EPF Claim: ಉದ್ಯೋಗಿ ಸತ್ತಾಗ ಅವರ ಇಪಿಎಫ್ ಹಣಕ್ಕೆ ನಾಮಿನಿ ಕ್ಲೈಮ್ ಮಾಡುವುದು ಹೇಗೆ?
How To Claim EPF By Nominee: ಇಪಿಎಫ್ ಸದಸ್ಯರು ನಿವೃತ್ತಿಗೆ ಮುನ್ನ ಸಾವನ್ನಪ್ಪಿದಾಗ ಅವರ ಪಿಎಫ್ ಹಣವನ್ನು ನಾಮಿನಿ ಹಿಂಪಡೆಯುವ ಅವಕಾಶ ಇದೆ. ಇದರ ವಿಧಾನ ಹೇಗೆಂದು ಈ ಲೇಖನದಲ್ಲಿ ತಿಳಿಯಬಹುದು.
ಉದ್ಯೋಗಿಗಳ ನಿವೃತ್ತಿ ನಂತರದ ಜೀವನದ ಭದ್ರತೆಗೆಂದು ಕೇಂದ್ರ ಸರ್ಕಾರ ಇಪಿಎಫ್ (EPF) ಯೋಜನೆಯನ್ನು ರೂಪಿಸಿದೆ. ಮೂಲದಲ್ಲಿ ಇದು ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆಂದು ಶುರುವಾದ ಯೋಜನೆಯಾಗಿತ್ತು. ಬಳಿಕ ಎಲ್ಲಾ ಉದ್ಯೋಗಿಗಳಿಗೂ ಇಪಿಎಫ್ ಸ್ಕೀಮ್ ವಿಸ್ತರಿಸಲಾಗಿದೆ. ಕನಿಷ್ಠ 20 ಮಂದಿ ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ಇಪಿಎಫ್ ಸೌಲಭ್ಯ ಕೊಡಬೇಕು ಎಂಬ ಕಡ್ಡಾಯ ನಿಯಮ ಇದೆ. ಉದ್ಯೋಗಿ ಕೆಲಸ ಬದಲಿಸಿದಾಗ ಬೇರೆ ಇಪಿಎಫ್ ಖಾತೆ ಶುರುವಾಗುತ್ತದಾದರೂ ಅವೆರಡನ್ನು ವಿಲೀನಗೊಳಿಸಿ ಮುಂದುವರಿಯಬಹುದು. ಉದ್ಯೋಗಿ ನಿವೃತ್ತರಾಗುವವರೆಗೂ ಇಪಿಎಫ್ ಸ್ಕೀಮ್ ಅನ್ವಯ ಆಗುತ್ತದೆ.
ಒಂದು ವೇಳೆ ಉದ್ಯೋಗಿಯು ನಿವೃತ್ತಿಗೆ ಮುನ್ನ ಸಾವನ್ನಪ್ಪಿದರೆ ಅವರ ಇಪಿಎಫ್ ಖಾತೆಯಲ್ಲಿರುವ ಹಣವನ್ನು ನಾಮಿನಿ ಪಡೆಯುವ ಅವಕಾಶ ಇರುತ್ತದೆ. ಅದಕ್ಕೆ ಉದ್ಯೋಗಿಯು ತನ್ನ ಇಪಿಎಫ್ ಖಾತೆಗೆ ನಾಮಿನಿಯನ್ನು ಹೆಸರಿಸಬೇಕು. ನಾಮಿನಿಯು ಇಪಿಎಫ್ ಹಣಕ್ಕೆ ಹೇಗೆ ಕ್ಲೈಮ್ ಮಾಡಬಹುದು ಎಂಬ ವಿವರ ಇಲ್ಲಿದೆ…
ಇಪಿಎಫ್ ಹಣಕ್ಕೆ ನಾಮಿನಿ ಕ್ಲೇಮ್ ಮಾಡುವುದು ಹೇಗೆ?
- ನಿಧನ ಹೊಂದಿದ ಇಪಿಎಫ್ ಸದಸ್ಯರ ಖಾತೆಗೆ ನಾಮಿನಿ ಆಗಿರುವವರು ಫಾರ್ಮ್ 20 ಸಲ್ಲಿಸಬೇಕು.
- ಇದರಲ್ಲಿ ಇಪಿಎಫ್ ಸದಸ್ಯರ ವಿವರ ತುಂಬಬೇಕು.
- ನಾಮಿನಿ ತಮ್ಮ ಆಧಾರ್ಗೆ ನೀಡಿದ್ದ ಮೊಬೈಲ್ ನಂಬರ್ ಅನ್ನು ಈ ಅರ್ಜಿಯಲ್ಲಿ ನಮೂದಿಸಬೇಕು
- ಇಪಿಎಫ್ ಸದಸ್ಯ ಸಾಯುವಾಗ ಕೆಲಸ ಮಾಡುತ್ತಿದ್ದ ಸಂಸ್ಥೆ ಮೂಲಕ ನಾಮಿನಿ ಈ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.
- ಇದಾದ ಬಳಿಕ ಅರ್ಜಿ ಸ್ವೀಕೃತವಾದರೆ ನಾಮಿನಿಯ ಮೊಬೈಲ್ ನಂಬರ್ಗೆ ಎಸ್ಸೆಮ್ಮೆಸ್ ಮೆಸೇಜ್ ಬರುತ್ತದೆ.
- ನಾಮಿನಿಯ ಬ್ಯಾಂಕ್ ಖಾತೆಗೆ ಹಣ ವರ್ಗವಾಗುತ್ತದೆ.
ಇದನ್ನೂ ಓದಿ: Service Charge: ಹೋಟೆಲ್ ಬಿಲ್ನಲ್ಲಿ ಸರ್ವಿಸ್ ಚಾರ್ಜ್ ಯಾಕೆ? ನೀವು ಕಟ್ಟಲೇಬೇಕಾ? ಇಲ್ಲಿದೆ ನಿಯಮ
ಇಪಿಎಫ್ ಹಣಕ್ಕೆ ನಾಮಿನಿ ಕ್ಲೈಮ್ ಮಾಡಲು ಯಾವ್ಯಾವ ದಾಖಲೆಗಳು ಬೇಕು?
- ಇಪಿಎಫ್ ಸದಸ್ಯರ ಡೆತ್ ಸರ್ಟಿಫಿಕೇಟ್
- ಗಾರ್ಡಿಯನ್ಶಿಪ್ ಸರ್ಟಿಫಿಕೇಟ್
- ನಾಮಿನಿಯ ಕ್ಯಾನ್ಸಲ್ ಚೆಕ್
- ಫಾರ್ಮ್ 5 (ಉದ್ಯೋಗಿಗಳ ಠೇವಣಿ ಆಧಾರಿತ ಇನ್ಷೂರೆನ್ಸ್ ಸ್ಕೀಮ್ ಅಡಿಯಲ್ಲಿ ಲಾಭ ಪಡೆಯುವುದಾದರೆ)
- ಫಾರ್ಮ್ 10ಡಿ (ಪೆನ್ಷನ್ ಸೌಲಭ್ಯಕ್ಕಾಗಿ)
- ಫಾರ್ಮ್ 10ಸಿ (ವಿತ್ಡ್ರಾಯಲ್ ಲಾಭಕ್ಕಾಗಿ)
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ