ಎಸ್ಬಿಐ, ಎಚ್ಡಿಎಫ್ಸಿ ಬ್ಯಾಂಕುಗಳಲ್ಲಿ ಎಫ್ಡಿ ದರಗಳು ಎಷ್ಟಿವೆ? ಇಲ್ಲಿದೆ ಪಟ್ಟಿ
HDFC, SBI banks FD Rates: ದೇಶದ ಅತಿದೊಡ್ಡ ಬ್ಯಾಂಕ್ ಎನಿಸಿರುವ ಎಚ್ಡಿಎಫ್ಸಿಯಲ್ಲಿ ಫಿಕ್ಸೆಡ್ ಡೆಪಾಸಿಟ್ಗಳು 7 ದಿನದಿಂದ ಆರಂಭಿಸಿ 10 ವರ್ಷದವರೆಗೂ ಅವಕಾಶಗಳಿವೆ. ಇವಕ್ಕೆ ಬಡ್ಡಿದರಗಳು ಶೇ. 3ರಿಂದ ಮೊದಲುಗೊಂಡು ಶೇ. 7.10ರವರೆಗೆ ಇವೆ. ಹಿರಿಯ ನಾಗರಿಕರಿಗೆ ಬಡ್ಡಿ ಶೇ. 7.75ರವರೆಗೂ ಇದೆ. ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕೆನಿಸಿದ ಎಸ್ಬಿಐನಲ್ಲಿ 7 ದಿನದಿಂದ 10 ವರ್ಷದವರೆಗೂ ವಿವಿಧ ಅವಧಿ ಠೇವಣಿಗಳಿವೆ. ಬಡ್ಡಿದರ ಶೇ. 3ರಿಂದ ಆರಂಭವಾಗಿ ಶೇ. 7ರವರೆಗೂ ಇದೆ. ಹಿರಿಯ ನಾಗಕರಿಗೆ ಶೇ. 7.50ರವರೆಗೂ ಬಡ್ಡಿ ದರ ಇದೆ.
ಸಾಮಾನ್ಯ ಜನರ ಮೊದಲ ಹೂಡಿಕೆ ಆಯ್ಕೆ ಈಗಲೂ ಫಿಕ್ಸೆಡ್ ಡೆಪಾಸಿಟ್ಗಳೇ (fixed deposit) ಆಗಿವೆ. ಉಳಿಸಿ ಕೂಡಿಟ್ಟ ಹಣವನ್ನು ಬ್ಯಾಂಕುಗಳಲ್ಲಿ ಠೇವಣಿ ಇಡುವುದು ಸಾಮಾನ್ಯ ಸಂಪ್ರದಾಯವಾಗಿದೆ. ಸಹಕಾರಿ ಬ್ಯಾಂಕುಗಳಿಗೆ (co-operative banks) ಹೋಲಿಸಿದರೆ ಪ್ರಮುಖ ಬ್ಯಾಂಕುಗಳಲ್ಲಿ ಎಫ್ಡಿಗಳಿಗೆ ನೀಡಲಾಗುವ ಬಡ್ಡಿ ಕಡಿಮೆಯೇ. ಆದರೆ, ಎಫ್ಡಿಗಳು ತುಸು ದೀರ್ಘಾವಧಿಯದ್ದಾದ್ದರಿಂದ ದೊಡ್ಡ ಬ್ಯಾಂಕುಗಳಲ್ಲಿ ಇಡುವ ಠೇವಣಿ ಹೆಚ್ಚು ಸುರಕ್ಷಿತವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಭಾರತದ ಎರಡು ಅತಿದೊಡ್ಡ ಬ್ಯಾಂಕುಗಳಾದ ಎಚ್ಡಿಎಫ್ಸಿ ಮತ್ತು ಎಸ್ಬಿಐಗಳಲ್ಲಿ ನಿಶ್ಚಿತ ಠೇವಣಿಗಳಿಗೆ ಎಷ್ಟು ಬಡ್ಡಿ ಆಫರ್ ಮಾಡಲಾಗುತ್ತಿದೆ ಎಂಬ ವಿವರ ಮತ್ತು ಹೋಲಿಕೆ ಇಲ್ಲಿದೆ.
ಎಚ್ಡಿಎಫ್ಸಿ ಬ್ಯಾಂಕ್ನಲ್ಲಿ ಎಫ್ಡಿ ದರಗಳು
ದೇಶದ ಅತಿದೊಡ್ಡ ಬ್ಯಾಂಕ್ ಎನಿಸಿರುವ ಎಚ್ಡಿಎಫ್ಸಿಯಲ್ಲಿ ಫಿಕ್ಸೆಡ್ ಡೆಪಾಸಿಟ್ಗಳು 7 ದಿನದಿಂದ ಆರಂಭಿಸಿ 10 ವರ್ಷದವರೆಗೂ ಅವಕಾಶಗಳಿವೆ. ಇವಕ್ಕೆ ಬಡ್ಡಿದರಗಳು ಶೇ. 3ರಿಂದ ಮೊದಲುಗೊಂಡು ಶೇ. 7.10ರವರೆಗೆ ಇವೆ. ಹಿರಿಯ ನಾಗರಿಕರಿಗೆ ಬಡ್ಡಿ ಶೇ. 7.75ರವರೆಗೂ ಇದೆ.
- 1 ವರ್ಷದಿಂದ 15 ತಿಂಗಳವರೆಗಿನ ಠೇವಣಿಗೆ: ಶೇ. 6.60 ಬಡ್ಡಿ ಇದೆ.
- 15 ತಿಂಗಳಿಂದ 18 ತಿಂಗಳವರೆಗೆ: ಶೇ. 7.10ರಷ್ಟು ಬಡ್ಡಿ ಇದೆ.
ಹಿರಿಯ ನಾಗರಿಕರಿಗೆ 50 ಬೇಸಿಸ್ ಅಂಕಗಳಷ್ಟು ಹೆಚ್ಚು ಬಡ್ಡಿ ಸಿಗುತ್ತದೆ. ಆದರೆ, 5 ವರ್ಷದಿಂದ 10 ವರ್ಷದ ಠೇವಣಿ ಇಡುವ ಹಿರಿಯ ನಾಗರಿಕರಿಗೆ ಶೇ. 7.75ರಷ್ಟು ಬಡ್ಡಿ ಸಿಗುತ್ತದೆ.
ಇದನ್ನೂ ಓದಿ: Gold Loan- ಬ್ಯಾಂಕ್ ಸಾಲ ಸಿಗುತ್ತಿಲ್ಲವಾ? ಪರ್ಸನಲ್ ಲೋನ್ಗಿಂತಲೂ ಕಡಿಮೆ ದರಕ್ಕೆ ನಿಮಗೆ ಸುಲಭವಾಗಿ ಸಿಗುತ್ತದೆ ಈ ಸಾಲ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಎಫ್ಡಿ ದರಗಳು
ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕೆನಿಸಿದ ಎಸ್ಬಿಐನಲ್ಲಿ 7 ದಿನದಿಂದ 10 ವರ್ಷದವರೆಗೂ ವಿವಿಧ ಅವಧಿ ಠೇವಣಿಗಳಿವೆ. ಬಡ್ಡಿದರ ಶೇ. 3ರಿಂದ ಆರಂಭವಾಗಿ ಶೇ. 7ರವರೆಗೂ ಇದೆ. ಹಿರಿಯ ನಾಗಕರಿಗೆ ಶೇ. 7.50ರವರೆಗೂ ಬಡ್ಡಿ ದರ ಇದೆ.
- ಎಸ್ಬಿಐನಲ್ಲಿ ಒಂದು ವರ್ಷದ ಎಫ್ಡಿಗೆ ಶೇ. 6.80 ಬಡ್ಡಿ
- 2 ವರ್ಷದಿಂದ 3 ವರ್ಷಕ್ಕೆ: ಶೇ. 7 ಬಡ್ಡಿ
ಹಿರಿಯ ನಾಗರಿಕರಾದರೆ 2 ವರ್ಷದಿಂದ 3 ವರ್ಷಕ್ಕೆ ಹಾಗೂ 5 ವರ್ಷದಿಂದ 10 ವರ್ಷಕ್ಕೆ ಇಡುವ ಎಫ್ಡಿಗಳಿಗೆ ಶೇ. 7.50ರಷ್ಟು ಬಡ್ಡಿ ಕೊಡಲಾಗುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ