ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ಗೆ ಆರ್ಬಿಐ ನಿರ್ಬಂಧ ವಿಧಿಸಿ ಕೆಲವಾರು ದಿನಗಳಾದರೂ ಪೇಟಿಎಂ ಭವಿಷ್ಯದ ಬಗ್ಗೆ ಬಹಳಷ್ಟು ಮಂದಿಗೆ ಈಗಲೂ ಗೊಂದಲಗಳಿವೆ. ಅದಕ್ಕೆ ಕಾರಣ ಪೇಟಿಎಂ ಮತ್ತು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ (Paytm Payments Bank) ನಡುವಿನ ಗಾಢ ಬೆಸುಗೆ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ನಲ್ಲಿ ಫೆಬ್ರುವರಿ 29ರ ನಂತರ ಯಾವುದೇ ಹೊಸ ಡೆಪಾಸಿಟ್ ಪಡೆಯುವಂತಿಲ್ಲ. ಪೇಟಿಎಂ ಪೇಮೆಂಟ್ಸ್ ಸರ್ವಿಸಸ್, ಒನ್97 ಕಮ್ಯೂನಿಕೇಶನ್ಸ್ ಸಂಸ್ಥೆಗಳು ಪೇಮೆಂಟ್ಸ್ ಬ್ಯಾಂಕ್ನಲ್ಲಿ ಹೊಂದಿರುವ ನೋಡಲ್ ಖಾತೆಗಳನ್ನು ಬೇರೆ ಬ್ಯಾಂಕೊಂದಕ್ಕೆ ಫೆ. 29ರೊಳಗೆ ವರ್ಗಾಯಿಸುವಂತೆ ಆರ್ಬಿಐ ನಿರ್ದೇಶನ ನೀಡಿದೆ. ಈ ಮಧ್ಯೆ ಪೇಟಿಎಂನ ಯಾವೆಲ್ಲಾ ಸೇವೆಗಳು ಸ್ಥಗಿತಗೊಳ್ಳಬಹುದು ಎಂಬ ಗೊಂದಲ ಮಾತ್ರ ಸ್ವಲ್ಪ ಉಳಿದುಕೊಂಡಿದೆ.
ಪೇಟಿಎಂ ಆ್ಯಪ್ನಲ್ಲಿ ಹಲವು ಸೇವೆಗಳಿವೆ. ಬ್ಯಾಂಕ್, ಷೇರು ವಹಿವಾಟು, ಸಾಲ, ಇನ್ಷೂರೆನ್ಸ್, ವ್ಯಾಲಟ್, ಬಿಲ್ ಪಾವತಿ, ಒಎನ್ಡಿಸಿ, ಫಾಸ್ಟ್ಯಾಗ್ ಇತ್ಯಾದಿ ನಾನಾ ರೀತಿಯ ಸೇವೆಗಳನ್ನು ಪೇಟಿಎಂ ಒದಗಿಸುತ್ತದೆ. ಈಗ ನಿರ್ಬಂಧ ಇರುವುದು ಪೇಟಿಎಂ ಪೇಮೆಂಟ್ ಬ್ಯಾಂಕ್ಗೆ ಮಾತ್ರ. ಪೇಟಿಎಂನ ಯಾವೆಲ್ಲಾ ಸೇವೆಗಳು ಪೇಮೆಂಟ್ ಬ್ಯಾಂಕ್ಗೆ ತಳುಕು ಹಾಕಿಕೊಂಡಿವೆಯೋ ಅವೆಲ್ಲವೂ ಬಾಧಿತವಾಗುತ್ತವೆ. ಆರ್ಬಿಐ ನಿರ್ದೇಶನದಂತೆ ಪೇಟಿಎಂ ಪೇಮೆಂಟ್ ಸರ್ವಿಸ್ ಮತ್ತು ಒನ್97 ಕಮ್ಯೂನಿಕೇಶನ್ಸ್ ಸಂಸ್ಥೆಗಳು ಪೇಮೆಂಟ್ ಬ್ಯಾಂಕ್ನಲ್ಲಿರುವ ತಮ್ಮ ನೋಡಲ್ ಅಕೌಂಟ್ಗಳನ್ನು ಬೇರೆ ಬ್ಯಾಂಕುಗಳ ಕಡೆ ವರ್ಗಾಯಿಸಿದರೆ ಯಾವ ಸಮಸ್ಯೆಯೂ ಇರುವುದಿಲ್ಲ. ಪೇಟಿಎಂ ಸಿಇಒ ವಿಜಯ್ ಶೇಖರ್ ಶರ್ಮಾ ಹೇಳಿದಂತೆ ಫೆ. 29ರ ಬಳಿಕವೂ ಪೇಟಿಎಂ ಯಥಾ ಪ್ರಕಾರ ಮುಂದುವರಿಯುತ್ತದೆ.
ಇದನ್ನೂ ಓದಿ: ಪೇಟಿಎಂ ಫಾಸ್ಟ್ಯಾಗ್, ವ್ಯಾಲಟ್ ಬಳಕೆ ನಿಲ್ಲಿಸಬೇಕಿಲ್ಲ; ಅಷ್ಟಕ್ಕೂ ಆರ್ಬಿಐ ನಿರ್ಬಂಧ ಹಾಕಿದ್ದು ಯಾಕೆ, ಡೀಟೇಲ್ಸ್ ನೋಡಿ
ಪೇಟಿಎಂ ಆರ್ಬಿಐ ನಿರ್ದೇಶನಗಳನ್ನು ಚಾಚೂತಪ್ಪದೇ ಪಾಲಿಸುವುದಾಗಿ ಹೇಳಿದೆ. ಅಂತೆಯೇ ಬೇರೆ ಬ್ಯಾಂಕುಗಳೊಂದಿಗೆ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿದೆ. ಹೀಗಾಗಿ, ಪೇಟಿಎಂ ಬಳಕೆದಾರರು ಹೆಚ್ಚು ಚಿಂತೆ ಪಡುವ ಅವಶ್ಯಕತೆ ಇರುವುದಿಲ್ಲ. ಈ ಕೆಳಗಿನ ಪೇಟಿಎಂ ಸೇವೆಗಳು ಏನಾಗಬಹುದು ನೋಡಿ…
ಇದನ್ನೂ ಓದಿ: ಫ್ರಾನ್ಸ್‌ನಲ್ಲಿ ಯುಪಿಐ ಬಳಕೆಗೆ ಚಾಲನೆ, ಭಾರತೀಯರು UPI ಮೂಲಕ ಪೇ ಮಾಡಬಹುದು!
ಕೊನೆಯದಾಗಿ ಸ್ಪಷ್ಟವಾಗಿ ಹೇಳುವುದಾದರೆ, ನೀವು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ನಲ್ಲಿ ಖಾತೆ ಹೊಂದಿದ್ದರೆ ಫೆಬ್ರುವರಿ 29ರ ಒಳಗೆ ಅದರಿಂದ ಹೊರಗೆ ಬನ್ನಿ. ನಿಮ್ಮ ಎಲ್ಲಾ ಹಣವನ್ನು ವರ್ಗಾಯಿಸಿಕೊಳ್ಳಿ. ಪೇಟಿಎಂಗೆ ಬೇರೆ ಬ್ಯಾಂಕ್ ಖಾತೆ ಲಿಂಕ್ ಆಗಿಲ್ಲದೇ ಇದ್ದರೆ ಮೊದಲು ಆ ಕೆಲಸ ಮಾಡಿ. ಇನ್ನುಳಿದಂತೆ ನೀವು ಪೇಟಿಎಂ ಅನ್ನು ಯಥಾ ಪ್ರಕಾರ ಬಳಕೆ ಮಾಡಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ