ONDC: ಕಡಿಮೆ ಬೆಲೆಗೆ ಊಟ ಸಿಗುತ್ತೆ; ಆದ್ರೆ ಟೈಮಿಗೆ ಸರಿಯಾಗಿ ಬರುತ್ತಾ? ಸ್ವಿಗ್ಗಿ, ಜೊಮಾಟೋಗಳ ಅಖಾಡಕ್ಕೆ ಒಎನ್​ಡಿಸಿ

Swiggy, Zomato Face Challenge From ONDC: ಈಗ ಬಹುತೇಕ ಎಲ್ಲಾ ಕ್ಷೇತ್ರಗಳಿಗೂ ಒಎನ್​ಡಿಸಿ ಅಡಿ ಇಡುತ್ತಿದೆ. ಫುಡ್ ಡೆಲಿವರಿ ಕ್ಷೇತ್ರದಲ್ಲಿ ಒಎನ್​ಡಿಸಿ ಅಸ್ತಿತ್ವ ಹೆಚ್ಚುತ್ತಿದೆ. ಮುಂಬರುವ ದಿನಗಳಲ್ಲಿ ಜನರು ಜೊಮಾಟೊ, ಸ್ವಿಗ್ಗಿಗಿಂತ ಒಎನ್​ಡಿಸಿ ಪ್ಲಾಟ್​ಫಾರ್ಮ್ ಮೂಲಕ ಆಹಾರ ಆರ್ಡರ್ ಮಾಡುವುದು ಹೆಚ್ಚಾಗಬಹುದು.

ONDC: ಕಡಿಮೆ ಬೆಲೆಗೆ ಊಟ ಸಿಗುತ್ತೆ; ಆದ್ರೆ ಟೈಮಿಗೆ ಸರಿಯಾಗಿ ಬರುತ್ತಾ? ಸ್ವಿಗ್ಗಿ, ಜೊಮಾಟೋಗಳ ಅಖಾಡಕ್ಕೆ ಒಎನ್​ಡಿಸಿ
ಒಎನ್​ಡಿಸಿ ಮತ್ತು ಸ್ವಿಗ್ಗಿ
Follow us
|

Updated on: May 08, 2023 | 1:17 PM

ಬೆಂಗಳೂರು: ಇತ್ತೀಚೆಗೆ ಬೆಂಗಳೂರಿನಲ್ಲಿ ಬಿಡುಗಡೆಯಾದ ನಮ್ಮ ಯಾತ್ರಿ ಆ್ಯಪ್ (Namma Yatri App) ಬಗ್ಗೆ ಎಲ್ಲರೂ ಕೇಳಿರಬಹುದು. ಒಲಾ ಮತ್ತು ಊಬರ್​ನ ಪ್ರಾಬಲ್ಯದ ಇಟ್ರಾನ್ಸ್​ಪೋರ್ಟ್ ಕ್ಷೇತ್ರದಲ್ಲಿ ನಮ್ಮ ಯಾತ್ರಿ ಹೆಚ್ಚೂಕಡಿಮೆ ಸಂಚಲನವನ್ನೇ ಸೃಷ್ಟಿಸಿದೆ. ಒಲಾ, ಊಬರ್​ಗಿಂತಲೂ ಕಡಿಮೆ ಬೆಲೆಗೆ ಆಟೋ ಪ್ರಯಾಣ ಸೇವೆ ನೀಡುತ್ತಿದೆ ನಮ್ಮ ಯಾತ್ರಿ. ಮೇಲಾಗಿ, ಓಲಾ, ಊಬರ್​ಗಳಿಗೆ ಭಾರೀ ಪ್ರಮಾಣದಲ್ಲಿ ಕಮಿಷನ್ ಕೊಡಬೇಕಾದ ಕಷ್ಟದಲ್ಲಿದ್ದ ಆಟೋ ಪ್ರಯಾಣಿಕರಲ್ಲಿ ಬಹಳ ಮಂದಿ ಈಗ ನಮ್ಮ ಯಾತ್ರಿ ವೇದಿಕೆಗೆ ಶಿಫ್ಟ್ ಆಗಿದ್ದಾರೆ. ಯಾವ ಮಧ್ಯವರ್ತಿಯೂ ಇಲ್ಲದೇ ಆಟೋರಿಕ್ಷಾ ಮತ್ತು ಗ್ರಾಹಕರ ಮಧ್ಯೆ ನೇರವಾಗಿ ನಡೆಯುವ ಒಪ್ಪಂದ. ಹೀಗಾಗಿ, ಆಟೋರಿಕ್ಷಾ ಚಾಲಕರಿಗೂ ಹೆಚ್ಚು ಹಣ ಸಿಗುತ್ತದೆ, ಗ್ರಾಹಕರಿಗೂ ಕಡಿಮೆ ದರ ಬರುತ್ತದೆ. ಇದನ್ನು ಸಾಧ್ಯವಾಗಿಸಿದ್ದೇ ಒಎನ್​ಡಿಸಿ (ONDC). ಈಗ ಬಹುತೇಕ ಎಲ್ಲಾ ಕ್ಷೇತ್ರಗಳಿಗೂ ಒಎನ್​ಡಿಸಿ ಅಡಿ ಇಡುತ್ತಿದೆ. ಫುಡ್ ಡೆಲಿವರಿ ಕ್ಷೇತ್ರದಲ್ಲಿ ಒಎನ್​ಡಿಸಿ ಅಸ್ತಿತ್ವ ಹೆಚ್ಚುತ್ತಿದೆ. ಮುಂಬರುವ ದಿನಗಳಲ್ಲಿ ಜನರು ಜೊಮಾಟೊ, ಸ್ವಿಗ್ಗಿಗಿಂತ ಒಎನ್​ಡಿಸಿ ಪ್ಲಾಟ್​ಫಾರ್ಮ್ ಮೂಲಕ ಆಹಾರ ಆರ್ಡರ್ ಮಾಡುವುದು ಹೆಚ್ಚಾಗಬಹುದು.

ಏನಿದು ಒಎನ್​ಡಿಸಿ? ಹೋಮ್ ಡೆಲಿವರಿ ಆ್ಯಪ್​ಗಳಿಗಿಂತ ಇದು ಹೇಗೆ ಭಿನ್ನ?

ಅದುವೇ ಒಎನ್​ಡಿಸಿ. ಒಎನ್​ಡಿಸಿ (ONDC) ಎಂದರೆ ಓಪನ್ ನೆಟ್ವರ್ಕ್ ಫಾರ್ ಡಿಜಿಟಲ್ ಕಾಮರ್ಸ್. ಇದು ಆ್ಯಪ್ ಅಲ್ಲ. ಸರ್ವಿಸ್ ಸೆಕ್ಟರ್​ನ ಉದ್ದಿಮೆಗಳಿಗೆ ಮತ್ತು ಗ್ರಾಹಕರಿಗೆ ಪೂರಕವಾಗುವಂತಹ ತಂತ್ರಜ್ಞಾನ ವೇದಿಕೆಯೊಂದನ್ನು ರೂಪಿಸಿದೆ. ಇದು ಮಧ್ಯವರ್ತಿಯ ಅವಶ್ಯಕತೆ ಇಲ್ಲದೇ ಉದ್ದಿಮೆ ಮತ್ತು ಗ್ರಾಹಕರ ಮಧ್ಯೆ ನೇರ ಕೊಂಡಿ ಏರ್ಪಡಿಸುತ್ತದೆ. ಓಲಾ, ಊಬರ್, ಜೊಮಾಟೋ, ಸ್ವಿಗ್ಗಿ, ಅಮೇಜಾನ್ ಇತ್ಯಾದಿ ಸಂಸ್ಥೆಗಳು ನೇರವಾಗಿ ವಸ್ತುಗಳನ್ನು ಇಟ್ಟುಕೊಂಡು ಮಾರುವುದಿಲ್ಲ. ಬದಲಾಗಿ ಉದ್ದಿಮೆ ಮತ್ತು ಗ್ರಾಹಕರ ಮಧ್ಯೆ ಮಧ್ಯವರ್ತಿಗಳಾಗಿರುತ್ತವೆ. ಎರಡೂ ಕಡೆಯಿಂದ ಕಮಿಷನ್ ಪಡೆದು ಲಾಭ ಮಾಡಿಕೊಳ್ಳುತ್ತವೆ. ಪರಿಣಾಮವಾಗಿ ಉದ್ದಿಮೆ ಮತ್ತು ಗ್ರಾಹಕ ಇಬ್ಬರಿಗೂ ಹೊರೆ ಹೆಚ್ಚಿರುತ್ತದೆ. ಈಗ ಒಎನ್​ಡಿಸಿ ಈ ಮಧ್ಯವರ್ತಿ ಪಾತ್ರವನನ್ನು ಮೊಟಕುಗೊಳಿಸುತ್ತದೆ.

ಇದನ್ನೂ ಓದಿTenant Rights: ಮನೆ ಓನರ್ ಕಿರಿಕ್ ಮಾಡುತ್ತಾರಾ? ಬಾಡಿಗೆದಾರರಿಗಿರುವ 10 ಹಕ್ಕುಗಳ ಬಗ್ಗೆ ತಿಳಿದಿರಿ

ಒಎನ್​ಡಿಸಿ ಹೇಗೆ ಕಾರ್ಯನಿರ್ವಹಿಸುತ್ತದೆ?

ವಿವಿಧ ಹೋಟೆಲ್​ಗಳು, ಅಂಗಡಿಗಳು ಇತ್ಯಾದಿ ಉದ್ದಿಮೆಗಳು ಒಎನ್​ಡಿಸಿಗೆ ನೊಂದಾಯಿತವಾಗಬೇಕಾಗದ ಅವಶ್ಯಕತೆ ಇದೆ. ಈಗ ಪೇಟಿಎಂ, ಮೀಶೋ, ಮ್ಯಾಜಿಕ್​ಪಿನ್, ಮೈಸ್ಟೋರ್ ಇತ್ಯಾದಿ ಇಕಾಮರ್ಸ್ ಸಂಸ್ಥೆಗಳು ಒಎನ್​ಡಿಸಿಗೆ ಪಾರ್ಟ್ನರ್ ಆಗಿವೆ. ಈ ಇಕಾಮರ್ಸ್ ಕಂಪನಿಗಳ ಆ್ಯಪ್ ಅಥವಾ ಪ್ಲಾಟ್​ಫಾರ್ಮ್​ಗಳಲ್ಲಿ ಒಎನ್​ಡಿಸಿಗೆ ಜೋಡಿತವಾದ ಸರ್ವಿಸ್​ಗಳ ಪಟ್ಟಿ ಇರುತ್ತದೆ. ಗ್ರಾಹಕರು ಅದನ್ನು ಆಯ್ದುಕೊಂಡು ಆರ್ಡರ್ ಕೊಡಬಹುದು. ಉದಾಹರಣೆಗೆ ಪೇಟಿಎಂಗೆ ಹೋಗಿ ಅಲ್ಲಿ ಒಎನ್​ಡಿಸಿ ಎಂದು ಸರ್ಚ್ ಮಾಡಿದರೆ ಫುಡ್ ಅಂಡ್ ಗ್ರೋಸರಿ ವಿಭಾಗ ಸಿಗುತ್ತದೆ. ಅದರಲ್ಲಿ ಪಟ್ಟಿಯಾಗಿರುವ ಆಹಾರವಸ್ತುಗಳನ್ನು ಗ್ರಾಹಕರು ಅಲ್ಲಿಯೇ ಆರ್ಡರ್ ಮಾಡಬಹುದು. ಪೇಟಿಎಂ ಬಹಳ ನಗಣ್ಯ ಎನಿಸುವ ಕಮಿಷನ್ ಹಣ ಪಡೆಯುತ್ತದೆ.

ಜೊಮಾಟೊ, ಸ್ವಿಗ್ಗಿಗಿಂತ ಬಹಳ ಕಡಿಮೆ ಬೆಲೆಗೆ ಆಹಾರ ಸಿಗುತ್ತದೆ

ಫುಡ್ ಡೆಲಿವರಿ ಕ್ಷೇತ್ರದಲ್ಲಿ ಒಎನ್​ಡಿಸಿ ಒಳ್ಳೆಯ ಯಶಸ್ಸು ಕಾಣುತ್ತಿದೆ ಎಂದು ಹೇಳಲಾಗುತ್ತಿದೆ. ಸ್ವಿಗ್ಗಿ ಮತ್ತು ಜೊಮಾಟೋದಲ್ಲಿ ನೀವು ಆರ್ಡರ್ ಮಾಡುವ ಆಹಾರದ ಬೆಲೆಗಿಂತ ಬಹಳ ಕಡಿಮೆ ಬೆಲೆಗೆ ಒಎನ್​ಡಿಸಿ ಮೂಲಕ ಪಡೆಯಬಹುದು. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಎರಡೂ ದರಗಳ ಹೋಲಿಕೆಗಳಿರುವ ಸ್ಕ್ರೀನ್​ಶಾಟ್​ಗಳು ಶೇರ್ ಆಗುತ್ತಿವೆ. ಕೆಲವೊಮ್ಮೆ ಒಎನ್​ಡಿಸಿಯಲ್ಲಿ ಆಹಾರ ಬೆಲೆ ಅರ್ಧದಷ್ಟು ಕಡಿಮೆ ಇದೆ.

ಇದನ್ನೂ ಓದಿShocking: ವರ್ಕ್ ಫ್ರಂ ಹೋಂ ಮಾಡೋರೇ ಹುಷಾರ್; ಈ ಮುಖಂಡರು ಹೇಳೋ ಮಾತು ನೋಡಿದ್ರೆ ವೃತ್ತಿಜೀವನ ಮುಗಿದಂತೆಯಾ? ಯಾರ್‍ಯಾರು ಏನು ಹೇಳಿದ್ರು?

ಯಾರು ಡೆಲಿವರಿ ಮಾಡುತ್ತಾರೆ? ಸದ್ಯ ಒಎನ್​ಡಿಸಿಯಲ್ಲಿರುವುದು ಇದೊಂದೇ ಗೊಂದಲದ ಗೂಡು

ನಿಯಮದ ಪ್ರಕಾರ ನಾವು ಒಎನ್​ಡಿಸಿಯಲ್ಲಿ ಆರ್ಡರ್ ಮಾಡುವ ಆಹಾರವನ್ನು ಗ್ರಾಹಕರಿಗೆ ತಲುಪಿಸುವ ಜವಾಬ್ದಾರಿ ಆ ರೆಸ್ಟೋರೆಂಟ್​ಗೆ ಇರುತ್ತದೆ. ಎಲ್ಲಾ ರೆಸ್ಟೋರೆಂಟ್​ಗಳೂ ಸ್ವಂತಕ್ಕೆ ಡೆಲಿವರಿ ಬಾಯ್​ಗಳನ್ನು ಇಟ್ಟುಕೊಳ್ಳಲು ಅಗುವುದಿಲ್ಲ. ಆಗ ಗ್ರಾಹಕರಿಗೆ ಆಹಾರ ತಲುಪುವುದು ವಿಳಂಬವಾಗಬಹುದು.

ಸ್ವಿಗ್ಗಿ, ಜೊಮಾಟೋವಾದರೆ ಅವುಗಳದ್ದೇ ಆದ ಡೆಲಿವರಿ ಸಿಬ್ಬಂದಿ ಇರುತ್ತಾರೆ. ಹೀಗಾಗಿ, ಬಹಳ ತ್ವರಿತವಾಗಿ ಗ್ರಾಹಕರಿಗೆ ವಸ್ತುಗಳು ತಲುಪುತ್ತವೆ. ಒಎನ್​ಡಿಸಿಯಲ್ಲಿ ಈ ಒಂದು ಕೊರತೆಯನ್ನು ತುಂಬುವ ಅಗತ್ಯವಿದೆ. ಡೆಲಿವರಿಗೆಂದು ಬೇರೆ ಪ್ಲಾಟ್​ಫಾರ್ಮ್​ಗಳು ಜೋಡಿತಗೊಂಡರೆ ಈ ಸಮಸ್ಯೆ ಬಗೆಹರಿಯಬಹುದು.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಿರುಮಲ ದೇವಾಲಯದಲ್ಲಿನ ವಿಮಾನ ವೆಂಕಟೇಶ್ವರನ ಮಹತ್ವ ತಿಳಿಯಿರಿ
ತಿರುಮಲ ದೇವಾಲಯದಲ್ಲಿನ ವಿಮಾನ ವೆಂಕಟೇಶ್ವರನ ಮಹತ್ವ ತಿಳಿಯಿರಿ
ಈ ರಾಶಿಯವರು ಆಸ್ತಿಯ ವಿಚಾರವಾಗಿ ಕಾನೂನು ಹೋರಾಟ ಮಾಡಲಿದ್ದೀರಿ
ಈ ರಾಶಿಯವರು ಆಸ್ತಿಯ ವಿಚಾರವಾಗಿ ಕಾನೂನು ಹೋರಾಟ ಮಾಡಲಿದ್ದೀರಿ
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
‘ನನಗೂ ಕೆಟ್ಟ ಅನುಭವ ಆಗಿದೆ’; ನೀತು ಶೆಟ್ಟಿ ನೇರ ಮಾತು
‘ನನಗೂ ಕೆಟ್ಟ ಅನುಭವ ಆಗಿದೆ’; ನೀತು ಶೆಟ್ಟಿ ನೇರ ಮಾತು
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
4,4,4,4,4... ಒಂದೇ ಓವರ್​ನಲ್ಲಿ 5 ಬೌಂಡರಿ ಬಾರಿಸಿದ ಬಾಬರ್ ಆಝಂ
4,4,4,4,4... ಒಂದೇ ಓವರ್​ನಲ್ಲಿ 5 ಬೌಂಡರಿ ಬಾರಿಸಿದ ಬಾಬರ್ ಆಝಂ
ನಾಗಮಂಗಲ ಗಲಭೆ: ಬಿಜೆಪಿ ನಾಯಕ ಅಶ್ವತ್ಥನಾರಾಯಣ ಹೇಳಿದ್ದೇನು ನೋಡಿ
ನಾಗಮಂಗಲ ಗಲಭೆ: ಬಿಜೆಪಿ ನಾಯಕ ಅಶ್ವತ್ಥನಾರಾಯಣ ಹೇಳಿದ್ದೇನು ನೋಡಿ