AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Google Pay: ಧ್ವನಿ ಕಮಾಂಡ್​ನಿಂದ ಬ್ಯಾಂಕ್​ ಖಾತೆಗೆ ಹಣ ವರ್ಗಾಯಿಸುವ ಫೀಚರ್ ತರಲಿದೆ ಗೂಗಲ್ ಪೇ

ಗೂಗಲ್​ ಬಳಕೆದಾರರು ವಾಯ್ಸ್​ ಕಮ್ಯಾಂಡ್​ ಮೂಲಕ ಬ್ಯಾಂಕ್​ಗೆ ಹಣ ವರ್ಗಾವಣೆ ಮಾಡಬಹುದು. ಆ ಬಗ್ಗೆ ವಿವರಣಾತ್ಮಕ ಲೇಖನ ಇಲ್ಲಿದೆ.

Google Pay: ಧ್ವನಿ ಕಮಾಂಡ್​ನಿಂದ ಬ್ಯಾಂಕ್​ ಖಾತೆಗೆ ಹಣ ವರ್ಗಾಯಿಸುವ ಫೀಚರ್ ತರಲಿದೆ ಗೂಗಲ್ ಪೇ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Nov 18, 2021 | 1:24 PM

Share

ಗೂಗಲ್ ಪೇ ಈಗ ವಾರ್ಷಿಕವಾಗಿ 40,000 ಕೋಟಿ ಅಮೆರಿಕನ್​ ಡಾಲರ್​ ಮೌಲ್ಯದ ವಹಿವಾಟನ್ನು ನಿರ್ವಹಿಸುತ್ತಿದೆ. ಇದು ಈ ವರ್ಷದ ನಂತರದಲ್ಲಿ ಲಭ್ಯವಾಗುವಂತೆ ಬಿಲ್​ ಸ್ಪ್ಲಿಟ್ ಆರಂಭಿಸಲಿದೆ. ಹಿಂದಿಯನ್ನು ತಾನೇತಾನಾಗಿ ದೊರೆಯುವ ಭಾಷೆಯಾಗಿ ಕೂಡ ಗೂಗಲ್ ಸೇರ್ಪಡೆ ಮಾಡುತ್ತಿದೆ. ಇದನ್ನು ಹಿಂಗ್ಲಿಷ್ (ಇಂಗ್ಲಿಷ್ ಮತ್ತು ಹಿಂದಿ) ಎಂದು ಕರೆಯಲಾಗುತ್ತದೆ. ಮುಂದಿನ ವರ್ಷದ ಆರಂಭದಲ್ಲಿ ಶುರುವಾಗಲಿದೆ. ಇದರ ಜತೆಗೆ ಧ್ವನಿಯ-ಮೂಲಕ-ಪಾವತಿಸುವ ಫೀಚರ್​ ಆರಂಭಿಸುವುದಕ್ಕೆ ಯೋಜನೆ ರೂಪಿಸಿದೆ. ಈ ಮೂಲಕ ಧ್ವನಿ ಆಜ್ಞೆಯ ಮೂಲಕ ಹಣವನ್ನು ಬ್ಯಾಂಕ್​ ಖಾತೆಗೆ ವರ್ಗಾವಣೆ ಆಗುತ್ತದೆ. ಈ ಫೀಚರ್ ಎಲ್ಲ ಬಳಕೆದಾರರಿಗೆ ಲಭ್ಯವಾಗಲಿದೆ. ಹೊಸ ಮೈ ಶಾಪ್ ಫೀಚರ್ ಅನ್ನು ವ್ಯಾಪಾರಿಗಳಿಗೆ ಒದಗಿಸಲಿದ್ದು, ಫೋಟೋಗ್ರಾಫ್​ಗಳು, ವರ್ಕಿಂಗ್ ಅವರ್ಸ್ ಮುಂತಾದವನ್ನು ಒಳಗೊಳ್ಳುತ್ತವೆ. ಈ ಫೀಚರ್​ನಿಂದ ಉದ್ಮಮದ ಬೆಳವಣಿಗೆಗೆ ಅನುಕೂಲ ಆಗುತ್ತದೆ.

ಏಳನೇ ಗೂಗಲ್ ಇಂಡಿಯಾ ಕಾರ್ಯಕ್ರಮದಲ್ಲಿ ಭಾರತ ಪ್ರಯಾಣದ ರೋಡ್​ ಮ್ಯಾಪ್​ ಬಗ್ಗೆ ತಿಳಿಸಿತು. ಭಾರತದಲ್ಲಿ ಡಿಜಿಟೈಸೇಷನ್​ಗೆ 1000 ಕೋಟಿ ಡಾಲರ್​ ಹೂಡಿಕೆ ಮಾಡುವುದಾಗಿ ಈಗಾಗಲೇ ಮಾತು ನೀಡಿದೆ. ಇದೀಗ ಕೊವಿಡ್​ ಲಸಿಕೆ ಹಾಕುವ ಮೊದಲಿಂದ ಕೊನೆವರೆಗೆ ಗೂಗಲ್ ಅಸಿಸ್ಟೆಂಟ್ ಬಳಸಬಹುದು. ನೋಂದಣಿಗೆ ಆಧಾರ್​ ಅಗತ್ಯವಿದೆ. ಗೂಗಲ್ ಅಸಿಸ್ಟೆಂಟ್ ಮೂಲಕ ಲಸಿಕೆ ಹಾಗೂ ಸಮಯ ಲಭ್ಯತೆ ಆರಿಸಿಕೊಳ್ಳಬಹುದು. ಗೂಗಲ್​ ಈಗಾಗಲೇ ಘೋಷಿಸಿರುವಂತೆ, ಬಳಕೆದಾರರು ತಮ್ಮ ಆದ್ಯತೆಯ ಭಾಷೆಯನ್ನು ಆರಿಸಿಕೊಳ್ಳಬಹುದು. ಸದ್ಯಕ್ಕೆ ಭಾರತದ 5 ಭಾಷೆಯಲ್ಲಿ ಲಭ್ಯ ಇವೆ.

ಭಾರತದ ಜನಸಂಖ್ಯೆಯ ಅರ್ಧದಷ್ಟು ಜನರು ಇನ್ನೂ ಆಫ್‌ಲೈನ್‌ನಲ್ಲಿದ್ದಾರೆ. ಆ ಜನರನ್ನು ತಲುಪಲು ಗೂಗಲ್ ಜಿಯೋ ಜೊತೆಗೆ ಪಾಲುದಾರಿಕೆ ಹೊಂದಿದೆ. ಮತ್ತು ಈ ಪ್ರಕ್ರಿಯೆಯಲ್ಲಿ ಜಿಯೋ ಫೋನ್​ ನೆಕ್ಸ್ಟ್ ತರಲು ಜಿಯೋ ಜೊತೆ ಪಾಲುದಾರಿಕೆ ಹೊಂದಿದೆ. ಜಿಯೋಫೋನ್ ನೆಕ್ಸ್ಟ್ ಪ್ರಗತಿ ಎಂಬ ಗೂಗಲ್ ಅಭಿವೃದ್ಧಿಪಡಿಸಿದ ಒಎಸ್‌ನೊಂದಿಗೆ ಬರುತ್ತದೆ. ಇದು ಮೊದಲ ಬಾರಿಗೆ ಇಂಟರ್​ನೆಟ್ ಬಳಕೆದಾರರಿಗೆ ಸಹಾಯ ಮಾಡಲು ಅನುವಾದ ಮತ್ತು ಗಟ್ಟಿಯಾಗಿ ಓದುವಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಜಿಯೋಫೋನ್ ನೆಕ್ಸ್ಟ್ ಸ್ಮಾರ್ಟ್‌ಫೋನ್ ಅನ್ನು ಅಭಿವೃದ್ಧಿಪಡಿಸಲು ಗೂಗಲ್ ಸ್ಥಳೀಯ ಫಿಲ್ಟರ್‌ಗಳಲ್ಲಿ ಕೆಲಸ ಮಾಡುತ್ತಿದೆ. ಹೆಚ್ಚು ಕೈಗೆಟುಕುವ ಮತ್ತು ಸ್ಥಳೀಯ ಸ್ಮಾರ್ಟ್‌ಫೋನ್‌ಗಳನ್ನು ತರಲು ಗೂಗಲ್ ಕೆಲಸ ಮಾಡುತ್ತಿದೆ.

ಗೂಗಲ್ ಇಂಡಿಯಾದ ಉಪಾಧ್ಯಕ್ಷ ಸಂಜಯ್ ಗುಪ್ತಾ, “ಬಿಲಿಯನ್ ಭಾರತೀಯರಿಗೆ ನಾವು ಭಾರತದ ಮೊದಲ ಕಂಪನಿಯಾಗಿದ್ದೇವೆ” ಎಂದು ಅವರು ಹೇಳಿದ್ದಾರೆ. ಕೊರೊನಾದ ನಂತರ ಭಾರತದಲ್ಲಿ ಡಿಜಿಟಲ್ ಆರ್ಥಿಕತೆಯು ಹೆಚ್ಚಾಗಿದೆ ಎಂದಿದ್ದಾರೆ. UPI ವಹಿವಾಟು ಮೌಲ್ಯದಲ್ಲಿ 3.5 ಶತಕೋಟಿ ಡಾಲರ್ ಮುಟ್ಟಿದೆ ಮತ್ತು ಜನರು ಸ್ಮಾರ್ಟ್‌ಫೋನ್‌ನಲ್ಲಿ ಶೇಕಡಾ 20ರಷ್ಟು ಹೆಚ್ಚು ಸಮಯವನ್ನು ಕಳೆಯುತ್ತಿದ್ದಾರೆ. ​

ಇದನ್ನೂ ಓದಿ: Google Pay: ಬ್ಯಾಂಕುಗಳಂತೆ ಗೂಗಲ್​ ಪೇನಲ್ಲೂ ಸ್ಥಿರ ಠೇವಣಿ: 1 ವರ್ಷದಲ್ಲಿ ಹೆಚ್ಚಿನ ಬಡ್ಡಿ