Sign In

By signing in or creating an account, you agree with Associated Broadcasting Company's Terms & Conditions and Privacy Policy.

Credit Card: ಕ್ರೆಡಿಟ್ ಕಾರ್ಡ್​ನಲ್ಲಿ ನಾವು ನೀವು ಹೆಚ್ಚು ಗಮನಿಸದ ಶುಲ್ಕಗಳು ಹಲವಿವೆ; ಮುಂದಿನ ಬಾರಿ ಬಿಲ್ ನೋಡುವಾಗ ಜೋಪಾನ

Know About Important Charges In Credit Card Bill: ಕ್ರೆಡಿಟ್ ಕಾರ್ಡ್ ಬಗ್ಗೆ ಕೆಲ ಜನರು ಭಯ ಬೀಳಲು ಕಾರಣವಿದೆ. ಹತ್ತು ಹಲವು ಶುಲ್ಕಗಳನ್ನು ಕಂಡು ಯಾರಿಗಾದರೂ ಗಾಬರಿ ಆಗಬಹುದು. ಇಂಥ ಗಾಬರಿ ಹುಟ್ಟಿಸುವ ಶುಲ್ಕಗಳ ಬಗ್ಗೆ ಒಂದಷ್ಟು ವಿವರ ಇಲ್ಲಿದೆ...

Credit Card: ಕ್ರೆಡಿಟ್ ಕಾರ್ಡ್​ನಲ್ಲಿ ನಾವು ನೀವು ಹೆಚ್ಚು ಗಮನಿಸದ ಶುಲ್ಕಗಳು ಹಲವಿವೆ; ಮುಂದಿನ ಬಾರಿ ಬಿಲ್ ನೋಡುವಾಗ ಜೋಪಾನ
ಕ್ರೆಡಿಟ್ ಕಾರ್ಡ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jun 20, 2023 | 5:46 PM

ಕ್ರೆಡಿಟ್ ಕಾರ್ಡ್ (Credit Card) ಬಳಸಲು ಬಂದರೆ ಚಂದ, ಇಲ್ಲದಿದ್ದರೆ ಗೋವಿಂದ..! ಕ್ರೆಡಿಟ್ ಕಾರ್ಡ್ ಹೆಸರೇ ಹೇಳುವಂತೆ ಸಾಲದ ಕಾರ್ಡ್. ನಾವು ಮಾಡುವ ಖರ್ಚಿಗೆ ಬ್ಯಾಂಕ್​ನವರು ಸಾಲ ಕೊಡುತ್ತಾರೆ. ನೀವು ಕ್ರೆಡಿಟ್ ಕಾರ್ಡ್ ಬಿಲ್ ಪೂರ್ತಿ ಕಟ್ಟುವವರೆಗೂ ಅಂಥ ಸಮಸ್ಯೆ ಎನಿಸುವುದಿಲ್ಲ. ಆದರೆ, ತಡವಾಗಿ ಕಟ್ಟುವುದೋ, ಕನಿಷ್ಠ ಮೊತ್ತ ಕಟ್ಟುವುದೋ, ಕ್ಯಾಷ್ ಪಡೆದುಕೊಳ್ಳುವುದೋ ಇತ್ಯಾದಿ ಮಾಡಿದಾಗ ಇದ್ದಬದ್ದ ಶುಲ್ಕಗಳಲ್ಲೇ ದುತ್ತನೇ ಕಾಣಿಸಿಕೊಳ್ಳುವುದುಂಟು. ನಿಮ್ಮ ಕ್ರೆಡಿಟ್ ಕಾರ್ಡ್ ಬಿಲ್ ನೋಡಿ ನಿಮಗೇ ಶಾಕ್ ಆಗುತ್ತದೆ. ಇಷ್ಟೆಲ್ಲಾ ನಾನು ಶಾಪಿಂಗ್ ಮಾಡಲಿಲ್ಲವಲ್ಲ, ಹೇಗೆ ಬಂತು ಬಿಲ್ ಎಂಬ ಪ್ರಶ್ನೆ ಕಾಡತೊಡಗುತ್ತದೆ. ಕ್ರೆಡಿಟ್ ಕಾರ್ಡ್ ಹಾಗೂ ಅದಕ್ಕೆ ಯಾವೆಲ್ಲಾ ಶುಲ್ಕಗಳಿವೆ ಎಂಬುದನ್ನು ತಿಳಿದುಕೊಳ್ಳುವುದು ಉತ್ತಮ.

ಕ್ರೆಡಿಟ್ ಕಾರ್ಡ್​ನಲ್ಲಿ ವಿಧಿಸಲಾಗುವ ವಿವಿಧ ಶುಲ್ಕಗಳು

  • ಆರಂಭಿಕ ಶುಲ್ಕ: 5,000 ರೂವರೆಗೂ
  • ವಾರ್ಷಿಕ ಶುಲ್ಕ: 10,000 ರೂವರೆಗೂ
  • ಕ್ಯಾಷ್ ಅಡ್ವಾನ್ಸ್ ಶುಲ್ಕ: ಶೇ. 2.5ರಿಂದ ಶೇ. 3.6ರವರೆಗೂ. ಅಥವಾ 300ರಿಂದ 500 ರೂವರೆಗೂ, ಯಾವುದು ಹೆಚ್ಚು ಅದು ಅನ್ವಯ
  • ಫೈನಾನ್ಸ್ ಚಾರ್ಜ್: ತಿಂಗಳಿಗೆ ಶೇ. 2.49ರಿಂದ ಶೇ. 3.80ರಷ್ಟು
  • ಲೇಟ್ ಪೇಮೆಂಟ್ ಚಾರ್ಜ್: 1,300 ರೂವರೆಗೂ
  • ಓವರ್​ಲಿಮಿಟ್ ಚಾರ್ಜ್: ಹೆಚ್ಚುವರಿ ಮೊತ್ತಕ್ಕೆ ಶೇ. 2ರಿಂದ 3. ಅಥವಾ 500 ರೂನಿಂದ 600 ರೂ. ಯಾವುದು ಹೆಚ್ಚು ಅದು ಅನ್ವಯ
  • ಫೋರೆಕ್ಸ್ ಕನ್ವರ್ಷನ್ ಚಾರ್ಜ್: ಶೇ. 2ರಿಂದ ಶೇ. 3.5
  • ರಿವಾರ್ಡ್ ರಿಡಂಪ್ಷನ್ ಚಾರ್ಜ್: ಒಂದು ಮನವಿಗೆ 25ರೂನಿಂದ 100 ರೂವರೆಗೆ
  • ಕಾರ್ಡ್ ರೀ ಇಷ್ಯೂ ಮಾಡಲು: 100 ರೂವರೆಗೆ
  • ಡೂಪ್ಲಿಕೇಟ್ ಸ್ಟೇಟ್ಮೆಂಟ್ ಶುಲ್ಕ: 10ರೂನಿಂದ 100 ರೂವರೆಗೆ.

ಇದನ್ನೂ ಓದಿAadhaar PAN: ನಿಮ್ಮ ಪ್ಯಾನ್ ನಂಬರ್ ಬೇರೆಯವರ ಆಧಾರ್​ಗೆ ಲಿಂಕ್ ಆಗಿದೆಯಾ? ಸರಿಪಡಿಸಲು ಹೀಗೆ ಮಾಡಿ

ಆರಂಭಿಕ ಶುಲ್ಕ ಮತ್ತು ವರ್ಷದ ಶುಲ್ಕ

ನೀವು ಕ್ರೆಡಿಟ್ ಕಾರ್ಡ್ ಖರೀದಿಸಿದಾಗ ಕೆಲ ಬ್ಯಾಂಕುಗಳು ಆರಂಭಿಕ ಶುಲ್ಕ ವಿಧಿಸುತ್ತವೆ. ಮತ್ತೆ ಕೆಲ ಬ್ಯಾಂಕುಗಳು ರಿನಿವಲ್ ಫೀಸ್ ಅಥವಾ ವಾರ್ಷಿಕ ಶುಲ್ಕ ಪಡೆಯುತ್ತವೆ. ಮತ್ತೆ ಕೆಲ ಕ್ರೆಡಿಟ್ ಕಾರ್ಡ್ ಕಂಪನಿಗಳು ಈ ಆರಂಭಿಕ ಅಥವಾ ವಾರ್ಷಿಕ ಶುಲ್ಕ ಪಡೆಯುವುದಿಲ್ಲ. ನೀವು ಕ್ರೆಡಿಟ್ ಕಾರ್ಡ್ ಪಡೆಯುವಾಗ ಈ ಅಂಶವನ್ನು ಗಮನಿಸಿ.

ಕ್ರೆಡಿಟ್ ಕಾರ್ಡ್​ನಲ್ಲಿ ಕ್ಯಾಷ್ ಅಡ್ವಾನ್ಸ್ ಫೀ

ಕ್ರೆಡಿಟ್ ಕಾರ್ಡ್ ಬಳಸಿ ಎಟಿಎಂನಲ್ಲಿ ನಿರ್ದಿಷ್ಟ ಮೊತ್ತದ ಹಣವನ್ನು ಪಡೆಯುವ ಅವಕಾಶ ಇರುತ್ತದೆ. ಇದಕ್ಕೆ ಶುಲ್ಕ ವಿಧಿಸಲಾಗುತ್ತದೆ. ಬ್ಯಾಂಕಿಂದ ಬ್ಯಾಂಕಿಗೆ ಇದರ ಶುಲ್ಕಗಳಲ್ಲಿ ವ್ಯತ್ಯಾಸ ಆಗುತ್ತದೆ. ಕೆನರಾ ಬ್ಯಾಂಕ್​ನಲ್ಲಿ ನೀವು ಕ್ಯಾಷ್ ಪಡೆದರೆ ಆ ಮೊತ್ತಕ್ಕೆ ಶೇ. 3ರಷ್ಟು ಶುಲ್ಕ ಇರುತ್ತದೆ.

ಫೈನಾನ್ಸ್ ಚಾರ್ಜಸ್

ಕ್ರೆಡಿಟ್ ಕಾರ್ಡ್​ನಲ್ಲಿ ಇದು ಬಹಳ ಮುಖ್ಯವಾದ ಅಂಶ. ನೀವು ನಿಗದಿತ ಅವಧಿಯಲ್ಲಿ ಪೂರ್ಣವಾಗಿ ಬಿಲ್ ಕಟ್ಟದಿದ್ದರೆ ಕಾಡುವ ಶುಲ್ಕ ಇದು. ನಿಮ್ಮ ಕ್ರೆಡಿಟ್ ಕಾರ್ಡ್ ಬ್ಯಾಲೆನ್ಸ್ ಮೇಲೆ ನಿರ್ದಿಷ್ಟ ಬಡ್ಡಿ ಬೀಳುತ್ತಲೇ ಇರುತ್ತದೆ.

ಇದನ್ನೂ ಓದಿMahila Samman Savings scheme: ಮಹಿಳಾ ಸಮ್ಮಾನ್ ಸೇವಿಂಗ್ ಸ್ಕೀಮ್: 2 ವರ್ಷಕ್ಕೆ ಮೆಚ್ಯೂರಿಟಿ; ಬಡ್ಡಿ ಎಷ್ಟು? ತೆರಿಗೆ ಬೀಳುತ್ತಾ?

ಲೇಟ್ ಪೇಮೆಂಟ್ ಚಾರ್ಜಸ್

ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ಗಡುವಿನೊಳಗೆ ಕಟ್ಟದಿದ್ದರೆ ತಡ ಪಾವತಿ ಶುಲ್ಕ ಅಥವಾ ಲೇಟ್ ಪೇಮೆಂಟ್ ಫೀಸ್ ಹೇರಲಾಗುತ್ತದೆ. ನೀವು ಕನಿಷ್ಠ ಮೊತ್ತವನ್ನು ಪಾವತಿಸಿದರೆ ಈ ಶುಲ್ಕ ಇರುವುದಿಲ್ಲ.

ಓವರ್​ಲಿಮಿಟ್ ಫೀ

ಒಂದೊಂದು ಕ್ರೆಡಿಟ್ ಕಾರ್ಡ್​ಗೂ ಬಳಕೆಗೆ ಮಿತಿ ನಿಗದಿ ಮಾಡಲಾಗಿರುತ್ತದೆ. ಈ ಮಿತಿಗಿಂತ ಹೆಚ್ಚು ಮೊತ್ತದ ವಹಿವಾಟು ನಡೆಸಿದರೆ ಓವರ್​ಲಿಮಿಟ್ ಫೀ ವಿಧಿಸಲಾಗುತ್ತದೆ. ಹೆಚ್ಚುವರಿ ಮೊತ್ತದ ಶೇ. 2.5 ಅಥವಾ ಬೇರೆ ಪ್ರಮಾಣದಷ್ಟು ಹಣವನ್ನು ಶುಲ್ಕವಾಗಿ ಪಡೆಯಲಾಗುತ್ತದೆ.

ಇದರ ಜೊತೆಗೆ ಬ್ಯಾಂಕು ಕಚೇರಿಗೆ ಹೋಗಿ ಕ್ರೆಡಿಟ್ ಕಾರ್ಡ್ ಬಿಲ್ ಕಟ್ಟಿದರೆ 250 ರೂವರೆಗೆ ಶುಲ್ಕ, ಅಂತಾರಾಷ್ಟ್ರೀಯ ವಹಿವಾಟಿಗೆ ಕ್ರೆಡಿಟ್ ಕಾರ್ಡ್ ಬಳಸಿದರೆ ಫೋರೆಕ್ಸ್ ಮಾರ್ಕಪ್ ಫೀ ಇತ್ಯಾದಿ ಶುಲ್ಕಗಳಿರುತ್ತವೆ. ಕೊನೆಯಲ್ಲಿ ಬಿಲ್ ಮೊತ್ತಕ್ಕೆ ಜಿಎಸ್​ಟಿ ಕೂಡ ಸೇರಿಸಲಾಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:44 pm, Tue, 20 June 23

ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್​: 2 ತಿಂಗಳ ಹಣ ಒಂದೇ ಸಲಕ್ಕೆ ಜಮಾ...!
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್​: 2 ತಿಂಗಳ ಹಣ ಒಂದೇ ಸಲಕ್ಕೆ ಜಮಾ...!
ಗಂಡನನ್ನು ರೂಂನಲ್ಲಿ ಕೂಡಿ ಕತ್ತು ಹಿಸುಕಿ ಥಳಿಸಿದ ಹೆಂಡತಿ; ವಿಡಿಯೋ ವೈರಲ್
ಗಂಡನನ್ನು ರೂಂನಲ್ಲಿ ಕೂಡಿ ಕತ್ತು ಹಿಸುಕಿ ಥಳಿಸಿದ ಹೆಂಡತಿ; ವಿಡಿಯೋ ವೈರಲ್
4ನೇ ಅತಿವೇಗದ ಅರ್ಧಶತಕ ಸಿಡಿಸಿದ ಮಾರ್ಷ್​
4ನೇ ಅತಿವೇಗದ ಅರ್ಧಶತಕ ಸಿಡಿಸಿದ ಮಾರ್ಷ್​
ಲಾಂಗ್ ಹಿಡಿದ ಪ್ರಕರಣ: ಪೊಲೀಸ್ ಠಾಣೆಯಲ್ಲಿ ರಜತ್, ವಿನಯ್ ವಿಚಾರಣೆ
ಲಾಂಗ್ ಹಿಡಿದ ಪ್ರಕರಣ: ಪೊಲೀಸ್ ಠಾಣೆಯಲ್ಲಿ ರಜತ್, ವಿನಯ್ ವಿಚಾರಣೆ
ನಂದಿನಿ ಹಾಲಿನ ದರ ಹೆಚ್ಚಳ ಬಗ್ಗೆ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಸ್ಪಷ್ಟನೆ
ನಂದಿನಿ ಹಾಲಿನ ದರ ಹೆಚ್ಚಳ ಬಗ್ಗೆ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಸ್ಪಷ್ಟನೆ
ಜಿಲ್ಲಾ, ತಾಲೂಕು ಪಂಚಾಯ್ತಿ ಎಲೆಕ್ಷನ್​ ಬಗ್ಗೆ ಆಯುಕ್ತ ಹೇಳಿದ್ದಿಷ್ಟು!
ಜಿಲ್ಲಾ, ತಾಲೂಕು ಪಂಚಾಯ್ತಿ ಎಲೆಕ್ಷನ್​ ಬಗ್ಗೆ ಆಯುಕ್ತ ಹೇಳಿದ್ದಿಷ್ಟು!
ಕರ್ನಾಟಕದ ಐದು ಮಹಾ ನಗರ ಪಾಲಿಕೆ ಚುನಾವಣೆಗೆ ಮುಹೂರ್ತ ಫಿಕ್ಸ್..!
ಕರ್ನಾಟಕದ ಐದು ಮಹಾ ನಗರ ಪಾಲಿಕೆ ಚುನಾವಣೆಗೆ ಮುಹೂರ್ತ ಫಿಕ್ಸ್..!
ಬುರ್ಖಾ ಧಾರಣೆ ಕುರಿತು ವಿದ್ಯಾರ್ಥಿನಿಯ ವಿಡಿಯೋ ಬಗ್ಗೆ ಬಿಇಒ ಸ್ಪಷ್ಟನೆ
ಬುರ್ಖಾ ಧಾರಣೆ ಕುರಿತು ವಿದ್ಯಾರ್ಥಿನಿಯ ವಿಡಿಯೋ ಬಗ್ಗೆ ಬಿಇಒ ಸ್ಪಷ್ಟನೆ
ಸಿಟಿ ರವಿ ಮತ್ತು ತಮ್ಮಯ್ಯ ನಡುವೆ ಮುಂದುವರಿದ ರಾಜಕೀಯ ಕಿತ್ತಾಟ
ಸಿಟಿ ರವಿ ಮತ್ತು ತಮ್ಮಯ್ಯ ನಡುವೆ ಮುಂದುವರಿದ ರಾಜಕೀಯ ಕಿತ್ತಾಟ
700 ಸಂಚಿಕೆ ಪೂರೈಸಿದ ಶ್ರೀರಸ್ತು ಶುಭಮಸ್ತು ಸೀರಿಯಲ್: ಸುಧಾರಾಣಿ ಸಡಗರ ನೋಡಿ
700 ಸಂಚಿಕೆ ಪೂರೈಸಿದ ಶ್ರೀರಸ್ತು ಶುಭಮಸ್ತು ಸೀರಿಯಲ್: ಸುಧಾರಾಣಿ ಸಡಗರ ನೋಡಿ