50 ವರ್ಷಕ್ಕೆಲ್ಲಾ ಕೆಲಸ ಬಿಟ್ಟು ಆರಾಮಿರ್ತೀನಿ ಅನ್ನೋರು ತಿಳಿಯಬೇಕಾದ ಸಂಗತಿಗಳಿವು…

FIRE- financial independence Retire Early concept: ಜನರು ಬೇಗನೇ ನಿವೃತ್ತರಾಗುವುದಕ್ಕೆ FIRE ಎನ್ನುತ್ತಾರೆ. ಆದರೆ, ಭವಿಷ್ಯದ ದಿನಗಳ ಅನಿಶ್ಚಿತತೆ, ಅನಿರೀಕ್ಷಿತ ವೆಚ್ಚ ಇವೆಲ್ಲವನ್ನೂ ಪರಿಗಣಿಸದೇ ದುಡಿಮೆ ಬಿಟ್ಟರೆ ಕಷ್ಟವಾಗಬಹುದು. ರಿಟೈರ್ಮೆಂಟ್​ಗೆ ಮುನ್ನ ಮತ್ತು ಆನಂತರ ನಿಮ್ಮ ವೆಚ್ಚ ಕಡಿಮೆ ಮಾಡಿ, ಉಳಿತಾಯ ಹೆಚ್ಚಿಸುವುದಕ್ಕೆ ಆದ್ಯತೆ ಕೊಡುವುದು ಬಹಳ ಅಗತ್ಯ.

50 ವರ್ಷಕ್ಕೆಲ್ಲಾ ಕೆಲಸ ಬಿಟ್ಟು ಆರಾಮಿರ್ತೀನಿ ಅನ್ನೋರು ತಿಳಿಯಬೇಕಾದ ಸಂಗತಿಗಳಿವು...
ಹಣ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 05, 2024 | 4:18 PM

ಅದಿದ್ದವರಿಗೆ ಇದು ಬೇಕು, ಇದಿದ್ದವರೆಗೆ ಅದು ಬೇಕು. ಇದು ಮನುಷ್ಯನ ಸಹಜ ಪ್ರವೃತ್ತಿ. ಬಿಸಿನೆಸ್ ಆರಂಭಿಸಿ 24 ಗಂಟೆ ತಲೆಕೆಡಿಸಿಕೊಳ್ಳುವ ಜನರು, ತಮಗೆ ಆರಾಮವಾಗಿ ಬೆಳಗ್ಗೆ ಕೆಲಸಕ್ಕೆ ಹೋಗಿ ಸಂಜೆ ಮನೆಗೆ ವಾಪಸ್ ಬರುವಂತಹ ಒಳ್ಳೆಯ ಉದ್ಯೋಗ ಸಿಕ್ಕರೆ ಅದೆಷ್ಟು ಚೆನ್ನ ಎಂದೆಣಿಸುತ್ತಾರೆ. ಅದೇ 9ರಿಂದ 6ರವರೆಗೆ ಕೆಲಸ ಮಾಡುವ ಉದ್ಯೋಗಿಗಳು, ತಮಗೆ ನಿತ್ಯದ ಈ ಕೆಲಸದ ಜಂಜಾಟ ಎಂದು ಕೊನೆಯಾಗುವುದೋ ಎಂದು ಪರಿತಪಿಸುತ್ತಿದ್ದಾರೆ. ಬಿಸಿನೆಸ್ ಬೇಡ, ಉದ್ಯೋಗವೂ ಬೇಡ, ಸಾಧ್ಯವಾದಷ್ಟೂ ಹಣ ಸಂಪಾದಿಸಿ ಬೇಗನೇ ನಿವೃತ್ತರಾಗಿ ವಿಶ್ರಾಂತ ಜೀವನ ನಡೆಸೋಣ ಎಂದು ಎರಡೂ ಗುಂಪಿನವರು ಅಂದುಕೊಳ್ಳುವುದುಂಟು. ಅದೇ ಯೋಚನೆಗಳಲ್ಲಿ ಹುಟ್ಟುಕೊಂಡಿದ್ದೇ ಫೈರ್ (FIRE) ಎನ್ನುವ ಕಾನ್ಸೆಪ್ಟು.

FIRE ಎಂದರೆ ಫೈನಾನ್ಷಿಯ್ ಇಂಡಿಪೆಂಡೆನ್ಸ್, ರಿಟೈರ್ ಅರ್ಲಿ. ಅಂದರೆ ಹಣಕಾಸು ಸ್ವಾತಂತ್ರ್ಯ ಪಡೆದು ಬೇಗನೇ ನಿವೃತ್ತಿ ಪಡೆಯುವುದು. ನಿವೃತ್ತರಾಗಿ, ಸಾಯುವವರೆಗೂ ಆರಾಮವಾಗಿ ಬದುಕುವಷ್ಟು ಹಣ ಸಂಪಾದಿಸುವುದೇ ಹಣಕಾಸು ಸ್ವಾತಂತ್ರ್ಯ. ಈ ಹಣಕಾಸು ಸ್ವಾತಂತ್ರ್ಯಕ್ಕೆ ಎಷ್ಟು ಹಣ ಅಗತ್ಯ ಎನ್ನುವುದೇ ಫೈರ್ ನಂಬರ್.

ಇದನ್ನೂ ಓದಿ: ಬೇಡದ ಡೀಮ್ಯಾಟ್ ಖಾತೆ ಮುಕ್ತಾಯಗೊಳಿಸುವುದು ರಗಳೆಯಲ್ಲ, ಸುಲಭ; ಇಲ್ಲಿದೆ ಮಾಹಿತಿ

ಸಾಮಾನ್ಯವಾಗಿ, ನಿಮ್ಮ ವಾರ್ಷಿಕ ವೆಚ್ಚದ 30 ಪಟ್ಟು ಹಣ ಸಂಪಾದಿಸಿದರೆ ಆಗ ನಿವೃತ್ತರಾಗಬಹುದು ಎನ್ನುವ ಸಲಹೆ ಕೇಳಿಬರುತ್ತದೆ. ಅಂದರೆ, ನಿಮ್ಮ ವಾರ್ಷಿಕ ವೆಚ್ಚ 5 ಲಕ್ಷ ರೂ ಇದ್ದಲ್ಲಿ, ಒಂದೂವರೆ ಕೋಟಿ ರೂ ಕಾರ್ಪಸ್ ಬೇಕಾಗುತ್ತದೆ. ಈ ಹಣವನ್ನು ಮ್ಯೂಚುವಲ್ ಫಂಡ್​ನಂತಹ ಯಂತ್ರಗಳಲ್ಲಿ ಹೂಡಿಕೆ ಮಾಡಿ, ಅದರಿಂದ ವರ್ಷಕ್ಕೆ ಶೇ. 4ರಷ್ಟು ಹಣ ವಿತ್​ಡ್ರಾ ಮಾಡುತ್ತಾ ಹೋಗಬಹುದು. ಆಗ ಸಾಯುವವರೆಗೂ ಯಾವ ಕೆಲಸದ ಗೊಡವೆ ಇಲ್ಲದೇ ಆರಾಮವಾಗಿ ಇರಬಹುದು ಎನ್ನುವುದು ಈ ಫೈರ್ ಕಾನ್ಸೆಪ್ಟ್.

ಅಂದುಕೊಂಡಂತೆ ಇರುವುದಿಲ್ಲವಲ್ಲ ಜೀವನ…

ಫೈರ್ ಕಾನ್ಸೆಪ್ಟ್​ನ ಪ್ರಮುಖ ಲೋಪವೆಂದರೆ ಅದು ಜೀವನದ ಅನಿರೀಕ್ಷಿತ ತಿರುವುಗಳನ್ನು ನಿರೀಕ್ಷಿಸುವುದಿಲ್ಲ. ಯಾವುದಾದರೂ ತುರ್ತು ಸಮಸ್ಯೆಯಾಗಿ ಸಾಕಷ್ಟು ಹಣ ಖರ್ಚಾಗಿ ಹೋದರೆ ಫೈರ್ ಅಂದಾಜೆಲ್ಲಾ ಉಲ್ಟಾ ಹೊಡೆಯುತ್ತದೆ. ಹಾಗೆಯೇ, ಜೀವನ ವೆಚ್ಚ ಈಗ ಇದ್ದದ್ದು 10 ವರ್ಷದ ಬಳಿಕ ಬೇರೆಯೇ ಮಟ್ಟದಲ್ಲಿ ಇರುತ್ತದೆ. ವಯಸ್ಸು ಹೆಚ್ಚಾದಂತೆ ಖರ್ಚು ವೆಚ್ಚಗಳ ಸಾಧ್ಯತೆ ಹೆಚ್ಚಾಗಬಹುದು.

‘ಬೇಗನೇ ನಿವೃತ್ತರಾಗಬೇಕೆನ್ನುವುದರಲ್ಲಿ ತಪ್ಪಿಲ್ಲ. ಆದರೆ, ನಿವೃತ್ತಿಗೆ ಹಣ ಮಾತ್ರವೇ ಮಾನದಂಡ ಅಲ್ಲ. ನಿವೃತ್ತರಾದ ಬಳಿಕ ಎದುರಾಗುವ ಮಾನಸಿಕ, ಭಾವನಾತ್ಮಕ, ಹಣಕಾಸು ಸಮಸ್ಯೆಗಳ ಬಗ್ಗೆ ಹೆಚ್ಚಿನ ಜನರು ಆಲೋಚನೆಯನ್ನೇ ಮಾಡಿರುವುದಿಲ್ಲ. ಮುಂದೆ ಅವರು ತಮ್ಮ ನಿರ್ಧಾರಕ್ಕೆ ಪಶ್ಚಾತಾಪ ಪಡುವಂತಾಗುತ್ತದೆ,’ ಎಂದು ಝಿರೋಧ ಸಂಸ್ಥಾಪಕ ನಿತಿನ್ ಕಾಮತ್ ಅವರು ತಮ್ಮ ಎಕ್ಸ್ ಪೋಸ್ಟ್​ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಹಣ ನೋಡುವ ದೃಷ್ಟಿ ಜಪಾನೀಯರದ್ದು ವಿಭಿನ್ನ; ಎರಿಗಾಟು ಸೂತ್ರ ತಿಳಿದಿರಿ

ಫೈರ್ ಬಯಸುವವರು ಈ ಅಂಶಗಳನ್ನು ಅಳವಡಿಸಿ

  • ಸಾಧ್ಯವಾದಷ್ಟೂ ಹಣ ಉಳಿಸಿ
  • ಅವಶ್ಯಕ ಇನ್ಷೂರೆನ್ಸ್ ಪಾಲಿಸಿ ಮಾಡಿಸಿ
  • ಜೀವನ ಸರಳ ಇರಲಿ
  • ಎಮರ್ಜೆನ್ಸಿ ಫಂಡ್ ಎತ್ತಿಡಿ
  • ನಿಮ್ಮ ರಿಟೈರ್ಮೆಂಟ್ ಫಂಡ್ ಬೆಳವಣಿಗೆಯ ನಿರೀಕ್ಷೆ ತೀರಾ ಹೆಚ್ಚಿರಬಾರದು. ಶೇ. 12 ಅಥವಾ 10 ನಿರೀಕ್ಷಿಸಬೇಡಿ. ಶೇ. 8ರ ದರ ಪರಿಗಣಿಸಿ.
  • ನಿಮ್ಮ ವಾರ್ಷಿಕ ವೆಚ್ಚದ 45 ಪಟ್ಟು ಹೆಚ್ಚು ಹಣವು ರಿಟೈರ್ಮೆಂಟ್ ಕಾರ್ಪಸ್​ನಲ್ಲಿರಲಿ
  • ರಿಟೈರ್ ಆದ ಬಳಿಕವೂ ಸಾಧ್ಯವಾದಷ್ಟೂ ಹಣ ಉಳಿಸಿ ಎಮರ್ಜೆನ್ಸಿ ಫಂಡ್​ನಲ್ಲಿಡುವುದನ್ನು ಅಭ್ಯಾಸ ಮಾಡಿಕೊಳ್ಳಿ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಒಡೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಒಡೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ