AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ತಿಂಗಳು 9,800 ಕೋಟಿ ರೂ ಮೊತ್ತದ ವಿದೇಶೀ ಹೂಡಿಕೆಗಳು ಭಾರತದಿಂದ ಹೊರಕ್ಕೆ; ಏನು ಕಾರಣ?

Reasons Why FPIs Exiting From 6 Weeks: ಸೆಪ್ಟೆಂಬರ್​ನಿಂದ ಒಂದೂವರೆ ತಿಂಗಳಲ್ಲಿ ಸುಮಾರು 25 ಸಾವಿರ ಕೋಟಿ ರೂ ಮೊತ್ತದ ಎಫ್​ಪಿಐಗಳು ಭಾರತದಿಂದ ಕಾಲ್ತೆಗೆದಿವೆಯಂತೆ. ಅದಕ್ಕೂ ಮುನ್ನ ಆರು ತಿಂಗಳಲ್ಲಿ ಭಾರತಕ್ಕೆ ಒಂದೂವರೆ ಲಕ್ಷ ಕೋಟಿ ರೂಗೂ ಹೆಚ್ಚು ಮೊತ್ತದ ಎಫ್​ಪಿಐಗಳು ಹರಿದುಬಂದಿದ್ದವು. ಈಗ ಹೂಡಿಕೆಗಳು ದಿಢೀರ್ ಹೊರಗೆ ಹೋಗಲು ಏನು ಕಾರಣ? ಇಲ್ಲಿದೆ ಡೀಟೇಲ್ಸ್.

ಈ ತಿಂಗಳು 9,800 ಕೋಟಿ ರೂ ಮೊತ್ತದ ವಿದೇಶೀ ಹೂಡಿಕೆಗಳು ಭಾರತದಿಂದ ಹೊರಕ್ಕೆ; ಏನು ಕಾರಣ?
ಎಫ್​ಪಿಐ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 15, 2023 | 4:36 PM

Share

ನವದೆಹಲಿ, ಅಕ್ಟೋಬರ್ 15: ವಿದೇಶೀ ಪೋರ್ಟ್​ಫೋಲಿಯೋ ಇನ್ವೆಸ್ಟರ್​ಗಳು (FPI- foreign portfolio investors) ಭಾರತದಲ್ಲಿ ಮಾಡಿದ್ದ ಹೂಡಿಕೆ ಪೈಕಿ 9,800 ರೂ ಮೊತ್ತದ ಹೂಡಿಕೆಗಳು ಹೊರಹೋಗಿವೆ. ಕಳೆದ ಕೆಲ ತಿಂಗಳಿಂದ ಭಾರತದಲ್ಲಿ ಸತತವಾಗಿ ಎಫ್​ಪಿಐಗಳು ಹೂಡಿಕೆ ಆಗುತ್ತಿದ್ದವು. ಮಾರ್ಚ್​ನಿಂದ ಆಗ್ಟ್​ವರೆಗಿನ ಆರು ತಿಂಗಳಲ್ಲಿ 1.7 ಲಕ್ಷ ಕೋಟಿ ರೂ ಹೂಡಿಕೆ ಆಗಿದ್ದವು. ಆ ಬಳಿಕ ಆ ಟ್ರೆಂಡ್ ನಿಂತಿತು. ಸೆಪ್ಟೆಂಬರ್ ತಿಂಗಳಲ್ಲಿ ವಿದೇಶೀ ಪೋರ್ಟ್​ಫೋಲಿಯೋ ಹೂಡಿಕೆದಾರರು 14,757 ಕೋಟಿ ರೂ ಹಣವನ್ನು ಭಾರತದಿಂದ ಹಿಂತೆಗೆದುಕೊಂಡಿದ್ದರು. ಅದೇ ಟ್ರೆಂಡ್ ಈಗ ಅಕ್ಟೋಬರ್ ತಿಂಗಳಲ್ಲೂ ಮುಂದುವರಿದಿದೆ. ಅಕ್ಟೋಬರ್ ತಿಂಗಳ ಎರಡು ವಾರದಲ್ಲೇ (ಅ. 13ರವರೆಗೂ) 9,800 ಕೋಟಿ ರೂ ಎಫ್​ಪಿಐ ಹೂಡಿಕೆ ಹೊರಹೋಗಿದೆ. ಈ ಕಾರಣಕ್ಕೆ ಭಾರತದ ಷೇರುಪೇಟೆ ಇಳಿಕೆ ಅನುಭವಿಸುತ್ತಿರುವುದು.

ಭಾರತದಿಂದ ಎಫ್​ಪಿಐಗಳು ಹೊರಹೋಗಲು ಏನು ಕಾರಣ?

ಭಾರತದ ಈಕ್ವಿಟಿ ಮಾರುಕಟ್ಟೆಯಲ್ಲಿ ವಿದೇಶೀ ಹೂಡಿಕೆಗಳ ಇರುವಿಕೆಯ ಮೇಲೆ ಪ್ರಭಾವ ಬೀರಲು ಕೆಲವಾರು ಅಂಶಗಳಿವೆ. ಕಳೆದ ಒಂದು ತಿಂಗಳ ವಿದ್ಯಮಾನ ಪರಿಗಣಿಸಿದರೆ ಭಾರತದಲ್ಲಿ ಎಫ್​ಪಿಐಗಳ ಮೇಲೆ ಪ್ರಭಾವ ಬೀರುವ ಕೆಲ ಅಂಶಗಳು ಈ ಕೆಳಕಂಡಂತಿವೆ:

ಇದನ್ನೂ ಓದಿ: ವಸತಿ ಬೆಲೆ ಏರಿಕೆ; ವಿಶ್ವದ ಟಾಪ್ 25 ನಗರಗಳಲ್ಲಿ ಮುಂಬೈ ಮತ್ತು ಬೆಂಗಳೂರು; ಮುಂಬೈ ಒಮ್ಮೆಗೇ 76 ಸ್ಥಾನ ಹೈಜಂಪ್

  1. ಅಮೆರಿಕದ ಆರ್ಥಿಕ ಮತ್ತು ಹಣಕಾಸು ಪರಿಸ್ಥಿತಿ ಮತ್ತು ಅಲ್ಲಿ ಸರ್ಕಾರ ನೀತಿ
  2. ಭೌಗೋಳಿಕ ರಾಜಕೀಯ ಬಿಕ್ಕಟ್ಟು (geo political crisis)
  3. ಭಾರತದ ಆರ್ಥಿಕ ಪರಿಸ್ಥಿತಿ

ಆಗಸ್ಟ್ ನಂತರ ಭಾರತದ ಎಫ್​ಪಿಐಗಳು ಬಂಡವಾಳ ಹಿಂತೆಗೆಯಲು ಕಾರಣವಾಗುವಂತಹ ವಿದ್ಯಮಾನಗಳನ್ನು ನೋಡುವುದಾದರೆ ಒಂದು ಅಮೆರಿಕದ ಬಡ್ಡಿದರಗಳು ಹೆಚ್ಚಿರುವುದು. ಇನ್ನೊಂದು, ಇಸ್ರೇಲ್ ಹಮಾಸ್ ಸಂಘರ್ಷ ಕಣ್ಣಿಗೆ ಕಾಣುತ್ತದೆ.

ಇದನ್ನೂ ಓದಿ: ಒಂದೇ ಸಣ್ಣ ತಂತ್ರ; 1 ಕೋಟಿ ಬದಲು 11 ಕೋಟಿ ರೂ ರಿಟರ್ನ್; ಇದು ಸ್ಟೆಪ್ ಅಪ್ ಹೂಡಿಕೆ ಸೂತ್ರ

ಅಮೆರಿಕದಲ್ಲಿ ಬಡ್ಡಿದರ ಹೆಚ್ಚಿದ್ದರಿಂದ ಭಾರತದ ಈಕ್ವಿಟಿ ಮಾರುಕಟ್ಟೆಗಿಂತ ಅಮೆರಿಕದ ಮಾರುಕಟ್ಟೆ ಹೆಚ್ಚು ಆಕರ್ಷಕ ಎನಿಸಿರಬಹುದು. ಹಾಗೆಯೇ, ಇಸ್ರೇಲ್ ಹಮಾಸ್ ಸಂಘರ್ಷದಂತಹ ಭೌಗೋಳಿಕ ರಾಜಕೀಯ ಬಿಕ್ಕಟ್ಟು ಭಾರತದಂತಹ ಉದಯೋನ್ಮುಖ ಆರ್ಥಿಕತೆಯ ದೇಶಗಳಲ್ಲಿನ ಹೂಡಿಕೆ ಅಸುರಕ್ಷಿತ ಎನಿಸಬಹುದು.

ಎಫ್​ಪಿಐಗಳೆಂದರೆ ಏನು? ಇನ್ಸ್​ಟಿಟ್ಯೂಷನಲ್ ಇನ್ವೆಸ್ಟರ್​ಗಳಿಗೆ ಎಫ್​ಐಐಗಳಿಗೂ ಏನು ವ್ಯತ್ಯಾಸ?

ವಿದೇಶೀ ವ್ಯಕ್ತಿಗಳಾಗಲೀ, ಸಂಸ್ಥೆಗಳಾಗಲೀ, ಸರ್ಕಾರವಾಗಲೀ ಮಾಡುವ ಹೂಡಿಕೆಗಳು ಎಫ್​ಪಿಐಗಳೆನಿಸುತ್ತವೆ. ಎಫ್​ಐಐ ಎಂಬುದು ಸಾಂಸ್ಥಿಕ ಸಂಸ್ಥೆಗಳಿಂದ ಆಗುವ ಮೂಡಿಕೆ. ಎಫ್​ಪಿಐಗಳು ತಾವು ಹೂಡಿಕೆ ಮಾಡುವ ಸಂಸ್ಥೆಯ ಆಡಳಿತದ ಮೇಲೆ ಯಾವ ಪರಿಣಾಮ ಬೀರುವುದಿಲ್ಲ. ಎಫ್​ಐಐಗಳು ಹೆಚ್ಚು ಸಕ್ರಿಯ ಪಾತ್ರ ವಹಿಸುತ್ತವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ