ನಿಶ್ಚಿತ ಠೇವಣಿಯೋ, ಆವರ್ತಿತ ಠೇವಣಿಯೋ? ಯಾವುದು ನಿಮಗೆ ಸೂಕ್ತ? ಇಲ್ಲಿದೆ ವಿವರ

Fixed Deposit or Recurring Deposit: ಫಿಕ್ಸೆಡ್ ಡೆಪಾಸಿಟ್ ಮತ್ತು ರೆಕರಿಂಗ್ ಡೆಪಾಸಿಟ್ ಎರಡು ಅತಿ ಸಾಮಾನ್ಯವಾಗಿ ಬಳಕೆಯಾಗುವ ಠೇವಣಿ ಯೋಜನೆಗಳು. ಈ ಪೈಕಿ ಲಂಪ್ಸಮ್ ಹಣ, ಅಂದರೆ ಹೆಚ್ಚು ಮೊತ್ತದ ಹಣ ಹೊಂದಿದ್ದರೆ ಅದನ್ನು ನಿಮಗೆ ಬೇಕಾದ ಅವಧಿಯವರೆಗೆ ಎಫ್​ಡಿ ಮೂಲಕ ಠೇವಣಿ ಇಡಬಹುದು. ನೀವು ಪ್ರತೀ ತಿಂಗಳು ನಿರ್ದಿಷ್ಟ ಮೊತ್ತದ ಹಣವನ್ನು ಉಳಿಸುತ್ತಿದ್ದರೆ, ಅಥವಾ ನಿರ್ದಿಷ್ಟ ಮೊತ್ತದ ಹೆಚ್ಚುವರಿ ಆದಾಯ ಬರುತ್ತಿದ್ದರೆ ಆ ಹಣವನ್ನು ಆರ್​ಡಿ ಮೂಲಕ ಠೇವಣಿ ಇಡಬಹುದು.

ನಿಶ್ಚಿತ ಠೇವಣಿಯೋ, ಆವರ್ತಿತ ಠೇವಣಿಯೋ? ಯಾವುದು ನಿಮಗೆ ಸೂಕ್ತ? ಇಲ್ಲಿದೆ ವಿವರ
ಡೆಪಾಸಿಟ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 08, 2024 | 10:52 AM

ಹಣ ಉಳಿತಾಯ ಮತ್ತು ಹೂಡಿಕೆಗೆ ಸಾಮಾನ್ಯವಾಗಿ ಬಳಕೆಯಾಗುವ ಹಣಕಾಸು ಸಾಧನವೆಂದರೆ ಅದು ಠೇವಣಿ. ಈ ಠೇವಣಿಯಲ್ಲಿ ಎರಡು ಪ್ರಮುಖ ವಿಧದ್ದಿವೆ. ನಿಶ್ಚಿತ ಠೇವಣಿ ಅಥವಾ ಫಿಕ್ಸೆಡ್ ಡೆಪಾಸಿಟ್ ಮತ್ತು ಆವರ್ತಿತ ಠೇವಣಿ (RD- recurring deposit) ಅಥವಾ ರೆಕರಿಂಗ್ ಡೆಪಾಸಿಟ್. ಎರಡೂ ಕೂಡ ಬಹಳ ಸಾಮಾನ್ಯವಾಗಿ ಬಳಕೆಯಾಗುವ ಠೇವಣಿಗಳೇ. ಹಣ ಉಳಿಸಿ ಅದನ್ನು ಬೆಳೆಸಲು ಇವು ಸಹಕಾರಿ. ಬ್ಯಾಂಕ್ ಮತ್ತು ಪೋಸ್ಟ್ ಆಫೀಸ್​ಗಳಲ್ಲಿ ಇವೆರಡೂ ರೀತಿಯ ಠೇವಣಿಗಳನ್ನು ಪಡೆಯಬಹುದು. ಆನ್ಲೈನ್​ನಲ್ಲಿ ಬ್ಯಾಂಕ್ ಆ್ಯಪ್ ಮೂಲಕ ಸುಲಭವಾಗಿ ಯಾವಾಗ ಬೇಕಾದರೂ ಠೇವಣಿ ಪ್ಲಾನ್​ಗಳನ್ನು ತೆರೆಯಬಹುದು. ಅಷ್ಟಕ್ಕೂ ಎಫ್​ಡಿ ಮತ್ತು ಆರ್​ಡಿಯಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳುವುದು ಎಂಬ ಗೊಂದಲ ಮೂಡಬಹುದು.

ಫಿಕ್ಸೆಡ್ ಡೆಪಾಸಿಟ್​ ಹೇಗೆ?

ನಿಶ್ಚಿತ ಠೇವಣಿ ಒಮ್ಮೆ ಕಟ್ಟುವ ಹಣವಾಗಿರುತ್ತದೆ. ಒಬ್ಬ ವ್ಯಕ್ತಿ ಎಷ್ಟು ಬೇಕಾದರೂ ಎಫ್​ಡಿ ತೆರೆಯಬಹುದು. ಎಷ್ಟು ಮೊತ್ತಕ್ಕಾದರೂ ಎಫ್​ಡಿ ಹಾಕಬಹುದು. ಮೂರು ತಿಂಗಳಿಂದ ಹಿಡಿದು 10 ವರ್ಷದವರೆಗೆ ಠೇವಣಿ ಇರಿಸುವ ಅವಕಾಶ ಇರುತ್ತದೆ. ಬಡ್ಡಿದರ ಕೂಡ ನಿಶ್ಚಿತವಾಗಿರುತ್ತದೆ.

ಇದನ್ನೂ ಓದಿ: ಮಹಿಳಾ ಸಮ್ಮಾನ್ vs ಸುಕನ್ಯಾ ಸಮೃದ್ಧಿ: ಯಾವ ಯೋಜನೆ ನಿಮಗೆ ಸೂಕ್ತ? ಇಲ್ಲಿದೆ ಹೋಲಿಕೆ

ಎಫ್​ಡಿ ತೆರೆಯುವಾಗಲೇ ಬಡ್ಡಿದರ ನಿರ್ಧರಿಸಲಾಗುತ್ತದೆ. ಕೊನೆಯವರೆಗೂ ಅದೇ ಬಡ್ಡಿ ಅನ್ವಯ ಆಗುತ್ತದೆ. ಕೆಲವೊಮ್ಮೆ ಫ್ಲೋಟಿಂಗ್ ರೇಟ್ ಮೇಲೆ ಎಫ್​ಡಿ ಸ್ವೀಕರಿಸಲಾಗುತ್ತದೆ. ಅಂದರೆ ಬ್ಯಾಂಕ್ ತನ್ನ ಬಡ್ಡಿದರವನ್ನು ಬದಲಿಸಿದಾಗ ಅದಕ್ಕೆ ಅನುಗುಣವಾಗಿ ಎಫ್​ಡಿ ದರವೂ ಬದಲಾಗುತ್ತದೆ. ಮೆಚ್ಯೂರಿಟಿಗಿಂತ ಮುಂಚೆ ನೀವು ಹಣ ಹಿಂಪಡೆಯಬೇಕೆಂದರೆ ಅದಕ್ಕೆ ನಿರ್ದಿಷ್ಟ ದಂಡ ಪಾವತಿಸಬೇಕಾಗುತ್ತದೆ.

ರೆಕರಿಂಗ್ ಡೆಪಾಸಿಟ್ ಹೇಗೆ?

ಇದು ಆವರ್ತಿತ ನಿಧಿ. ಅಂದರೆ, ನಿಯಮಿತವಾಗಿ ನೀವು ನಿಗದಿತ ಹಣವನ್ನು ಜಮೆ ಮಾಡುತ್ತಿರಬೇಕು. ಸಾಮಾನ್ಯವಾಗಿ ಪ್ರತೀ ತಿಂಗಳು ಪೂರ್ವನಿಗದಿತವಾದ ಹಣವನ್ನು ಆವರ್ತಿತ ನಿಧಿಗೆ ಡೆಪಾಸಿಟ್ ಇಡಬೇಕು. ಇಲ್ಲಿ ಬಡ್ಡಿದರ ಹೆಚ್ಚೂ ಕಡಿಮೆ ಎಫ್​ಡಿ ದರದಷ್ಟೇ ಇರುತ್ತದೆ. ಆರ್​ಡಿ ಅನ್ನು ಮಧ್ಯದಲ್ಲಿ ನಿಲ್ಲಿಸಿದರೆ ಒಂದಷ್ಟು ದಂಡ ತೆರಬೇಕಾಗುತ್ತದೆ.

ಇದನ್ನೂ ಓದಿ: ರಿಟೈರ್ಮೆಂಟ್ ಪ್ಲಾನಿಂಗ್: ಈ ಮೂರು ವಿಧದ ಹಣಕಾಸು ವ್ಯವಸ್ಥೆ ನಿಮ್ಮದಿರಲಿ

ಎಫ್​ಡಿ ಅಥವಾ ಆರ್​ಡಿ, ಯಾವುದು ಬೆಟರ್?

ನಿಮ್ಮಲ್ಲಿ ಲಂಪ್ಸಮ್ ಹಣ ಇದ್ದರೆ ಫಿಕ್ಸೆಡ್ ಡೆಪಾಸಿಟ್ ಇಡುವುದು ಸೂಕ್ತ. ನೀವು ಪ್ರತೀ ತಿಂಗಳು ನಿರ್ದಿಷ್ಟ ಮೊತ್ತದ ಹಣವನ್ನು ಉಳಿಸುತ್ತಿದ್ದರೆ ಆ ಮೊತ್ತಕ್ಕೆ ಆರ್​ಡಿ ತೆರೆಯಬಹುದು. ಹಣ ಉಳಿತಾಯಕ್ಕೆ ಆರ್​ಡಿ ಬೆಸ್ಟ್.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ