ಯಾವುದನ್ನೂ ಕೂಡ ಉಚಿತವಾಗಿ ಕೊಡಬಾರದು; ಸಬ್ಸಿಡಿ ಪಡೆಯುವವರಿಗೂ ಹೊಣೆಗಾರಿಕೆ ಬೇಕು: ನಾರಾಯಣಮೂರ್ತಿ

NR Narayana Murthy On Subsidies: ಯಾವುದನ್ನೂ ಉಚಿತವಾಗಿ ಕೊಡಬಾರದು. ಸಬ್ಸಿಡಿ ಪಡೆದುಕೊಂಡವರು ಉತ್ತಮ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡಬೇಕು ಎಂದು ಎನ್ ಆರ್ ನಾರಾಯಣಮೂರ್ತಿ ಹೇಳಿದ್ದಾರೆ. ಮುಂದುವರಿದ ದೇಶಗಳಿಗಿಂತ ಭಾರತದಲ್ಲಿ ಶ್ರೀಮಂತರಿಗೆ ಹೆಚ್ಚಿನ ಮೊತ್ತದ ತೆರಿಗೆ ವಿಧಿಸಲಾಗುವ ಕ್ರಮವನ್ನು ಇನ್ಫೋಸಿಸ್ ಸಂಸ್ಥಾಪಕರು ಸಮರ್ಥಿಸಿಕೊಂಡಿದ್ದಾರೆ. ಝೀರೋಧ ಸಂಸ್ಥೆಯ ನಿಖಿಲ್ ಕಾಮತ್ ಜೊತೆಗೆ ಸಂವಾದದ ವೇಳೆ ನಾರಾಯಣಮೂರ್ತಿ ಅವರು ಎಡಪಂಥದಿಂದ ಕ್ಯಾಪಿಟಲಿಸ್ಟ್ ಆಗಿ ಬದಲಾದ ಬಗ್ಗೆಯೂ ಮಾತನಾಡಿದ್ದಾರೆ.

ಯಾವುದನ್ನೂ ಕೂಡ ಉಚಿತವಾಗಿ ಕೊಡಬಾರದು; ಸಬ್ಸಿಡಿ ಪಡೆಯುವವರಿಗೂ ಹೊಣೆಗಾರಿಕೆ ಬೇಕು: ನಾರಾಯಣಮೂರ್ತಿ
ಎನ್ ಆರ್ ನಾರಾಯಣಮೂರ್ತಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 30, 2023 | 1:10 PM

ಬೆಂಗಳೂರು, ನವೆಂಬರ್ 30: ಯುವ ಉದ್ಯೋಗಿಗಳು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎಂದು ಇತ್ತೀಚೆಗೆ ವಿವಾದಾಸ್ಪದ ಸಲಹೆ ನೀಡಿದ್ದ ಇನ್ಫೋಸಿಸ್ ಸಹಸಂಸ್ಥಾಪಕ ಎನ್ ಆರ್ ನಾರಾಯಣಮೂರ್ತಿ (NR Narayana Murthy) ಅವರು ಇದೀಗ ಸಬ್ಸಿಡಿ ನೀಡುವ ಸರ್ಕಾರದ ಕ್ರಮಗಳನ್ನು ವಿರೋಧಿಸಿದ್ದಾರೆ. ಬೆಂಗಳೂರು ಟೆಕ್ ಸಮಿಟ್​ನಲ್ಲಿ (Bengaluru Tech Summit) ಝೀರೋಧ ಸಂಸ್ಥೆಯ ಸಹ-ಸಂಸ್ಥಾಪಕ ನಿಖಿಲ್ ಕಾಮತ್ ಜೊತೆ ಸಂವಾದದಲ್ಲಿ ಪಾಲ್ಗೊಂಡಿದ್ದ ನಾರಾಯಣಮೂರ್ತಿ, ಯಾವುದನ್ನೂ ಕೂಡ ಉಚಿತವಾಗಿ ಕೊಡಬಾರದು. ಉಚಿತವಾಗಿ ಕೊಟ್ಟರೂ ಜೊತೆಯಲ್ಲಿ ಹೊಣೆಗಾರಿಕೆಯನ್ನೂ ಕೊಡಬೇಕು ಎಂದು ಕಿವಿಮಾತು ಹೇಳಿದ್ದಾರೆ.

‘ಯಾವುದನ್ನೂ ಉಚಿತವಾಗಿ ಕೊಡಬಾರದು. ಸಬ್ಸಿಡಿ ಪಡೆಯುವ ವ್ಯಕ್ತಿ ಉತ್ತಮ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡಬೇಕು. ಮುಂದಿನ ತಲೆಮಾರಿಗೆ ಉತ್ತಮ ಭವಿಷ್ಯ ರೂಪಿಸುವ ಕೆಲಸಕ್ಕೆ ಬದ್ಧರಾಗಿರಬೇಕು,’ ಎಂದು ಇನ್ಫೋಸಿಸ್​ನ ಮಾಜಿ ಛೇರ್ಮನ್ ಆದ ಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಈ ಶಿಕ್ಷಕರಿಗೆ 83 ಲಕ್ಷ ಸಂಬಳ ಕೊಡಿ; 10 ಸಾವಿರ ರಿಟೈರ್ಡ್ ಟೀಚರ್​ಗಳನ್ನು ಟ್ರೈನರುಗಳಾಗಿ ನೇಮಿಸುವಂತೆ ನಾರಾಯಣಮೂರ್ತಿ ಸಲಹೆ

ಎಡಪಂಥದಿಂದ ಬಂಡವಾಳಶಾಹಿಯಾಗಿ ಬದಲಾದ ಕಥೆ

ಎನ್ ಆರ್ ನಾರಾಯಣಮೂರ್ತಿ ಅವರು ಈ ಸಂವಾದದಲ್ಲಿ ತಮ್ಮ ವೈಯಕ್ತಿಕ ವಿಚಾರಧಾರೆಯಲ್ಲಿನ ಪರಿವರ್ತನೆ ಬಗ್ಗೆ ಮಾತನಾಡಿದ್ದಾರೆ. ಅವರು ಯುವಕರಿದ್ದಾಗ ಗೊಂದಲಯುಕ್ತ ಎಡಪಂಥೀಯರಾಗಿದ್ದರಂತೆ. ಫ್ರಾನ್ಸ್ ಪ್ರವಾಸಕ್ಕೆ ಹೋಗಿದ್ದಾಗ ಬಂಡವಾಳಶಾಹಿಯಾಗಿ ಪರಿವರ್ತನೆ ಆಗಿದ್ದನ್ನು ಸ್ಮರಿಸಿಕೊಂಡಿದ್ದಾರೆ.

‘ಯಾವುದೇ ದೇಶದ ಬಡತನ ಸಮಸ್ಯೆ ನಿವಾರಣೆ ಆಗಬೇಕಾದರೆ ಮುಕ್ತ ಮಾರುಕಟ್ಟೆ ಮತ್ತು ಉದ್ಯಮಶೀಲತೆ ಎಂಬ ಎರಡು ಸ್ತಂಭಗಳನ್ನು ಆಧರಿಸಿದ ಕ್ಯಾಪಿಟಲಿಸಂ ಅಥವಾ ಬಂಡವಾಳಶಾಹಿ ವ್ಯವಸ್ಥೆ ಅವಶ್ಯಕತೆ ಇದೆ,’ ಎಂದಿದ್ದಾರೆ.

ಸಿರಿವಂತರು ಹೆಚ್ಚು ತೆರಿಗೆ ಕಟ್ಟುವುದು ಅಗತ್ಯ…

ಭಾರತದಲ್ಲಿ ಶ್ರೀಮಂತರಿಗೆ ಹೆಚ್ಚು ತೆರಿಗೆ ವಿಧಿಸಲಾಗುತ್ತಿದೆ ಎಂದು ಸಾಕಷ್ಟು ಆಕ್ಷೇಪಗಳು ಕೇಳಿಬರುತ್ತವೆ. ನಾರಾಯಣಮೂರ್ತಿ ಅವರು ಈ ಈ ಆಕ್ಷೇಪಗಳನ್ನು ತಳ್ಳಿಹಾಕಿದ್ದು, ಶ್ರೀಮಂತ ಉದ್ಯಮಿಗಳು ಹೆಚ್ಚಿನ ತೆರಿಗೆ ಪಾವತಿಯ ವ್ಯವಸ್ಥೆಗೆ ಒಗ್ಗಬೇಕು ಎಂದು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಟ್ರ್ಯೂಕಾಲರ್ ಸಿಇಒ ಮತ್ತು ನಾರಾಯಣಮೂರ್ತಿ ಮೊದಲ ಭೇಟಿ; ಇನ್ಫೋಸಿಸ್ ಸಂಸ್ಥಾಪಕರೆಂದು ಗೊತ್ತಾಗದೇ ನಡೆದ ಚರ್ಚೆಯಲ್ಲಿ ಆಗಿದ್ದೇನು?

‘ಸರ್ಕಾರ ಬಡವರಿಗಾಗಿ ಹಲವು ಸಾರ್ವಜನಿಕ ಸೇವೆಗಳನ್ನು ಒದಗಿಸಬೇಕಿರುವುದರಿಂದ ನಾವು ಹೆಚ್ಚು ಮಟ್ಟದ ತೆರಿಗೆ ಪಾವತಿ ಕ್ರಮವನ್ನು ಸ್ವೀಕರಿಸಬೇಕು. ನಮ್ಮ ದೇಶದಲ್ಲಿ ಭ್ರಷ್ಟಮುಕ್ತ, ಪರಿಣಾಮಕಾರಿ ಸಾರ್ವಜನಿಕ ಸರಕನ್ನು ರಚಿಸಬೇಕಾದರೆ ಬೇರೆ ಮುಂದುವರಿದ ದೇಶಗಳಿಗಿಂತ ಇಲ್ಲಿ ಹೆಚ್ಚಿನ ತೆರಿಗೆ ವಿಧಿಸಬೇಕಾಗುತ್ತದೆ’ ಎಂದು ಇನ್ಫೋಸಿಸ್ ಸಹ-ಸಂಸ್ಥಾಪಕರು ನಿಖಿಲ್ ಕಾಮತ್ ಜೊತೆಗಿನ ಸಂವಾದದಲ್ಲಿ ವಿವರಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್