AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rich vs Poor: ಶ್ರೀಮಂತರಿಗೆ ಇನ್ನಷ್ಟು ಶ್ರೀಮಂತಿಕೆ; ಬಡವರಿಗೆ ಇನ್ನಷ್ಟು ಬಡತನ; ಬೆಚ್ಚಿಬೀಳಿಸುತ್ತದೆ ಆಕ್ಸ್​ಫ್ಯಾಮ್ ವರದಿ

Oxfam Report: ಕೋವಿಡ್ ಬಳಿಕ ಶ್ರೀಮಂತರು ಅತಿ ಶ್ರೀಮಂತರಾಗುತ್ತಿದ್ದಾರೆ, ಬಡವರು ಇನ್ನಷ್ಟು ಬಡವರಾಗುತ್ತಿದ್ದಾರೆ ಎಂದು ಆಕ್ಸ್​ಫ್ಯಾಮ್ ವರದಿ ಹೇಳುತ್ತಿದೆ. ಸ್ವಿಟ್ಜರ್​ಲ್ಯಾಂಡ್​ನ ಡಾವೋಸ್​ನಲ್ಲಿ ಮೊನ್ನೆ ನಡೆದ ವರ್ಲ್ಡ್ ಎಕನಾಮಿಕ್ ಫೋರಂನಲ್ಲಿ ಆಕ್ಸ್​ಫ್ಯಾಮ್​ನಿಂದ ಈ ವರದಿ ಸಲ್ಲಿಕೆ ಆಗಿದೆ. ವಿಶ್ವದ ಐದು ಅತಿಶ್ರೀಮಂತರ ಸಂಪತ್ತು 2020ರಿಂದೀಚೆ ಎರಡು ಪಟ್ಟು ಹೆಚ್ಚಾಗಿದೆ ಎನ್ನಲಾಗಿದೆ.

Rich vs Poor: ಶ್ರೀಮಂತರಿಗೆ ಇನ್ನಷ್ಟು ಶ್ರೀಮಂತಿಕೆ; ಬಡವರಿಗೆ ಇನ್ನಷ್ಟು ಬಡತನ; ಬೆಚ್ಚಿಬೀಳಿಸುತ್ತದೆ ಆಕ್ಸ್​ಫ್ಯಾಮ್ ವರದಿ
ಬಡವರು ಮತ್ತು ಶ್ರೀಮಂತರು
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 15, 2024 | 11:22 AM

Share

ನವದೆಹಲಿ, ಜನವರಿ 15: ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿ ಉದ್ಭವಿಸಿದ ವರ್ಷವಾದ 2020ರ ಬಳಿಕ ಇಡೀ ವಿಶ್ವ ಆರ್ಥಿಕತೆಯಿಂದ ನಲುಗಿದೆ. ಭಾರತದಂತಹ ಬೆರಳೆಣಿಕೆಯಷ್ಟು ದೇಶಗಳು ಮಾತ್ರ ಸಕಾಲಕ್ಕೆ ಚೇತರಿಸಿಕೊಂಡಿವೆ. ಈ ಆರ್ಥಿಕ ಸಂಕಷ್ಟದ ಪರಿಸ್ಥಿತಿಯಲ್ಲಿ ಬಹುತೇಕ ಬಡವರ ಬಡತನ ಇನ್ನಷ್ಟು ಹೆಚ್ಚಾಗಿದೆ. ಆರ್ಥಿಕವಾಗಿ ಕಷ್ಟಕರ ಪರಿಸ್ಥಿತಿಯಲ್ಲಿ ಇದು ಸಹಜ. ಆದರೆ, ಅಚ್ಚರಿ ಎಂದರೆ ಈ ಜಾಗತಿಕ ಹಿನ್ನಡೆಯಲ್ಲೂ ಹೆಚ್ಚಿನ ಶ್ರೀಮಂತರ ಶ್ರೀಮಂತಿಕೆ ಇನ್ನಷ್ಟು ಹೆಚ್ಚಾಗಿದೆ. ಇದು ಆಕ್ಸ್​ಫ್ಯಾಮ್ ವರದಿಯಲ್ಲಿ (Oxfam report) ಕಂಡು ಬಂದಿರುವ, ಚಿಂತನೆಗೆ ಹಚ್ಚುವಂತಹ ಸಂಗತಿಯಾಗಿದೆ.

ಸ್ವಿಟ್ಜರ್​ಲ್ಯಾಂಡ್​ನ ಡಾವೋಸ್​ನಲ್ಲಿ ಮೊನ್ನೆ ನಡೆದ ವರ್ಲ್ಡ್ ಎಕನಾಮಿಕ್ ಫೋರಂನಲ್ಲಿ (World Economic forum) ಆಕ್ಸ್​ಫ್ಯಾಮ್​ನಿಂದ ಈ ವರದಿ ಸಲ್ಲಿಕೆ ಆಗಿತ್ತು. ವಿಶ್ವದ ಐದು ಅತಿಶ್ರೀಮಂತರ ಸಂಪತ್ತು 2020ರಿಂದೀಚೆ ಎರಡು ಪಟ್ಟು ಹೆಚ್ಚಾಗಿದೆ. ಇಲಾನ್ ಮಸ್ಕ್, ಬರ್ನಾರ್ಡ್ ಆರ್ನಾಲ್ಟ್, ಜೆಫ್ ಬೇಜೋಸ್, ಲ್ಯಾರಿ ಎಲಿಸನ್, ಮಾರ್ಕ್ ಜುಕರ್ಬರ್ಗ್ ಈ ಐದು ಜನ ಶ್ರೀಮಂತರು 2020ರಲ್ಲಿ ಒಟ್ಟು 405 ಬಿಲಿಯನ್ ಡಾಲರ್​ನಷ್ಟು ಸಂಪತ್ತಿನ ಒಡೆಯರಾಗಿದ್ದರು. ಈಗ ಅವರ ಸಂಪತ್ತು 869 ಬಿಲಿಯನ್ ಡಾಲರ್​ಗೆ ಏರಿದೆ.

ಇದನ್ನೂ ಓದಿ: Share Market: ಭಾರತದ ಷೇರುಪೇಟೆ ಹೊಸ ಎತ್ತರಕ್ಕೆ; ಸೆನ್ಸೆಕ್ಸ್, ನಿಫ್ಟಿ ಎರಡೂ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ

ಇದೇ ವೇಳೆ, ಕೆಳಗಿನ ಸ್ತರದಲ್ಲಿರುವ ಶೇ. 60ರಷ್ಟು ಜನರ ಸಂಪತ್ತು 2020ರಿಂದೀಚೆ ಕರಗಿ ಹೋಗಿದೆ ಎಂದು ಆಕ್ಸ್​ಫಾಮ್ ವರದಿಯಲ್ಲಿ ಹೇಳಲಾಗಿದೆ. ಶೇ. 60 ಎಂದರೆ 477 ಕೋಟಿ ಜನಸಂಖ್ಯೆ.

ಶ್ರೀಮಂತರ ಬಳಿ ಅತ್ಯಧಿಕ ಸಂಪತ್ತು

ಆಕ್ಸ್​ಫಾಮ್ ವರದಿಯಲ್ಲಿ ಗಮನಕ್ಕೆ ಬರುವ ಇನ್ನೊಂದು ಪ್ರಮುಖ ಸಂಗತಿ ಎಂದರೆ ವಿಶ್ವದ ಅತಿ ಶ್ರೀಮಂತ ಎನಿಸಿರುವ ಶೇ. 1ರಷ್ಟು ಜನರ ಬಳಿ ಜಗತ್ತಿನ ಶೇ. 59ರಷ್ಟು ಹಣಕಾಸು ಆಸ್ತಿ ಶೇಖರಣೆ ಆಗಿದೆ. ಹಣಕಾಸು ಆಸ್ತಿ ಎಂದರೆ ಷೇರು, ಬಾಂಡು, ಬಿಸಿನೆಸ್ ಇತ್ಯಾದಿ ಒಡೆತನ. ಭಾರತದಲ್ಲಿ ಶೇ. 1ರಷ್ಟು ಶ್ರೀಮಂತರ ಬಳಿ ಇರುವ ಆಸ್ತಿ ಶೇ. 40ರಷ್ಟು ಎನ್ನಲಾಗಿದೆ.

ಇದನ್ನೂ ಓದಿ: Inspiring Story: ಒಂದು ಕಾಲದಲ್ಲಿ ಆಫೀಸ್ ಜವಾನರಾಗಿದ್ದ ಪರೇಖ್ 1.39 ಲಕ್ಷ ಕೋಟಿ ರೂ ಉದ್ಯಮ ಸಾಮ್ರಾಜ್ಯ ಕಟ್ಟಿದ ಕಥೆ

ಬಡವರು ಮತ್ತು ಶ್ರೀಮಂತರ ನಡುವೆ ಅಂತರ ಇನ್ನಷ್ಟು ಹೆಚ್ಚಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ಅತಿಹೆಚ್ಚು ಅಂತರ ಇದೆ. ವಿಶ್ವದ ಸರಾಸರಿ ಅಂತರ ಕೂಡ ದಕ್ಷಿಣ ಆಫ್ರಿಕಾದ ಮಟ್ಟಕ್ಕೆ ಬರುತ್ತಿದೆ ಎಂದು ಆಕ್ಸ್​ಫ್ಯಾಮ್ ವರದಿ ಹೇಳುತ್ತದೆ.

ಇನ್ನು, 52 ದೇಶಗಳಲ್ಲಿ 80 ಕೋಟಿ ಕಾರ್ಮಿಕ ಸರಾಸರಿ ವೇತನ ಕಡಿಮೆ ಆಗಿದೆ. ಈ ಕಾರ್ಮಿಕರು ಕಳೆದ ಎರಡು ರ್ಷದಲ್ಲಿ 1.8 ಟ್ರಿಲಿಯನ್ ಡಾಲರ್​ನಷ್ಟು ವೇತನ ಕಡಿಮೆ ಪಡೆದಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ