Youtube Income: ಫೇಸ್ಬುಕ್, ಇನ್ಸ್ಟಾ ರೀಲ್ಸ್, ಯೂಟ್ಯೂಬ್ನಿಂದ ಗಳಿಸಿದ ಆದಾಯಕ್ಕೆ ತೆರಿಗೆ ಎಷ್ಟು? ಹೇಗೆ ಸಲ್ಲಿಸುವುದು?
ITR For Business Income: ಯೂಟ್ಯೂಬ್ ಮತ್ತಿತರ ವಿಡಿಯೋ ಪ್ಲಾಟ್ಫಾರ್ಮ್ಗಳಿಂದ ನೀವು ಗಳಿಸುವ ಆದಾಯಕ್ಕೆ ತೆರಿಗೆ ಕಟ್ಟಬೇಕಾಗುತ್ತದೆ. ಐಟಿ ರಿಟರ್ನ್ ಸಲ್ಲಿಸುವಾಗ ಈ ಆದಾಯ ತೋರಿಸುವುದು ಕಡ್ಡಾಯ. ಯಾವ ಐಟಿಆರ್ ಫಾರ್ಮ್ ಬಳಸಬೇಕು ಎಂಬಿತ್ಯಾದಿ ವಿವರ ಇಲ್ಲಿದೆ...
ಈಗ ಇನ್ಸಾಗ್ರಾಮ್ ರೀಲ್ಸ್, ಯೂಟ್ಯೂಬ್ ವಿಡಿಯೋಗಳ ಮೂಲಕ ಬಹಳ ಮಂದಿ ಆದಾಯ ಪಡೆಯುತ್ತಿದ್ದಾರೆ. ಈ ಆದಾಯಕ್ಕೆ ತೆರಿಗೆ (Income Tax) ಪಾವತಿಸಬೇಕಾ? ಹೌದಾದರೆ ಎಷ್ಟು ತೆರಿಗೆ ಪಾವತಿಸಬೇಕು? ಯಾವ ಐಟಿಆರ್ ಅರ್ಜಿ ಬಳಸಬೇಕು ಎಂಬಿತ್ಯಾದಿ ಗೊಂದಲ ಇರಬಹುದು. ವಿಡಿಯೋ ಪ್ಲಾಟ್ಫಾರ್ಮ್ಗಳಿಂದ ಆದಾಯ ಪಡೆಯುತ್ತಿರುವವರಲ್ಲಿ ಬಹುತೇಕರು ಪಾರ್ಟ್ಟೈಮ್ ಆಗಿ ವಿಡಿಯೋ ಮಾಡುವವರೇ ಇದ್ದಾರೆ. ಇನ್ನೂ ಕೆಲವರಿಗೆ ಇದೇ ಪ್ರಮುಖ ಆದಾಯ ಮೂಲವಾಗಿರಬಹುದು. ಇದೆಲ್ಲದಕ್ಕೂ ಪ್ರತ್ಯೇಕ ತೆರಿಗೆ ಇರುತ್ತದೆ.
ನೀವು ನೌಕರಿಯಲ್ಲಿದ್ದು, ಬಿಡುವಿನ ಸಮಯದಲ್ಲಿ ವಿಡಿಯೋ ಮಾಡಿ ಅದರ ಮೂಲಕ ಅಲ್ಪಸ್ವಲ್ಪ ಆದಾಯ ಪಡೆಯುತ್ತಿದ್ದರೆ ‘ಇನ್ಕಮ್ ಫ್ರಂ ಅದರ್ ಸೋರ್ಸಸ್’ ಎಂದು ತೋರಿಸಬೇಕು.
ಈ ವಿಡಿಯೋ ಪ್ಲಾಟ್ಫಾರ್ಮ್ಗಳಿಂದಲೇ ಹೆಚ್ಚಿನ ಆದಾಯ ಬರುತ್ತಿದ್ದರೆ, ಅಂದರೆ ಪ್ರಮುಖ ಆದಾಯ ಮೂಲವಾಗಿದ್ದರೆ ಆಗ ಅದನ್ನು ಬ್ಯುಸಿನೆಸ್ ಇನ್ಕಮ್ ಆಗಿ ಪರಿಗಣಿಸಲಾಗುತ್ತದೆ. ಅದಕ್ಕೆ ‘ಪ್ರಾಫಿಟ್ಸ್ ಅಂಡ್ ಗೇಯ್ಸ್ ಆಫ್ ಬ್ಯುಸಿನೆಸ್ ಆರ್ ಪ್ರೊಫೆಷನ್’ ಅಡಿಯಲ್ಲಿ ತೆರಿಗೆ ಪಾವತಿಸಬೇಕಾಗುತ್ತದೆ.
ಇದನ್ನೂ ಓದಿ: Tax Collection: ತೆರಿಗೆ ದರ ಹೆಚ್ಚಿಸಿಲ್ಲ, ಆದರೂ ತೆರಿಗೆ ಸಂಗ್ರಹ ಹೆಚ್ಚಿಸಿದ್ದೇವೆ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
ಯೂಟ್ಯೂಬ್ ನಿಮಗೆ ಪ್ರಮುಖ ಆದಾಯ ಮೂಲವಾಗಿದ್ದರೆ ನೀವು ಯಾವ ರೀತಿಯ ವಿಡಿಯೋ ಹಾಕುತ್ತೀರಿ ಎಂಬುದರ ಮೇಲೆ ಅದು ಬ್ಯುಸಿನೆಸ್ ಎಂದು ಪರಿಗಣಿಸುವುದೋ ಅಥವಾ ಪ್ರೊಫೆಷನ್ ಎಂದು ಪರಿಗಣಿಸುವುದೋ ನಿರ್ಧರಿಸಬೇಕಾಗುತ್ತದೆ. ನಿಮ್ಮ ವಿಡಿಯೊ ತಯಾರಿಕೆಯಲ್ಲಿ ವಿಸೇಷ ತರಬೇತಿಯ ತಾಂತ್ರಿಕ ಪರಿಣಿತಿ ಅಗತ್ಯ ಇದ್ದರೆ ಅದನ್ನು ವೃತ್ತಿಪರ ಕೆಲಸದ ಆದಾಯ ಎಂದು ಪರಿಗಣಿಸಲಾಗುತ್ತದೆ. ಇಲ್ಲದಿದ್ದರೆ ಬ್ಯುಸಿನೆಸ್ ಇನ್ಕಮ್ ಆಗುತ್ತದೆ.
ನೀವು ಇದನ್ನು ಬ್ಯುಸಿನೆಸ್ ಇನ್ಕಮ್ ಎಂದು ಪರಿಗಣಿಸಿದರೆ ಐಟಿಆರ್4 ಫಾರ್ಮ್ ಅನ್ನು ಆಯ್ದುಕೊಳ್ಳಬಬಹುದು. ಒಂದು ವೇಳೆ ನಿಮಗೆ ಒಂದಕ್ಕಿಂತ ಹೆಚ್ಚು ಮನೆ ಆಸ್ತಿ ಇಲ್ಲದಿದ್ದರೆ ಆಗ ಸೆಕ್ಷನ್ 44ಎಡಿ ಅಥವಾ 44 ಎಡಿಎ ಅಡಿಯಲ್ಲಿ ಪ್ರಿಸಂಪ್ಟಿವ್ ಟ್ಯಾಕ್ಸ್ ಸೌಲಭ್ಯಕ್ಕಾಗಿ ಐಟಿಆರ್ 4ಎಸ್ ಅನ್ನು ಫೈಲ್ ಮಾಡಬಹುದು.
ಪ್ರಿಸಂಪ್ಟಿವ್ ಟ್ಯಾಕ್ಸ್ ಎಂದರೆ ಸಂಭವನೀಯ ತೆರಿಗೆ. ವ್ಯವಹಾರಗಳಿಂದ ಬರುವ ಆದಾಯಕ್ಕೆ ಈ ತೆರಿಗೆ ಅನ್ವಯ ಆಗುತ್ತದೆ. ಸೆಕ್ಷನ್ 44ಎಡಿ ಪ್ರಕಾರ ನಿಮ್ಮ ವ್ಯವಹಾರದ ಒಟ್ಟು ವಹಿವಾಟಿನಲ್ಲಿ ಶೇ. 8ರಷ್ಟು ಮೊತ್ತವನ್ನು ನಿವ್ವಳ ಆದಾಯ ಎಂದು ಪರಿಗಣಿಸಿ, ಅದಕ್ಕೆ ತೆರಿಗೆ ಪಾವತಿಸಬೇಕಾಗುತ್ತದೆ. ನಿಮ್ಮ ವ್ಯವಹಾರದಲ್ಲಿ ಡಿಜಿಟಲ್ ರೂಪದಲ್ಲಿ ಹಣ ಸ್ವೀಕರಿಸಿದ್ದರೆ ಆಗ ಒಟ್ಟು ಟರ್ನೋವರ್ನ ಶೇ. 6ರಷ್ಟು ಮೊತ್ತಕ್ಕೆ ಮಾತ್ರ ತೆರಿಗೆ ಅನ್ವಯ ಆಗುತ್ತದೆ.
ಒಂದು ವೇಳೆ, ನಿಮ್ಮದು ಬ್ಯುಸಿನೆಸ್ ಇನ್ಕಮ್ ಆಗಿದ್ದು ನಿಮ್ಮಲ್ಲಿ ಒಂದಕ್ಕಿಂತ ಹೆಚ್ಚು ಮನೆ ಅಥವಾ ನಿವೇಶನಗಳಿದ್ದರೆ ಆಗ ಐಟಿಆರ್1 ಅನ್ನು ಆಯ್ದುಕೊಳ್ಳಬೇಕಾಗುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ