ಹತ್ತಾರು ಮ್ಯೂಚುವಲ್ ಫಂಡ್ಗಳಿಗೆ ಹಣ ಹಾಕಿ ಗೆಲ್ಲುತ್ತೇನೆ ಎನ್ನಲು ಸಾಧ್ಯವಾ? ಅಲ್ಲ ಅಂತಾರೆ ತಜ್ಞರು; ಇಲ್ಲಿದೆ ಹೂಡಿಕೆ ಟ್ರಿಕ್ಸ್
Investment tips: ಹೆಚ್ಚೆಚ್ಚು ಫಂಡ್ಗಳಲ್ಲಿ, ಹೆಚ್ಚೆಚ್ಚು ಹಣ ಹೂಡಿಕೆ ಮಾಡುವುದು ನಿಮ್ಮ ಗುರಿಯಾಗಿರಬಾರದು. ನಿಮ್ಮ ಮ್ಯುಚುವಲ್ ಫಂಡ್ಗಳು ಒಂದೆರಡು ಸೆಕ್ಟರ್ಗಳಿಗೆ ಸೀಮಿತವಾಗಿರಬಾರದು. ನೀವು ಎಲ್ಲಾ ಸೆಕ್ಟರ್ಗಳಲ್ಲಿ ಇರುವ ಮ್ಯೂಚುವಲ್ ಫಂಡ್ಗಳನ್ನು ಆಯ್ಕೆ ಮಾಡಿಕೊಳ್ಳುವುದು ಮುಖ್ಯ. ಈಕ್ವಿಟಿ ಫಂಡ್ ಮಾತ್ರವಲ್ಲ ಡೆಟ್ ಫಂಡ್ಗಳಲ್ಲೂ ಹೂಡಿಕೆ ಇರಬೇಕು. ಚಿನ್ನ, ಎಫ್ಡಿ ಇತ್ಯಾದಿಯಲ್ಲೂ ಹೂಡಿಕೆ ಇರಬೇಕು ಎನ್ನುತ್ತಾರೆ ತಜ್ಞರು.

ಹೂಡಿಕೆಯಲ್ಲಿ ಕೆಲ ಮೂಲಭೂತ ಪಾಠಗಳಿವೆ. ನೀವು ದೀರ್ಘಾವಧಿ ಹೂಡಿಕೆ (long term investment) ಮಾಡಬೇಕು, ಹೆಚ್ಚೆಚ್ಚು ಹಣ ಹೂಡಿಕೆ ಮಾಡಬೇಕು. ಇವಿಷ್ಟನ್ನೇ ತಿಳಿದು ಹೂಡಿಕೆಗೆ ಮುಂದಾದರೆ ಅಗಾಧ ಮಾರುಕಟ್ಟೆಯಲ್ಲಿ ದಾರಿ ಕಾಣದಾಗಬಹುದು. ನೀವು ತುಂಬಾ ವರ್ಷಗಳಿಂದ ಹೂಡಿಕೆ ಮಾಡಿದಾಗ, ಅಥವಾ ಸತತವಾಗಿ ಹೂಡಿಕೆಗಳನ್ನು ಮಾಡುತ್ತಾ ಬಂದಾಗ ಅದ್ಭುತ ರಿಟರ್ನ್ ಸಿಗುತ್ತೆ ಎನ್ನಲು ಗ್ಯಾರಂಟಿ ಇಲ್ಲ.
ಎಲ್ಐಸಿ ಹೌಸಿಂಗ್ ಫೈನಾನ್ಸ್ ಸಂಸ್ಥೆಯ ಮಾಜಿ ಸಿಒಒ ಅಶ್ವನಿ ಘಾಯ್ ಅವರು ಈ ವಿಚಾರದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯಿಸಿದ್ದು, ಒಂದು ನಿದರ್ಶನದ ಮೂಲಕ ಹೂಡಿಕೆಯ ಸಮಸ್ಯೆ ವಿವರಿಸಿದ್ದಾರೆ.
ಅವರಿಗೆ ಗೊತ್ತಿರುವ ಹೂಡಿಕೆದಾರರೊಬ್ಬರು ಬರೋಬ್ಬರಿ 16 ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆ ಮಾಡಿದ್ದಾರೆ. ಬೇರೆ ಬೇರೆ ಫಂಡ್ಗಳಾದ್ದರಿಂದ ಹೂಡಿಕೆಯ ವಿಸ್ತಾರ ಹೆಚ್ಚಿರುತ್ತದೆ ಎಂದು ಭಾವಿಸಿದ್ದಾರೆ. ಆದರೆ, ಆ ಹೆಚ್ಚಿನ ಮ್ಯೂಚುವಲ್ ಫಂಡ್ಗಳು ಲಾರ್ಜ್ ಕ್ಯಾಪ್ ಸೆಗ್ಮೆಂಟ್ನಲ್ಲಿ ಇರುವಂಥವು. ಅಂದರೆ, ಅಲ್ಲಿ ಹೂಡಿಕೆ ವಿಸ್ತಾರ ಬಹುತೇಕ ಇಲ್ಲವೇ ಇಲ್ಲ. ಯಾವ ಅವಲೋಕನೆ ಮಾಡದೆಯೇ ಅವರು ಈ 16 ಮ್ಯುಚುವಲ್ ಫಂಡ್ಗಳ್ಲಲಿ ಹೂಡಿಕೆ ಮಾಡಿದ್ದಾರೆ ಎಂದು ಅಶ್ವನಿ ಘಾಯ್ ಹೇಳಿದ್ಧಾರೆ.
ಇದನ್ನೂ ಓದಿ: ಯಾವ್ಯಾವ ವಯಸ್ಸಲ್ಲಿ ನಿಮ್ಮ ಸೇವಿಂಗ್ಸ್ ಕನಿಷ್ಠ ಎಷ್ಟಿರಬೇಕು? ಇಲ್ಲಿದೆ ಕುತೂಹಲಕಾರಿ ಉತ್ತರ
ಹೂಡಿಕೆಯಲ್ಲಿ ವೈವಿಧ್ಯತೆ ಅಥವಾ ವಿಸ್ತಾರ ತರುವುದು ಹೇಗೆ?
ತಜ್ಞರ ಪ್ರಕಾರ, ಷೇರು, ಚಿನ್ನ, ಡೆಟ್, ಎಫ್ಡಿ, ರಿಯಲ್ ಎಸ್ಟೇಟ್ ಇತ್ಯಾದಿ ಕಡೆ ಹರಡಿರಬೇಕು. ಇಲ್ಲಿ ಷೇರು ವಿಚಾರಕ್ಕೆ ಬಂದಾಗಲೂ ಕೂಡ ಅಲ್ಲೂ ಹೂಡಿಕೆ ಚದುರಿ ಹೋಗಿರಬೇಕು. ಅಂದರೆ, ಲಾರ್ಜ್ ಕ್ಯಾಪ್, ಸ್ಮಾಲ್ ಕ್ಯಾಪ್ ಮತ್ತು ಮಿಡ್ ಕ್ಯಾಪ್ ಷೇರುಗಳಲ್ಲಿ ಹೂಡಿಕೆ ಮಾಡಬೇಕು. ಅದಕ್ಕಾಗಿ, ಆಯಾ ಇಂಡೆಕ್ಸ್ ಫಂಡ್ಗಳನ್ನು ಆಯ್ದುಕೊಳ್ಳಬಹುದು. ಹೈಬ್ರಿಡ್ ಫಂಡ್ಗಳನ್ನು ಆಯ್ದುಕೊಳ್ಳಬಹುದು.
ಇಂಡೆಕ್ಸ್ಗಳಲ್ಲಿ ಹೂಡಿಕೆ ಮಾಡಲು ಮ್ಯೂಚುವಲ್ ಫಂಡ್ ಬದಲು ಇಟಿಎಫ್ ಅನ್ನೂ ಕೂಡ ಆಯ್ದುಕೊಳ್ಳಬಹುದು. ಚಿನ್ನ, ಬೆಳ್ಳಿ ಇತ್ಯಾದಿ ಸರಕುಗಳಲ್ಲಿ ಇಟಿಎಫ್ ಮೂಲಕ ಹೂಡಿಕೆ ಮಾಡಬಹುದು. ಡಿಜಿಟಲ್ ಪ್ಲಾಟ್ಫಾರ್ಮ್ಗಳಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡಬಹುದು.
ಕಾರ್ಪೊರೇಟ್ ಬಾಂಡ್, ಗವರ್ನ್ಮೆಂಟ್ ಬಾಂಡ್ಗಳಲ್ಲಿ ಹಣ ತೊಡಗಿಸುವ ಡೆಟ್ ಫಂಡ್ಗಳಲ್ಲಿ ಹೂಡಿಕೆ ಮಾಡಬಹುದು. ರಿಯಲ್ ಎಸ್ಟೇಟ್ಗೆ ಜೋಡಿತವಾದ ಆರ್ಐಇಟಿಗಳಲ್ಲಿ ಹೂಡಿಕೆ ಮಾಡಬಹುದು.
ಇದನ್ನೂ ಓದಿ: ಒಬ್ಬ ವ್ಯಕ್ತಿ ಎಷ್ಟು ಸಾಲ ಮಾಡಬಹುದು? ಮಿತಿ ಎಷ್ಟಿರಬೇಕು?
ಎಮರ್ಜೆನ್ಸಿ ಫಂಡ್ ಇಟ್ಟಿರಬೇಕು…
ಹೂಡಿಕೆ ದೀರ್ಘಕಾಲ ಇರಬೇಕೆಂದರೆ ನಿಮ್ಮ ಇತರ ಜೀವನ ಅಗತ್ಯಗಳ ಪೂರೈಕೆಗೆ ಬ್ಯಾಕಪ್ ಹಣ ಇರಬೇಕು. ಅದಕ್ಕಾಗಿ ಎಮರ್ಜೆನ್ಸಿ ಫಂಡ್ ಸ್ಥಾಪಿಸಬೇಕು. ನಿಮ್ಮ ಅಗತ್ಯಗಳಿಗೆ ತಕ್ಕಷ್ಟು ಹಣವನ್ನು ಅದರಲ್ಲಿ ಇರಿಸಬಹುದು. ಎಫ್ಡಿ ರೂಪದಲ್ಲೋ, ಆರ್ಡಿ ರೂಪದಲ್ಲೋ ನೀವು ಎಮರ್ಜೆನ್ಸಿ ಫಂಡ್ ಸ್ಥಾಪಿಸಬಹುದು. ಅಥವಾ ಸೇವಿಂಗ್ಸ್ ಅಕೌಂಟ್ನಲ್ಲಿ ಹಾಗೇ ಒಂದಷ್ಟು ಹಣ ಬಿಟ್ಟರೂ ಸಮಸ್ಯೆ ಇಲ್ಲ. ಒಟ್ಟಿನಲ್ಲಿ, ನೀವು ದೀರ್ಘಾವಧಿಗೆಂದು ಮಾಡಿದ್ದ ಹೂಡಿಕೆಯನ್ನು ಒಂದು ವರ್ಷಕ್ಕೋ, ಎರಡು ವರ್ಷಕ್ಕೋ ಮಾರುವ ಪರಿಸ್ಥಿತಿ ಬರದಂತೆ ಎಚ್ಚರ ವಹಿಸಿ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ