AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

70 ಗಂಟೆ ಕೆಲಸ ಮಾಡುವುದಕ್ಕಿಂತ, ಎಷ್ಟು ಮಾನಸಿಕವಾಗಿ ಸಿದ್ಧರಾಗಿದ್ದೀರಾ ಎನ್ನುವುದು ಮುಖ್ಯ: ರವಿಶಂಕರ್ ಗುರೂಜಿ

70 ಗಂಟೆಗಳ ಕೆಲಸ ಮಾಡಬೇಕು ಎನ್ನುವ ನಾರಾಯಣ ಮೂರ್ತಿ ಅವರ ಹೇಳಿಕೆಗೆ, ರವಿಶಂಕರ್ ಗುರೂಜಿ ತಮ್ಮದೇ ರೀತಿಯಲ್ಲಿ ತಮ್ಮದೇ ಬೇರೆ ದೃಷ್ಟಿಕೋನ ನೀಡಿದ್ದಾರೆ. ಅವರು ಮಾನಸಿಕ ಸ್ಪಷ್ಟತೆ, ಶಕ್ತಿ ಮತ್ತು ಸಮತೋಲನದಿಂದ ಬೆಂಬಲಿತವಾಗದ ಹೊರತು, ಹೆಚ್ಚು ಸಮಯ ಕೆಲಸ ಮಾಡುವುದರಿಂದ ಉತ್ತಮ ಫಲಿತಾಂಶಗಳು ಖಾತರಿಪಡಿಸುವುದಿಲ್ಲ ಎಂದು ಹೇಳಿದರು. ಕೆಲಸದಲ್ಲಿ ವಿಶ್ರಾಂತಿ ಮತ್ತು ಮಾನಸಿಕ ಉಪಸ್ಥಿತಿ ಇರಬೇಕು ಹಾಗೂ ಅದಕ್ಕೆ ಹೆಚ್ಚು ಮಹತ್ವ ನೀಡಬೇಕು ಎಂದು ಹೇಳಿದ್ದಾರೆ.

70 ಗಂಟೆ ಕೆಲಸ ಮಾಡುವುದಕ್ಕಿಂತ, ಎಷ್ಟು ಮಾನಸಿಕವಾಗಿ ಸಿದ್ಧರಾಗಿದ್ದೀರಾ ಎನ್ನುವುದು ಮುಖ್ಯ: ರವಿಶಂಕರ್ ಗುರೂಜಿ
ರವಿಶಂಕರ್ ಗುರೂಜಿ
ಅಕ್ಷಯ್​ ಪಲ್ಲಮಜಲು​​
|

Updated on: May 24, 2025 | 11:49 AM

Share

ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ (Narayana Murthy) ಅವರ ವಾರದಲ್ಲಿ 70 ಗಂಟೆ ಕೆಲಸ ಮಾಡಬೇಕು ಎಂಬ ಹೇಳಿಕೆ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ನಾರಾಯಣ ಮೂರ್ತಿ ಹೇಳಿರುವ ಈ ಸಿದ್ಧಾಂತ ಬಗ್ಗೆ ಅನೇಕ ಪರ-ವಿರೋಧ ವ್ಯಕ್ತಪಡಿಸಿದ್ದರು. ಆದರೆ ಇದೀಗ ಆರ್ಟ್ ಆಫ್ ಲಿವಿಂಗ್ ಪ್ರತಿಷ್ಠಾನದ ಸಂಸ್ಥಾಪಕರು ರವಿಶಂಕರ್ ಗುರೂಜಿ (Ravi Shankar) ಅವರು ಕೂಡ ಈ ನೀತಿಯನ್ನು ವಿರೋಧಿಸಿದ್ದಾರೆ. ಮಾನಸಿಕ ಸ್ಪಷ್ಟತೆ, ಶಕ್ತಿ ಮತ್ತು ಸಮತೋಲನದಿಂದ ಬೆಂಬಲಿತವಾಗದ ಹೊರತು, ಹೆಚ್ಚು ಸಮಯ ಕೆಲಸ ಮಾಡುವುದರಿಂದ ಉತ್ತಮ ಫಲಿತಾಂಶಗಳು ಖಾತರಿಪಡಿಸುವುದಿಲ್ಲ ಎಂದು ಹೇಳಿದರು. ಕೆಲಸದಲ್ಲಿ ವಿಶ್ರಾಂತಿ ಮತ್ತು ಮಾನಸಿಕ ಉಪಸ್ಥಿತಿ ಇರಬೇಕು ಹಾಗೂ ಅದಕ್ಕೆ ಹೆಚ್ಚು ಮಹತ್ವ ನೀಡಬೇಕು ಎಂದು ಹೇಳಿದ್ದಾರೆ. ಪ್ರಮಾಣವಲ್ಲದ ಹಾಗೂ ಗುಣಮಟ್ಟ ನಮ್ಮ ವೃತ್ತಿಪರ ಕೊಡುಗೆ ನೀಡುತ್ತದೆ ಎಂದು ಇಂಡಿಯಾ ಟುಡೇ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ರವಿಶಂಕರ್ ಗುರೂಜಿ 70 ಗಂಟೆ ಕೆಲಸದ ಬಗ್ಗೆ ಮಾತನಾಡುವಾಗ ಉದಾಹರಣೆಯನ್ನು ಕೂಡ ನೀಡಿದ್ದಾರೆ. ನೀವು ನಿಮ್ಮ ಕಾರನ್ನು ಪೆಟ್ರೋಲ್, ಡೀಸೆಲ್ ಇಲ್ಲದೆ ಓಡಿಸಲು ಸಾಧ್ಯವೇ? ಇಲ್ಲ ಸಾಧ್ಯವೇ ಇಲ್ಲ, ಅದು ಹಾಳಾಗುವುದು ಖಂಡಿತ, ನೀವು ಎಷ್ಟು ಗಂಟೆಗಳನ್ನು ಕೆಲಸ ಮಾಡುತ್ತೀರಿ ಎಂಬುದು ಮುಖ್ಯವಲ್ಲ, ಆ ಸಮಯದಲ್ಲಿ ನೀವು ಎಷ್ಟು ಮಾನಸಿಕವಾಗಿ ಸಿದ್ಧರಾಗಿದ್ದೀರಾ ಎನ್ನುವುದು ಮುಖ್ಯ. ನವೆಂಬರ್ 2024 ರಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ದೇಶವು ಆರ್ಥಿಕವಾಗಿ ಬೆಳೆಯಲು ಯುವ ಭಾರತೀಯರು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂಬ ಹೇಳಿಕೆಯನ್ನು ನೀಡಿದ್ದ ನಾರಾಯಣ ಮೂರ್ತಿ ಅವರ ಹೇಳಿಕೆಯನ್ನು ಉಲ್ಲೇಖಿಸಿ ಹೇಳಲಾಗಿದೆ. ಕೆಲಸ-ಜೀವನದ ಸಮತೋಲನ ಬಹಳ ಮುಖ್ಯ ಎಂದು ಹೇಳಿದ್ದಾರೆ.

ಇನ್ನು ಈ ಹಿಂದೆ ನಾರಾಯಣ ಮೂರ್ತಿ ತಾನು ಹೇಳಿಕೆ ಬದ್ಧನಾಗಿದ್ದೇನೆ. ನಾನು ನನ್ನ ದೃಷ್ಟಿಕೋನವನ್ನು ಬದಲಾಯಿಸಿಲ್ಲ, ಇದು ನನ್ನ ಅಂತ್ಯವರೆಗೆ ಇರುತ್ತದೆ ಎಂದು ಹೇಳಿದರು. ಆದರೆ ರವಿಶಂಕರ್ ಗುರೂಜಿ ಬೇರೆ ದೃಷ್ಟಿಕೋನದಲ್ಲಿ ಹೇಳಿದ್ದಾರೆ. ಹಲವು ಜನರು ತಮ್ಮ ಕಚೇರಿಗಳಲ್ಲಿ ಉಪಸ್ಥಿತರಿರುತ್ತಾರೆ, ಆದರೆ ಅವರ ಮನಸ್ಸು ಬೇರೆಡೆ ಇರುತ್ತದೆ. ಒಂದು ಪತ್ರ ಬರೆಯಲು ಆತನಿಗೆ 2-3 ಗಂಟೆ ಬೇಕು. ಅದರಲ್ಲೂ ಆತನ ಗಮನ ಅದರ ಮೇಲೆ ಇರುವುದಿಲ್ಲ. ಬೇರೆ ಬೇರೆ ಯೋಚನೆಗಳು ಬರುತ್ತದೆ. ಇದೇ ರೀತಿ ಕೆಲಸದಲ್ಲೂ ಗುಣಮಟ್ಟದ ಸಮಯ ಮತ್ತು ಗಮನ ಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ
Image
ಭಾರತದಲ್ಲಿ ಪಾಕಿಸ್ತಾನ ವಿಮಾನದ ಮೇಲಿನ ನಿಷೇಧ ಜೂ. 23ರವರೆಗೆ ವಿಸ್ತರಣೆ
Image
ಪಾಕಿಸ್ತಾನವನ್ನು FATFನ ಗ್ರೇ ಪಟ್ಟಿಗೆ ಸೇರಿಸಲು ಭಾರತ ಪ್ಲಾನ್
Image
ಭಾರತವನ್ನು ನೇರವಾಗಿ ಎದುರಿಸಲ್ಲ ಚೀನಾ; ಕಾರಣಗಳೇನು?
Image
ಪಾಕಿಸ್ತಾನದ ದೊಡ್ಡ ನಗರಗಳಲ್ಲಿ ಉಗ್ರರು ಮುಕ್ತವಾಗಿ ಸುತ್ತಾಡುತ್ತಿದ್ದಾರೆ

ಇದನ್ನೂ ಓದಿ: ವಾರದಲ್ಲಿ 70 ಗಂಟೆ ಕೆಲಸ ಹೇಳಿಕೆಗೆ ಬದ್ಧ, 40 ವರ್ಷ ನಾನೂ ಮಾಡಿದ್ದೇನೆ: ನಾರಾಯಣ ಮೂರ್ತಿ

ರವಿಶಂಕರ್ ಗುರೂಜಿ ಮತ್ತೊಂದು ಉದಾಹರಣೆಯನ್ನು ನೀಡಿದ್ದಾರೆ. ಒಂದು ಕಾರು ಚಲನೆ ಮಾಡುವಾಗ ಪೆಟ್ರೋಲ್ ಅಥವಾ ಡೀಸೆಲ್ ಖಾಲಿಯಾಗುತ್ತ ಬರುತ್ತಿದೆ ಎಂದರೆ ಅದನ್ನು ನಿಲ್ಲಿಸಿ ಪೆಟ್ರೋಲ್ ಅಥವಾ ಡೀಸೆಲ್ ತುಂಬುತ್ತೇವೆ. ನೀವು ಕಾರನ್ನು ನಿಲ್ಲಿಸಿ, ಪೆಟ್ರೋಲ್ ತುಂಬಿಸಿ, ನಂತರ ಮತ್ತೆ ಸ್ಟಾರ್ಟ್ ಮಾಡಬೇಕು. ನನಗೆ ಇಂಧನ ತುಂಬಿಸಲು ಸಮಯವಿಲ್ಲ ಹೋದ್ರೆ, ರಸ್ತೆಯ ಮಧ್ಯದಲ್ಲಿ ಸಿಲುಕಿಕೊಳ್ಳುತ್ತೀರಿ. ಮನುಷ್ಯನು ಕೂಡ ಹಾಗೆ ಚಾರ್ಜ್ ಮಾಡಲು ಸಮಯ ತೆಗೆದುಕೊಳ್ಳಬೇಕು. ವಿಶ್ರಾಂತಿ ತೆಗೆದುಕೊಳ್ಳುವುದರಿಂದ ಒಬ್ಬ ವ್ಯಕ್ತಿ ಹೆಚ್ಚು ಉತ್ಪಾದಕನಾಗಬಹುದು, ನಿಮ್ಮಲ್ಲಿ ಉತ್ತಮ ಶಕ್ತಿ ಇದ್ದರೆ ಮತ್ತು ನೀವು ಕ್ರಿಯಾಶೀಲರಾಗಿದ್ದರೆ, ಯಾರಾದರೂ 7–8 ಗಂಟೆಗಳಲ್ಲಿ ಮಾಡುವ ಯಾವುದೇ ಕೆಲಸವನ್ನು ನೀವು 3–4 ಗಂಟೆಗಳಲ್ಲಿ ಮಾಡಬಹುದು. ನೀವು ಏನು ಸಾಧಿಸುತ್ತೀರಿ ಎಂಬುದು ಮುಖ್ಯ, ನೀವು ಎಷ್ಟು ಹೊತ್ತು ಮೇಜಿನ ಬಳಿ ಕುಳಿತುಕೊಳ್ಳುತ್ತೀರಿ ಎಂಬುದಲ್ಲ ಎಂದು ಹೇಳಿದರು.

ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸಚಿವೆ ಪದೇಪದೆ ಗೃಹಲಕ್ಷ್ಮಿ ಯೋಜನೆ ಹಣದ ಬಗ್ಗೆ ಸಮಜಾಯಿಷಿ ನೀಡುವುದ್ಯಾಕೆ?
ಸಚಿವೆ ಪದೇಪದೆ ಗೃಹಲಕ್ಷ್ಮಿ ಯೋಜನೆ ಹಣದ ಬಗ್ಗೆ ಸಮಜಾಯಿಷಿ ನೀಡುವುದ್ಯಾಕೆ?
ಪತ್ನಿಯ ಹುಡುಕುತ್ತಾ ಕಾರಿನಲ್ಲಿ ರೈಲ್ವೆ ಪ್ಲಾಟ್​ಫಾರ್ಮ್​ಗೆ ಬಂದ ಪತಿ
ಪತ್ನಿಯ ಹುಡುಕುತ್ತಾ ಕಾರಿನಲ್ಲಿ ರೈಲ್ವೆ ಪ್ಲಾಟ್​ಫಾರ್ಮ್​ಗೆ ಬಂದ ಪತಿ
ಶಾಸಕರಿಗೆ ಸ್ಥಾನಮಾನ ನೀಡುವ ಬಗ್ಗೆ ಸುರ್ಜೇವಾಲಾ ಜೊತೆ ಚರ್ಚೆಯಾಗಿದೆ: ಡಿಸಿಎಂ
ಶಾಸಕರಿಗೆ ಸ್ಥಾನಮಾನ ನೀಡುವ ಬಗ್ಗೆ ಸುರ್ಜೇವಾಲಾ ಜೊತೆ ಚರ್ಚೆಯಾಗಿದೆ: ಡಿಸಿಎಂ
ಮಗಳೊಟ್ಟಿಗೆ ಕಾಪು ಮಾರಿಗುಡಿ ದೇವಾಲಯಕ್ಕೆ ಅಶ್ವಿನಿ ಪುನೀತ್​​ ರಾಜ್​​ಕುಮಾರ್
ಮಗಳೊಟ್ಟಿಗೆ ಕಾಪು ಮಾರಿಗುಡಿ ದೇವಾಲಯಕ್ಕೆ ಅಶ್ವಿನಿ ಪುನೀತ್​​ ರಾಜ್​​ಕುಮಾರ್
ಸಿಎಂ ಜೊತೆಗಿದ್ದ ಶಾಸಕರೆಲ್ಲ ಸ್ವಂತ ಖರ್ಚಿನಲ್ಲಿ ದೆಹಲಿ ಹೋಗಿದ್ದರೇ?
ಸಿಎಂ ಜೊತೆಗಿದ್ದ ಶಾಸಕರೆಲ್ಲ ಸ್ವಂತ ಖರ್ಚಿನಲ್ಲಿ ದೆಹಲಿ ಹೋಗಿದ್ದರೇ?
ಕೆಲದಿನಗಳ ಮಟ್ಟಿಗೆ ಮುಂದೂಡಲ್ಪಟ್ಟ ಮುಖ್ಯಮಂತ್ರಿ ಗಾದಿಯ ಸಂಘರ್ಷ
ಕೆಲದಿನಗಳ ಮಟ್ಟಿಗೆ ಮುಂದೂಡಲ್ಪಟ್ಟ ಮುಖ್ಯಮಂತ್ರಿ ಗಾದಿಯ ಸಂಘರ್ಷ
ಯಶ್ ವಿಚಾರದಲ್ಲಿ ಅಷ್ಟು ಕಟುತ್ವ ಏಕೆ? ಉತ್ತರಿಸಿದ ತಾಯಿ ಪುಷ್ಪಾ
ಯಶ್ ವಿಚಾರದಲ್ಲಿ ಅಷ್ಟು ಕಟುತ್ವ ಏಕೆ? ಉತ್ತರಿಸಿದ ತಾಯಿ ಪುಷ್ಪಾ
ಧಾರ್ಮಿಕ ಸ್ಥಳಕ್ಕೆ ಬಂದಾಗ ರಾಜಕೀಯ ಮಾತಾಡಲಾರೆ: ಪರಮೇಶ್ವರ್
ಧಾರ್ಮಿಕ ಸ್ಥಳಕ್ಕೆ ಬಂದಾಗ ರಾಜಕೀಯ ಮಾತಾಡಲಾರೆ: ಪರಮೇಶ್ವರ್
ದಿನಸಿ ಸಾಲ ವಾಪಾಸ್ ಕೇಳಿದ್ದಕ್ಕೆ ಅಂಗಡಿಗೇ ಬೆಂಕಿ ಹಚ್ಚಲು ಮುಂದಾದ ವ್ಯಕ್ತಿ!
ದಿನಸಿ ಸಾಲ ವಾಪಾಸ್ ಕೇಳಿದ್ದಕ್ಕೆ ಅಂಗಡಿಗೇ ಬೆಂಕಿ ಹಚ್ಚಲು ಮುಂದಾದ ವ್ಯಕ್ತಿ!
ಸಿದ್ದರಾಮಯ್ಯ ಮತ್ತು ಶಿವಕುಮಾರ್ ನಡುವೆ ಸಂಘರ್ಷ ಶುರುವಾಗಿದೆ: ಅಶೋಕ
ಸಿದ್ದರಾಮಯ್ಯ ಮತ್ತು ಶಿವಕುಮಾರ್ ನಡುವೆ ಸಂಘರ್ಷ ಶುರುವಾಗಿದೆ: ಅಶೋಕ