ವ್ಯಾಪಾರ ವಿಷಯದಲ್ಲಿ ಪಾಶ್ಚಿಮಾತ್ಯ ದೇಶಗಳು ಕೆಟ್ಟವೆಂಬ ಪರಿಕಲ್ಪನೆ ನೀಗಬೇಕು: ಎಸ್ ಜೈಶಂಕರ್ ಕರೆ

S Jaishankar Speaks: ಏಷ್ಯಾ ಮತ್ತು ಆಫ್ರಿಕಾದ ಮಾರುಕಟ್ಟೆಗಳಿಗೆ ದೊಡ್ಡ ಪ್ರಮಾಣದಲ್ಲಿ ಸರಕು ತಂದುಹಾಕುತ್ತಿರುವುದು ಪಶ್ಚಿಮವಲ್ಲ. ಪಶ್ಚಿಮದವರು ಕೆಟ್ಟವರು, ಅಭಿವೃದ್ಧಿಶೀಲ ದೇಶಗಳು ಒಳ್ಳೆಯವು ಎಂಬ ಹಿಂದಿನ ಪರಿಕಲ್ಪನೆಯನ್ನು ಕಳಚಿಕೊಳ್ಳುವ ಅವಶ್ಯಕತೆ ಇದೆ ಎಂಬುದು ನನ್ನ ಭಾವನೆ. ಈ ಜಗತ್ತು ಹೆಚ್ಚು ಸಂಕೀರ್ಣವಾಗಿದೆ. ಇದಕ್ಕಿಂತಲೂ ಸಮಸ್ಯೆಗಳು ಇನ್ನೂ ಹೆಚ್ಚು ಸಂಕೀರ್ಣವಾಗಿವೆ ಎಂದು ಜೈಶಂಕರ್ ಪರೋಕ್ಷವಾಗಿ ಚೀನಾವನ್ನು ಕುಟುಕಿದ್ದಾರೆ.

ವ್ಯಾಪಾರ ವಿಷಯದಲ್ಲಿ ಪಾಶ್ಚಿಮಾತ್ಯ ದೇಶಗಳು ಕೆಟ್ಟವೆಂಬ ಪರಿಕಲ್ಪನೆ ನೀಗಬೇಕು: ಎಸ್ ಜೈಶಂಕರ್ ಕರೆ
ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 18, 2023 | 10:59 AM

ನವದೆಹಲಿ, ಸೆಪ್ಟೆಂಬರ್ 18: ಜಾಗತಿಕ ವ್ಯಾಪಾರ (Global trade) ವಿಚಾರಕ್ಕೆ ಬಂದರೆ ಪಾಶ್ಚಿಮಾತ್ಯ ದೇಶಗಳು ಕೆಟ್ಟವೆಂಬ ದೃಷ್ಟಿಕೋನ ಇದೆ. ಇದು ಬದಲಾಗಬೇಕು ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಕರೆ ನೀಡಿದ್ದಾರೆ. ಮಲಯಾಳಂನ ಏಷ್ಯಾನೆಟ್ ಸುದ್ದಿವಾಹಿನಿಯೊಂದಿಗಿನ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಅವರು, ಈಗ ಪಶ್ಚಿಮದಿಂದ ಏಷ್ಯಾ ಮತ್ತು ಆಫ್ರಿಕನ್ ಮಾರುಕಟ್ಟೆಗಳಿಗೆ ದೊಡ್ಡ ಪ್ರಮಾಣದಲ್ಲಿ ಸರಕುಗಳು ಬಂದು ಬೀಳುತ್ತಿಲ್ಲ. ಪಶ್ಚಿಮವನ್ನು ನಕಾರಾತ್ಮಕವಾಗಿ ನೋಡುವ ಧೋರಣೆ ಬದಲಾಗುವ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಏಷ್ಯಾ ಮತ್ತು ಆಫ್ರಿಕಾಗೆ ದೊಡ್ಡ ಪ್ರಮಾಣದಲ್ಲಿ ಸರಕು ತಂದುಹಾಕುತ್ತಿರುವುದು ಪಶ್ಚಿಮವಲ್ಲ. ಪಶ್ಚಿಮದವರು ಕೆಟ್ಟವರು, ಅಭಿವೃದ್ಧಿಶೀಲ ದೇಶಗಳು ಒಳ್ಳೆಯವು ಎಂಬ ಹಿಂದಿನ ಪರಿಕಲ್ಪನೆಯನ್ನು ಕಳಚಿಕೊಳ್ಳುವ ಅವಶ್ಯಕತೆ ಇದೆ ಎಂಬುದು ನನ್ನ ಭಾವನೆ. ಈ ಜಗತ್ತು ಹೆಚ್ಚು ಸಂಕೀರ್ಣವಾಗಿದೆ. ಇದಕ್ಕಿಂತಲೂ ಸಮಸ್ಯೆಗಳು ಇನ್ನೂ ಹೆಚ್ಚು ಸಂಕೀರ್ಣವಾಗಿವೆ’ ಎಂದು ಜೈಶಂಕರ್ ಹೇಳಿದ್ದಾರೆ.

ಇದನ್ನೂ ಓದಿ: PM Vishwakarma: ಪಿಎಂ ವಿಶ್ವಕರ್ಮ ಯೋಜನೆ ಉದ್ಘಾಟನೆ; ಕುಶಲಕರ್ಮಿಗಳಿಗೆಂದಿರುವ ಈ ಸ್ಕೀಮ್ ಪಡೆಯುವುದು ಹೇಗೆ?

ಚೀನಾವನ್ನು ತರಾಟೆಗೆ ತೆಗೆದುಕೊಂಡ ಜೈಶಂಕರ್

ಈ ಬಾರಿಯ ಜಿ20 ಶೃಂಗಸಭೆಗೆ ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್ (Xi Jinping) ಗೈರಾಗಿರುವುದಕ್ಕೆ ಕಾರಣವೇನಿರಬಹುದು ಎಂಬ ಪ್ರಶ್ನೆಗೆ ಜೈಶಂಕರ್ ಮಾರ್ಮಿಕವಾಗಿ ಉತ್ತರ ನೀಡಿದ್ದಾರೆ.

‘ಕಳೆದ 15-20 ವರ್ಷಗಳಲ್ಲಿ ಜಾಗತೀಕರಣದ ಅಸಮಾನತೆಯಿಂದಾಗಿ ತೀವ್ರಮಟ್ಟದಲ್ಲಿ ಅಸಮಾಧಾನ ಮಡುಗಟ್ಟುತ್ತಾ ಬಂದಿದೆ. ತಮ್ಮ ಮಾರುಕಟ್ಟೆಗಳಿಗೆ ಬಹಳ ಅಗ್ಗದ ಸರಕುಗಳು ಬಂದು ಬೀಳುತ್ತಿರುವುದು ಬಹಳ ದೇಶಗಳಿಗೆ ಕಿರಿಕಿರಿಯಾಗುತ್ತಿದೆ,’ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವರು ಚೀನಾವನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: ತೆಲಂಗಾಣ ರಾಜ್ಯದಲ್ಲೂ ಗ್ಯಾರಂಟಿ ಅಸ್ತ್ರ ಪ್ರಯೋಗಿಸಿದ ಕಾಂಗ್ರೆಸ್​: 6 ಗ್ಯಾರಂಟಿ ಯೋಜನೆ ಜಾರಿ ಭರವಸೆ

ತಾನು ಪಾಶ್ಚಿಮಾತ್ಯ ದೇಶಗಳ ಪರವಾಗಿ ಮಾತನಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಇವತ್ತಿನ ಜಾಗತೀಕರಣದಲ್ಲಿ ಸಬ್ಸಿಡಿ ಇತ್ಯಾದಿ ಮೂಲಕ ಉತ್ಪಾದನೆಯು ಒಂದೇ ಕಡೆ ಕೇಂದ್ರಿತವಾಗಿದೆ. ಇದರಿಂದ ಹಲವು ದೇಶಗಳ ಆರ್ಥಿಕತೆಗೆ ಭಂಗವಾಗುತ್ತಿದೆ ಎಂದಿದ್ದಾರೆ.

ಹಲವು ವರ್ಷಗಳಿಂದ ಇದ್ದ ಅಸಮಾಧಾನದ ಜೊತೆಗೆ ಕೋವಿಡ್ ಹಾಗೂ ಉಕ್ರೇನ್ ಬಿಕ್ಕಟ್ಟು ಜಾಗತಿಕವಾಗಿ ಇಂಧನ ಮತ್ತು ಆಹಾರವಸ್ತುಗಳ ಬೆಲೆ ಹೆಚ್ಚಲು ಕಾರಣವಾಗಿದೆ ಎಂದ ಎಸ್ ಜೈಶಂಕರ್ ಅವರು, ಉತ್ಪಾದನೆ, ಕೃಷಿ, ವಿಜ್ಞಾನ, ಲಸಿಕೆ ಇತ್ಯಾದಿಯಲ್ಲಿ ಭಾರತದ ಸಾಧನೆಯು ಜಾಗತಿಕ ದಕ್ಷಿಣ (Global south) ದೇಶಗಳಲ್ಲಿ ಒಂದು ರೀತಿಯ ಆಪ್ತ ಭಾವನೆ ಮೂಡಿದೆ. ತಮ್ಮ ಪೈಕಿಯವರೊಬ್ಬರು ನಿಂತು, ಬೆಳೆಯಬಲ್ಲ ಸಾಮರ್ಥ್ಯ ಹೊಂದಿದ್ದಾರೆ ಎಂದು ಈ ದೇಶಗಳು ಭಾವಿಸಿವೆ ಎಂದು ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ