Stock news: ಈ ಷೇರು ನವೆಂಬರ್ನಲ್ಲಿ 18 ರೂಪಾಯಿ, ಏಪ್ರಿಲ್ನಲ್ಲಿ 2680 ರೂಪಾಯಿ; ಆರ್ಕಿಡ್ ಫಾರ್ಮಾ ಏನಿದೇನು?
Orchid Pharma ಎಂಬುದು ಚೆನ್ನೈ ಮೂಲದ ಕಂಪೆನಿ. 2020ರ ನವೆಂಬರ್ ತಿಂಗಳಲ್ಲಿ 18 ರೂಪಾಯಿ ಒಂದು ಷೇರು ಅಂತ ಇದ್ದದ್ದು 2021ರ ಏಪ್ರಿಲ್ನಲ್ಲಿ 2680 ರೂಪಾಯಿ ತಲುಪಿತು. ಸದ್ಯಕ್ಕೆ 1400 ರೂಪಾಯಿ ಮೇಲಿದೆ.
ಈ ಕಂಪೆನಿಯ ಷೇರುಗಳ ಸಂಖ್ಯೆಯಲ್ಲಿ ಕೊರತೆ ಇರುವ ಕಾರಣಕ್ಕೆ ಕಳೆದ ಏಳು ತಿಂಗಳಲ್ಲಿ ಶೇ 7,700ರಷ್ಟು ಏರಿಕೆ ಕಂಡಿದ್ದು, ಇದೀಗ ಆ ಮೇಲ್ಮುಖವಾದ ಪ್ರಯಾಣ ಕೊನೆ ಆಗುವಂತಿದೆ. ಅಂದಹಾಗೆ ಈ ಕಂಪೆನಿಯ ಹೆಸರು ಆರ್ಕಿಡ್ ಫಾರ್ಮಾ. ಹೊಸ ಮಾಲೀಕರು ಈಗ ಶೇ 98ರಷ್ಟು ಷೇರಿನ ಪಾಲನ್ನು ಹಿಂಪಡೆಯಬೇಕಿದೆ. ದಿವಾಳಿ ಘೋಷಣೆಯಾದ ನಂತರ ಕಳೆದ ನವೆಂಬರ್ ಆರಂಭದಲ್ಲಿ ಕಂಪೆನಿ ಮತ್ತೆ ಮುಂಬೈನಲ್ಲಿ ಲಿಸ್ಟಿಂಗ್ ಆಗಿದೆ. ಭಾರತದ ನಿಯಂತ್ರಕರ ನಿಯಮಾವಳಿ ಅನುಸಾರ ಹೊಸ ಮಾಲೀಕರು- ಈ ಪ್ರಕರಣದಲ್ಲಿ ಧನುಕಾ ಲ್ಯಾಬೊರೇಟರೀಸ್ ಲಿಮಿಟೆಡ್- ಕನಿಷ್ಠ ಸಾರ್ವಜನಿಕ ಹರಿವು ಮುಂದಿನ ಕೆಲವು ತಿಂಗಳಲ್ಲಿ ಶೇ 10ಕ್ಕೆ ಉತ್ತೇಜಿಸಬೇಕು. ದಿವಾಳಿ ಪ್ರಕರಣ ಮುಗಿದ ಮೇಲೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಗಳಿಕೆ ಕಂಡ ಕಂಪೆನಿಗಳಲ್ಲಿ ಇದೂ ಒಂದು.
ಈ ರೀತಿಯಲ್ಲಿ ಗಳಿಕೆ ಕಂಡ ಷೇರುಗಳಲ್ಲಿ ಹೂಡಿಕೆದಾರರಿಗೆ ಅಪಾಯ ಇದ್ದೇ ಇರುತ್ತದೆ. ಇಂಥ ಕಂಪೆನಿಗಳ ಮೂಲಭೂತ ಅಂಶ ಸಾಮಾನ್ಯವಾಗಿ ಉತ್ತಮವಾಗಿ ಇರುವುದಿಲ್ಲ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯ ಪಡುತ್ತಾರೆ. ಈ ರೀತಿ ಭವಿಷ್ಯದಲ್ಲಿ ಆಗಬಾರದು ಎಂಬ ಉದ್ದೇಶದಿಂದ ಮಾರುಕಟ್ಟೆ ನಿಯಂತ್ರಕವಾದ ಸೆಬಿ ಕಳೆದ ಡಿಸೆಂಬರ್ನಲ್ಲಿ ನಿರ್ಧಾರವೊಂದನ್ನು ತೆಗೆದುಕೊಂಡಿದ್ದು, ಕನಿಷ್ಠ ಮುಕ್ತ ಹರಿವಿಗೆ ಈ ಹಿಂದೆ 18 ತಿಂಗಳ ಕಾಲಾವಕಾಶ ಇತ್ತು. ಅಲ್ಲಿಂದ 12 ತಿಂಗಳಿಗೆ ಇಳಿಸಲಾಗಿದೆ. ಇದು ನಿಜವಾದ ಹೂಡಿಕೆ ಅಲ್ಲ, ಇದು ಖುಷಿ ಹಾಗೂ ಎಕ್ಸೈಟ್ಮೆಂಟ್ ಎಂದಿದ್ದಾರೆ ನವದೆಹಲಿ ಮೂಲದ ಕನ್ಸಲ್ಟೆನ್ಸಿ ಏಜೆನ್ಸಿಯ ಅಜಯ್ ಶ್ರೀವಾಸ್ತವ. ಈಗ ಸ್ಥಾಪಕರು ಷೇರು ಮಾರಾಟ ಮಾಡುವುದರಿಂದ ಅದರ ನಿಜವಾದ ಮೌಲ್ಯ ಗೊತ್ತಾಗುತ್ತದೆ ಎಂದಿದ್ದಾರೆ.
ಮೂರು ವರ್ಷದ ಕಾನೂನು ಸಮರದ ನಂತೆ ಧನುಕಾ ಕಂಪೆನಿಯು ಆರ್ಕಿಡ್ ಪಾಲನ್ನು ಗೆದ್ದಿತ್ತು. ಸಾಲಗಾರರಿಗೆ ಶೇ 1ರಷ್ಟು, ಶೇ 1ರಷ್ಟು ಈಗಿನ ಷೇರುದಾರರಿಗೆ ಹೋಗಿತ್ತು. ಅನ್ಲಿಸ್ಟ್ ಧನುಕಾ ಲ್ಯಾಬೋರೇಟರೀಸ್ ಅನ್ನು ವಿಲೀನ ಮಾಡಿಕೊಳ್ಳುವ ಬಗ್ಗೆ ಆರ್ಕಿಡ್ ಆಡಳಿತ ಮಂಡಳಿ ಮೌಲ್ಯಮಾಪನ ಮಾಡುತ್ತಿದೆ. ಈ ಬಗ್ಗೆ ಮೇ 22ನೇ ತಾರೀಕಿನ ಹೇಳಿಕೆಯಲ್ಲಿ ತಿಳಿಸಲಾಗಿತ್ತು. ಶೇ 99ರಷ್ಟು ಷೇರು ಸ್ಥಾಪಕರು ಮತ್ತು ಸಾಲಗಾರರ ಬಳಿ ಇದೆ. ಆರ್ಕಿಡ್ ಷೇರುಗಳು ಸರಾಸರಿ 2000 ಮಾತ್ರ ದಿನಕ್ಕೆ ವಹಿವಾಟಾಗುತ್ತದೆ. ಪ್ರತಿ ದಿನವೂ ಷೇರಿನ ಬೆಲೆ ಏರುತ್ತಲೇ ಸಾಗುತ್ತಿದೆ. ನವೆಂಬರ್ನಿಂದ ಈಚೆಗೆ 100 ಪಟ್ಟಿಗೂ ಹೆಚ್ಚಾಗಿದೆ. ಆದರೆ ಬಂಡವಾಳ ಹಿಂತೆಗೆತಕ್ಕೂ ಮುಂಚೆ ಅಂದರೆ, ಏಪ್ರಿಲ್ನ ಗರಿಷ್ಠ ಮಟ್ಟದಿಂದ ಕುಸಿಯುತ್ತಲೇ ಬರುತ್ತಿದೆ.
ಆರ್ಕಿಡ್ ಕಂಪೆನಿ ಷೇರು ಬುಧವಾರ ದಿನದ ಕೊನೆಗೆ ರೂ. 1401.95 ಇತ್ತು. 2021ರ ಏಪ್ರಿಲ್ ತಿಂಗಳಲ್ಲಿ 2680 ರೂಪಾಯಿ ತನಕ ಮುಟ್ಟಿತ್ತು. ನಿಮಗೆ ಗೊತ್ತಿರಲಿ, ತಿಂಗಳುಗಳ ಕಾಲ ಅಮಾನತಾಗಿದ್ದ ವಹಿವಾಟು ಪುನರಾರಂಭ ಆದ ಮೇಲೆ 2020ರ ನವೆಂಬರ್ 3ನೇ ತಾರೀಕು 18 ರೂಪಾಯಿ ಇತ್ತು. ಇಂಥದ್ದೇ ರೀತಿಯ ಪಯಣವನ್ನು ರುಚಿ ಸೋಯಾ, ಬಾಫ್ನಾ ಫಾರ್ಮಾಸ್ಯುಟಿಕಲ್ಸ್, ಅಲೋಕ್ ಇಂಡಸ್ಟ್ರೀಸ್ ಕೂಡ ಮಾಡಿವೆ. ಅವುಗಳ ದಿವಾಳಿ ಪ್ರಕರಣ ಬಗೆಹರಿದು, ಹೊಸ ಹೂಡಿಕೆದಾರರು ಖರೀದಿ ಮಾಡಿದ ಮೇಲೆ ಈ ಬೆಳವಣಿಗೆ ಆಗಿದೆ.
ಆರ್ಕಿಡ್ ಫಾರ್ಮಾ ಷೇರಿನಲ್ಲಿ ನವೆಂಬರ್ ತಿಂಗಳಲ್ಲಿ 18 ಸಾವಿರ ರೂಪಾಯಿ ಹೂಡಿ, ಒಂದು ಸಾವಿರ ಷೇರು ಖರೀದಿಸಿ, 2021ರ ಏಪ್ರಿಲ್ನಲ್ಲಿ ಮಾರಾಟ ಮಾಡಿದವರಿಗೆ 26,80,000 (26.80 ಲಕ್ಷ ರೂಪಾಯಿ) ಬಂದಿರುತ್ತದೆ.
ಆರ್ಕಿಡ್ ಫಾರ್ಮಾದ ಪ್ರಮುಖ ಆದಾಯ ಬರುವುದು ಆ್ಯಂಟಿ ಬ್ಯಾಕ್ಟಿರಿಯಲ್ ಔಷಧ ತಯಾರಿಸುವ ಪದಾರ್ಥಗಳ ಉತ್ಪಾದನೆಯಿಂದ. ಲಕ್ಷ್ಮೀವಿಲಾಸ್ ಬ್ಯಾಂಕ್ ಕಡೆಯಿಂದ ಹಾಕಿದ ಅರ್ಜಿ ಕಾರಣಕ್ಕೆ 2017ರಲ್ಲಿ ಕಂಪೆನಿ ದಿವಾಳಿ ಆಯಿತು. ಆ ಹೊತ್ತಿಗೆ ಕಂಪೆನಿಯಿಂದ ಬ್ಯಾಂಕ್ಗೆ 50 ಕೋಟಿ ರೂಪಾಯಿ ಕಟ್ಟಬೇಕಿತ್ತು. ಅಂದಹಾಗೆ ಚೆನ್ನೈ ಮೂಲದ ಆರ್ಕಿಡ್ ಕಂಪೆನಿ 2021ರ ಮಾರ್ಚ್ ಅಂತ್ಯಕ್ಕೆ ನಿವ್ವಳ ನಷ್ಟ ದಾಖಲಿಸಿದೆ. ಈ ಬಗ್ಗೆ ಮಾಧ್ಯಮಗಳು ಕಂಪೆನಿ ಪ್ರತಿಕ್ರಿಯೆ ಪಡೆಯುವುದಕ್ಕೆ ಸಂಪರ್ಕಿಸಿದಾಗ ಪ್ರತಿಕ್ರಿಯೆ ನೀಡಿಲ್ಲ. ಆರ್ಕಿಡ್ ಫಾರ್ಮಾನಂಥ ಷೇರುಗಳಲ್ಲಿ ಹಣ ಹೂಡುವುದೆಂದರೆ ಕ್ಯಾಸಿನೋಗಳಲ್ಲಿ ಜೂಜಾಡುವುದಕ್ಕಿಂತ ಏನೇನೂ ಕಡಿಮೆ ಇಲ್ಲ. ಈ ಷೇರುಗಳಿಗೆ ಮೌಲ್ಯವೂ ಇಲ್ಲ, ಮೂಲಭೂತ ಅಂಶಗಳೂ ಗಟ್ಟಿಯಾಗಿರಲ್ಲ ಎನ್ನುತ್ತಾರೆ ವಿಶ್ಲೇಷಕರು.
ಇದನ್ನೂ ಓದಿ: Balakrishna Industries: ಈ ಷೇರಿನ ಮೇಲಿನ 10,000 ರೂಪಾಯಿ ಹೂಡಿಕೆ 20 ವರ್ಷದಲ್ಲಿ 3.50 ಕೋಟಿ ರೂಪಾಯಿ
ಇದನ್ನೂ ಓದಿ: Minimum amount for investment: ನನ್ನ ಹೂಡಿಕೆ ಪಯಣ 11 ರೂಪಾಯಿ ಜತೆ ಶುರುವಾಗಿದ್ದು ಹೇಗೆ ಗೊತ್ತಾ?
(Chennai based company Orchid pharma share price increased from Rs 18 to Rs 2680 in less than 6 months of time)
Published On - 4:01 pm, Thu, 3 June 21