ಜುಲೈ 1ಕ್ಕೆ ಚಾರ್ಟರ್ಡ್ ಅಕೌಂಟೆಂಟ್ ದಿನ; ಇದರ ಇತಿಹಾಸ, ಮಹತ್ವದ ಇತ್ಯಾದಿ ವಿಶೇಷತೆಗಳ ವಿವರ

|

Updated on: Jun 30, 2024 | 6:59 PM

National Chartered Accountant Day on July 1st: ರಾಷ್ಟ್ರೀಯ ಲೆಕ್ಕಿಗರ ದಿನವಾಗಿ ಜುಲೈ 1 ಅನ್ನು ಆಚರಿಸಲಾಗುತ್ತಿದೆ. ಸಿಎ ಅನ್ನು ನಿರ್ವಹಿಸುವ ಐಸಿಎಐ ಸಂಸ್ಥಾಪನೆಯಾದ ದಿನ ಇದು. ಬ್ರಿಟಿಷರ ಸರ್ಕಾರದ ಅವಧಿಯಲ್ಲಿ ಅಕೌಂಟಿಂಗ್​ನ ಡಿಪ್ಲೊಮಾ ಕೋರ್ಸ್ ನಡೆಸಲಾಗುತ್ತಿತ್ತು. ಸ್ವಾತಂತ್ರ್ಯಾನಂತರ ತಜ್ಞರ ಸಮಿತಿ ಶಿಫಾರಸಿನ ಮೇಲೆ ಇನ್ಸ್​ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಸಂಸ್ಥೆಯನ್ನು ಸ್ಥಾಪಿಸಲಾಯಿತು.

ಜುಲೈ 1ಕ್ಕೆ ಚಾರ್ಟರ್ಡ್ ಅಕೌಂಟೆಂಟ್ ದಿನ; ಇದರ ಇತಿಹಾಸ, ಮಹತ್ವದ ಇತ್ಯಾದಿ ವಿಶೇಷತೆಗಳ ವಿವರ
ಚಾರ್ಟರ್ಡ್ ಅಕೌಂಟೆಂಟ್
Follow us on

ಜುಲೈ 1ಕ್ಕೆ ನ್ಯಾಷನಲ್ ಚಾರ್ಟರ್ಡ್ ಅಕೌಂಟೆಂಟ್ಸ್ ದಿನವನ್ನಾಗಿ (National Chartered Accountant Day) ಪ್ರತೀ ವರ್ಷ ಆಚರಿಸಲಾಗುತ್ತದೆ. ಹಣಕಾಸು ಮತ್ತು ಉದ್ಯಮ ವಲಯದಲ್ಲಿ ಸಿಎ ಅಥವಾ ಚಾರ್ಟರ್ಡ್ ಅಕೌಂಟೆಂಟ್ಸ್ ಅಥವಾ ಲೆಕ್ಕ ಪರಿಶೋಧಕರ ಪಾತ್ರ ಬಹಳ ಮಹತ್ತರವಾದುದು. ಎಲ್ಲಾ ಉದ್ದಿಮೆಗಳ ಆಡಿಟಿಂಗ್ ಅನ್ನು ನೊಂದಾಯಿತು ಚಾರ್ಟರ್ಡ್ ಅಕೌಂಟ್​ಗಳು ಮಾತ್ರವೇ ಮಾಡಬೇಕು. ಆ ಮಟ್ಟಿಗೆ ಸಿಎಗಳು ಇವತ್ತಿನ ದಿನಕ್ಕೆ ಮಹತ್ವ ಹೊಂದಿದ್ದಾರೆ. ಮಹತ್ವದ ಸಂಗತಿ ಎಂದರೆ ಭಾರತದಲ್ಲಿ ಚಾರ್ಟರ್ಡ್ ಅಕೌಂಟೆಂಟ್​ಗಳ ಸಂಖ್ಯೆ ಇರುವುದೇ ಕೇವಲ 4 ಲಕ್ಷ ಮಾತ್ರ. ಹೀಗಾಗಿ, ತಜ್ಞ ಸಿಎಗಳಿಗೆ ಬಹಳ ಬೇಡಿಕೆ ಇದೆ.

ಜುಲೈ 1ರಂದು ಚಾರ್ಟರ್ಡ್ ಅಕೌಂಟೆಂಟ್ ಡೇ ಆಚರಿಸುವುದೇಕೆ?

ಸಿಎ ಕೋರ್ಸ್ ಮತ್ತು ಪರೀಕ್ಷೆ ನಡೆಸುವ, ಹಾಗೂ ಸಿಎಗಳ ನೊಂದಣಿ ಇರುವ ಐಸಿಎಐ ಸಂಸ್ಥೆಯ ಸಂಸ್ಥಾಪನೆಯಾಗಿ 75 ವರ್ಷ ಆಗಿದೆ. 1949ರ ಜುಲೈ 1ಕ್ಕೆ ಇನ್ಸ್​ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಸ್ಥಾಪನೆಯಾಗಿದ್ದು. ಈ ಜುಲೈ 1ಕ್ಕೆ 76ನೇ ಸಂಸ್ಥಾಪನಾ ದಿನವಾಗಿದೆ. ಈ ದಿನವನ್ನು ಪ್ರತೀ ವರ್ಷ ಚಾರ್ಟರ್ಡ್ ಅಕೌಂಟೆಂಟ್ ದಿನವಾಗಿ ಆಚರಿಸಲಾಗುತ್ತದೆ.

ಇದನ್ನೂ ಓದಿ: ಸುಕನ್ಯಾ ಸಮೃದ್ಧಿ, ಪಿಪಿಎಫ್ ಇತ್ಯಾದಿ ಸ್ಮಾಲ್ ಸೇವಿಂಗ್ ಸ್ಕೀಮ್ ದರಗಳ ಮುಂದುವರಿಕೆ; ಇಲ್ಲಿದೆ ಈ ಯೋಜನೆಗಳ ದರಪಟ್ಟಿ

ಐಸಿಎಐ ಸ್ಥಾಪನೆಯ ಇತಿಹಾಸ ಇದು…

ಭಾರತದ ಸ್ವಾತಂತ್ರ್ಯಕ್ಕೆ ಮುನ್ನ ಆಡಳಿತ ನಡೆಸುತ್ತಿದ್ದ ಬ್ರಿಟಿಷ್ ಸರ್ಕಾರದ ವತಿಯಿಂದ ಭಾರತದ ಕಂಪನಿಗಳ ಲೆಕ್ಕಪತ್ರ ನಡೆಸಲಾಗುತ್ತಿತ್ತು. ಆಡಿಟಿಂಗ್ ಕಾರ್ಯಗಳಿಗೆ ಬೇಕಾಗುವ ಕೆಲಸಗಾರರನ್ನು ತಯಾರಿಸು ಅಕೌಂಟಿಂಗ್​ನಲ್ಲಿ ಆಗ ಡಿಪ್ಲೊಮಾ ಕೋರ್ಸ್ ನಡೆಸಲಾಗುತ್ತಿತ್ತು. 1930ರಲ್ಲಿ ಭಾರತ ಸರ್ಕಾರ ಅಕೌಂಟೆಂಟ್​ಗಳ ನೊಂದಣಿ ಇಡಲು ಆರಂಭಿಸಿತು. ಇದರಲ್ಲಿ ನೊಂದಾಯಿತರಾದವರು ಮಾತ್ರವೇ ರಿಜಿಸ್ಟರ್ಡ್ ಅಕೌಂಟೆಂಟ್ ಎನಿಸುತ್ತಿದ್ದರು.

ಸ್ವಾತಂತ್ರ್ಯಾನಂತರ ಭಾರತ ಸರ್ಕಾರ ಆಡಿಟಿಂಗ್​ನಲ್ಲಿ ಸೂಕ್ತ ನಿಯಮಗಳನ್ನು ರೂಪಿಸುವ ಸಲುವಾಗಿ ತಜ್ಞರ ಸಮಿತಿ ರಚಿಸಿತು. ಪ್ರತ್ಯೇಕವಾದ ಸ್ವಾಯತ್ತವಾದ ಅಕೌಂಟಿಂಗ್ ಸಂಸ್ಥೆಯನ್ನು ರಚಿಸುವುದು ಸೂಕ್ತ ಎಂದು ಈ ಸಮಿತಿ ಶಿಫಾರಸು ಮಾಡಿತು. ಅದರಂತೆ 1949ರಲ್ಲಿ ಭಾರತ ಸರ್ಕಾರ ಚಾರ್ಟರ್ಡ್ ಅಕೌಂಟೆಂಟ್ಸ್ ಕಾಯ್ದೆ ಜಾರಿಗೆ ತಂದಿತು. ಅಂತಿಮವಾಗಿ 1949ರ ಜುಲೈ 1ರಂದು ಇನ್ಸ್​ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಸಂಸ್ಥೆಯನ್ನು ಸ್ಥಾಪನೆ ಮಾಡಲಾಯಿತು.

ಇದನ್ನೂ ಓದಿ: ನಿಮಗೆ ಮತ್ತು ಕುಟುಂಬಕ್ಕೆ ಯಾವ ರೀತಿಯ ಇನ್ಷೂರೆನ್ಸ್ ಅಗತ್ಯ? ಹೇಗೆ ಆಯ್ಕೆ ಮಾಡುವುದು? ಇಲ್ಲಿದೆ ಸಿಂಪಲ್ ಟಿಪ್ಸ್

ಸಿಎಗಳ ಸಂಖ್ಯೆ ಯಾಕೆ ಕಡಿಮೆ?

ಭಾರತದಲ್ಲಿ ಸದ್ಯ ಇರುವ ಅತ್ಯಂತ ಕಠಿಣ ಕೋರ್ಸ್​ಗಳಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಕೋರ್ಸ್ ಒಂದು. ಇದರ ಪಾಸಿಂಗ್ ಪರ್ಸಂಟೇಜ್ ಸಾಮಾನ್ಯವಾಗಿ ಶೇ. 8ರಿಂದ 20 ಮಾತ್ರವೇ. ಆ ಮಟ್ಟಿಗೆ ಇದರ ಪರೀಕ್ಷಾ ಗುಣಮಟ್ಟ ಉಚ್ಚತಮವಾಗಿರುತ್ತದೆ.

ಭಾರತದಲ್ಲಿ ಐಸಿಎಐನಿಂದ ನಡೆಸಲಾಗುವ ಸಿಎ ಪರೀಕ್ಷೆ ತೇರ್ಗಡೆಯಾದವರು ಮಾತ್ರವೇ ಕ್ವಾಲಿಫೈಡ್ ಸಿಎ ಎನಿಸುತ್ತಾರೆ. ಇವರು ಮಾತ್ರವೇ ಕಂಪನಿಗಳ ಆಡಿಟಿಂಗ್ ಮಾಡಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:56 pm, Sun, 30 June 24