ಮೊಬೈಲ್ ನಂಬರ್ ರೀತಿ ನಿಮ್ಮ ಹೆಲ್ತ್ ಇನ್ಷೂರೆನ್ಸ್ ಪಾಲಿಸಿಯನ್ನೂ ಪೋರ್ಟ್ ಮಾಡಬಹುದಾ? ಇಲ್ಲಿದೆ ಡೀಟೇಲ್ಸ್

Health insurance policy: ಹೆಲ್ತ್ ಇನ್ಷೂರೆನ್ಸ್ ಪಾಲಿಸಿಯನ್ನು ಒಂದು ಕಂಪನಿಯಿಂದ ಇನ್ನೊಂದು ಕಂಪನಿಗೆ ಬದಲಾಯಿಸಲು ಅವಕಾಶ ಇದೆ. ಹಾಲಿ ಸಿಗುತ್ತಿರುವ ಅನುಕೂಲಗಳನ್ನು ಮುಂದುವರಿಸಿಕೊಂಡು ಹೊಸ ಕಂಪನಿಯ ಹೊಸ ಆಫರ್​ಗಳನ್ನೂ ಪಡೆಯಲು ಸಾಧ್ಯ. ವೇಟಿಂಗ್ ಪೀರಿಯಡ್, ನೋ ಕ್ಲೇಮ್ ಬೋನಸ್ ಇತ್ಯಾದಿ ಫೀಚರ್​ಗಳನ್ನು ನೀವು ಹೊಸ ಇನ್ಷೂರೆನ್ಸ್ ಕಂಪನಿಯಲ್ಲೂ ಮುಂದುವರಿಸಬಹುದು.

ಮೊಬೈಲ್ ನಂಬರ್ ರೀತಿ ನಿಮ್ಮ ಹೆಲ್ತ್ ಇನ್ಷೂರೆನ್ಸ್ ಪಾಲಿಸಿಯನ್ನೂ ಪೋರ್ಟ್ ಮಾಡಬಹುದಾ? ಇಲ್ಲಿದೆ ಡೀಟೇಲ್ಸ್
ಹೆಲ್ತ್ ಇನ್ಷೂರೆನ್ಸ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 16, 2025 | 5:45 PM

ಹೆಲ್ತ್ ಇನ್ಷೂರೆನ್ಸ್ ಇವತ್ತು ಬಹಳ ಅತ್ಯಗತ್ಯವಾಗಿರುವ ಹಣಕಾಸು ಭದ್ರತಾ ವ್ಯವಸ್ಥೆ. ಮಾರುಕಟ್ಟೆಯಲ್ಲಿ ಹಲವು ಕಂಪನಿಗಳು ವಿವಿಧ ರೀತಿಯ ಹೆಲ್ತ್ ಇನ್ಷೂರೆನ್ಸ್ ಪ್ರಾಡಕ್ಟ್​ಗಳನ್ನು ಆಫರ್ ಮಾಡುತ್ತವೆ. ನೀವು ಖರೀದಿಸಿದ ಹೆಲ್ತ್ ಇನ್ಷೂರೆನ್ಸ್ ಪಾಲಿಸಿ ಕೆಲ ವಿಚಾರಗಳಲ್ಲಿ ತೃಪ್ತಿ ಕೊಟ್ಟಿರಬಹುದು, ಇನ್ನೂ ಕೆಲ ವಿಚಾರಗಳಲ್ಲಿ ನಿಮಗೆ ಅಸಮಾಧಾನ ತಂದಿರಬಹುದು. ಸಮರ್ಪಕವಾಗಿ ಕ್ಲೇಮ್ ಆಗದೇ ಇರಬಹುದು, ಹೆಚ್ಚು ರೋಗಗಳಿಗೆ ಕವರೇಜ್ ಸಿಗದಿರಬಹುದು, ಹೀಗೆ ಅಸಮಾಧಾನಕ್ಕೆ ನಾನಾ ಕಾರಣಗಳು ಇರುತ್ತವೆ. ಇಂಥ ಸಂದರ್ಭದಲ್ಲಿ ನೀವು ಇಚ್ಛಿಸಿದಲ್ಲಿ ಹೆಲ್ತ್ ಇನ್ಷೂರೆನ್ಸ್ ಪಾಲಿಸಿಯನ್ನು ಬೇರೆ ಕಂಪನಿಗೆ ನೀವು ವರ್ಗಾಯಿಸಲು ಅವಕಾಶ ಇರುತ್ತದೆ.

ಮೊಬೈಲ್ ನಂಬರ್ ಅನ್ನು ಬೇರೆ ಟೆಲಿಕಾಂ ಆಪರೇಟರ್​ಗೆ ವರ್ಗಾವಣೆ ಮಾಡಿಕೊಂಡ ರೀತಿಯಲ್ಲಿ ನೀವು ಇನ್ಷೂರೆನ್ಸ್ ಕಂಪನಿಯನ್ನು ಬದಲಾಯಿಸಬಹುದು. ಆದರೆ, ಮೊಬೈಲ್ ನಂಬರ್ ಅನ್ನು ಪೋರ್ಟ್ ಮಾಡಿದಷ್ಟು ಸರಾಗವಾಗಿ ಇನ್ಷೂರೆನ್ಸ್ ಕಂಪನಿಯ ವರ್ಗಾವಣೆ ಆಗುವುದಿಲ್ಲ. ತುಸು ಹೆಚ್ಚಿನ ಪ್ರಕ್ರಿಯೆ ಇರುತ್ತದೆ.

ಹೆಲ್ತ್ ಇನ್ಷೂರೆನ್ಸ್ ಪೋರ್ಟ್ ಮಾಡುವುದರಿಂದ ಅನುಕೂಲವೇನು?

ಪ್ರಸಕ್ತ ಇನ್ಷೂರೆನ್ಸ್ ಕಂಪನಿಗಿಂತ ಇನ್ನೊಂದು ಕಂಪನಿ ಉತ್ತಮ ಸೇವೆ ಆಫರ್ ಮಾಡುತ್ತಿದ್ದರೆ ಪಾಲಿಸಿಯನ್ನು ವರ್ಗಾವಣೆ ಮಾಡಬಹುದು. ಹಳೆಯ ಪಾಲಿಸಿ ನಿಲ್ಲಿಸಿ ಹೊಸ ಪಾಲಿಸಿ ಖರೀದಿಸಬೇಕಾದರೆ ಹಲವು ಅನನುಕೂಲಗಳು ಬಂದೊದಗಬಹುದು. ಪ್ರೀಮಿಯಮ್ ಹೆಚ್ಚಬಹುದು, ಹಿಂದಿನ ಪಾಲಿಸಿಯಲ್ಲಿ ಗಳಿಸಿರಬಹುದಾದ ನೋ ಕ್ಲೇಮ್ ಬೋನಸ್, ವೇಟಿಂಗ್ ಪೀರಿಯಡ್ ಇತ್ಯಾದಿ ಅನುಕೂಲಗಳು ನಿಂತು ಹೋಗಬಹುದು. ಈ ಕಾರಣಕ್ಕೆ ಪಾಲಿಸಿ ಪೋರ್ಟ್ ಮಾಡುವುದು ಉತ್ತಮ ಕ್ರಮ ಎನಿಸುತ್ತದೆ.

ಇದನ್ನೂ ಓದಿ: ರಿಯಲ್ ಎಸ್ಟೇಟ್​ನಲ್ಲಿ ಸರ್ಕಲ್ ರೇಟ್ ಎಂದರೇನು? ಮಾರ್ಕೆಟ್ ರೇಟ್​ಗೂ ಅದಕ್ಕೂ ಏನು ವ್ಯತ್ಯಾಸ? ಇಲ್ಲಿದೆ ವಿವರ

ಒಂದೇ ರೀತಿಯ ಇನ್ಷೂರೆನ್ಸ್ ಪಾಲಿಸಿಗಳ ವರ್ಗಾವಣೆ

ನೀವು ಗಮನಿಸಬೇಕಾದ ಸಂಗತಿ ಎಂದರೆ, ಒಂದು ಹೆಲ್ತ್ ಇನ್ಷೂರೆನ್ಸ್ ಕಂಪನಿಯಿಂದ ಇನ್ನೊಂದು ಕಂಪನಿಗೆ ನಿಮ್ಮ ಪಾಲಿಸಿಯನ್ನು ವರ್ಗಾಯಿಸಲು ಕೆಲ ನಿಯಮಗಳಿವೆ. ಪ್ರಸಕ್ತ ನಿಮ್ಮಲ್ಲಿ ರೀಇಂಬುರ್ಸ್ಮೆಂಟ್ ಪ್ಲಾನ್ ಇದ್ದರೆ ನೀವು ಪೋರ್ಟ್ ಆಗುವ ಕಂಪನಿಯ ರೀ ಇಂಬುರ್ಸ್ಮೆಂಟ್ ಪ್ಲಾನ್​ಗೆ ಮಾತ್ರವೇ ವರ್ಗಾವಣೆ ಮಾಡಿಕೊಳ್ಳಬಹುದು. ಟಾಪಪ್ ಪ್ಲಾನ್ ಇದ್ದರೆ ಮತ್ತೊಂದು ಟಾಪ್ ಅಪ್ ಪ್ಲಾನ್​ಗೆ ಪೋರ್ಟ್ ಆಗಬಹುದು.

ಹೆಲ್ತ್ ಇನ್ಷೂರೆನ್ಸ್ ಪಾಲಿಸಿಯನ್ನು ಪೋರ್ಟ್ ಮಾಡುವ ಕ್ರಮಗಳು…

ನಿಮ್ಮ ಪ್ರಸಕ್ತ ಹೆಲ್ತ್ ಇನ್ಷೂರೆನ್ಸ್ ಪಾಲಿಸಿ ಅಪ್​ ಟು ಡೇಟ್ ಆಗಿರಬೇಕು. ಅಂದರೆ ಎಲ್ಲಾ ಪ್ರೀಮಿಯಮ್​ಗಳನ್ನೂ ಪಾವತಿಸಿರಬೇಕು. ಪೋರ್ಟ್ ಮಾಡಲು ನಿರ್ಧರಿಸಿದಲ್ಲಿ, ಪಾಲಿಸಿ ನವೀಕರಣ ದಿನದ 45ಕ್ಕಿಂತ ಹೆಚ್ಚು ದಿನಗಳ ಮುನ್ನವೇ ನೀವು ಪೋರ್ಟ್ ಆಗಲು ಬಯಸುತ್ತಿರುವ ಹೊಸ ಇನ್ಷೂರೆನ್ಸ್ ಕಂಪನಿಗೆ ಮನವಿ ಸಲ್ಲಿಸಬೇಕು.

ಇದೆ ವೇಳೆ, ಹಾಲಿ ಇನ್ಷೂರೆನ್ಸ್ ಕಂಪನಿಗೂ ಲಿಖಿತವಾಗಿ ಪತ್ರದ ಮುಖೇನ ಈ ವಿಚಾರವನ್ನು ತಿಳಿಸಬೇಕು. ಯಾವ ಇನ್ಷೂರೆನ್ಸ್ ಕಂಪನಿಗೆ ವರ್ಗವಾಗುತ್ತಿದ್ದೀರಿ ಅದನ್ನು ನಮೂದಿಸಬೇಕು.

ಇದನ್ನೂ ಓದಿ: ಹೊಸ ವಿಳಾಸಕ್ಕೆ ಹೋಗ್ತಿದ್ದೀರಾ? ನಿಮ್ಮ ಎಲ್​ಪಿಜಿ ಸಂಪರ್ಕವನ್ನು ವರ್ಗಾಯಿಸುವುದು ಹೇಗೆ? ಇಲ್ಲಿದೆ ಮಾಹಿತಿ

ನೀವು ಸಲ್ಲಿಸಿದ ಮನವಿಗೆ ಈ ಇನ್ಷೂರೆನ್ಸ್ ಕಂಪನಿಗಳು ಮೂರು ದಿನದೊಳಗೆ ಸ್ಪಂದಿಸಬೇಕು. ಹೊಸ ಇನ್ಷೂರೆನ್ಸ್ ಕಂಪನಿಯು ನಿಮ್ಮ ಪಾಲಿಸಿಯ ಎಲ್ಲಾ ವಿವರಗಳನ್ನು ಹಳೆಯ ಇನ್ಷೂರೆನ್ಸ್ ಕಂಪನಿಯಿಂದ ಪಡೆದುಕೊಳ್ಳುತ್ತದೆ. ಅಥವಾ ಐಆರ್​ಡಿಎಐ ಮುಖಾಂತರವೂ ವಿವರಗಳನ್ನು ಪಡೆಯುತ್ತದೆ.

ನೋ ಕ್ಲೇಮ್ ಬೋನಸ್, ವೇಟಿಂಗ್ ಪೀರಿಯಡ್…

ಹೆಲ್ತ್ ಇನ್ಷೂರೆನ್ಸ್ ಪಾಲಿಸಿಯಲ್ಲಿ ನೀವು ಒಂದು ವರ್ಷ ಯಾವುದೇ ಕ್ಲೇಮ್ ಮಾಡದಿದ್ದರೆ ನೋ ಕ್ಲೇಮ್ ಬೋನಸ್ ಸಿಗುತ್ತದೆ. ಅಂದರೆ ನಿರ್ದಿಷ್ಟ ಪ್ರಮಾಣದಲ್ಲಿ ಕವರೇಜ್ ಹೆಚ್ಚುತ್ತದೆ. ಉದಾಹರಣೆಗೆ, 5 ಲಕ್ಷ ರೂ ಇದ್ದ ವಾರ್ಷಿಕ ಕವರೇಜ್ 6 ಲಕ್ಷ ರೂಗೆ ಏರಬಹುದು. ಅಥವಾ ವಾರ್ಷಿಕ ಪ್ರೀಮಿಯಮ್ ಕಡಿಮೆ ಆಗಬಹುದು. ಈ ನೋ ಕ್ಲೇಮ್ ಬೋನಸ್ ಫೀಚರ್ ಅನ್ನು ನೀವು ಪಾಲಿಸಿ ಪೋರ್ಟ್ ಮಾಡಿದಾಗಲೂ ಮುಂದುವರಿಸಬಹುದು.

ಇದನ್ನೂ ಓದಿ: ಎಷ್ಟು ಅವಧಿ ವಹಿವಾಟು ನಡೆಯದಿದ್ದರೆ ಬ್ಯಾಂಕ್ ಖಾತೆ ನಿಷ್ಕ್ರಿಯಗೊಳ್ಳುತ್ತದೆ? ಅಕೌಂಟ್ ರೀಆ್ಯಕ್ಟಿವೇಟ್ ಮಾಡುವ ಕ್ರಮ

ಹಾಗೆಯೇ, ನೀವು ಇನ್ಷೂರೆನ್ಸ್ ಪಾಲಿಸಿ ಮಾಡಿಸಿದಾಗ ಕೆಲ ರೋಗಗಳಿಗೆ ವೇಟಿಂಗ್ ಪೀರಿಯಡ್ ಇರುತ್ತದೆ. ಕ್ಯಾನ್ಸರ್ ಇತ್ಯಾದಿ ಕಾಯಿಲೆಗೆ ಕವರೇಜ್ ಸಿಗಲು 2 ಅಥವಾ 3 ವರ್ಷ ವೇಟಿಂಗ್ ಪೀರಿಯಡ್ ಇರಬಹುದು. ನೀವು ಆ ಕಾಯುವಿಕೆ ಅವಧಿಯನ್ನು ಮುಗಿಸಿದ್ದರೆ, ಈ ಅನುಕೂಲವು ಪಾಲಿಸಿ ಪೋರ್ಟ್ ಮಾಡಿದಾಗಲೂ ಮುಂದುವರಿಯುತ್ತದೆ. ಮತ್ತೆ ನೀವು ವೇಟಿಂಗ್ ಪೀರಿಯಡ್ ಅನುಸರಿಸುವ ಅವಶ್ಯಕತೆ ಇರುವುದಿಲ್ಲ.

ನಿಮ್ಮ ಹಳೆಯ ಇನ್ಷೂರೆನ್ಸ್ ಪಾಲಿಸಿಯಲ್ಲಿದ್ದ ಎಲ್ಲಾ ಫೀಚರ್​ಗಳು ಹೊಸ ಕಂಪನಿ ಆಫರ್ ಮಾಡುವ ಪಾಲಿಸಿಯಲ್ಲಿ ಇಲ್ಲದೇ ಇರಬಹುದು, ಅಥವಾ ಹೆಚ್ಚಿನ ಫೀಚರ್​ಗಳು ಇರಬಹುದು. ನೀವು ಹೊಸ ಇನ್ಷೂರೆನ್ಸ್ ಕಂಪನಿ ಆಫರ್ ಮಾಡುವ ಪಾಲಿಸಿಯ ವಿವರಗಳನ್ನು ಕೂಲಂಕಷವಾಗಿ ಗಮನಿಸಿ, ಆ ಬಳಿಕ ನಿರ್ಧಾರ ತೆಗೆದುಕೊಳ್ಳಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪತ್ನಿ ಜೊತೆ ಚಾಮುಂಡಿ ಬೆಟ್ಟಕ್ಕೆ ಬಂದು ದೇವರ ದರ್ಶನ ಪಡೆದ ನಟ ದರ್ಶನ್
ಪತ್ನಿ ಜೊತೆ ಚಾಮುಂಡಿ ಬೆಟ್ಟಕ್ಕೆ ಬಂದು ದೇವರ ದರ್ಶನ ಪಡೆದ ನಟ ದರ್ಶನ್
ಒಟ್ಟು ಆರು ಇರಿತದ ಗಾಯಗಳೊಂದಿಗೆ ಸೈಫ್ ಅಲಿ ಖಾನ್ ಆಸ್ಪತ್ರೆಗೆ ದಾಖಲು
ಒಟ್ಟು ಆರು ಇರಿತದ ಗಾಯಗಳೊಂದಿಗೆ ಸೈಫ್ ಅಲಿ ಖಾನ್ ಆಸ್ಪತ್ರೆಗೆ ದಾಖಲು
ಚಾಮರಾಜಪೇಟೆ ಘಟನೆ ಖಂಡಿಸಿ ಮೈಸೂರಲ್ಲಿ ಬಿಜೆಪಿ ಮುಖಂಡರ ಪ್ರತಿಭಟನೆ
ಚಾಮರಾಜಪೇಟೆ ಘಟನೆ ಖಂಡಿಸಿ ಮೈಸೂರಲ್ಲಿ ಬಿಜೆಪಿ ಮುಖಂಡರ ಪ್ರತಿಭಟನೆ
ಗನ್ ಲೈಸೆನ್ಸ್ ರದ್ದು ಮಾಡೋದು ಬೇಡವೆಂದು ಪೊಲೀಸರಿಗೆ ದರ್ಶನ್ ಮನವಿ
ಗನ್ ಲೈಸೆನ್ಸ್ ರದ್ದು ಮಾಡೋದು ಬೇಡವೆಂದು ಪೊಲೀಸರಿಗೆ ದರ್ಶನ್ ಮನವಿ
ಎರಡೆರಡು ಹುದ್ದೆಗಳನ್ನು ನಿಭಾಯಿಸುವುದು ಕಷ್ಟವಾಗುತ್ತದೆ: ಪರಮೇಶ್ವರ್
ಎರಡೆರಡು ಹುದ್ದೆಗಳನ್ನು ನಿಭಾಯಿಸುವುದು ಕಷ್ಟವಾಗುತ್ತದೆ: ಪರಮೇಶ್ವರ್
ಕಟ್ಟಡದ 13ನೇ ಮಹಡಿಯಿಂದ ಮೂರು ಬಾರಿ ಜಿಗಿದರೂ ಬದುಕಿದ ಕಾರ್ಮಿಕ
ಕಟ್ಟಡದ 13ನೇ ಮಹಡಿಯಿಂದ ಮೂರು ಬಾರಿ ಜಿಗಿದರೂ ಬದುಕಿದ ಕಾರ್ಮಿಕ
39ನೇ ವಯಸ್ಸಿನಲ್ಲೂ ದಿನೇಶ್ ಕಾರ್ತಿಕ್ ಅದ್ಭುತ ಕ್ಯಾಚ್
39ನೇ ವಯಸ್ಸಿನಲ್ಲೂ ದಿನೇಶ್ ಕಾರ್ತಿಕ್ ಅದ್ಭುತ ಕ್ಯಾಚ್
ಸಾರ್ವಜನಿಕರು ಅಂತಿಮ ನಮನ ಸಲ್ಲಿಸಲು ರವೀಂದ್ರ ಕಲಾಕ್ಷೇತ್ರದಲ್ಲಿ ವ್ಯವಸ್ಥೆ
ಸಾರ್ವಜನಿಕರು ಅಂತಿಮ ನಮನ ಸಲ್ಲಿಸಲು ರವೀಂದ್ರ ಕಲಾಕ್ಷೇತ್ರದಲ್ಲಿ ವ್ಯವಸ್ಥೆ
ನಾನ್ಯಾಕೆ ಸಿಎಂ ಆಗ್ಬಾರ್ದು ಎಂದಿದ್ದ ಸಚಿವ ತಿಮ್ಮಾಪುರ ವರಸೆ ಬದಲು
ನಾನ್ಯಾಕೆ ಸಿಎಂ ಆಗ್ಬಾರ್ದು ಎಂದಿದ್ದ ಸಚಿವ ತಿಮ್ಮಾಪುರ ವರಸೆ ಬದಲು
ಏ ಪಾಂಚಾಲಿ! ಬೀಮನ ಪಾತ್ರದ ಡೈಲಾಗ್ ಹೇಳಿದ ಮಿಂಚಿದ ಶಾಸಕ ಶಿವಲಿಂಗೇಗೌಡ
ಏ ಪಾಂಚಾಲಿ! ಬೀಮನ ಪಾತ್ರದ ಡೈಲಾಗ್ ಹೇಳಿದ ಮಿಂಚಿದ ಶಾಸಕ ಶಿವಲಿಂಗೇಗೌಡ