AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pakistan’s Fall: ಭಾರತ, ಸೌತ್ ಕೊರಿಯಾಗಿಂತಲೂ ಶ್ರೀಮಂತವಾಗಿದ್ದ ಪಾಕಿಸ್ತಾನ ಎಡವಿದ್ದು ಎಲ್ಲಿ? ಇಲ್ಲಿವೆ ರೋಚಕ ಅಂಶಗಳು

Telling tale of Pakistan's decline: 20ನೇ ಶತಮಾನದ ಅರತ್ತರ ದಶಕವು ಪಾಕಿಸ್ತಾನದ ಪಾಲಿಗೆ ಗೋಲ್ಡನ್ ವರ್ಷಗಳೆನಿಸಿವೆ. ಆರ್ಥಿಕ ಯೋಜನೆಗಳು ಹೇಗಿರಬೇಕು ಎಂದು ಒಂದು ಕಾಲದಲ್ಲಿ ಸೌತ್ ಕೊರಿಯಾ ಪಾಕ್ ಸಲಹೆ ಪಡೆಯುತ್ತಿತ್ತು. ಈಗ ಒಂದು ದೇಶದ ನೀತಿ, ಯೋಜನೆಗಳು ಹೇಗಿರಬಾರದು ಎಂಬುದಕ್ಕೆ ಪಾಕಿಸ್ತಾನ ಮಾದರಿಯಾಗಿದೆ.

Pakistan's Fall: ಭಾರತ, ಸೌತ್ ಕೊರಿಯಾಗಿಂತಲೂ ಶ್ರೀಮಂತವಾಗಿದ್ದ ಪಾಕಿಸ್ತಾನ ಎಡವಿದ್ದು ಎಲ್ಲಿ?  ಇಲ್ಲಿವೆ ರೋಚಕ ಅಂಶಗಳು
ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ, ಟರ್ಕಿ ಯುದ್ಧ ಉಪಕರಣಗಳನ್ನು ಕಳುಹಿಸುವ ಮೂಲಕ ಪಾಕಿಸ್ತಾನಕ್ಕೆ ತನ್ನ ಬೆಂಬಲವನ್ನು ತೋರಿಸಿದೆ. ಈ ಕ್ರಮವು ಎರಡು ರಾಷ್ಟ್ರಗಳ ನಡುವಿನ ವಿಶಾಲ ರಕ್ಷಣಾ ಸಹಕಾರದ ಭಾಗವಾಗಿದೆ ಎಂದು ಮೂಲಗಳು ಹೇಳಿವೆ. ಕರಾಚಿಯ ಜೊತೆಗೆ, ಆರು ಟರ್ಕಿಶ್ ಸಿ -130 ವಿಮಾನಗಳು ಇಸ್ಲಾಮಾಬಾದ್‌ನ ಮಿಲಿಟರಿ ನೆಲೆಯಲ್ಲಿ ಬಂದಿಳಿದಿವೆ ಎಂದು ವರದಿಯಾಗಿದೆ.
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 24, 2025 | 7:01 PM

ಪಾಕಿಸ್ತಾನ (Pakistan) ಭಿಕಾರಿ ದೇಶ ಎಂದು ಹಂಗಿಸುವವರಿದ್ದಾರೆ. ಅದು ಒಂದು ರೀತಿಯಲ್ಲಿ ನಿಜವೂ ಹೌದು. ಆದರೆ, ಕೇವಲ ಐದು ದಶಕದ ಹಿಂದೆ ಪಾಕಿಸ್ತಾನವು ದಕ್ಷಿಣ ಏಷ್ಯಾದಲ್ಲೇ ಶ್ರೀಮಂತ ದೇಶ ಎನಿಸಿತ್ತು. ಅದರ ಜಿಡಿಪಿ ತಲಾದಾಯ (Per capita GDP) ಭಾರತದಕ್ಕಿಂತ ಎರಡು ಪಟ್ಟು ಹೆಚ್ಚು ಇತ್ತು. ಸೌತ್ ಕೊರಿಯಾಗಿಂತಲೂ ಹೆಚ್ಚು ಪರ್ ಕ್ಯಾಪಿಟಾ ಇನ್ಕಮ್ ಹೊಂದಿತ್ತು. ಅದರ ಆರ್ಥಿಕ ಪ್ಲಾನಿಂಗ್ ಹೇಗಿತ್ತೆಂದರೆ, ದಕ್ಷಿಣ ಕೊರಿಯಾದವರು ಪಾಕಿಸ್ತಾನದ ಬಳಿ ಸಲಹೆಗಳನ್ನು ಪಡೆದುಕೊಂಡು ಹೋಗುತ್ತಿದ್ದಂತೆ. ಅಂತಿಪ್ಪ ಪಾಕಿಸ್ತಾನ ಈಗ ಭಿಕಾರಿ ದೇಶವಾಗುವ ಮಟ್ಟಕ್ಕೆ ಕುಸಿದಿದ್ದು ಹೇಗೆ? ಒಂದು ದೇಶದ ಗುರಿ ತಪ್ಪಿದರೆ ಹೇಗಿರುತ್ತದೆ ಎಂಬುದಕ್ಕೆ ಪಾಕಿಸ್ತಾನವೇ ಸಾಕ್ಷಿ.

ಅಖಂಡ ಭಾರತದ ವಿಭಜನೆಯಾದಾಗ ಬಲಿಷ್ಠ ಪಾಕಿಸ್ತಾನದ ನಿರ್ಮಾಣ…

ಬ್ರಿಟಿಷರಿಂದ ಭಾರತ ಸ್ವಾತಂತ್ರ್ಯ ಪಡೆಯುವಾಗ ಅದರ ವಿಭಜನೆಯಾಗಿ ಪಾಕಿಸ್ತಾನ ನಿರ್ಮಾಣವಾಯಿತು. ಆಗ ಹೆಚ್ಚಿನ ಕೈಗಾರಿಕೆಗಳು, ಉದ್ಯಮಗಳು ಪಾಕಿಸ್ತಾನದ ಭಾಗಗಳಲ್ಲಿ ನೆಲಸಿದ್ದುವು. ಲಾಹೋರ್, ಕರಾಚಿ, ಪೇಶಾವರ ನಗರಗಳು ಸಾಕಷ್ಟು ಉದ್ಯಮ ಚಟುವಟಿಕೆಗಳ ಕೇಂದ್ರವಾಗಿದ್ದುವು. ಈಗ ಬಾಂಗ್ಲಾದೇಶ ಇರುವ, ಅಂದಿನ ಪೂರ್ವ ಪಾಕಿಸ್ತಾನದಲ್ಲಿ ಹೆಚ್ಚಿನ ಜವಳಿ ಉದ್ಯಮಗಳು ನೆಲಸಿದ್ದವು. ಹೀಗಾಗಿ, ಪಾಕಿಸ್ತಾನ ಹುಟ್ಟುವಾಗಲೇ ಶ್ರೀಮಂತ ದೇಶವಾಗಿತ್ತು.

ಅರವತ್ತರ ದಶಕ ಪಾಕಿಸ್ತಾನಕ್ಕೆ ಚಿನ್ನದ ಯುಗ

ಸ್ವಾತಂತ್ರ್ಯಾನಂತರ ಸಿಕ್ಕ ಬಲವನ್ನು ಪಾಕಿಸ್ತಾನ ಕಾಪಾಡಿಕೊಂಡಿತು. ಪೂರ್ವ ಪಾಕಿಸ್ತಾನದ ರೀತಿಯಲ್ಲಿ ಪಶ್ಚಿಮದಲ್ಲೂ ಪಂಜಾಬ್ ಮತ್ತು ಸಿಂಧ್​​ನಲ್ಲಿ ಜವಳಿ ಉದ್ಯಮಗಳನ್ನು ಸ್ಥಾಪಿಸಿತು. ತಯಾರಕಾ ಉದ್ಯಮವು ವರ್ಷಕ್ಕೆ ಶೇ. 9.4ರ ದರದಲ್ಲಿ ಬೆಳೆಯಿತು. ಆಗ ಭಾರತದ ಮ್ಯಾನುಫ್ಯಾಕ್ಚರಿಂಗ್ ಸೆಕ್ಟರ್ ಬೆಳವಣಿಗೆ ಶೇ. 6.5ಕ್ಕೆ ಸೀಮಿತವಾಗಿತ್ತು.

ಇದನ್ನೂ ಓದಿ
Image
ಅಟ್ಟಾರಿ ಬಂದ್ ಎಫೆಕ್ಟ್; ಪಾಕಿಸ್ತಾನದ ಷೇರುಪೇಟೆ ಕುಸಿತ
Image
ಭಾರತ-ಪಾಕಿಸ್ತಾನದ ಮಿಲಿಟರಿ ಬಲ ಹೇಗಿದೆ?
Image
ಪಹಲ್​​ಗಾಂ ಘಟನೆಯಿಂದ ಪಾಕ್ ಆರ್ಥಿಕತೆಗೆ ಎಷ್ಟು ಹಾನಿ?
Image
ಭಾರತದಿಂದ ಸಿಂಧೂ ನದಿ ನೀರು ಒಪ್ಪಂದ ಸ್ಥಗಿತ, ಪಾಕಿಸ್ತಾನಕ್ಕಾಗುವ ನಷ್ಟವೇನು?

ಇದನ್ನೂ ಓದಿ: ಗಡಗಡ ನಡುಗಿದ ಪಾಕಿಸ್ತಾನದ ಷೇರುಪೇಟೆ; ಅಟ್ಟಾರಿ ಗಡಿ, ಸಿಂಧೂ ಜಲ ಒಪ್ಪಂದ ಮುಚ್ಚಿದ್ದು ಶಾಕ್ ಕೊಟ್ಟಿತಾ?

ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಆಯುಬ್ ಖಾನ್ 1958ರಿಂದ 1969ರವರೆಗೂ ಪಾಕಿಸ್ತಾನದ ಆಡಳಿತ ಚುಕ್ಕಾಣಿ ಹಿಡಿದಿದ್ದರು. ಅವರ ಆಡಳಿತದಲ್ಲಿ ಪಾಕಿಸ್ತಾನ ಅಮೋಘವಾಗಿ ಬಳೆಯಿತು. ಖಾಸಗೀಕರಣ, ಉದ್ಯಮ, ರಫ್ತು, ತಯಾರಿಕೆ ಇತ್ಯಾದಿಗೆ ಒತ್ತುಕೊಡುವ ನೀತಿಗಳನ್ನು ಅವರು ಜಾರಿಗೆ ತಂದರು. ಅವರ ಅವಧಿಯಲ್ಲಿ ಜಿಡಿಪಿ ತಲಾದಾಯ ಶೇ. 4.3ರ ವಾರ್ಷಿಕ ದರದಲ್ಲಿ ಹೆಚ್ಚಾಗುತ್ತಾ ಹೋಗಿತ್ತು. ಭಾರತದ ತಲಾದಾಯ ಹೆಚ್ಚಾಗಿದ್ದು ಶೇ. 1.7 ಮಾತ್ರವೇ.

ಅಮೆರಿಕದಿಂದಲೂ ಪಾಕಿಸ್ತಾನಕ್ಕೆ ನೆರವು…

ರಷ್ಯಾ ಜೊತೆಗಿನ ಶೀತಲ ಸಮರದಲ್ಲಿ ಅಮೆರಿಕ ತನ್ನ ಬೆಂಬಲಕ್ಕೆ ಇಟ್ಟುಕೊಂಡಿದ್ದು ಪಾಕಿಸ್ತಾನವನ್ನು. ಹೀಗಾಗಿ, ಪಾಕಿಸ್ತಾನಕ್ಕೆ ಅಮೆರಿಕದಿಂದ ಧಾರಾಳವಾಗಿ ಫಂಡಿಂಗ್ ಸಿಗುತ್ತಾ ಹೋಗಿತ್ತು. ಇದನ್ನು ಜನರಲ್ ಆಯುಬ್ ಬಹಳ ಸಮರ್ಥವಾಗಿ ಬಳಸಿಕೊಂಡರು. ಪಾಕಿಸ್ತಾನದ ಇನ್​​ಫ್ರಾಸ್ಟ್ರಕ್ಚರ್ ಉತ್ತಮಗೊಂಡಿದ್ದು ಆಗಲೆ.

ಪಾಕಿಸ್ತಾನ ದಿವಾಳಿಯಾಗುವ ಹಂತಕ್ಕೆ ಬಂದಿದ್ದು ಹೇಗೆ?

ಜನರಲ್ ಆಯುಬ್ ನಂತರ ಪಾಕಿಸ್ತಾನದ ಆಡಳಿತ ಚುಕ್ಕಾಣಿ ಹಿಡಿದವರು ನಡೆಸಿದ ದುರಾಡಳಿತದ ಫಲವಾಗಿ ಇಂದು ಆ ದೇಶ ದಿವಾಳಿ ಅಂಚಿಗೆ ಬಂದು ನಿಲ್ಲುವಂತಾಗಿದೆ. ಜುಲ್ಫಿಕರ್ ಅಲಿ ಭುಟ್ಟೋ 1972ರಲ್ಲಿ 31 ಕೈಗಾರಿಕೆಗಳನ್ನು ರಾಷ್ಟ್ರೀಕರಣಗೊಳಿಸಿದರು. ಜನರಲ್ ಆಯುಬ್ ಅವರ ಖಾಸಗಿಕರಣ ಯತ್ನವೆಲ್ಲಾ ನೀರಲ್ಲಿ ಹೋಮ ಮಾಡಿದಂತಾಗಿತ್ತು. ರಾಷ್ಟ್ರೀಕರಣದಿಂದಾಗಿ ವಿದೇಶೀ ಹೂಡಿಕೆದಾರರು ಪಾಕಿಸ್ತಾನದಿಂದ ನಿರ್ಗಮಿಸತೊಡಗಿದರು. ಕ್ರಮೇಣವಾಗಿ ಅಲ್ಲಿಯ ಆರ್ಥಿಕತೆಯು ತಾಳ ತಪ್ಪತೊಡಗಿತು.

ಇದನ್ನೂ ಓದಿ: ಯಾರ ಬಲ ಹೆಚ್ಚು? ಭಾರತ ಮತ್ತು ಪಾಕಿಸ್ತಾನದ ಮಿಲಿಟರಿ ಶಕ್ತಿಗಳ ಒಂದು ಹೋಲಿಕೆ

ಭಾರತವೂ ಇಂದಿರಾ ಅವಧಿಯಲ್ಲಿ ರಾಷ್ಟ್ರೀಕರಣ ನೀತಿ ತರಲಾಗಿತ್ತಾದರೂ 1990ರ ಬಳಿಕ ಉದಾರ ಆರ್ಥಿಕ ನೀತಿ ಅನುಸರಿಸತೊಡಗಿತು. ಖಾಸಗಿ ವಲಯ ಗರಿಗೆದರಿತು. ಭಾರತದ ಪ್ರಗತಿ ಅಲ್ಲಿಂದ ಶುರುವಾಯಿತು.

ಆದರೆ, ಪಾಕಿಸ್ತಾನಕ್ಕೆ ಅಷ್ಟರಲ್ಲಾಗಲೇ ಅದರ ಆದ್ಯತೆಗಳು ಬದಲಾಗಿದ್ದುವು. ಸರ್ಕಾರಗಳು ಕ್ಷಿಪ್ರವಾಗಿ ಬದಲಾಗುತ್ತಾ ಹೋದವು. ಮಿಲಿಟರಿ ಮಧ್ಯಪ್ರವೇಶ ಬಹಳ ಸುಲಭವಾಯಿತು. ಪ್ರಜಾತಾಂತ್ರಿಕತೆ ಬಹಳ ದುರ್ಬಲಗೊಂಡಿತು. ಕೋಲ್ಡ್ ವಾರ್​ನಲ್ಲಿ ಅಮೆರಿಕದೊಂದಿಗೆ ಸೇರಿದ್ದು ಸೇರಿ ಬೇರೆ ಬೇರೆ ಕಾರಣಕ್ಕೆ ಭಯೋತ್ಪಾದಕರು ಸೃಷ್ಟಿಯಾಗತೊಡಗಿದರು. ಭಯೋತ್ಪಾದನೆ ಹೆಚ್ಚಾಯಿತು.

ಬಾಂಗ್ಲಾದೇಶ ಬೇರೆಯಾಗಿದ್ದು ಪಾಕಿಸ್ತಾನಕ್ಕೆ ಹೊಡೆತ

1971ರಲ್ಲಿ ಪೂರ್ವ ಪಾಕಿಸ್ತಾನವಾಗಿದ್ದ ಬಾಂಗ್ಲಾದೇಶ ಭಾರತದ ನೆರವಿನಿಂದ ಬೇರ್ಪಟ್ಟು ಸ್ವತಂತ್ರ ರಾಷ್ಟ್ರವಾಯಿತು. ಇದು ಪಾಕಿಸ್ತಾನದ ಪತನದ ಆರಂಭವೆಂಬಂತಾಯಿತು. ಇಲ್ಲಿಂದ ಪಾಕಿಸ್ತಾನದ ಆದ್ಯತೆಗಳು ಬದಲಾದವು. ಅಭಿವೃದ್ಧಿ ಬದಲು ಮತಾಂಧತೆಗೆ ಒತ್ತು ಸಿಗತೊಡಗಿತು.

ಯುದ್ಧಗಳಿಂದ ಜರ್ಝರಿತಗೊಂಡ ಪಾಕಿಸ್ತಾನ

ಭಾರತದ ಜೊತೆ ಪಾಕಿಸ್ತಾನ ಮೂರು ಬಾರಿ ಯುದ್ಧ ಮಾಡಿದೆ. ಆದರೆ, ಸೋವಿಯತ್ ರಷ್ಯಾ ಹಾಗೂ ಅಫ್ಘಾನಿಸ್ತಾನ ಯುದ್ಧದಲ್ಲಿ ಅಮೆರಿಕವು ಪಾಕಿಸ್ತಾನವನ್ನು ಪ್ರಾಕ್ಸಿಯಾಗಿ ಬಳಸಿಕೊಂಡಿತು. ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಒದಗಿಸತೊಡಗಿತು. ಪರಿಣಾಮವಾಗಿ ಪಾಕಿಸ್ತಾನವು ಡಿಫೆನ್ಸ್ ಕ್ಷೇತ್ರಕ್ಕೆ ಹೆಚ್ಚಿನ ವೆಚ್ಚ ಮಾಡತೊಡಗಿತು. ಉಗ್ರಗಾಮಿ ಉಪಟಳ ಹೆಚ್ಚಾಗತೊಡಗಿತು. ಪ್ರವಾಸೋದ್ಯಮ, ಹೂಡಿಕೆ ನಶಿಸಿತು.

ಉದ್ಯಮ ಬೆಳವಣಿಗೆ ಬದಲು ನೆರವಿಗೆ ಅವಲಂಬಿತವಾದ ಪಾಕಿಸ್ತಾನ

ಅಮೆರಿಕದಿಂದ ಪಾಕಿಸ್ತಾನಕ್ಕೆ ಧಾರಾಳವಾಗಿ ನೆರವು ಸಿಗುತ್ತಿತ್ತು. ಇದು ಪಾಕಿಸ್ತಾನಕ್ಕೆ ಒಂದು ರೀತಿಯಲ್ಲಿ ಅವಲಂಬನೆಯ ಮನಸ್ಥಿತಿ ತಂದಿತ್ತು. ಆರ್ಥಿಕತೆಗೆ ಪುಷ್ಟಿ ನೀಡಲು ವ್ಯಾಪಾರ ವಹಿವಾಟು, ಉದ್ಯಮ ಚಟುವಟಿಕೆ ಹೆಚ್ಚಿಸುವ ಬದಲು ಐಎಂಎಫ್ ಇತ್ಯಾದಿ ಅಂತಾರಾಷ್ಟ್ರೀಯ ಏಜೆನ್ಸಿಗಳಿಂದ ನೆರವಿಗೆ ಪದೇ ಪದೇ ಕೈಚಾಚುತ್ತಿತ್ತು ಪಾಕಿಸ್ತಾನ. ಐಎಂಎಫ್​​ನಿಂದ ಬರೋಬ್ಬರಿ 23 ಬಾರಿ ನೆರವಿನ ಪ್ಯಾಕೇಜ್ ಪಡೆದಿದೆ.

ಇದನ್ನೂ ಓದಿ: ಭಾರತದ ಮೇಲೆ ಪಾಕಿಸ್ತಾನ ಅವಲಂಬನೆ ಎಷ್ಟು? ಸಂಬಂಧ ಪೂರ್ತಿ ಕಡಿತವಾದರೆ ಪಾಕ್​​ಗೆ ಆಗೋ ನಷ್ಟವೆಷ್ಟು?

ಚೀನಾದಿಂದ ಸಾಲದ ಗಾಳ

ಪಾಕಿಸ್ತಾನಕ್ಕೆ ಚೀನಾ ಕೂಡ ಸಾಕಷ್ಟು ಸಾಲ ಕೊಡುತ್ತಿದೆ. ಆದರೆ, ಇದಕ್ಕೆ ಬಡ್ಡಿದರ ಶೇ. 6ರವರೆಗೂ ಇರುತ್ತದೆ. ಅದೇ ಐಎಂಎಫ್​​​ನಿಂದ ಪಡೆಯುವ ಸಾಲಕ್ಕೆ ಶೇ. 3 ಮಾತ್ರವೇ ಬಡ್ಡಿ ಇರುತ್ತದೆ. ಚೀನಾದಿಂದ ದುಬಾರಿ ಸಾಲ ಪಡೆದು ಅದನ್ನು ಚೀನಾ ಹೇಳಿದ ಯೋಜನೆಗಳಿಗೆ ವಿನಿಯೋಗಿಸಬೇಕು. ಆ ಯೋಜನೆಗಳು ಚೀನಾಗೆ ನೆರವಾಗುವಂತಿರುತ್ತವೆಯೇ ಹೊರತು ಪಾಕಿಸ್ತಾನದ ಆರ್ಥಿಕತೆಗೆ ಸಹಾಯವಾಗುವುದು ಕಡಿಮೆ. ಹೀಗಾಗಿ, ನಿರರ್ಥಕ ವೆಚ್ಚಕ್ಕೆ ಸಾಲ ಮಾಡಿ ಬರ್ಬಾದ್ ಆಗುತ್ತಿದೆ ಪಾಕಿಸ್ತಾನ.

ರಫ್ತಿಗಿಂತ ರೆಮಿಟೆನ್ಸ್​​ನಿಂದ ಹೆಚ್ಚು ಆದಾಯ, ಇದು ಪಾಕಿಸ್ತಾನದ ಸ್ಥಿತಿ…

ಪಾಕಿಸ್ತಾನ 2022ರಲ್ಲಿ 27 ಬಿಲಿಯನ್ ಡಾಲರ್​​ನಷ್ಟು ರಫ್ತು ಮಾಡಿತ್ತು. ಅದೇ ವರ್ಷ, ಅನಿವಾಸಿ ಪಾಕಿಸ್ತಾನೀಯರು ತಮ್ಮ ತವರಿಗೆ ಕಳುಹಿಸಿದ ಹಣ 31.2 ಬಿಲಿಯನ್ ಡಾಲರ್. ಅಂದರೆ, ಹೊರದೇಶಕ್ಕೆ ಹೋಗಿ ದುಡಿಯುವ ಪಾಕಿಸ್ತಾನೀಯರು ತಮ್ಮ ದೇಶದ ಆರ್ಥಿಕತೆಯ ಜೀವಾಳವಾಗಿದ್ದಾರೆ.

ಪಾಕಿಸ್ತಾನಕ್ಕೆ ಮಾರಕವಾಗಿದೆ ಕಾಶ್ಮೀರದ ಹುಚ್ಚು…

ಭಾರತದಿಂದ ಕಾಶ್ಮೀರವನ್ನು ಹೇಗಾದರೂ ಮಾಡಿ ಕಿತ್ತುಕೊಳ್ಳಬೇಕು ಎನ್ನುವ ಧೋರಣೆ ಪಾಕಿಸ್ತಾನಕ್ಕೆ ಮುಳುವಾಗಿ ಪರಿಣಮಿಸಿದೆ. ಈ ಮತಾಂಧತೆಯು ಪಾಕಿಸ್ತಾನಕ್ಕೆ ವಿವಿಧ ಸ್ತರಗಳಲ್ಲಿ ಪೆಟ್ಟುಕೊಟ್ಟಿದೆ. ಭಾರತದೊಂದಿಗೆ ಸಂಬಂಧ ಸುಧಾರಣೆ ಆಗದಂತಾಗಿದೆ. ಭಯೋತ್ಪಾದಕರು ಕೈಮೀರಿ ಹೋಗುವಂತಾಗಿದೆ. ಅನಿವಾರ್ಯವಾಗಿ ಚೀನಾದ ಗಾಳಕ್ಕೆ ಸಿಲುಕುವಂತಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅರ್ ವಿ ರೋಡ್-ಬೊಮ್ಮಸಂದ್ರ ಪ್ರಯಾಣ ಸಮಯ ಅರ್ಧದಷ್ಟು ಕಡಿಮೆ!
ಅರ್ ವಿ ರೋಡ್-ಬೊಮ್ಮಸಂದ್ರ ಪ್ರಯಾಣ ಸಮಯ ಅರ್ಧದಷ್ಟು ಕಡಿಮೆ!
ನೀವು ಸುಮ್ಮನಿದ್ದರೆ ಅದೇ ದೊಡ್ಡ ಸೇವೆ: ಜಮೀರ್​ಗೆ ಜೋಶಿ ಟಾಂಗ್
ನೀವು ಸುಮ್ಮನಿದ್ದರೆ ಅದೇ ದೊಡ್ಡ ಸೇವೆ: ಜಮೀರ್​ಗೆ ಜೋಶಿ ಟಾಂಗ್
ಮಾಹಿತಿ ಕೊಡದೆ ಕ್ಷೇತ್ರಕ್ಕೆ ಬರ್ತೀರಿ: ಸಚಿವರಿಗೆ ಕೈ ಕಾರ್ಯಕರ್ತ ಕ್ಲಾಸ್​​!
ಮಾಹಿತಿ ಕೊಡದೆ ಕ್ಷೇತ್ರಕ್ಕೆ ಬರ್ತೀರಿ: ಸಚಿವರಿಗೆ ಕೈ ಕಾರ್ಯಕರ್ತ ಕ್ಲಾಸ್​​!
ಭಾರತದಿಂದ ಯುದ್ಧದ ಭೀತಿ; ಪಾಕಿಸ್ತಾನದಿಂದ ಕ್ಷಿಪಣಿ ಪರೀಕ್ಷೆ ಯಶಸ್ವಿ
ಭಾರತದಿಂದ ಯುದ್ಧದ ಭೀತಿ; ಪಾಕಿಸ್ತಾನದಿಂದ ಕ್ಷಿಪಣಿ ಪರೀಕ್ಷೆ ಯಶಸ್ವಿ
ತಮ್ಮ ಭಾಷಣದಲ್ಲಿ ಸಿದ್ದರಾಮಯ್ಯರನ್ನು ಎಡೆಬಿಡದೆ ಹೊಗಳಿದ ವಿಶ್ವನಾಥ್
ತಮ್ಮ ಭಾಷಣದಲ್ಲಿ ಸಿದ್ದರಾಮಯ್ಯರನ್ನು ಎಡೆಬಿಡದೆ ಹೊಗಳಿದ ವಿಶ್ವನಾಥ್
ಸೋನು ನಿಗಂ ಮೇಲೆ ನಿಷೇಧ ಹೇರಿ: ರೂಪೇಶ್ ರಾಜಣ್ಣ ಒತ್ತಾಯ
ಸೋನು ನಿಗಂ ಮೇಲೆ ನಿಷೇಧ ಹೇರಿ: ರೂಪೇಶ್ ರಾಜಣ್ಣ ಒತ್ತಾಯ
ಸೀಟ್​​ ಸಿಗದಿದ್ದಕ್ಕೆ ಬಸ್​ ಮುಂದೆ ಮಲಗಿದ ವೃದ್ಧ: ಮುಂದೇನಾಯ್ತು?
ಸೀಟ್​​ ಸಿಗದಿದ್ದಕ್ಕೆ ಬಸ್​ ಮುಂದೆ ಮಲಗಿದ ವೃದ್ಧ: ಮುಂದೇನಾಯ್ತು?
ತಮ್ಮ ಬೀಗ ಬೈರತಿ ಸುರೇಶ್​ಗೂ ಖಡ್ಗ ನೀಡಿ ಗೌರವಿಸಿದ ವಿಶ್ವನಾಥ್
ತಮ್ಮ ಬೀಗ ಬೈರತಿ ಸುರೇಶ್​ಗೂ ಖಡ್ಗ ನೀಡಿ ಗೌರವಿಸಿದ ವಿಶ್ವನಾಥ್
ಅಶ್ರಫ್ ಕೊಲೆ ಪ್ರಕರಣಕ್ಕೆ ನ್ಯಾಯ ಕೇಳಿದ ಮುಸ್ಲಿಂ ಮುಖಂಡರು
ಅಶ್ರಫ್ ಕೊಲೆ ಪ್ರಕರಣಕ್ಕೆ ನ್ಯಾಯ ಕೇಳಿದ ಮುಸ್ಲಿಂ ಮುಖಂಡರು
ಕನ್ನಡ ಚಿತ್ರರಂಗದಿಂದ ಸೋನು ನಿಗಂಗೆ ನಿಷೇಧ: ಉಮೇಶ್ ಬಣಕಾರ್ ಹೇಳಿದ್ದೇನು?
ಕನ್ನಡ ಚಿತ್ರರಂಗದಿಂದ ಸೋನು ನಿಗಂಗೆ ನಿಷೇಧ: ಉಮೇಶ್ ಬಣಕಾರ್ ಹೇಳಿದ್ದೇನು?