Life Certificate: ಪಿಂಚಣಿದಾರರು ಜೀವಿತ ಪ್ರಮಾಣ ಪತ್ರ ಸಲ್ಲಿಕೆಗೆ ಬರುತ್ತಿದೆ ದಿನ ಹತ್ತಿರ; ಇಲ್ಲಿದೆ ಆನ್ಲೈನ್ ಸಲ್ಲಿಕೆ ಮಾಹಿತಿ
ಪಿಂಚಣಿದಾರರು ವಾರ್ಷಿಕ ಜೀವಿತ ಪ್ರಮಾಣ ಪತ್ರವನ್ನು ಸಲ್ಲಿಸುವುದಕ್ಕೆ ಅಂತಿಮ ದಿನ ಹತ್ತಿರ ಆಗುತ್ತಿದೆ. ಆನ್‌ಲೈನ್‌ನಲ್ಲಿ ಸಲ್ಲಿಸುವುದು ಹೇಗೆ ಎಂಬ ಹಂತಹಂತವಾದ ವಿವರಣೆ ಇಲ್ಲಿದೆ.
ಪಿಂಚಣಿಯನ್ನು (Pension) ಜಮೆ ಮಾಡುವುದನ್ನು ಮುಂದುವರಿಸಲು ಪಿಂಚಣಿದಾರರು ತಮ್ಮ ಜೀವಿತ ಪ್ರಮಾಣಪತ್ರಗಳನ್ನು (Life Certificate) ಸಮಯಕ್ಕೆ ಸಲ್ಲಿಸುವುದು ಅತ್ಯವಶ್ಯ. ಸರ್ಕಾರಿ ಪಿಂಚಣಿದಾರರು ತಮ್ಮ ವಾರ್ಷಿಕ ಜೀವಿತ ಪ್ರಮಾಣಪತ್ರ ಅಥವಾ ಜೀವನ್ ಪ್ರಮಾಣ ಪತ್ರವನ್ನು ಸಲ್ಲಿಸಲು ಫೆಬ್ರವರಿ 28, 2022ಕ್ಕೆ ಗಡುವನ್ನು ನಿಗದಿಪಡಿಸಲಾಗಿದೆ. ಸಾಮಾನ್ಯವಾಗಿ ಜೀವನ್ ಪ್ರಮಾಣ ಪತ್ರವನ್ನು ಸಲ್ಲಿಸಲು ಕೊನೆಯ ದಿನಾಂಕವು ಪ್ರತಿ ವರ್ಷ ನವೆಂಬರ್ 30 ಆಗಿದೆ. ಆದರೆ ಸರ್ಕಾರಿ ಪಿಂಚಣಿದಾರರಿಗೆ ಪ್ರಮುಖ ಪರಿಹಾರ ಎಂಬಂತೆ ದಿನಾಂಕವನ್ನು ಈ ವರ್ಷ ಎರಡು ಬಾರಿ ವಿಸ್ತರಿಸಲಾಗಿದೆ.
ಡಿಜಿಟಲ್ ಲೈಫ್ ಸರ್ಟಿಫಿಕೇಟ್: ಪಿಂಚಣಿಗಳು ತಮ್ಮ ಬೆರಳ ತುದಿಯಲ್ಲಿ ತಮ್ಮ ಡಿಜಿಟಲ್ ಲೈಫ್ ಸರ್ಟಿಫಿಕೇಟ್ (ಜೀವನ್ ಪ್ರಮಾಣ) ಜನರೇಟ್ ಮಾಡಬಹುದು. ಡಿಜಿಟಲ್ ಪ್ರಮಾಣಪತ್ರವು ಬಯೋಮೆಟ್ರಿಕ್-ಸಕ್ರಿಯಗೊಳಿಸಿರುವುದರಿಂದ ಪಿಂಚಣಿದಾರರು ವಿತರಣೆ ಏಜೆನ್ಸಿಯ ಕಚೇರಿಗೆ ಹೋಗಬೇಕಾಗಿಲ್ಲ. ಆಧಾರ್-ಸಕ್ರಿಯಗೊಳಿಸಿದ ಬಯೋಮೆಟ್ರಿಕ್ ದೃಢೀಕರಣ ತಂತ್ರವನ್ನು ಬಳಸಿಕೊಂಡು ಇದನ್ನು ಜನರೇಟ್ ಮಾಡಬಹುದು. ಜೀವನ್ ಪ್ರಮಾಣ್ ವೆಬ್‌ಸೈಟ್ ಪ್ರಕಾರ, ಜೀವನ್ ಪ್ರಮಾಣ್ ಪಿಂಚಣಿದಾರರ ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಆಧಾರ್ ಪ್ಲಾಟ್‌ಫಾರ್ಮ್ ಅನ್ನು ಬಳಸುತ್ತದೆ. ಯಶಸ್ವಿ ದೃಢೀಕರಣವು ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಅನ್ನು ಜನರೇಟ್ ಮಾಡುತ್ತದೆ. ಅದನ್ನು ಲೈಫ್ ಸರ್ಟಿಫಿಕೇಟ್ ರೆಪೊಸಿಟರಿಯಲ್ಲಿ ಸಂಗ್ರಹಿಸಲಾಗುತ್ತದೆ. ಪಿಂಚಣಿ ವಿತರಣೆ ಏಜೆನ್ಸಿಗಳು ಪ್ರಮಾಣಪತ್ರವನ್ನು ಆನ್‌ಲೈನ್‌ನಲ್ಲಿ ಪಡೆಯಬಹುದು. ಪ್ರವೇಶಿಸಬಹುದು.
ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಜನರೇಟ್ ಆಗಲು ಅಗತ್ಯಗಳು:
ಆಧಾರ್ ಸಂಖ್ಯೆ
ಅಸ್ತಿತ್ವದಲ್ಲಿರುವ ಮೊಬೈಲ್ ಸಂಖ್ಯೆ
ಪಿಂಚಣಿ ವಿತರಣೆ ಏಜೆನ್ಸಿಯೊಂದಿಗೆ (ಬ್ಯಾಂಕ್ ಪೋಸ್ಟ್ ಆಫೀಸ್ ಇತ್ಯಾದಿ) ಆಧಾರ್ ಸಂಖ್ಯೆಯನ್ನು ನೋಂದಾಯಿಸಬೇಕು.
ಬಯೋಮೆಟ್ರಿಕ್ ಸಾಧನ
ಇಂಟರ್ನೆಟ್
ಜೀವನ್ ಪ್ರಮಾಣ್ ಆ್ಯಪ್ನಲ್ಲಿ ಹೇಗೆ ನೋಂದಾಯಿಸಿಕೊಳ್ಳಬಹುದು ಎಂಬ ಹಂತಹಂತವಾದ ವಿವರಣೆ:
ಹಂತ 1: ಸರ್ಕಾರದ ಜೀವನ್ ಪ್ರಮಾಣ್ ಅಪ್ಲಿಕೇಷನ್ ಡೌನ್‌ಲೋಡ್ ಮತ್ತು ಇನ್ಸ್ಟಾಲ್ ಮಾಡಿ
ಹಂತ 2: ಪಿಂಚಣಿದಾರರು ಹೊಸ ಬಳಕೆದಾರರಾಗಿದ್ದರೆ ನೋಂದಣಿ ಮಾಡಿ
ಜೀವನ್ ಪ್ರಮಾಣ ಪತ್ರ: ಪೂರ್ವಾಪೇಕ್ಷಿತ, ಜೀವನ ಪ್ರಮಾಣಪತ್ರವನ್ನು ಸಲ್ಲಿಸುವ ನಾಲ್ಕು ವಿಧಾನಗಳು
ಹಂತ 3: ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ಸಂಖ್ಯೆ, ಹೆಸರು, ಪಿಂಚಣಿ ಪಾವತಿ ಆದೇಶ (PPO) ನಮೂದಿಸಿ
ಹಂತ 4: ವ್ಯಾಲಿಡೇಷನ್ ಪ್ರಕ್ರಿಯೆಯನ್ನು ಪ್ರಾರಂಭಿಸಲು ಒಟಿಪಿ ಕಳುಹಿಸಿ ಆಯ್ಕೆ ಮಾಡಿ
ಹಂತ 5: ಒಟಿಪಿ ಸಂಖ್ಯೆಯನ್ನು ನಮೂದಿಸಿ. ಆಧಾರ್ ಬಳಸಿ ಇದನ್ನು ದೃಢೀಕರಿಸಲಾಗುತ್ತದೆ
ಹಂತ 6: ನೀವು ಒಟಿಪಿ ಅನ್ನು ಸಲ್ಲಿಸಿದ ಮೇಲೆ ಮತ್ತು ವ್ಯಾಲಿಡೇಷನ್ ಯಶಸ್ವಿಯಾದ ನಂತರ ನೀವು ಪ್ರಮಾಣ್ ಐಡಿಯನ್ನು ಸ್ವೀಕರಿಸುತ್ತೀರಿ
ಅಪ್ಲಿಕೇಷನ್‌ನಲ್ಲಿ ನೋಂದಣಿ ಮಾಡಿದ ನಂತರ ಈ ಹಂತಗಳನ್ನು ಅನುಸರಿಸಿ ಡಿಜಿಟಲ್ ಲೈಫ್ ಪ್ರಮಾಣಪತ್ರವನ್ನು ಜನರೇಟ್ ಮಾಡಬಹುದು:
ಹಂತ 1: ಪ್ರಮಾಣ್ ಐಡಿಯನ್ನು ಬಳಸಿ, ಜೀವನ್ ಪ್ರಮಾಣ ಅಪ್ಲಿಕೇಷನ್‌ಗೆ ಲಾಗ್ ಇನ್ ಮಾಡಿ ಮತ್ತು ಹೊಸ ಒಟಿಪಿ ರಚಿಸುವ ಆಯ್ಕೆಯನ್ನು ಆರಿಸಿ.
ಹಂತ 2: ‘ಜನರೇಟ್ ಜೀವನ್ ಪ್ರಮಾಣ್’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮತ್ತು ಆಧಾರ್ ಹಾಗೂ ಮೊಬೈಲ್ ಸಂಖ್ಯೆ ನಮೂದಿಸಿ.
ಹಂತ 3: Generate OTP ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮತ್ತು ಅದನ್ನು ನಮೂದಿಸಿ
ಹಂತ 4: PPO ಸಂಖ್ಯೆ, ಪಿಂಚಣಿದಾರರ ಹೆಸರು, ವಿತರಿಸುವ ಏಜೆನ್ಸಿ ಹೆಸರನ್ನು ನಮೂದಿಸಿ.
ಹಂತ 5: ಬಳಕೆದಾರರ ಬೆರಳಚ್ಚು ಅಥವಾ ಐರಿಸ್ ಅನ್ನು ಸ್ಕ್ಯಾನ್ ಮಾಡಿ ಮತ್ತು ಆಧಾರ್ ಡೇಟಾವನ್ನು ಬಳಸಿಕೊಂಡು ಅದು ಅವರನ್ನು ದೃಢೀಕರಿಸುತ್ತದೆ.
ಜೀವನ್ ಪ್ರಮಾಣ ಪತ್ರವು ಡಿಸ್ಪ್ಲೇಯಲ್ಲಿ ಕಾಣಿಸುತ್ತದೆ ಮತ್ತು ಬಳಕೆದಾರರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ದೃಢೀಕರಣ ಸಂದೇಶವನ್ನು ಸ್ವೀಕರಿಸುತ್ತಾರೆ.
ಇದನ್ನೂ ಓದಿ: Pension Rule: ಪೆನ್ಷನ್ ನಿಯಮದಲ್ಲಿ ಭಾರೀ ಬದಲಾವಣೆ; ಇನ್ಮುಂದೆ ಈ ದಿನಕ್ಕೂ ಮೊದಲೇ ಖಾತೆಗೆ ಬರಲಿದೆ ಪಿಂಚಣಿ