Bill Gates: ನಾನು ಓದುವಾಗಲೇ ತಿಳಿಯಬೇಕಿತ್ತು: 5 ಸೂತ್ರ ಬಿಚ್ಚಿಟ್ಟ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್

5 Tips For Great Future: ಅಗತ್ಯಬಿದ್ದರೆ ಸಹಾಯ ಕೇಳಲು ಮರೆಯದಿರಿ, ಕೆಲಸವೇ ಎಲ್ಲವೂ ಅಲ್ಲ... ಇವು ಮೈಕ್ರೋಸಾಫ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಕಾಲೇಜು ವಿದ್ಯಾರ್ಥಿಗಳಿಗೆ ಕೆಲ ಸಲಹೆಗಳು. ಬಿಲ್ ಗೇಟ್ಸ್ ನೀಡಿದ ಐದು ಸೂತ್ರಗಳ ವಿವರ ಇಲ್ಲಿದೆ...

Bill Gates: ನಾನು ಓದುವಾಗಲೇ ತಿಳಿಯಬೇಕಿತ್ತು: 5 ಸೂತ್ರ ಬಿಚ್ಚಿಟ್ಟ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್
ಬಿಲ್ ಗೇಟ್ಸ್
Follow us
|

Updated on: May 14, 2023 | 6:45 PM

ಬಿಲ್ ಗೇಟ್ಸ್ (Bill Gates) ಹೆಸರು ಯಾರು ಕೇಳಿಲ್ಲ?! ಮೈಕ್ರೋಸಾಫ್ಟ್ ಎಂಬ ವಿಶ್ವದ ಐಟಿ ದೈತ್ಯ ಕಂಪನಿಯ ಸಹಸಂಸ್ಥಾಪಕರು ಅವರು. ಗೇಟ್ಸ್ ಫೌಂಡೇಶನ್ ಮೂಲಕ ವಿಶ್ವಾದ್ಯಂತ ಸಮಾಜ ಸೇವೆ ಕಾರ್ಯಗಳಲ್ಲಿ ತೊಡಗಿಸಿಕೊಂಡೂ ಸೆಕೆಂಡ್ ಇನಿಂಗ್ಸ್ ಆಡುತ್ತಿದ್ದಾರೆ. ಇವರು ಪದವಿ ಓದುವಾಗಲೇ ಮಧ್ಯದಲ್ಲಿ ಬಿಟ್ಟವರು. ತಮ್ಮ ಸಹಪಾಠಿ ಪೌಲ್ ಅಲೆನ್ (Paul Allen) ಜೊತೆ ಸೇರಿ ಮೈಕ್ರೋಸಾಫ್ಟ್ ಹುಟ್ಟುಹಾಕಿದರು. ತಾವೇ ಸ್ಥಾಪಿಸಿದ ಮೈಕ್ರೋಸಾಫ್ಟ್​ನಿಂದ ಹೊರಬಂದು ತಮ್ಮ ಮನಸಿಗೆ ಇಷ್ಟವಾಗುವ ಕೆಲಸಗಳನ್ನು ಮಾಡುತ್ತಾ ಜೀವನ ಸವೆಸುತ್ತಿದ್ದಾರೆ. ಇನ್ನೊಬ್ಬರ ಜೀವನಕ್ಕೆ ಆಸರೆ ಒದಗಿಸುತ್ತಿದ್ದಾರೆ. ಇದೇ ವೇಳೆ ಅಮೆರಿಕದ ನಾರ್ತರ್ನ್ ಅರಿಜೋನಾ ಯೂನಿವರ್ಸಿಟಿಯಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಆ ಮಕ್ಕಳಿಗೆ ಒಂದಷ್ಟು ಒಳ್ಳೆಯ ಸಲಹೆ ನೀಡಿದರು.

ನೀವು ತೆಗೆದುಕೊಳ್ಳುವ ತೀರ್ಮಾನ ಖಾಯಂ ಅಲ್ಲ: ಬಿಲ್ ಗೇಟ್ಸ್ ಕಿವಿಮಾತು

ನಿಮ್ಮ ಕರಿಯರ್​ನಲ್ಲಿ ಈಗಲೇ ಸರಿಯಾದ ನಿರ್ಧಾರ ತೆಗೆದುಕೊಳ್ಳಿ ಎಂದು ವಿದ್ಯಾರ್ಥಿಗಳ ಮೇಲೆ ಅತೀವ ಒತ್ತಡ ಇರುತ್ತದೆ. ಆದರೆ, ನೀವು ತೆಗೆದುಕೊಳ್ಳುವ ನಿರ್ಧಾರವೇ ಅಂತಿಮ ಆಗುವುದಿಲ್ಲ. 1975ರಲ್ಲಿ ನಾನು ಮೈಕ್ರೋಸಾಫ್ಟ್ ಸಹಸಂಸ್ಥಾಪಕ ಆದಾಗ ಅಲ್ಲಿ ನನ್ನಿಡೀ ಜೀವನ ಕೆಲಸ ಮಾಡುತ್ತೇನೆ ಎಂದು ನಿರ್ಧರಿಸಿದ್ದೆ. ಆದರೆ, ಖುಷಿ ಎಂದರೆ ಅದು ನಿಜ ಆಗಲಿಲ್ಲ. ನಿಮ್ಮನ್ನು ಮತ್ತು ನಿಮ್ಮ ಗುರಿಗಳನ್ನು ಮತ್ತೊಮ್ಮೆ ಮರುಪರಿಶೀಲಿಸಿಕೊಳ್ಳುವುದು ಒಳ್ಳೆಯದು ಎಂದು ಬಿಲ್ ಗೇಟ್ಸ್ ಹೇಳಿದ್ದಾರೆ.

1975ರಲ್ಲಿ ಬಿಲ್ ಗೇಟ್ಸ್ ಮತ್ತು ಪೌಲ್ ಅಲೆನ್ ಜೊತೆ ಸೇರಿ ಮೈಕ್ರೋಸಾಫ್ಟ್ ಎಂಬ ಐಟಿ ಕಂಪನಿ ಸ್ಥಾಪಿಸಿದ್ದರು. 2014ರಲ್ಲಿ ಅವರು ಮೈಕ್ರೋಸಾಫ್ಟ್ ತೊರೆದು ಈಗ ಸಾಮಾಜಿಕ ಕಾರ್ಯಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿದ್ದಾರೆ. ಹಾಗೆಯೇ, ಹೂಡಿಕೆದಾರರಾಗಿಯೂ ಹೊಸ ಉದ್ದಿಮೆಗಳಿಗೆ ಪ್ರೋತ್ಸಾಹ ಕೊಡುವ ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿTwitter: ಟ್ವಿಟರ್ ಹೊಸ ಸಿಇಒ ಲಿಂಡಾ ಯಾಕರಿನೊ; ಕೊನೆಗೂ ಹೆಸರು ಬಹಿರಂಗಪಡಿಸಿದ ಮಸ್ಕ್

ಸಹಾಯ ಕೇಳಲು ಹಿಂಜರಿಯದಿರಿ: ಬಿಲ್ ಗೇಟ್ಸ್

ಬಿಲ್ ಗೇಟ್ಸ್ ಹಾರ್ವರ್ಡ್ ಕಾಲೇಜಿಂದ ಅರ್ಧದಲ್ಲೇ ಹೊರಬಿದ್ದಾಗ ತನಗೆಲ್ಲವೂ ಗೊತ್ತಿದೆ ಎಂದು ಭಾವಿಸಿದ್ದರಂತೆ. ಆದರೆ, ನಂತರದ ದಿನಗಳಲ್ಲಿ ಅವರಿಗೆ ನಿಜ ಜ್ಞಾನೋದಯವಾಗಿದೆ. ‘ನಿಮಗೆ ಗೊತ್ತಿರುವ ಸಂಗತಿ ಬದಲು ಗೊತ್ತಿರದ ವಿಚಾರವನ್ನು ತಿಳಿದುಕೊಳ್ಳಲು ಯತ್ನಿಸಿದರೆ ಏನಾದರೂ ಹೊಸದನ್ನು ಕಲಿಯಬಹುದು’ ಎಂದು ಬಿಲ್ ಗೇಟ್ಸ್ ಹೇಳುತ್ತಾರೆ.

‘ಮುಂದೊಂದು ದಿನ ನಿಮ್ಮ ವೃತ್ತಿಜೀವನದಲ್ಲಿ ನಿಮ್ಮಿಂದ ಸ್ವತಃ ಬಗೆಹರಿಸಲು ಸಾಧ್ಯವಾಗದ ಸಮಸ್ಯೆ ಎದುರಾಗಬಹುದು. ಆಗ ಗಾಬರಿಯಾಗಬೇಡಿ. ಚೆನ್ನಾಗಿ ಯೋಚಿಸಿ. ಆ ವಿಚಾರದ ಬಗ್ಗೆ ಗೊತ್ತಿರುವ ಬುದ್ಧಿವಂತರ ಸಲಹೆ ಪಡೆಯಿರಿ. ನೀವು ಕೆಲಸ ಮಾಡುವ ಸ್ಥಳದಲ್ಲೇ ಆಗಲೀ, ಎಲ್ಲಿಯೇ ಆಗಲಿ ತಿಳಿದಿರುವವರ ಸಹಾಯ ಪಡೆಯಲು ಹಿಂಜರಿಯಬೇಡಿ’ ಎಂಬುದು ವಿದ್ಯಾರ್ಥಿಗಳಿಗೆ ಮೈಕ್ರೋಸಾಫ್ಟ್ ಸಹಸಂಸ್ಥಾಪಕರ ಸಲಹೆ.

ಇತರರಿಗೆ ಸಹಾಯ ಮಾಡಿ ಎನ್ನುವ ಬಿಲ್ ಗೇಟ್ಸ್

ನೀವು ಪದವಿ ಪಡೆಯುತ್ತಿರುವ ಈ ಸಮಯವು ಜನಸಹಾಯಕ್ಕೆ ವಿಫುಲ ಅವಕಾಶ ಒದಗಿಸುತ್ತದೆ. ಪ್ರತೀ ದಿನವೂ ಹೊಸ ಉದ್ಯಮ ಮತ್ತು ಕಂಪನಿಗಳು ತೆರೆಯುತ್ತಿವೆ. ಅಸಂಖ್ಯೆ ಅವಕಾಶಗಳಿವೆ. ಫಾರೆಸ್ಟರ್​ಗಳಾಗಿ ಹವಾಮಾನ ಬದಲಾವಣೆ ವಿರುದ್ಧ ಹೋರಾಡಬಹುದು. ಪ್ರೋಗ್ರಾಮರ್​ಗಳಾಗಿ ಎಐನಿಂದ ಜನರಿಗೆ ಲಾಭವಾಗುವಂತೆ ಮಾಡಬಹುದು. ಹೀಗೆ ಯಾವ ರೀತಿಯಲ್ಲಾದರೂ ಜನರ ಜೀವನದ ಮೇಲೆ ಸಕಾರಾತ್ಮಕ ಬದಲಾವಣೆ ತರುವ ಅವಕಾಶ ಈಗ ಹೆಚ್ಚಿದೆ ಎಂದು ವಿದ್ಯಾರ್ಥಿಗಳೊಂದಿಗಿನ ಸಂವಾದದ ವೇಳೆ ಬಿಲ್ ಗೇಟ್ಸ್ ಹೇಳಿದ್ದಾರೆ.

ಕಾಲೇಜಿನಲ್ಲಿ ನೀವು ಬೆಳೆಸಿಕೊಳ್ಳುವ ಸಂಪರ್ಕ ಬಹಳ ಮುಖ್ಯ: ಬಿಲ್ ಗೇಟ್ಸ್

ನೀವು ಕಾಲೇಜಿನಲ್ಲಿ ಓದುವಾಗ ನಿಮ್ಮ ಜೊತೆ ಕೂತು ಪಾಠ ಕೇಳಿದವರು, ನಿಮ್ಮ ಜೊತೆ ಒಡನಾಡಿದವರು ನಿಮ್ಮ ಸಹಪಾಠಿಗಳು ಮಾತ್ರವಲ್ಲ, ಅವರು ನಿಮ್ಮ ನೆಟ್ವರ್ಕ್ ಹೌದು. ಭವಿಷ್ಯದಲ್ಲಿ ನಿಮ್ಮ ಜೊತೆ ಸೇರಿ ಕಂಪನಿ ಸ್ಥಾಪಿಸಬಹುದಾದವರು, ಅಥವಾ ನಿಮ್ಮ ಸಹೋದ್ಯೋಗಿಗಳೂ ಆಗಬಹುದು. ನಿಮಗೆ ಸಹಾಯ ಮಾಡಬಲ್ಲ, ಮಾಹಿತಿ ಕೊಡಬಲ್ಲ, ಸಲಹೆ ಕೊಡಬಲ್ಲವರು ಅವರು ಎಂದು ಬಿಲ್ ಗೇಟ್ಸ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿSuccess: ಮಣಿಪಾಲದಲ್ಲಿ ಓದಿದ್ದೇ ಟರ್ನಿಂಗ್ ಪಾಯಿಂಟ್; ವಿಜ್ಞಾನಿ ಮುರಳಿ ದಿವಿ 1.3 ಲಕ್ಷ ಕೋಟಿ ಕಂಪನಿ ಒಡೆಯರಾದ ಕಥೆ

ಕೆಲಸವೇ ಜೀವನ ಅಲ್ಲ ಎನ್ನುವ ಬಿಲ್ ಗೇಟ್ಸ್

ವೃತ್ತಿಪರ ಕ್ಷೇತ್ರದಲ್ಲಿ ಬಹಳ ಮಂದಿ ದಿನಕ್ಕೆ 24 ಗಂಟೆಯೂ ಕಂಪನಿಯ ಕೆಲಸದಲ್ಲೇ ಮುಳುಗಿಹೋಗಿರುವುದನ್ನು ನಾವು ನೋಡಬಹುದು. ಕೆಲಸ ಬಿಟ್ಟರೆ ಅವರಿಗೆ ಬೇರೆ ಪ್ರಪಂಚವೇ ಇರುವುದಿಲ್ಲ. ಬಿಲ್ ಗೇಟ್ಸ್ ಈ ಪ್ರವೃತ್ತಿಯನ್ನು ವಿರೋಧಿಸುತ್ತಾರೆ. ‘ನಿಮ್ಮ ವಯಸ್ಸಿನಲ್ಲಿದ್ದಾಗ ನನಗೆ ರಜೆ ಎಂದರೆ ಆಗುತ್ತಿರಲಿಲ್ಲ, ವೀಕೆಂಡ್ ಮೋಜು ಬೇಡವಾಗಿತ್ತು. ನನ್ನ ಜೊತೆ ಕೆಲಸ ಮಾಡುತ್ತಿದ್ದವರೂ ಹೀಗೇ ಇರಬೇಕೆಂದುಕೊಂಡಿದ್ದೆ. ನನ್ನ ಕಚೇರಿ ಯಾರು ತಡವಾಗಿ ಮನೆಗೆ ಹೋಗುತ್ತಾರೆ ಎಂದು ಟ್ರ್ಯಾಕ್ ಕೂಡ ಮಾಡುತ್ತಿದ್ದೆ’ ಎಂದು ಬಿಲ್ ಗೇಟ್ಸ್ ಒಪ್ಪಿಕೊಳ್ಳುತ್ತಾರೆ.

‘ಆದರೆ, ಇದು ಸರಿ ಅಲ್ಲ ಅನ್ನೋದು ನನಗೆ ತಡವಾಗಿ ಅರಿವಾಯಿತು. ನೀವು ಈ ತಪ್ಪು ಮಾಡಬೇಡಿ. ನಿಮ್ಮ ಸಂಬಂಧಗಳನ್ನು ಬೆಳೆಸಲು ಸಮಯಾವಕಾಶ ತೆಗೆದುಕೊಳ್ಳಿ. ನಿಮಗೆ ವಿಶ್ರಾಂತಿ ಬೇಕೆನಿಸಿದರೆ ತೆಗೆದುಕೊಳ್ಳಿ. ನಿಮ್ಮ ಜೊತೆಯಲ್ಲಿರುವವರೂ ವಿಶ್ರಾಂತಿ ಬಯಸಿದರೆ ಅವಕಾಶ ಕೊಡಿ’ ಎಂದು ಬಿಲ್ ಗೇಟ್ಸ್ ಹೇಳುತ್ತಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಮುಸ್ಲಿಂ ಟೋಪಿ ಧರಿಸಿ ಈದ್ಗ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಸಿದ್ದರಾಮಯ್ಯ
ಮುಸ್ಲಿಂ ಟೋಪಿ ಧರಿಸಿ ಈದ್ಗ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಸಿದ್ದರಾಮಯ್ಯ
‘ನಾನು ಇದರಲ್ಲಿ ಮುಗ್ಧ’; ಬ್ಯಾನ್ ವಿಚಾರದಲ್ಲಿ ಸುದೀಪ್ ಹೀಗೆ ಹೇಳಿದ್ಯಾಕೆ?
‘ನಾನು ಇದರಲ್ಲಿ ಮುಗ್ಧ’; ಬ್ಯಾನ್ ವಿಚಾರದಲ್ಲಿ ಸುದೀಪ್ ಹೀಗೆ ಹೇಳಿದ್ಯಾಕೆ?
ರೇಣುಕಾ ಸ್ವಾಮಿಗೆ ಕರೆಂಟ್ ಶಾಕ್ ಕೊಟ್ಟ ಪ್ರಮುಖ ಅರೆಸ್ಟ್
ರೇಣುಕಾ ಸ್ವಾಮಿಗೆ ಕರೆಂಟ್ ಶಾಕ್ ಕೊಟ್ಟ ಪ್ರಮುಖ ಅರೆಸ್ಟ್
ಶುಭ ಕಾರ್ಯ ಪ್ರಾರಂಭಕ್ಕೂ ಮುನ್ನ ಓಂ ಅಂತ ಏಕೆ ಬರೆಯಬೇಕು? ಈ ವಿಡಿಯೋ ನೋಡಿ
ಶುಭ ಕಾರ್ಯ ಪ್ರಾರಂಭಕ್ಕೂ ಮುನ್ನ ಓಂ ಅಂತ ಏಕೆ ಬರೆಯಬೇಕು? ಈ ವಿಡಿಯೋ ನೋಡಿ
Daily Horoscope: ಈ ರಾಶಿಯವರಿಗೆ ಸಂಗಾತಿಯ ಆಸ್ತಿ ಬಳುವಳಿಯಾಗಿ ಬರಬಹುದು
Daily Horoscope: ಈ ರಾಶಿಯವರಿಗೆ ಸಂಗಾತಿಯ ಆಸ್ತಿ ಬಳುವಳಿಯಾಗಿ ಬರಬಹುದು
ಮೃತ ರೇಣುಕಾ ತಾಯಿ, ಪತ್ನಿ ಕಣ್ಣೀರು: ಸಾಂತ್ವನ ಹೇಳಿದ ರಂಭಾಪುರಿ ಶ್ರೀಗಳು
ಮೃತ ರೇಣುಕಾ ತಾಯಿ, ಪತ್ನಿ ಕಣ್ಣೀರು: ಸಾಂತ್ವನ ಹೇಳಿದ ರಂಭಾಪುರಿ ಶ್ರೀಗಳು
ರೇಣುಕಾ ಸ್ವಾಮಿ ಕೊಲೆ ಕೇಸ್​ನ ಆರೋಪಿ ದರ್ಶನ್​ ಬಗ್ಗೆ ಸುದೀಪ್​ ಮೊದಲ ಮಾತು
ರೇಣುಕಾ ಸ್ವಾಮಿ ಕೊಲೆ ಕೇಸ್​ನ ಆರೋಪಿ ದರ್ಶನ್​ ಬಗ್ಗೆ ಸುದೀಪ್​ ಮೊದಲ ಮಾತು
ಪವಿತ್ರಾ ಮನೆಯಲ್ಲಿ ಸ್ಥಳ ಮಹಜರು ವೇಳೆ ನಗ್ತಾ ಸಾಗಿದ ಆರೋಪಿ ಪವನ್
ಪವಿತ್ರಾ ಮನೆಯಲ್ಲಿ ಸ್ಥಳ ಮಹಜರು ವೇಳೆ ನಗ್ತಾ ಸಾಗಿದ ಆರೋಪಿ ಪವನ್
ರೇಣುಕಾ ಸ್ವಾಮಿ ಪ್ರಕರಣ: ಕಾರು ಚಾಲಕನ ಕುಟುಂಬದ ಗೋಳು ಕೇಳೋರ್ಯಾರು?
ರೇಣುಕಾ ಸ್ವಾಮಿ ಪ್ರಕರಣ: ಕಾರು ಚಾಲಕನ ಕುಟುಂಬದ ಗೋಳು ಕೇಳೋರ್ಯಾರು?
ಪೆಟ್ರೋಲ್ -ಡೀಸೆಲ್ ದರ ಏರಿಕೆ ವಿರುದ್ಧ ನಾರಿಯರು ಕಿಡಿ
ಪೆಟ್ರೋಲ್ -ಡೀಸೆಲ್ ದರ ಏರಿಕೆ ವಿರುದ್ಧ ನಾರಿಯರು ಕಿಡಿ