AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

LIC Policy: ಲ್ಯಾಪ್ಸ್ ಆದ ಪಾಲಿಸಿಗಳಿಗೆ ಮರುಜೀವ ನೀಡುವುದಕ್ಕೆ ಎಲ್​ಐಸಿಯಿಂದ ಮತ್ತೊಂದು ಅವಕಾಶ

ಲ್ಯಾಪ್ಸ್ ಆದ ಪಾಲಿಸಿಗಳಿಗೆ ಮರುಜೀವ ನೀಡುವುದಕ್ಕೆ ಪಾಲಿಸಿದಾರರಿಗೆ ಎಲ್​ಐಸಿಯಿಂದ ಮತ್ತೊಂದು ಅವಕಾಶ ದೊರೆಯುತ್ತಿದೆ. ಆದರೆ ಕೆಲವು ಅರ್ಹತಾ ಷರತ್ತುಗಳು ಅನ್ವಯಿಸುತ್ತವೆ. ಆ ಬಗ್ಗೆ ಮಾಹಿತಿ ಇಲ್ಲಿದೆ.

LIC Policy: ಲ್ಯಾಪ್ಸ್ ಆದ ಪಾಲಿಸಿಗಳಿಗೆ ಮರುಜೀವ ನೀಡುವುದಕ್ಕೆ ಎಲ್​ಐಸಿಯಿಂದ ಮತ್ತೊಂದು ಅವಕಾಶ
ಸಾಂದರ್ಭಿಕ ಚಿತ್ರ
TV9 Web
| Updated By: Srinivas Mata|

Updated on: Feb 08, 2022 | 12:42 PM

Share

ಸರ್ಕಾರಿ ಸ್ವಾಮ್ಯದ ಲೈಫ್ ಇನ್ಷೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (Life Insurance Corporation Of India) ಅಥವಾ ಎಲ್​ಐಸಿಯಿಂದ ಎರಡನೇ ಬಾರಿಗೆ ಪಾಲಿಸಿದಾರರಿಗೆ ಅತ್ಯುತ್ತಮ ಅವಕಾಶವೊಂದು ಮಾಡಿಕೊಡಲಾಗುತ್ತಿದೆ. ಕೊರೊನಾ ಬಿಕ್ಕಟ್ಟಿನೊಂದಿಗೆ ಹೋರಾಡುತ್ತಿರುವ ಜತೆಗೆ ಹಣಕಾಸು ಮತ್ತು ಆರೋಗ್ಯಕ್ಕೆ ಸಂಬಂಧಿಸಿ ಸವಾಲುಗಳೊಂದಿಗೆ ಸೆಣೆಸುತ್ತಿರುವ ಸಂದರ್ಭದಲ್ಲಿ ಇದರಿಂದ ಅನುಕೂಲ ಆಗಲಿದೆ. ಈಗಾಗಲೇ ಲ್ಯಾಪ್ಸ್ ಆದ ಪಾಲಿಸಿಗಳಿಗೆ ಮರುಜೀವ ನೀಡುವುದಕ್ಕೆ ಎಲ್​ಐಸಿಯು ಪ್ರಸಕ್ತ ಹಣಕಾಸು ವರ್ಷದಲ್ಲಿ ಪಾಲಿಸಿದಾರರಿಗೆ ಅವಕಾಶ ಮಾಡಿಕೊಟ್ಟಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ವೈಯಕ್ತಿಕವಾಗಿ ಲ್ಯಾಪ್ಸ್ ಆದ ಪಾಲಿಸಿಗಳಿಗೆ ಫೆಬ್ರವರಿ 7ನೇ ತಾರೀಕಿನಿಂದ ಮಾರ್ಚ್ 25ರ ಮಧ್ಯೆ ವಿಶೇಷ ಪಾಲಿಸಿ ಮರು ಜೀವ ಅಭಿಯಾನ ನಡೆಸುವುದಾಗಿ ಎಲ್​ಐಸಿ ತಿಳಿಸಿದೆ. ಪ್ರೀಮಿಯಂ ಪಾವತಿ ವಿಚಾರವಾಗಿ ಹಾಗೂ ಪಾಲಿಸಿ ಅವಧಿ ಮುಕ್ತಾಯ ಆಗದೆ ಇರುವಂಥದ್ದು ಲ್ಯಾಪ್ಸ್ ಆದ ಸ್ಥಿತಿಯಲ್ಲಿ ಇದ್ದಲ್ಲಿ ಅಂಥವಕ್ಕೆ ಈ ಅಭಿಯಾನದ ಅಡಿಯಲ್ಲಿ ಮರು ಜೀವ ನೀಡಬಹುದು.

“ಈಗಿನ ಸನ್ನಿವೇಶವನ್ನು ಗಮನದಲ್ಲಿ ಇಟ್ಟುಕೊಂಡು, ಟರ್ಮ್​ ಇನ್ಷೂರೆನ್ಸ್ ಹಾಗೂ ಹೈ ರಿಸ್ಕ್​ ಪ್ಲಾನ್​ಗಳನ್ನು ಹೊರತುಪಡಿಸಿ ಉಳಿದವಕ್ಕೆ ವಿಳಂಬ ಶುಲ್ಕದಲ್ಲಿ ವಿನಾಯಿತಿ ನೀಡಲಾಗಿದೆ. ಅದು ಕೂಡ ಒಟ್ಟಾರೆ ಪ್ರೀಮಿಯಂ ಪಾವತಿಸುವ ಮೊತ್ತದ ಮೇಲೆ ಅನ್ವಯ ಆಗುತ್ತದೆ. ವೈದ್ಯಕೀಯ ಅಗತ್ಯದ ಮೇಲೆ ಯಾವುದೇ ವಿನಾಯಿತಿ ಇಲ್ಲ. ಅರ್ಹ ಆರೋಗ್ಯ ಮತ್ತು ಮೈಕ್ರೋ ಇನ್ಷೂರೆನ್ಸ್ ಪ್ಲಾನ್​ಗಳು ಸಹ ವಿಳಂಬ ಶುಲ್ಕದಿಂದ ವಿನಾಯಿತಿಗೆ ಅರ್ಹವಾಗಿರುತ್ತವೆ,” ಎಂದು ಎಲ್​ಐಸಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

“ವಿಶೇಷ “ಮರುಜೀವ ಅಭಿಯಾನ” ಅಡಿಯಲ್ಲಿ ನಿರ್ದಿಷ್ಟವಾಗಿ ಅರ್ಹತೆ ಪಡೆದ ಯೋಜನೆಗಳು ಪ್ರೀಮಿಯಂ ಪಾವತಿ ಆಗದ ಮೊದಲ ಕಂತಿನಿಂದ ಐದು ವರ್ಷದೊಳಗಾಗಿ ಮರುಜೀವ ಪಡೆಯಬಹುದು. ಆದರೆ ಕೆಲವು ನಿಯಮ, ನಿಬಂಧನೆಗಳು ಒಳಗೊಂಡಿರುತ್ತದೆ,” ಎಂದು ಎಲ್​ಐಸಿ ತಿಳಿಸಿದೆ. “ಪಾಲಿಸಿಗಳು ಲ್ಯಾಪ್ಸ್ ಆಗಿರುವ ಸ್ಥಿತಿಯಲ್ಲಿ ಇದ್ದು, ಪ್ರೀಮಿಯಂ ಪಾವತಿ ಅವಧಿ ಪೂರ್ಣಗೊಂಡಿಲ್ಲ ಅಂತಾದರೆ ಅಂಥ ಪಾಲಿಸಿಗಳು ಈ ಅಭಿಯಾನದ ಅಡಿಯಲ್ಲಿ ಮರುಜೀವಕ್ಕೆ ಅರ್ಹವಾಗಿವೆ,” ಎಂದು ಮಾಹಿತಿ ನೀಡಲಾಗಿದೆ.

ವೈದ್ಯಕೀಯ ಅಗತ್ಯಗಳಿಗೆ ಸಂಬಂಧಿಸಿದಂತೆ ಯಾವ ವಿನಾಯಿತಿಯೂ ಇರುವುದಿಲ್ಲ. ಅರ್ಹ ಆರೋಗ್ಯ ಮತ್ತು ಮೈಕ್ರೋ ಇನ್ಷೂರೆನ್ಸ್ ಪ್ಲಾನ್​ಗಳು ವಿಳಂಬ ಶುಲ್ಕದಲ್ಲಿ ವಿನಾಯಿತಿ ಪಡೆಯುವುದಕ್ಕೆ ಅರ್ಹತೆ ಪಡೆದಿವೆ. ಸಾಂಪ್ರದಾಯಿಕ ಹಾಗೂ ಆರೋಗ್ಯ ಪಾಲಿಸಿಗಳ ಒಟ್ಟು ಬರಬೇಕಾದ ಪ್ರೀಮಿಯಂ ರೂ. 1 ಲಕ್ಷದ ತನಕ ಮೊತ್ತಕ್ಕೆ ಎಲ್​ಐಸಿಯು ವಿಳಂಬ ಶುಲ್ಕದಲ್ಲಿ ಶೇ 20ರ ವಿನಾಯಿತಿ ನೀಡುತ್ತಿದೆ. ಅದು ಗರಿಷ್ಠ ಮೊತ್ತ 2000 ರೂಪಾಯಿ ಆಗಿರುತ್ತದೆ. ಅದೇ ರೀತಿ ಮೂರು ಲಕ್ಷ ರೂಪಾಯಿ ಮೇಲಿನ ಮೊತ್ತಕ್ಕೆ ಶೇ 30 ವಿನಾಯಿತಿ ಅಥವಾ ಗರಿಷ್ಠ 3000 ರೂಪಾಯಿ ಇದೆ. ಈ ಬಗ್ಗೆ ಟ್ವಿಟರ್ ಹೇಳಿಕೆ ಸಹ ನೀಡಲಾಗಿದೆ.

ಅರ್ಹ ಪಾಲಿಸಿಗಳ ಮೇಲಿನ ವಿಳಂಬ ಶುಲ್ಕಕ್ಕೆ ಇರುವ ವಿನಾಯಿತಿಗಳ ವಿವರ ಇಲ್ಲಿದೆ:

– 1 ಲಕ್ಷ ರೂಪಾಯಿಯೊಳಗೆ: ವಿಳಂಬ ಶುಲ್ಕ ವಿನಾಯಿತಿ ಶೇ 20ರಷ್ಟು; ಗರಿಷ್ಠ 2000 ರೂಪಾಯಿ

– 1,00,001 ರೂಪಾಯಿಯಿಂದ 3,00,000 ರೂ.- ವಿಳಂಬ ಶುಲ್ಕ ವಿನಾಯಿತಿ ಶೇ 25ರಷ್ಟು; ಗರಿಷ್ಠ 2500 ರೂಪಾಯಿ

– 3,00,001 ರೂಪಾಯಿ ಮೇಲ್ಪಟ್ಟು: ವಿಳಂಬ ಶುಲ್ಕ ಶೇ 30ರಷ್ಟು; ಗರಿಷ್ಠ 3000 ರೂಪಾಯಿ

– ಮೈಕ್ರೋ ಇನ್ಷೂರೆನ್ಸ್​ ಪ್ಲಾನ್​ಗಳಿಗೆ ಶೇ 100ರಷ್ಟು ವಿನಾಯಿತಿ, ಪೂರ್ತಿಯಾಗಿ ನೀಡಲಾಗುತ್ತದೆ.

ಆದರೆ, ಟರ್ಮ್ ಅಶ್ಯೂರೆನ್ಸ್ ಮತ್ತು ಮಲ್ಟಿಪಲ್ ರಿಸ್ಕ್​ ಪಾಲಿಸಿಗಳಿಗೆ ಅನ್ವಯ ಆಗುವುದಿಲ್ಲ. ಇನ್ನೇನು ಎಲ್​ಐಸಿ ಐಪಿಒ ಬಿಡುಗಡೆ ಆಗಬೇಕು ಎಂಬ ಹೊತ್ತಿಗೆ ಈ ಸುದ್ದಿ ಹೊರಬಿದ್ದಿದೆ.

ಇದನ್ನೂ ಓದಿ: LIC IPO Valuation: ಎಲ್​ಐಸಿ ಐಪಿಒಗೆ ಮಾರುಕಟ್ಟೆ ಮೌಲ್ಯದ ಅಂದಾಜು 15 ಲಕ್ಷ ಕೋಟಿ ರೂಪಾಯಿ

ಪ್ರಧಾನಿಯಾಗಿ ಇಂದಿರಾ ಗಾಂಧಿಯ ದಾಖಲೆ ಮುರಿದ ಮೋದಿಗೆ ಮುಯಿಝು ಅಭಿನಂದನೆ
ಪ್ರಧಾನಿಯಾಗಿ ಇಂದಿರಾ ಗಾಂಧಿಯ ದಾಖಲೆ ಮುರಿದ ಮೋದಿಗೆ ಮುಯಿಝು ಅಭಿನಂದನೆ
‘ಕೊತ್ತಲವಾಡಿ’ ಸಿನಿಮಾದಲ್ಲಿದೆ ಯಶ್ ಬಳಸಿದ ವಿಶೇಷ ಬೈಕ್
‘ಕೊತ್ತಲವಾಡಿ’ ಸಿನಿಮಾದಲ್ಲಿದೆ ಯಶ್ ಬಳಸಿದ ವಿಶೇಷ ಬೈಕ್
ಕೃಷ್ಣರಾಜ ಒಡೆಯರ್-ಸಿದ್ದರಾಮಯ್ಯ ಇಬ್ಬರೂ ಸಾಮಾಜಿಕ ಹರಿಕಾರರು: ಸಚಿವ
ಕೃಷ್ಣರಾಜ ಒಡೆಯರ್-ಸಿದ್ದರಾಮಯ್ಯ ಇಬ್ಬರೂ ಸಾಮಾಜಿಕ ಹರಿಕಾರರು: ಸಚಿವ
ಕರ್ನಾಟಕವೇ ದೇಶದಲ್ಲಿ ಪ್ರಥಮ ಬಾರಿಗೆ ಜಾತಿಗಣತಿ ಮಾಡಿಸಿದ್ದು: ಸಿದ್ದರಾಮಯ್ಯ
ಕರ್ನಾಟಕವೇ ದೇಶದಲ್ಲಿ ಪ್ರಥಮ ಬಾರಿಗೆ ಜಾತಿಗಣತಿ ಮಾಡಿಸಿದ್ದು: ಸಿದ್ದರಾಮಯ್ಯ
ಜಪಾನಿಗೆ ಬನ್ನೇರುಘಟ್ಟ ಸಾಕಾನೆಗಳ ಏರ್​ ಲಿಫ್ಟ್​ ಯಶಸ್ವಿ
ಜಪಾನಿಗೆ ಬನ್ನೇರುಘಟ್ಟ ಸಾಕಾನೆಗಳ ಏರ್​ ಲಿಫ್ಟ್​ ಯಶಸ್ವಿ
ಸುರ್ಜೇವಾಲಾ ಮಾಡಿದ್ದು ಸರಿಯಲ್ಲ ಅಂತ ರಾಜಣ್ಣನೇ ಹೇಳಿದ್ದಾರೆ: ರವಿಕುಮಾರ್
ಸುರ್ಜೇವಾಲಾ ಮಾಡಿದ್ದು ಸರಿಯಲ್ಲ ಅಂತ ರಾಜಣ್ಣನೇ ಹೇಳಿದ್ದಾರೆ: ರವಿಕುಮಾರ್
ಮಾಲ್ಡೀವ್ಸ್‌ನಲ್ಲಿ ಪ್ರಧಾನಿ ಮೋದಿಗೆ ಗೌರವದ ಸ್ವಾಗತ, ಭಾರತೀಯರಿಂದ ನೃತ್ಯ
ಮಾಲ್ಡೀವ್ಸ್‌ನಲ್ಲಿ ಪ್ರಧಾನಿ ಮೋದಿಗೆ ಗೌರವದ ಸ್ವಾಗತ, ಭಾರತೀಯರಿಂದ ನೃತ್ಯ
ಮಂತ್ರಿ ಮತ್ತು ಶಾಸಕರ ಜೊತೆ ಮಾತ್ರ ಸುರ್ಜೇವಾಲಾ ಮಾತುಕತೆ ನಡೆಸಿದರು: ಸಚಿವ
ಮಂತ್ರಿ ಮತ್ತು ಶಾಸಕರ ಜೊತೆ ಮಾತ್ರ ಸುರ್ಜೇವಾಲಾ ಮಾತುಕತೆ ನಡೆಸಿದರು: ಸಚಿವ
2023ರ ಕರ್ನಾಟಕ ಚುನಾವಣೆಯಲ್ಲಿ ಎಲ್ಲ ಸರಿಯಾಗಿತ್ತಾ? ಪ್ರಲ್ಹಾದ್ ಜೋಶಿ ಲೇವಡಿ
2023ರ ಕರ್ನಾಟಕ ಚುನಾವಣೆಯಲ್ಲಿ ಎಲ್ಲ ಸರಿಯಾಗಿತ್ತಾ? ಪ್ರಲ್ಹಾದ್ ಜೋಶಿ ಲೇವಡಿ
ಮಲ್ಲೇಶ್ವರಂ 11ನೇ ಮುಖ್ಯರಸ್ತೆಗೆ ಸರೋಜಾ ದೇವಿ ಹೆಸರು: ಶಾಸಕ ಅಶ್ವತ್ಥನಾರಾಯಣ
ಮಲ್ಲೇಶ್ವರಂ 11ನೇ ಮುಖ್ಯರಸ್ತೆಗೆ ಸರೋಜಾ ದೇವಿ ಹೆಸರು: ಶಾಸಕ ಅಶ್ವತ್ಥನಾರಾಯಣ