ವಿದೇಶಗಳಿಗೆ ಹೋಗಲಿವೆ ಮಾರುತಿ ಸುಜುಕಿಯ ಎಲೆಕ್ಟ್ರಿಕ್ ಕಾರುಗಳು; ಬಯೋಫುಯಲ್, ಹೈಡ್ರೋಜನ್ ಕಾರುಗಳ ತಯಾರಿಕೆಗೂ ಆಲೋಚನೆ

Maruti Suzuki car exports to Europe and Japan: ಮಾರುತಿ ಸುಜುಕಿ ತನ್ನ ಎಲೆಕ್ಟ್ರಿಕ್ ಕಾರುಗಳನ್ನು ಯೂರೋಪ್ ಮತ್ತು ಜಪಾನ್​ಗೆ ರಫ್ತು ಮಾಡಲಿದೆ. ಸದ್ಯದಲ್ಲೇ ಇದರ ಎಕ್ಸ್​ಪೋರ್ಟ್ ಆಗಬಹುದು ಎನ್ನಲಾಗಿದೆ. 60 ಕಿಲೋವ್ಯಾಟ್ ಬ್ಯಾಟರಿ ಶಕ್ತಿ ಇರಲಿದ್ದು, ಒಮ್ಮೆ ರೀಚಾರ್ಜ್ ಮಾಡಿದರೆ 500 ಕಿಮೀವರೆಗೂ ಹೋಗಬಲ್ಲ ಶ್ರೇಣಿಯ ಕಾರುಗಳನ್ನು ರಫ್ತು ಮಾಡಲಾಗುತ್ತದೆ. ಜೈವಿಕ ಇಂಧನ ಮತ್ತು ಹೈಡ್ರೋಜನ್ ಇಂಧನ ಬಳಸುವ ಕಾರುಗಳನ್ನು ನಿರ್ಮಿಸಬಹುದು.

ವಿದೇಶಗಳಿಗೆ ಹೋಗಲಿವೆ ಮಾರುತಿ ಸುಜುಕಿಯ ಎಲೆಕ್ಟ್ರಿಕ್ ಕಾರುಗಳು; ಬಯೋಫುಯಲ್, ಹೈಡ್ರೋಜನ್ ಕಾರುಗಳ ತಯಾರಿಕೆಗೂ ಆಲೋಚನೆ
ಮಾರುತಿ ಸುಜುಕಿ ಕಂಪನಿ
Follow us
|

Updated on: Sep 10, 2024 | 5:21 PM

ನವದೆಹಲಿ, ಸೆಪ್ಟೆಂಬರ್ 10: ಮಾರುತಿ ಸುಜುಕಿ ಸಂಸ್ಥೆ ಭಾರತದಲ್ಲಿರುವ ತನ್ನ ಘಟಕಗಳಲ್ಲಿ ತಯಾರಿಸಲಾಗುವ ಎಲೆಕ್ಟ್ರಿಕ್ ಕಾರುಗಳನ್ನು ಯೂರೋಪ್ ಮತ್ತು ಜಪಾನ್ ಮಾರುಕಟ್ಟೆಗಳಿಗೆ ರಫ್ತು ಮಾಡಲು ಯೋಜಿಸಿದೆ. ಈ ವಿಷಯವನ್ನು ಮಾರುತಿ ಸುಜುಕಿ ಎಂಡಿ ಮತ್ತು ಸಿಇಒ ಹಿಸಾಶಿ ಟಕೆಯುಚಿ (Hisashi Takeuchi) ಹೇಳಿದರೆಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಎಸ್​ಐಎಎಂ ಸಂಘಟನೆಯ 64ನೇ ವಾರ್ಷಿಕ ಸಭೆಯೊಂದರಲ್ಲಿ ಮಾತನಾಡುತ್ತಿದ್ದ ಮಾರುತಿ ಸುಜುಕಿ ಮುಖ್ಯಸ್ಥರು, ವಿದೇಶಗಳಿಗೆ ರಫ್ತಾಗಲಿರುವ ತಮ್ಮ ಕಂಪನಿಯ ಇವಿಗಳು ಉನ್ನತ ಶ್ರೇಣಿದ್ದಿರುತ್ತವೆ ಎಂದಿದ್ದಾರೆ.

ಅವರ ಪ್ರಕಾರ, ಯೂರೋಪ್ ಮತ್ತು ಜಪಾನ್​ಗೆ ರಫ್ತಾಗಲಿರುವ ಮಾರುತಿ ಸುಜುಕಿ ಎಲೆಕ್ಟ್ರಿಕ್ ಕಾರುಗಳು 60 ಕಿ. ವ್ಯಾ. ಬ್ಯಾಟರಿ ಹೊಂದಿರುತ್ತವೆ. 500 ಕಿಮೀವರೆಗೆ ಸಾಗಬಲ್ಲುವು. ಇಂಥ ಹಲವು ಕಾರುಗಳನ್ನು ತಾವು ತಯಾರಿಸಲಿದ್ದು ಗ್ರಾಹಕರ ವಿಶ್ವಾಸ ಹೆಚ್ಚಿಸುವ ಗುರಿ ಹೊಂದಿದ್ದೇವೆ ಎಂದು ಹೇಳಿದ್ದಾರೆ.

ರಫ್ತು ಹೆಚ್ಚಿಸುವ ಗುರಿ ಮಾರುತಿ ಸುಜುಕಿಯದ್ದು…

ಮಾರುತಿ ಸುಜುಕಿ ಇಂಡಿಯಾ ಸಂಸ್ಥೆ ತನ್ನ ಕೆಲ ಮಾಡಲ್ ಕಾರುಗಳನ್ನು ರಫ್ತು ಮಾಡುತ್ತಾ ಬಂದಿದೆ. ವರ್ಷದಿಂದ ವರ್ಷಕ್ಕೆ ಅದರ ರಫ್ತು ಪ್ರಮಾಣ ಹೆಚ್ಚುತ್ತಿದೆ.

ಇದನ್ನೂ ಓದಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದಿಂದ ಸರ್ಕಾರಕ್ಕೆ ಸಿಗುವ ಜಿಎಸ್​ಟಿ ಮೊತ್ತ 400 ಕೋಟಿ ರೂ?

‘ನಾಲ್ಕು ವರ್ಷದಲ್ಲಿ ನಮ್ಮ ರಫ್ತು ಈಗ ಮೂರು ಪಟ್ಟು ಹೆಚ್ಚಾಗಿದೆ. ಇನ್ನಾರು ವರ್ಷದಲ್ಲಿ ರಫ್ತು ಇನ್ನೂ ಮೂರು ಪಟ್ಟು ಹೆಚ್ಚಾಗಲಿದೆ’ ಎಂದು ಮಾರುತಿ ಸುಜುಕಿ ಸಿಇಒ ಹಿಸಾಶಿ ಟಕೆಯುಚಿ ಇಂದು ಮಂಗಳವಾರ ಹೇಳಿದ್ದಾರೆ.

ಜೈವಿಕ ಇಂಧನದಲ್ಲಿ ಭಾರತವೇ ನಂಬರ್ ಒನ್ ಆಗಬಲ್ಲುದು…

ಮಾರುತಿ ಸುಜುಕಿ ಕಂಪನಿ ಕಾರ್ಬನ್ ಮಾಲಿನ್ಯ ನಿಯಂತ್ರಿಸಲು ಎಲ್ಲಾ ರೀತಿಯ ತಂತ್ರಜ್ಞಾನಗಳ ಬಳಕೆಗೆ ಆಲೋಚಿಸುತ್ತಿದೆ. ಎಲೆಕ್ಟ್ರಿಕ್ ವಾಹನಗಳು, ಹೈಬ್ರಿಡ್ ಕಾರುಗಳು ಮಾತ್ರವಲ್ಲ, ಜೈವಿಕ ಇಂಧನ ಮತ್ತು ಹೈಡ್ರೋಜನ್ ಇಂಧನದಿಂದ ಚಾಲಿತವಾಗಬಲ್ಲಂತಹ ಕಾರಿನ ಮಾಡಲ್​ಗಳನ್ನು ಅಭಿವೃದ್ದಿಪಡಿಸಲು ಪ್ರಯತ್ನಿಸುತ್ತಿದೆ ಎಂದು ಸಿಇಒ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಜಿಎಸ್​ಟಿ ಕೌನ್ಸಿಲ್ 54ನೇ ಸಭೆ: ತೆರಿಗೆ ಹೆಚ್ಚಳ, ಇಳಿಕೆ, ವಿನಾಯಿತಿ ಸಿಕ್ಕಿದ್ದು ಯಾವ್ಯಾವಕ್ಕೆ? ಇಲ್ಲಿದೆ ಪಟ್ಟಿ

‘ಭಾರತದಲ್ಲಿ ಭಾರೀ ನೈಸರ್ಗಿಕ ಸಂಪನ್ಮೂಲ ಇದೆ. ಹೇರಳವಾದ ಮಾನವ ಸಂಪನ್ಮೂಲ, ಕೃಷಿ ಸಂಪನ್ಮೂಲ ಮತ್ತು ಪ್ರಾಣಿ ಸಂಪನ್ಮೂಲಗಳಿವೆ. ಇವುಗಳಿಂದ ಸಾಕಷ್ಟು ಜೈವಿಕ ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಇದನ್ನು ಜೈವಿಕ ಇಂಧನವಾಗಿ ಪರಿವರ್ತಿಸಬಹುದು’ ಎನ್ನುತ್ತಾರೆ ಹಿಸಾಶಿ ಟಕೆಯುಚಿ.

‘ಬಹಳಷ್ಟು ದೇಶಗಳು ಬಯೋಫುಯೆಲ್​ನ ಶಕ್ತಿ ಬಳಸುತ್ತಿವೆ. ನನ್ನ ಪ್ರಕಾರ ಭಾರತ ಬಹಳ ಬೇಗನೇ ಬಯೋಫುಯಲ್​ನಲ್ಲಿ ವಿಶ್ವದ ನಂಬರ್ ಒನ್ ಸ್ಥಾನಕ್ಕೆ ಏರಬಹುದು. ಇತರೆ ದೇಶಗಳು ಭಾರತವನ್ನು ನೋಡಿ ಕಲಿಯುವಂತಾಗಬಹುದು,’ ಎಂದು ಮಾರುತಿ ಸುಜುಕಿ ಮುಖ್ಯಸ್ಥರು ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ಪ್ರಕರಣ: ಉಪೇಂದ್ರ ಮೊದಲ ಪ್ರತಿಕ್ರಿಯೆ ಹೀಗಿತ್ತು
ದರ್ಶನ್ ಪ್ರಕರಣ: ಉಪೇಂದ್ರ ಮೊದಲ ಪ್ರತಿಕ್ರಿಯೆ ಹೀಗಿತ್ತು
ಕಗ್ಗತ್ತಲ ರಾತ್ರಿ, ನಡು ರಸ್ತೆಯಲ್ಲಿ ಹುಲಿರಾಯನ ಓಡಾಟ; ವಿಡಿಯೋ ಸೆರೆ
ಕಗ್ಗತ್ತಲ ರಾತ್ರಿ, ನಡು ರಸ್ತೆಯಲ್ಲಿ ಹುಲಿರಾಯನ ಓಡಾಟ; ವಿಡಿಯೋ ಸೆರೆ
ಬಿಜೆಪಿ ಕಾರ್ಯಾಲಯದಲ್ಲಿ ರಂಗೋಲಿಯಲ್ಲಿ ಅರಳಿದ ಪ್ರಧಾನಿ ಮೋದಿ ಭಾವಚಿತ್ರ
ಬಿಜೆಪಿ ಕಾರ್ಯಾಲಯದಲ್ಲಿ ರಂಗೋಲಿಯಲ್ಲಿ ಅರಳಿದ ಪ್ರಧಾನಿ ಮೋದಿ ಭಾವಚಿತ್ರ
ರಿಲಯನ್ಸ್ ಜಿಯೋ 4G ಫೀಚರ್ ಫೋನ್​ ದೇಶದ ಮಾರುಕಟ್ಟೆಗೆ ಬಿಡುಗಡೆ
ರಿಲಯನ್ಸ್ ಜಿಯೋ 4G ಫೀಚರ್ ಫೋನ್​ ದೇಶದ ಮಾರುಕಟ್ಟೆಗೆ ಬಿಡುಗಡೆ
ಧರ್ಮಸ್ಥಳ ಸಂಘದ ಬಗ್ಗೆ ಕಾಂಗ್ರೆಸ್ ಶಾಸಕ ನರೇಂದ್ರಸ್ವಾಮಿ ಆಘಾತಕಾರಿ ಹೇಳಿಕೆ
ಧರ್ಮಸ್ಥಳ ಸಂಘದ ಬಗ್ಗೆ ಕಾಂಗ್ರೆಸ್ ಶಾಸಕ ನರೇಂದ್ರಸ್ವಾಮಿ ಆಘಾತಕಾರಿ ಹೇಳಿಕೆ
ನಾವು ಸೇಡು ತೀರಿಸಿಕೊಂಡರೆ ಬಿಜೆಪಿಗೆ ಜೈಲುಗಳು ಸಾಕಾಗಲ್ಲ: ಹೆಬ್ಬಾಳ್ಕರ್
ನಾವು ಸೇಡು ತೀರಿಸಿಕೊಂಡರೆ ಬಿಜೆಪಿಗೆ ಜೈಲುಗಳು ಸಾಕಾಗಲ್ಲ: ಹೆಬ್ಬಾಳ್ಕರ್
‘ಕನ್ನಡ ಚಿತ್ರರಂಗಕ್ಕೆ ಸಮಿತಿ ಬೇಡ, ಇದರಿಂದ ಚಿತ್ರರಂಗಕ್ಕೆ ನಷ್ಟ’; ಗೋವಿಂದು
‘ಕನ್ನಡ ಚಿತ್ರರಂಗಕ್ಕೆ ಸಮಿತಿ ಬೇಡ, ಇದರಿಂದ ಚಿತ್ರರಂಗಕ್ಕೆ ನಷ್ಟ’; ಗೋವಿಂದು
ತಿರುಮಲ ದೇವಾಲಯದಲ್ಲಿನ ವಿಮಾನ ವೆಂಕಟೇಶ್ವರನ ಮಹತ್ವ ತಿಳಿಯಿರಿ
ತಿರುಮಲ ದೇವಾಲಯದಲ್ಲಿನ ವಿಮಾನ ವೆಂಕಟೇಶ್ವರನ ಮಹತ್ವ ತಿಳಿಯಿರಿ
ಈ ರಾಶಿಯವರು ಆಸ್ತಿಯ ವಿಚಾರವಾಗಿ ಕಾನೂನು ಹೋರಾಟ ಮಾಡಲಿದ್ದೀರಿ
ಈ ರಾಶಿಯವರು ಆಸ್ತಿಯ ವಿಚಾರವಾಗಿ ಕಾನೂನು ಹೋರಾಟ ಮಾಡಲಿದ್ದೀರಿ
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು