿ 2022-23ರ ಹಣಕಾಸು ವರ್ಷದಲ್ಲಿ ಭಾರತದ ತೈಲ ಸಂಸ್ಕರಣೆ ಕಂಪನಿಗಳು ಭಾರೀ ನಷ್ಟ ಅನುಭವಿಸಿದ್ದವು. ರಷ್ಯಾದಿಂದ ಕಡಿಮೆ ಬೆಲೆ ತೈಲ ಸಿಗತೊಡಗಿದ ಬಳಿಕ ಅವುಗಳು ನಿರಾಳಗೊಂಡಿವೆ. ಕಳೆದ ಕೆಲ ಕ್ವಾರ್ಟರ್​ಗಳಿಂದ ನಷ್ಟದ ಬದಲು ಲಾಭ ಬರತೊಡಗಿದೆ. ಜುಲೈನಿಂದ ಸೆಪ್ಟೆಂಬರ್​ವರೆಗಿನ ಕ್ವಾರ್ಟರ್​ನಲ್ಲಿ ಈ ಪೆಟ್ರೋಲಿಯಂ ಕಂಪನಿಗಳ ಒಟ್ಟಾರೆ ನಿವ್ವಳ ಲಾಭ 27,295 ಕೋಟಿ ರೂ ಆಗಿದೆ. ಅಂತಾರಾಷ್ಟ್ರೀಯ ತೈಲ ಬೆಲೆ ಇಳಿಕೆಯಾದರೂ ಭಾರತದಲ್ಲಿ 2022ರ ಏಪ್ರಿಲ್ ತಿಂಗಳಿಂದಲೂ ಪೆಟ್ರೋಲ್ ಬೆಲೆ ಇಳಿಸಿಲ್ಲ. ಹೀಗಾಗಿ, ಐಒಸಿಎಲ್, ಬಿಪಿಸಿಎಲ್, ಎಚ್​ಪಿಸಿಎಲ್ ಕಂಪನಿಗಳು ಲಾಭ ಮಾಡಲು ಸಾಧ್ಯವಾಗುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ