Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೋಲ್ಡ್ ಮಾನಿಟೈಸೇಶನ್ ಸ್ಕೀಮ್, 2 ಪ್ಲಾನ್ ನಿಲ್ಲಿಸಿದ ಸರ್ಕಾರ; ಏನಿದು ಚಿನ್ನ ನಗದೀಕರಣ ಯೋಜನೆ?

Gold Monetisation Scheme: ಗೋಲ್ಡ್ ಮಾನಿಟೈಸೇಶನ್ ಯೋಜನೆಯ ಮೂರು ಡೆಪಾಸಿಟ್ ಪ್ಲಾನ್​​ಗಳಲ್ಲಿ ಮಧ್ಯಮ ಮತ್ತು ದೀರ್ಘಾವಧಿಯ ಪ್ಲಾನ್​​ಗಳನ್ನು ಸರ್ಕಾರ ಕೈಬಿಟ್ಟಿದೆ. ಇವತ್ತಿನಿಂದಲೇ (ಮಾ. 26) ಈ ಪ್ಲಾನ್​​ಗಳು ಚಾಲನೆಯಲ್ಲಿ ಇರುವುದಿಲ್ಲ. 2015ರಲ್ಲಿ ಆರಂಭವಾದ ಗೋಲ್ಡ್ ಮಾನಿಟೈಸೇಶನ್ ಸ್ಕೀಮ್​ನಲ್ಲಿ ಚಿನ್ನವನ್ನು ನಿರ್ದಿಷ್ಟ ಅವಧಿಯವರೆಗೆ ಡೆಪಾಸಿಟ್ ಆಗಿ ಇಟ್ಟು, ಅದರಿಂದ ಲಾಭ ಮಾಡಿಕೊಳ್ಳಲು ಅವಕಾಶ ಇದೆ.

ಗೋಲ್ಡ್ ಮಾನಿಟೈಸೇಶನ್ ಸ್ಕೀಮ್, 2 ಪ್ಲಾನ್ ನಿಲ್ಲಿಸಿದ ಸರ್ಕಾರ; ಏನಿದು ಚಿನ್ನ ನಗದೀಕರಣ ಯೋಜನೆ?
ಚಿನ್ನ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 26, 2025 | 3:02 PM

ನವದೆಹಲಿ, ಮಾರ್ಚ್ 26: ಗೋಲ್ಡ್ ಮಾನಿಟೈಸೇಶನ್ ಸ್ಕೀಮ್​​ನ ಮಧ್ಯಮಾವಧಿ ಮತ್ತು ದೀರ್ಘಾವಧಿ ಠೇವಣಿ ಪ್ಲಾನ್​​ಗಳನ್ನು ಸರ್ಕಾರ ನಿಲ್ಲಿಸಿದೆ. ಇಂದು ಬುಧವಾರ ಕೇಂದ್ರ ಹಣಕಾಸು ಸಚಿವಾಲಯ ಈ ಬಗ್ಗೆ ಹೇಳಿಕೆ ನೀಡಿದೆ. ಮಾರ್ಚ್ 26ರಿಂದ ಚಿನ್ನ ನಗದೀಕರಣ ಯೋಜನೆಯ (GMS- Gold Monetization Scheme) ಮಧ್ಯಮಾವಧಿ ಠೇವಣಿ ಮತ್ತು ದೀರ್ಘಾವಧಿ ಠೇವಣಿ ಪ್ಲಾನ್​​ಗಳನ್ನು ನಿಲ್ಲಿಸಿರುದಾಗಿ ಪ್ರಕಟಿಸಿದೆ. ಆದರೆ, ಕಿರು ಅವಧಿ ಠೇವಣಿ ಪ್ಲಾನ್​​ ಮುಂದುವರಿಯಲಿದೆ. 5-7 ವರ್ಷದ ಮಧ್ಯಮಾವಧಿ ಠೇವಣಿ ಹಾಗೂ 12-15 ವರ್ಷದ ದೀರ್ಘಾವಧಿ ಠೇವಣಿ ಪ್ಲಾನ್​​ಗಳನ್ನು ಸದ್ಯ ಕೈಬಿಡಲಾಗಿದೆ.

ಏನಿದು ಗೋಲ್ಡ್ ಮಾನಿಟೈಸೇಶನ್ ಸ್ಕೀಮ್?

ಭಾರತದ ಮನೆಗಳಲ್ಲಿ ಅತಿಹೆಚ್ಚು ಚಿನ್ನಗಳಿದ್ದು, ಅದರಲ್ಲಿ ನಿರುಪಯುಕ್ತವಾಗಿ ಉಳಿದಿರುವ ಚಿನ್ನವನ್ನೇ ಮರುಬಳಕೆ ಮಾಡಿದರೆ ಚಿನ್ನದ ಆಮದು ಹೊರೆ ಕಡಿಮೆ ಮಾಡಬಹುದು ಎನ್ನುವ ಎಣಿಕೆಯಲ್ಲಿ ಸರ್ಕಾರ 2015ರಲ್ಲಿ ಗೋಲ್ಡ್ ಮಾನಿಟೈಸೇಶನ್ ಸ್ಕೀಮ್ ಅನ್ನು ಆರಂಭಿಸಿತು.

ಯಾರು ಬೇಕಾದರೂ ತಮ್ಮಲ್ಲಿರುವ ಚಿನ್ನವನ್ನು ಡೆಪಾಸಿಟ್ ಆಗಿ ಇಟ್ಟು ಬ್ಯಾಂಕ್​​ನಲ್ಲಿ ಗೋಲ್ಡ್ ಡೆಪಾಸಿಟ್ ಅಕೌಂಟ್ ತೆರೆಯಬಹುದು. ನಿರ್ದಿಷ್ಟ ಕಾಲಾವಧಿಯ ಪ್ರಕಾರವಾಗಿ ಕಿರು, ಮಧ್ಯಮ ಮತ್ತು ದೀರ್ಘ ಅವಧಿ ಡೆಪಾಸಿಟ್​​​ಗಳೆಂದು ಮೂರು ಪ್ಲಾನ್​​ಗಳಲ್ಲಿ ಒಂದನ್ನು ಆಯ್ದುಕೊಳ್ಳಬಹುದು.

ಇದನ್ನೂ ಓದಿ: ಐದು ವರ್ಷಗಳಿಂದ ಶೇ. 20ಕ್ಕೂ ಹೆಚ್ಚು ಲಾಭ ತರುತ್ತಿರುವ ಡಿವಿಡೆಂಡ್ ಯೀಲ್ಡ್ ಮ್ಯೂಚುವಲ್ ಫಂಡ್​​ಗಳು

ನೀವು ಡೆಪಾಸಿಟ್ ಇಡುವ ಚಿನ್ನಕ್ಕೆ ಸರ್ಕಾರ ಶೇ. 2.25ರಿಂದ ಶೇ. 2.50ರಷ್ಟು ಬಡ್ಡಿ ನೀಡುತ್ತದೆ. ಇಲ್ಲಿ ಬಡ್ಡಿ ಎಂದರೆ ನಗದು ಹಣವಲ್ಲ, ಬದಲಾಗಿ ಗ್ರಾಮ್ ಲೆಕ್ಕದಲ್ಲಿ ನೀಡಲಾಗುತ್ತದೆ. ಉದಾಹರಣೆಗೆ, ನೀವು 100 ಗ್ರಾಮ್ ಚಿನ್ನ ಇಟ್ಟಿದ್ದರೆ, ವರ್ಷಕ್ಕೆ ಶೇ. 2.5 ಎಂದರೆ ಒಂದು ವರ್ಷದಲ್ಲಿ ನಿಮ್ಮ ಗೋಲ್ಡ್ ಅಕೌಂಟ್​​ನಲ್ಲಿರುವ ಚಿನ್ನವು 100 ಗ್ರಾಮ್​​ನಿಂದ 102.50 ಗ್ರಾಮ್​​ ಆಗಿರುತ್ತದೆ.

ಪ್ಲಾನ್ ಮೆಚ್ಯೂರ್ ಆದಾಗ ನೀವು ಚಿನ್ನವಾಗಿ ಅದನ್ನು ಪಡೆಯಬಹುದು. ಅಥವಾ ಅಂದಿನ ಮಾರುಕಟ್ಟೆ ದರ ಪ್ರಕಾರ ಹಣವನ್ನು ಪಡೆಯಬಹುದು.

ಪ್ಯೂರಿಟಿ ಟೆಸ್ಟ್ ಮಾಡಿಸಬೇಕು

ನೀವು ಚಿನ್ನವನ್ನು ಡೆಪಾಸಿಟ್ ಇಡುವ ಮುನ್ನ, ಅದನ್ನು ಯಾವುದಾದರೂ ಸಿಪಿಟಿಸಿ ಸೆಂಟರ್​​ಗೆ ತೆಗೆದುಕೊಂಡು ಹೋಗಿ ಪ್ಯೂರಿಟಿ ಟೆಸ್ಟ್ ಮಾಡಿಸಿ ಪ್ರಮಾಣಪತ್ರ ಪಡೆಯಬೇಕು. ಅದರ ಪ್ರಕಾರವೇ ಬ್ಯಾಂಕು ನಿಮ್ಮ ಗೋಲ್ಡ್ ಡೆಪಾಸಿಟ್ ಅಕೌಂಟ್​​ನಲ್ಲಿ ನಿಗದಿತ ತೂಕವನ್ನು ನಮೂದಿಸುತ್ತದೆ. ಒಡವೆಯಾಗಿದ್ದರೆ ವೇಸ್ಟೇಜ್ ಇತ್ಯಾದಿಯನ್ನು ಕಳೆಯಲಾಗುತ್ತದೆ.

ಇದನ್ನೂ ಓದಿ: ಚಿನ್ನ ಒತ್ತೆ ಇಟ್ಟು ಸಾಲ ಪಡೆಯುವುದು ಕಷ್ಟವಾಗುತ್ತಾ? ನಿಯಮ ಬಿಗಿಗೊಳಿಸಲು ಬ್ಯಾಂಕುಗಳಿಗೆ ಆರ್​ಬಿಐ ಸೂಚಿಸುವ ಸಾಧ್ಯತೆ

ಪ್ಲಾನ್ ಮೆಚ್ಯೂರ್ ಆದಾಗ ನೀವು ನಗದು ಬದಲು ಚಿನ್ನವನ್ನೇ ಪಡೆಯಲು ಬಯಸಿದರೆ, ಆಗ ನಿಮಗೆ 24 ಕ್ಯಾರಟ್​​ನ ಶುದ್ಧ ಚಿನ್ನದ ಗಟ್ಟಿ ಅಥವಾ ನಾಣ್ಯ ಇತ್ಯಾದಿಯನ್ನು ನೀಡಲಾಗುತ್ತದೆ. ನೀವು ಡೆಪಾಸಿಟ್​​ಗೆ ಇಟ್ಟಿದ್ದ ಚಿನ್ನವನ್ನು ಕರಗಿಸಿ ಬೇರೆಡೆ ಬಳಕೆ ಮಾಡಿರಲಾಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ