ಬೇಡದ ಡೀಮ್ಯಾಟ್ ಖಾತೆ ಮುಕ್ತಾಯಗೊಳಿಸುವುದು ರಗಳೆಯಲ್ಲ, ಸುಲಭ; ಇಲ್ಲಿದೆ ಮಾಹಿತಿ

Demat Account closure methods: ಷೇರು, ಮ್ಯುಚುವಲ್ ಫಂಡ್ ಇತ್ಯಾದಿ ಸೆಕ್ಯೂರಿಟಿಗಳನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ಇಟ್ಟುಕೊಳ್ಳಲು ಇರುವ ಡೀಮ್ಯಾಟ್ ಅಕೌಂಟ್ ಅನ್ನು ಈಗ ಹೆಚ್ಚು ರಗಳೆ ಇಲ್ಲದೇ ಮುಚ್ಚಲು ಸಾಧ್ಯ. ಕ್ಲೋಷರ್ ಫಾರ್ಮ್ ಭರ್ತಿ ಮಾಡಿ, ಸಂಬಂಧಿತ ದಾಖಲೆಗಳ ಸಮೇತ ಡಿಪಿ ಕಚೇರಿಯಲ್ಲಿ ಸಲ್ಲಿಸಬೇಕಾಗುತ್ತದೆ.

ಬೇಡದ ಡೀಮ್ಯಾಟ್ ಖಾತೆ ಮುಕ್ತಾಯಗೊಳಿಸುವುದು ರಗಳೆಯಲ್ಲ, ಸುಲಭ; ಇಲ್ಲಿದೆ ಮಾಹಿತಿ
ಡೀಮ್ಯಾಟ್ ಅಕೌಂಟ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 03, 2024 | 6:25 PM

ಬೇರೆ ಬೇರೆ ಕಾರಣಕ್ಕೆ ನಾವು ಹಲವು ಡೀಮ್ಯಾಟ್ ಅಕೌಂಟ್ ಪಡೆದಿರಬಹುದು. ಈಗ ಕೆಲವು ಬಳಕೆಯಲ್ಲಿ ಇಲ್ಲದೇ ಇದ್ದರೂ ಅವುಗಳಿಗೆ ವಾರ್ಷಿಕ ಪಾಲನಾ ಶುಲ್ಕ ಅಥವಾ ಆ್ಯನುವಲ್ ಮೇಂಟೆನೆನ್ಸ್ ಫೀ ನೀಡುತ್ತಿರಬೇಕು. ಅಲ್ಲದೇ ಹಲವು ಡೀಮ್ಯಾಟ್ ಅಕೌಂಟ್​ಗಳಿದ್ದರೆ ಗೊಂದಲಕ್ಕೆ ಎಡೆ ಮಾಡಿಕೊಡಬಹುದು. ಹೀಗಾಗಿ, ಅಗತ್ಯವಾದ ಅಕೌಂಟ್​ಗಳನ್ನು ಉಳಿಸಿಕೊಂಡು, ಉಳಿದವನ್ನು ನೀಗಿಸುವುದು ಉತ್ತಮ.

ಡೀಮ್ಯಾಟ್ ಅಕೌಂಟ್ ಎಂದರೆ ಡೀಮೆಟೀರಿಯಲೈಸ್ಡ್ ಅಕೌಂಟ್. ಎಲೆಕ್ಟ್ರಾನಿಕ್ ರೂಪದಲ್ಲಿ ಷೇರುಗಳನ್ನು, ಬಾಂಡ್​ಗಳನ್ನು ಇರಿಸಿಕೊಳ್ಳಲು ಇರುವ ಖಾತೆ. ಭಾರತದಲ್ಲಿ 2023-24ರಲ್ಲಿ 15 ಕೋಟಿಗೂ ಅಧಿಕ ಡೀಮ್ಯಾಟ್ ಖಾತೆಗಳು ಇವೆ ಎನ್ನಲಾಗುತ್ತಿದೆ.

ಡೀಮ್ಯಾಟ್ ಖಾತೆ ನಿಲ್ಲಿಸುವ ಮುನ್ನ ಈ ಕಾರ್ಯ ಮಾಡಿ….

  • ನಿಮ್ಮ ಡೀಮ್ಯಾಟ್ ಅಕೌಂಟ್​ಗೆ ಸಂಬಂಧಿಸಿದ ಯಾವುದೇ ಶುಲ್ಕ, ದಂಡ ಇತ್ಯಾದಿ ಎಲ್ಲಾ ಬಾಕಿ ಹಣ ಚುಕ್ತಾ ಮಾಡಬೇಕು. ಇಲ್ಲದಿದ್ದರೆ ಅಕೌಂಟ್ ನಿಲ್ಲಿಸಲು ಅಸಾಧ್ಯ.
  • ನಿಮ್ಮ ಅಕೌಂಟ್​ನಲ್ಲಿ ಯಾವುದಾದರೂ ಷೇರು ಇತ್ಯಾದಿ ಸೆಕ್ಯುರಿಟಿಗಳಿದ್ದಲ್ಲಿ ಅದನ್ನು ನಿಮ್ಮ ಬೇರೊಂದು ಸಕ್ರಿಯ ಖಾತೆಗೆ ವರ್ಗಾಯಿಸಬೇಕು.
  • ಡಿಮ್ಯಾಟ್ ಖಾತೆಯಲ್ಲಿ ಮ್ಯುಚುವಲ್ ಫಂಡ್ ಇದ್ದಲ್ಲಿ ಅದನ್ನು ಹಿಂಪಡೆಯಿರಿ, ಅಥವಾ ಬೇರೆ ಖಾತೆಗೆ ವರ್ಗಾವಣೆ ಮಾಡಿ.

ಇದನ್ನೂ ಓದಿ: ಎಸ್​ಜಿಬಿ vs ಗೋಲ್ಡ್ ಇಟಿಎಫ್ vs ಡಿಜಿಟಲ್ ಗೋಲ್ಡ್; ಯಾವುದು ಉತ್ತಮ? ಇಲ್ಲಿದೆ ಒಂದು ಹೋಲಿಕೆ

ಡೀಮ್ಯಾಟ್ ಅಕೌಂಟ್ ಮುಕ್ತಾಯಗೊಳಿಸುವ ಪ್ರಕಿಯೆಗಳು

  • ನಿಮ್ಮ ಡೆಪಾಸಿಟರಿ ಪಾರ್ಟಿಸಿಪೆಂಟ್ (ಬ್ರೋಕರ್ ಕಂಪನಿಗಳು) ವೆಬ್​ಸೈಟ್​ನಿಂದ ಡೀಮ್ಯಾಟ್ ಅಕೌಂಟ್ ಕ್ಲೋಶರ್ ಫಾರ್ಮ್ ಡೌನ್​ಲೋಡ್ ಮಾಡಿ.
  • ಅರ್ಜಿಯನ್ನು ಸರಿಯಾಗಿ ಭರ್ತಿ ಮಾಡಿ. ಅಕೌಂಟ್ ನಂಬರ್, ಕ್ಲೈಂಟ್ ಐಡಿ, ಡಿಪಿ ಐಡಿ ಇತ್ಯಾದಿ ಎಲ್ಲಾ ಮಾಹಿತಿಯನ್ನು ನಿಖರವಾಗಿ ತುಂಬಿರಿ.
  • ನಿಮ್ಮ ಪ್ಯಾನ್, ಆಧಾರ್ ಅಥವಾ ಬೇರೆ ಐಡಿ ಪ್ರೂಫ್ ದಾಖಲೆ ಪ್ರತಿ ಎತ್ತಿಟ್ಟುಕೊಳ್ಳಿ. ಹಾಗೆಯೇ, ಬ್ಯಾಂಕ್​ನ ಕ್ಯಾನ್ಸಲ್ಡ್ ಚೆಕ್ ಎತ್ತಿಟ್ಟುಕೊಳ್ಳಿ.
  • ನೀವು ಅರ್ಜಿ ಹಾಗೂ ಸಂಬಂಧಿತ ದಾಖಲೆಗಳೊಂದಿಗೆ ಬ್ರೋಕರ್​ನ ಕಚೇರಿಗೆ ಹೋಗಿ ಸಲ್ಲಿಸಬೇಕು. ಕೆಲ ಬ್ರೋಕರ್ ಸಂಸ್ಥೆಗಳು ಇಮೇಲ್ ಮೂಲಕವೇ ಅಕೌಂಟ್ ನಿಲುಗಡೆಗೆ ಅವಕಾಶ ಕೊಡುತ್ತವೆ. ಯಾವುದಕ್ಕೂ ನಿಮ್ಮ ಡಿಪಿ ವೆಬ್​ಸೈಟ್​ನಲ್ಲಿ ನಿಯಮಗಳನ್ನು ತಿಳಿದು ಮುಂದುವರಿಯಿರಿ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್