AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Job Demand: ಟೆಕಿಗಳಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್; ಭಾರೀ ಸಂಬಳ, ಬಿಎಂಡಬ್ಲ್ಯು ಬೈಕ್, ಆಪಲ್ ಗ್ಯಾಜೆಟ್ಸ್

ಟೆಕಿಗಳಿಗೆ ಉದ್ಯೋಗ ಮಾರುಕಟ್ಟೆಯಲ್ಲಿ ಭರ್ಜರಿ ಬೇಡಿಕೆ ಬಂದಿದ್ದು, ಉದ್ಯೋಗಿಗಳನ್ನು ಸೆಳೆಯಲು ಸಿಕ್ಕಾಪಟ್ಟೆ ವೇತನ ಹೆಚ್ಚಳ, ನಾನಾ ಸವಲತ್ತುಗಳನ್ನು ನೀಡಲಾಗುತ್ತಿದೆ.

Job Demand: ಟೆಕಿಗಳಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್; ಭಾರೀ ಸಂಬಳ, ಬಿಎಂಡಬ್ಲ್ಯು ಬೈಕ್, ಆಪಲ್ ಗ್ಯಾಜೆಟ್ಸ್
ಪ್ರಾತಿನಿಧಿಕ ಚಿತ್ರ
TV9 Web
| Updated By: Srinivas Mata|

Updated on:Aug 07, 2021 | 8:22 PM

Share

ನೇಮಕಾತಿ ಮಾಡಿಕೊಳ್ಳುವವರು ಈಗ ಹೇಳುತ್ತಿರುವುದನ್ನೇ ಕೇಳುವುದಾದರೆ, ರಾಶಿರಾಶಿ ಉದ್ಯೋಗಾವಕಾಶಗಳಿವೆ. ಈಗೇನಿದ್ದರೂ ಆಯ್ಕೆ ಅನ್ನೋದು ಅಭ್ಯರ್ಥಿಗಳ ಕೈಲೇ ಹೊರತು ಬಾಸ್​ಗಳ ಬಳಿ ಏನಿಲ್ಲ ಎನ್ನುತ್ತಿದ್ದಾರೆ ವಿವಿಧ ಕಂಪೆನಿಯ ಬಾಸ್​ಗಳು. ಟೆಕ್ನಾಲಜಿ ವೃತ್ತಿಪರರಿಗೆ (ಪ್ರೊಫೆಷನಲ್ಸ್​) ಈ ಹಿಂದೆಂದೂ ಕಂಡರಿಯದಂಥ ಬೇಡಿಕೆ ಈಗಿದೆ. ಈ ಕಾರಣಕ್ಕೆ ವೇತನ ಹೆಚ್ಚಳ ಆಗುತ್ತಿರುವುದು ಮಾತ್ರವಲ್ಲ, ಆಫರ್​ಗಳನ್ನು ತಿರಸ್ಕರಿಸುತ್ತಿರುವವರ ಪ್ರಮಾಣದಲ್ಲಿ ಹೆಚ್ಚಾಗಿದೆ- ಆಫರ್ ತಿರಸ್ಕರಿಸಿದ ಅಭ್ಯರ್ಥಿಗಳು ಒಂದು ಕಂಪೆನಿಯ ಆಫರ್​ ಪಕ್ಕಕ್ಕಿಟ್ಟು ಮತ್ತೊಂದನ್ನು ಆರಿಸಿಕೊಳ್ಳುತ್ತಿದ್ದಾರೆ. ಅದು ಕೂಡ ಕೆಲವು ರೋಲ್​ಗಳಿಗೆ ಶೇ 55ರಿಂದ ಶೇ 57ರ ತನಕ ಹೆಚ್ಚಳ ಪಡೆಯುತ್ತಿದ್ದಾರೆ. ಕೊವಿಡ್ ಮುಂಚಿನ ದಿನಗಳಲ್ಲಿ ಇದು ಸರಾಸರಿ ಶೇ 10ರಿಂದ 12ರಷ್ಟಿತ್ತು ಎನ್ನುತ್ತಾರೆ ನೇಮಕಾತಿ ಮಾಡಿಕೊಳ್ಳುವವರು.

ಫುಲ್ ಸ್ಟ್ಯಾಕ್ ಮತ್ತು ಫ್ರಂಟ್ ಎಂಡ್ ಎಂಜಿನಿಯರ್​ಗಳಲ್ಲಿ ಆಫರ್​ಗಳನ್ನು ಕೈ ಬಿಡುತ್ತಿರುವ ಪ್ರಮಾಣ ಸಿಕ್ಕಾಪಟ್ಟೆ ಹೆಚ್ಚಿದೆ. ಕಳೆದ ವರ್ಷ ಇದು ಗರಿಷ್ಠ ಶೇ 27ರಷ್ಟಿತ್ತು ಎಂಬುದನ್ನು ಸಿಬ್ಬಂದಿ ನೇಮಕಾತಿಯಲ್ಲಿ ತಜ್ಞವಾದ Xpheno ದತ್ತಾಂಶದಿಂದ ತಿಳಿದುಬಂದಿದೆ. ಇನ್ನೊಂದು ಕಂಪೆನಿಯಲ್ಲಿ ಕೆಲಸ ಸಿಕ್ಕಂಥ ಅಭ್ಯರ್ಥಿಯನ್ನು ತಾವೇ ಉಳಿಸಿಕೊಳ್ಳಬೇಕು ಎಂಬ ಕಾರಣಕ್ಕೆ ಶೇ 60ರಿಂದ 120ರಷ್ಟು ವೇತನ ಹೆಚ್ಚಳ ಮಾಡಲಾಗುತ್ತಿದೆ. ಆದರೆ ಅದು ಬೇಡಿಕೆ ಇರುವ ಕೌಶಲ ಇರುವವರಿಗೆ ಆಯಿತು. ಕಳೆದ ವರ್ಷ ಈ ರೀತಿ ಆಫರ್​ ಮಾಡುತ್ತಿದ್ದದ್ದು ಗರಿಷ್ಠ ಶೇ 30ರಿಂದ ಶೇ 35 ಮಾತ್ರ.

ಡಿಜಿಟೈಸೇಷನ್​ಗೆ ಭಾರೀ ಬೇಡಿಕೆ ಕೊವಿಡ್​ನಿಂದ ಡಿಜಿಟೈಸೇಷನ್​ಗೆ ಭಾರೀ ಬೇಡಿಕೆ ಬಂದಿದೆ. ಇದರಿಂದಾಗಿ ತಂತ್ರಜ್ಞಾನ ಕ್ಷೇತ್ರದ ಪ್ರತಿಭಾವಂತರಿಗೆ ಬೇಡಿಕೆ ಮತ್ತೂ ಹೆಚ್ಚಾಗಿದೆ. ಈಗಂತೂ ವರ್ಕ್ ಫ್ರಮ್ ಹೋಮ್ ಮಾದರಿ ಇರುವುದರಿಂದ ಭಾರತದ ಟೆಕಿಗಳು ಅಮೆರಿಕ ಮತ್ತು ಯುರೋಪ್​ನ ಕಂಪೆನಿಗಳ ಆಫರ್​​ ಪಡೆಯುತ್ತಿದ್ದಾರೆ. ಆ ಕಂಪೆನಿಗಳು ಅಲ್ಲಿಯ ಜಾಬ್​ ಮಾರ್ಕೆಟ್​ನಲ್ಲಿ ಎಷ್ಟಿದೆಯೋ ಅಷ್ಟನ್ನೇ ಪಾವತಿಸುವುದಕ್ಕೆ ಸಿದ್ಧವಾಗಿವೆ. ಈಚೆಗೆ ಬಿಲಿಯನ್​ ಡಾಲರ್​ಗಟ್ಟಲೆ ಬಂಡವಾಳ ಸಂಗ್ರಹಿಸಿದ ಸ್ಟಾರ್ಟ್​ಅಪ್​ಗಳು ಪ್ರತಿಭಾವಂತರನ್ನು ತಮ್ಮ ಕಡೆ ಸೆಳೆಯುವುದಕ್ಕೆ ಅದ್ಭುತವಾದ ವೇತನ ಹೆಚ್ಚಳ, ಜತೆಗೆ ಬಿಎಂಡಬ್ಲ್ಯು ಬೈಕ್​ಗಳು ಹಾಗೂ ಆಪಲ್ ಗ್ಯಾಜೆಟ್​ಗಳನ್ನು ನೀಡುತ್ತಿವೆ.

ಟೆಕಿಗಳು, ಅದರಲ್ಲೂ ಫುಲ್ ಸ್ಟ್ಯಾಕ್ಎಂಜಿನಿಯರ್​ಗಳು, ಡೇಟಾ ಎಂಜಿನಿಯರ್​ಗಳು, ಡೇಟಾ ಅನಲಿಸ್ಟ್​ಗಳು, ಫ್ರಂಡ್ ಎಂಡ್ ಎಂಜಿನಿಯರ್​ಗಳು, ಡೇಟಾ ಸೈಂಟಿಸ್ಟ್​ಗಳು, ಬ್ಯಾಕ್​ಎಂಡ್ ಎಂಜಿನಿಯರ್​ಗಳಿಗೆ ಆಯ್ಕೆಗೆ ಹಲವು ಅವಕಾಶಗಳಿವೆ. ಅಂದಹಾಗೆ ಈ ಬೇಡಿಕೆ ಐಟಿ ಹಾಗೂ ಟೆಕ್ನಾಲಜಿಗೆ ಮಾತ್ರ ಸೀಮಿತ ಆಗಿಲ್ಲ. ಜತೆಗೆ ಬ್ಯಾಂಕ್ಸ್, ಪ್ರಾಡಕ್ಟ್ ಕಂಪೆನಿಗಳು ಮತ್ತು ಸ್ಟಾರ್ಟ್ ಅಪ್ ಕಂಪೆನಿಗಳು ಪ್ರತಿಭೆಗಳ ಹುಡುಕಾಟದಲ್ಲಿ ತೊಡಗಿವೆ. ಇನ್ನು ಉದ್ಯೋಗಿಗಳು ಕೂಡ ತಮ್ಮ ಅತ್ಯುತ್ತಮ ಆಫರ್​ಗಳ ಆಯ್ಕೆಗಾಗಿ ಕಾಯುತ್ತಿದ್ದಾರೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು.

ಇನ್ನೂ ಮುಂದುವರಿದು, ಬೇಡಿಕೆ ಹಾಗೂ ಪೂರೈಕೆ ಮಧ್ಯೆ ದೊಡ್ಡ ವ್ಯತ್ಯಾಸ ಇದೆ ಎನ್ನುವರ ತಜ್ಞರು, ಭಾರತದಲ್ಲಿ ದೊಡ್ಡ ಗುಂಪಿನ ಎಂಜಿನಿಯರ್​ಗಳ ಬೆನ್ನು ಬೀಳಲಾಗಿದೆ. ಟೆಕ್ ಪ್ರತಿಭೆಗಳನ್ನು ನೇಮಕ ಮಾಡಿಕೊಳ್ಳುವುದು ಹೇಗೆ? ಅವರನ್ನು ಉಳಿಸಿಕೊಳ್ಳುವುದು ಹೇಗೆ? ಇಂಥ ಪ್ರಶ್ನೆಗಳನ್ನೇ ಕೇಳುತ್ತಿದ್ದಾರೆ ಎನ್ನುತ್ತಾರೆ.

ಇದನ್ನೂ ಓದಿ: Job Alert: ಪದವೀಧರರಿಗೆ ಗುಡ್ ನ್ಯೂಸ್; ಇನ್​ಫೋಸಿಸ್​ ಕಂಪನಿಯಲ್ಲಿದೆ 35,000 ಉದ್ಯೋಗಾವಕಾಶ

(More Demand For Techies Companies Lure Them With Huge Hike BMW Bikes And Apple Gadgets)

Published On - 8:20 pm, Sat, 7 August 21

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ