AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಓಲಾ, ಊಬರ್ ಪ್ರಯಾಣಿಕರಿಗೆ ಶಾಕ್; ಸರ್ಜ್ ಪ್ರೈಸ್ ಹೆಚ್ಚಳಕ್ಕೆ ಸರ್ಕಾರ ಅನುಮತಿ; ಇಲ್ಲಿದೆ ಮಾರ್ಗಸೂಚಿ ಮುಖ್ಯಾಂಶಗಳು

Cab aggregators can double the base fare during surge period: ಪೀಕ್ ಅವರ್​​ನಲ್ಲಿ ದರವನ್ನು ಎರಡು ಪಟ್ಟು ಏರಿಸಲು ಮತ್ತು ಬೇಡಿಕೆ ಕಡಿಮೆ ಇರುವ ವೇಳೆಯಲ್ಲಿ ದರವನ್ನು ಅರ್ಧದಷ್ಟು ಇಳಿಸಲು ಕ್ಯಾಬ್ ಅಗ್ರಿಗೇಟರ್​​ಗಳಿಗೆ ಅನುಮತಿ ಸಿಕ್ಕಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ನಿನ್ನೆ ಜುಲೈ 1ರಂದು ಹೊರಡಿಸಿದ ಮಾರ್ಗಸೂಚಿಯಲ್ಲಿ ಇದು ಇದೆ. ಚಾಲಕರಿಗೆ ಇನ್ಷೂರೆನ್ಸ್, ಪ್ರಯಾಣಿಕರಿಗೆ ಸುರಕ್ಷತೆ, ರಾಜ್ಯ ಸರ್ಕಾರಗಳಿಗೆ ಶುಲ್ಕ ವಿಧಿಸುವ ಸ್ವಾತಂತ್ರ್ಯ ಇತ್ಯಾದಿ ಹಲವು ಅಂಶಗಳು ಈ ಮಾರ್ಗಸೂಚಿಯಲ್ಲಿವೆ.

ಓಲಾ, ಊಬರ್ ಪ್ರಯಾಣಿಕರಿಗೆ ಶಾಕ್; ಸರ್ಜ್ ಪ್ರೈಸ್ ಹೆಚ್ಚಳಕ್ಕೆ ಸರ್ಕಾರ ಅನುಮತಿ; ಇಲ್ಲಿದೆ ಮಾರ್ಗಸೂಚಿ ಮುಖ್ಯಾಂಶಗಳು
ಟ್ಯಾಕ್ಸಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 02, 2025 | 12:55 PM

Share

ನವದೆಹಲಿ, ಜುಲೈ 2: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಬೈಕ್ ಟ್ಯಾಕ್ಸಿ, ಕ್ಯಾಬ್ ಅಗ್ರಿಗೇಟರ್​​ಗಳ (cab aggregators) ಸೇವೆ ಸಂಬಂಧ ಕಾನೂನು ರೂಪಿಸಲು ರಾಜ್ಯ ಸರ್ಕಾರಗಳಿಗೆ ಹೊಸ ಮಾರ್ಗಸೂಚಿಗಳನ್ನು (guidelines) ಬಿಡುಗಡೆ ಮಾಡಿದೆ. ಬೈಕ್ ಟ್ಯಾಕ್ಸಿಗಳ ಚಾಲನೆಗೆ ಇದ್ದ ಕಾನೂನು ತೊಡಕನ್ನು ಕೇಂದ್ರ ನಿವಾರಿಸಿದೆ. ಖಾಸಗಿ ನೊಂದಾಯಿತ ಬೈಕುಗಳನ್ನು ಪ್ರಯಾಣಿಕ ಸೇವೆಗೆ ಬಳಸಲು ಅನುಮತಿಸಲಾಗಿದೆ. ಈ ಮಾರ್ಗಸೂಚಿಯಲ್ಲಿ ಓಲಾ, ಊಬರ್​​ನಂತಹ ಕ್ಯಾಬ್ ಅಗ್ರಿಗೇಟರ್​​ಗಳು ಸರ್ಜ್ ಪ್ರೈಸಿಂಗ್ ಏರಿಸಲು ಅಥವಾ ಇಳಿಸಲು ಅನುಮತಿಸಲಾಗಿರುವುದು ವಿಶೇಷ.

ಕ್ಯಾಬ್ ಅಗ್ರಿಗೇಟರ್​​ಗಳಿಗೆ ಡೈನಮಿಕ್ ಪ್ರೈಸಿಂಗ್ ಅವಕಾಶ

ಕೇಂದ್ರ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯಲ್ಲಿ ಕ್ಯಾಬ್ ಅಗ್ರಿಗೇಟರ್​​ಗಳಿಗೆ ಡೈನಮಿಕ್ ಪ್ರೈಸಿಂಗ್​​ಗೆ ಅನುಮತಿ ನೀಡಲಾಗಿದೆ. ರಾಜ್ಯ ಸರ್ಕಾರಗಳು ನಿಗದಿ ಮಾಡುವ ಮೂಲ ದರ ಅಥವಾ ಬೇಸ್ ಫೇರ್​​ಗೆ ಡೈನಮಿಕ್ ಪ್ರೈಸಿಂಗ್ ಅಳವಡಿಕೆ ಮಾಡಬಹುದು. ಅಂದರೆ, ಕ್ಯಾಬ್​​ಗಳಿಗೆ ಬೇಡಿಕೆ ಕಡಿಮೆ ಇದ್ದಾಗ ಮೂಲ ದರಕ್ಕಿಂತ ಶೇ. 50ರವರೆಗೂ ದರ ಕಡಿಮೆ ಮಾಡಬಹುದು. ಬೇಡಿಕೆ ಹೆಚ್ಚಿದ್ದಾಗ, ಅಂದರೆ ಪೀಕ್ ಅವರ್​​​ನಲ್ಲಿ ಮೂಲದರಕ್ಕಿಂತ ಎರಡು ಪಟ್ಟು ಹೆಚ್ಚು ದರ ಹೆಚ್ಚಿಸಲು ಸ್ವಾತಂತ್ರ್ಯ ಇರುತ್ತದೆ.

ಉದಾಹರಣೆಗೆ, ರಾಜ್ಯ ಸರ್ಕಾರವು 3 ಕಿಮೀ ದೂರಕ್ಕೆ ಮೂಲದರ 60 ರೂ ಎಂದು ನಿಗದಿ ಮಾಡಿರುತ್ತದೆ. 3 ಕಿಮೀ ನಂತರದ ಪ್ರಯಾಣಕ್ಕೆ ಪ್ರತೀ ಕಿಮೀಗೆ 20 ರೂ ನಿಗದಿ ಮಾಡಿದೆ ಎಂದಿಟ್ಟುಕೊಳ್ಳೋಣ. ಪೀಕ್ ಅವರ್​​ನಲ್ಲಿ ಮೂಲದರವನ್ನು ಎರಡು ಪಟ್ಟು ಏರಿಸುವ ಅವಕಾಶ ಓಲಾ, ಊಬರ್​​ಗಳಿಗೆ ಇರುತ್ತವೆ. ಹಾಗೆಯೇ, 3 ಕಿಮೀ ನಂತರದ ದರವನ್ನೂ ದುಪ್ಪಟ್ಟುಗೊಳಿಸಬಹುದು.

ಇದನ್ನೂ ಓದಿ: ಬೈಕ್ ಟ್ಯಾಕ್ಸಿ ಸೇವೆಗೆ ಕೇಂದ್ರದ ಅನುಮತಿ, ಕರ್ನಾಟಕ ಸರ್ಕಾರದ ನಿಲುವೇನು?

ಕೇಂದ್ರ ಸಾರಿಗೆ ಸಚಿವಾಲಯ ಹೊರಡಿಸಿದ ಮಾರ್ಗಸೂಚಿಯ ಮುಖ್ಯಾಂಶಗಳು

  • ಖಾಸಗಿ ಮೋಟಾರುಸೈಕಲ್​​ಗಳನ್ನು ಬೈಕ್ ಟ್ಯಾಕ್ಸಿಗೆ ಬಳಸಬಹುದು. ಇದಕ್ಕೆ ಅನುಮತಿ ನೀಡುವುದು ಬಿಡುವುದು ರಾಜ್ಯ ಸರ್ಕಾರಗಳಿಗೆ ಬಿಟ್ಟಿದ್ದು
  • ಖಾಸಗಿ ದ್ವಿಚಕ್ರ ವಾಹನಗಳನ್ನು ವಾಣಿಜ್ಯ ಸೇವೆಗೆ ಬಳಸುವ ಅಗ್ರಿಗೇಟರ್​ಗಳಿಗೆ ರಾಜ್ಯ ಸರ್ಕಾರಗಳು ಶುಲ್ಕ ವಿಧಿಸಬಹುದು.
  • ಎಲ್ಲಾ ಚಾಲಕರ ಪೊಲೀಸ್ ವೆರಿಫಿಕೇಶನ್ ಆಗಿರಬೇಕು. ಕಣ್ಣಿನ ಪರೀಕ್ಷೆಯೂ ಸೇರಿ ಎಲ್ಲಾ ದೈಹಿಕ ಆರೋಗ್ಯ ತಪಾಸಣೆ ಮತ್ತು ಮಾನಸಿಕ ಆರೋಗ್ಯ ತಪಾಸಣೆ ಆಗಿರಬೇಕು. ಆಧಾರ್ ದಾಖಲೆಯ ದೃಢೀಕರಣ ಪಡೆಯಬೇಕು
  • ಪ್ರತಿಯೊಬ್ಬ ಚಾಲಕನಿಗೂ 10 ಲಕ್ಷ ರೂ ಟರ್ಮ್ ಇನ್ಷೂರೆನ್ಸ್, ಮತ್ತು 5 ಲಕ್ಷ ರೂ ಹೆಲ್ತ್ ಇನ್ಷೂರೆನ್ಸ್ ಕವರೇಜ್ ಮಾಡಿಸಿರಬೇಕು.
  • ಚಾಲಕರನ್ನು ನೊಂದಾಯಿಸಿಕೊಳ್ಳುವಾಗ ಅವರಿಗೆ 40 ಗಂಟೆ ತರಬೇತಿ ಕೊಟ್ಟಿರಬೇಕು. ಅಗತ್ಯಬಿದ್ದರೆ ಮೂರು ತಿಂಗಳಿಗೊಮ್ಮೆಯೋ, ವರ್ಷಕ್ಕೊಮ್ಮೆಯೋ ರೀಫ್ರೆಶರ್ ಕೋರ್ಸ್ ನೀಡಬೇಕು.
  • ಕ್ಯಾಬ್ ಅಗ್ರಿಗೇಟರ್​​ಗಳು CERT-in ಸೈಬರ್ ಸೆಕ್ಯೂರಿಟಿ ಗೈಡ್​ಲೈನ್ಸ್ ಪಾಲಿಸಬೇಕು. ಎಐಎಸ್-140 ಟ್ರ್ಯಾಕಿಂಗ್ ಸಿಸ್ಟಮ್ಸ್ ಬಳಸಬೇಕು; ಪ್ಯಾನಿಕ್ ಬಟನ್, ಕಂಟ್ರೋಲ್ ಸೆಂಟರ್ ಇತ್ಯಾದಿ ವ್ಯವಸ್ಥೆ ಇರಬೇಕು. ಇಂಗ್ಲೀಷ್, ಹಿಂದಿ ಅಥವಾ ಸ್ಥಳೀಯ ಭಾಷೆಯಲ್ಲಿನ ಯೂಸರ್ ಇಂಟರ್​​ಫೇಸ್ ಹೊಂದಿರಬೇಕು.
  • ಅಗ್ರಿಗೇಟರ್​​ಗಳು ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಹೆಚ್ಚಿಸಲು ಗಮನ ಕೊಡಬೇಕು.
  • ವಾಹನವು ಡ್ರೈವರ್​​ಗಳ ಸ್ವಂತದ್ದಾಗಿದ್ದರೆ ಡ್ರೈವರ್​​ಗಳಿಗೆ ದರದಲ್ಲಿ ಕನಿಷ್ಠ ಶೇ. 80 ಪಾಲು ಹೋಗಬೇಕು. ಅಗ್ರಿಗೇಟರ್​​ಗಳಿಗೆ ವಾಹನ ಸೇರಿದ್ದಾದರೆ ಕನಿಷ್ಠ ಶೇ. 60ರಷ್ಟು ದರವು ಡ್ರೈವರ್​​ಗೆ ಸಂದಾಯವಾಗಬೇಕು
  • ಆ್ಯಪ್ ಮೂಲಕ ಎಲ್ಲಾ ಸೇವೆ ನಡೆಯಬೇಕು. ಲೈವ್ ಟ್ರ್ಯಾಕಿಂಗ್, ಡ್ರೈವರ್ ರೇಟಿಂಗ್, ಎಮರ್ಜೆನ್ಸಿ ಬಟನ್ ಇತ್ಯಾದಿ ಸೌಲಭ್ಯ ಇರಬೇಕು.
  • ಅಗ್ರಿಗೇಟರ್​​ಗಳು ಡಿಜಿಟಲ್ ಪರ್ಸನಲ್ ಡಾಟಾ ಪ್ರೊಟೆಕ್ಷನ್ ಆ್ಯಕ್ಟ್​ನ ನಿಯಮಾವಳಿಗೆ ಬದ್ಧವಾಗಿರಬೇಕು.
  • ಕ್ಯಾಬ್ ಅಗ್ರಿಗೇಟರ್​​ಗಳ ವಾಹನಗಳಲ್ಲಿ ಎಷ್ಟು ವಾಹನಗಳು ದಿವ್ಯಾಂಗ ಸ್ನೇಹಿಯಾಗಿರಬೇಕು ಎಂಬುದನ್ನು ರಾಜ್ಯ ಸರ್ಕಾರಗಳು ನಿರ್ಧರಿಸಬಹುದು.
  • ಅಗ್ರಿಗೇಟರ್​​ಗಳು ಹೊಸ ಪರವಾನಿಗೆ ಪಡೆಯಲು 5 ಲಕ್ಷ ರೂ, ಲೈಸೆನ್ಸ್ ನವೀಕರಣಕ್ಕೆ 25,000 ರೂ ಶುಲ್ಕ ನೀಡಬೇಕು.
  • ಕ್ಯಾಬ್ ಅಗ್ರಿಗೇಟರ್​​ಗಳು 100 ಬಸ್ ಅಥವಾ 1,000 ಇತರ ವಾಹನಗಳನ್ನು ಚಲಾಯಿಸುತ್ತಿದ್ದರೆ ಸೆಕ್ಯೂರಿಟಿ ಡೆಪಾಸಿಟ್ ಆಗಿ 10 ಲಕ್ಷ ರೂ ನೀಡಬೇಕು. ಅದೇ ಪ್ರಮಾಣದಲ್ಲಿ ವಾಹನಗಳ ಸಂಖ್ಯೆ ಹೆಚ್ಚಿದಂತೆ ಸೆಕ್ಯೂರಿಟಿ ಡೆಪಾಸಿಟ್ ಪ್ರಮಾಣವೂ ಹೆಚ್ಚು ಇರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಗುಜರಾತ್​​ನಲ್ಲಿ ಸೇತುವೆ ಕುಸಿತ, ನದಿಗೆ ಬಿದ್ದ ವಾಹನಗಳು, 9 ಮಂದಿ ಸಾವು
ಗುಜರಾತ್​​ನಲ್ಲಿ ಸೇತುವೆ ಕುಸಿತ, ನದಿಗೆ ಬಿದ್ದ ವಾಹನಗಳು, 9 ಮಂದಿ ಸಾವು
ಗಂಭೀರ ನಡಿಗೆ, ಧೈರ್ಯಶಾಲಿ ಅನೆಗಳನ್ನು ಅಯ್ಕೆ ಮಾಡಲಾಗುತ್ತದೆ: ಅರಣ್ಯಾಧಿಕಾರಿ
ಗಂಭೀರ ನಡಿಗೆ, ಧೈರ್ಯಶಾಲಿ ಅನೆಗಳನ್ನು ಅಯ್ಕೆ ಮಾಡಲಾಗುತ್ತದೆ: ಅರಣ್ಯಾಧಿಕಾರಿ
ನಮೀಬಿಯಾದ ಸಾಂಪ್ರದಾಯಿಕ ಡ್ರಮ್ ನುಡಿಸಿದ ಪ್ರಧಾನಿ ಮೋದಿ
ನಮೀಬಿಯಾದ ಸಾಂಪ್ರದಾಯಿಕ ಡ್ರಮ್ ನುಡಿಸಿದ ಪ್ರಧಾನಿ ಮೋದಿ
ಬ್ರೆಜಿಲ್​​ನಲ್ಲಿ ಮೋದಿ: ಶಿವತಾಂಡವ ಸ್ತೋತ್ರ, ಭರತನಾಟ್ಯ, ಸಾಂಬಾ ರೆಗಿ ಗೀತೆ
ಬ್ರೆಜಿಲ್​​ನಲ್ಲಿ ಮೋದಿ: ಶಿವತಾಂಡವ ಸ್ತೋತ್ರ, ಭರತನಾಟ್ಯ, ಸಾಂಬಾ ರೆಗಿ ಗೀತೆ
ಕೋಳಿ ಸಾರಿನ  ಋಣ; ತರುಣ್ ಜೊತೆ ಸಿನಿಮಾ ಮಾಡ್ತಾರೆ ಶಿವಣ್ಣ
ಕೋಳಿ ಸಾರಿನ  ಋಣ; ತರುಣ್ ಜೊತೆ ಸಿನಿಮಾ ಮಾಡ್ತಾರೆ ಶಿವಣ್ಣ
ಮಂಡ್ಯ ರೈತರ ಆಕ್ರೋಶಕ್ಕೆ ಮಣಿದು ತಡರಾತ್ರಿ ನೀರು ಬಿಡುಗಡೆ ಮಾಡಿದ ಸರ್ಕಾರ
ಮಂಡ್ಯ ರೈತರ ಆಕ್ರೋಶಕ್ಕೆ ಮಣಿದು ತಡರಾತ್ರಿ ನೀರು ಬಿಡುಗಡೆ ಮಾಡಿದ ಸರ್ಕಾರ
ಮೈಸೂರು ಜಯದೇವ ಆಸ್ಪತ್ರೆಯಲ್ಲಿ ಹೃದಯ ತಪಾಸಣೆಗೆ ಮುಗಿಬಿದ್ದ ಜನಸಾಗರ
ಮೈಸೂರು ಜಯದೇವ ಆಸ್ಪತ್ರೆಯಲ್ಲಿ ಹೃದಯ ತಪಾಸಣೆಗೆ ಮುಗಿಬಿದ್ದ ಜನಸಾಗರ
ಎಂಎಲ್​ಎ ಗೆಸ್ಟ್​ಹೌಸ್​ ಕ್ಯಾಂಟೀನ್ ನಿರ್ವಾಹಕರನ್ನು ಥಳಿಸಿದ ಶಿವಸೇನಾ ಶಾಸಕ
ಎಂಎಲ್​ಎ ಗೆಸ್ಟ್​ಹೌಸ್​ ಕ್ಯಾಂಟೀನ್ ನಿರ್ವಾಹಕರನ್ನು ಥಳಿಸಿದ ಶಿವಸೇನಾ ಶಾಸಕ
ಮತದಾರರ ಪಟ್ಟಿ ಪರಿಷ್ಕರಣೆ ವಿರೋಧಿಸಿ ಆರ್​ಜೆಡಿಯಿಂದ ರೈಲು ತಡೆ
ಮತದಾರರ ಪಟ್ಟಿ ಪರಿಷ್ಕರಣೆ ವಿರೋಧಿಸಿ ಆರ್​ಜೆಡಿಯಿಂದ ರೈಲು ತಡೆ
ಕಲಶಕ್ಕೆ ಐದು ಎಲೆ ಇಡುವುದರ ಹಿಂದಿನ ರಹಸ್ಯ ಹಾಗೂ ವಿಶೇಷ ತಿಳಿಯಿರಿ
ಕಲಶಕ್ಕೆ ಐದು ಎಲೆ ಇಡುವುದರ ಹಿಂದಿನ ರಹಸ್ಯ ಹಾಗೂ ವಿಶೇಷ ತಿಳಿಯಿರಿ