Important Insurance Tips: ಇನ್ಷೂರೆನ್ಸ್; ಟರ್ಮ್ ಪ್ಲಾನ್ ಮಾತ್ರವಾದರೆ ಸಾಲದು; ಜೊತೆಗೆ ಪರ್ಸನಲ್ ಆ್ಯಕ್ಸಿಡೆಂಟ್ ರಕ್ಷಣೆ ಕೂಡ ಇರಲಿ

Need of Personal Accident Insurance Cover: ನಿಮ್ಮ ಕುಟುಂಬದ ಆರ್ಥಿಕ ಭದ್ರತೆಗಾಗಿ ಕೇವಲ ಟರ್ಮ್ ಲೈಫ್ ಇನ್ಷೂರೆನ್ಸ್ ಪ್ಲಾನ್ ಸಾಕಾಗುವುದಿಲ್ಲ. ವೈಯಕ್ತಿಕ ಅಪಘಾತ ವಿಮಾ ಯೋಜನೆಗಳು ಉಪಯುಕ್ತವೆಂದು ಸಾಬೀತಾಗುತ್ತವೆ. ಅದು ಹೇಗೆ ನಿಮ್ಮ ವಿಮಾರಕ್ಷಣೆಯ ಕವಚವನ್ನು ಬಲಪಡಿಸುತ್ತದೆ ಎಂಬಿತ್ಯಾದಿ ವಿವರ ಇಲ್ಲಿದೆ...

Important Insurance Tips: ಇನ್ಷೂರೆನ್ಸ್; ಟರ್ಮ್ ಪ್ಲಾನ್ ಮಾತ್ರವಾದರೆ ಸಾಲದು; ಜೊತೆಗೆ ಪರ್ಸನಲ್ ಆ್ಯಕ್ಸಿಡೆಂಟ್ ರಕ್ಷಣೆ ಕೂಡ ಇರಲಿ
ವೈಯಕ್ತಿಕ ಅಪಘಾತ ವಿಮಾ ಯೋಜನೆ
Follow us
TV9 Web
| Updated By: ಸುಗ್ಗನಹಳ್ಳಿ ವಿಜಯಸಾರಥಿ

Updated on: Jul 30, 2023 | 6:03 PM

ಟರ್ಮ್ ಲೈಫ್ ಇನ್ಷೂರೆನ್ಸ್ ಯೋಜನೆಗಳು ನಮ್ಮ ಹಣಕಾಸು ಭವಿಷ್ಯಕ್ಕೆ ಭದ್ರತೆ ಒದಗಿಸುತ್ತವೆ. ಯಾರದ್ದೇ ಜೀವನದಲ್ಲೂ ದಿಢೀರನೇ ಅನಿರೀಕ್ಷಿತ ಅವಘಡಗಳು ಸಂಭವಿಸಬಹುದು. ಆಗ ಸಅವಧಿ ವಿಮಾ ಯೋಜನೆ ಅಥವಾ ಟರ್ಮ್ ಇನ್ಷೂರೆನ್ಸ್ ಯೋಜನೆ ಕೆಲಸಕ್ಕೆ ಬಾರದೇ ಹೋಗಬಹುದು. ಉದಾಹರಣೆಗೆ, ಪಾಲಿಸಿದಾರನಿಗೆ ಅಪಘಾತವಾಗಿ ಪ್ರಮುಖ ಅಂಗ ಊನವಾಗಿಬಿಟ್ಟರೆ ಇನ್ಷೂರೆನ್ಸ್ ಕವರ್ ಹೇಗೆ ಸಾಧ್ಯವಾಗುತ್ತದೆ. ಇಂಥ ಸಂದರ್ಭದಲ್ಲಿ ಟರ್ಮ್ ಇನ್ಷೂರೆನ್ಸ್​ನಿಂದ ಯಾವ ಪ್ರಯೋಜನವೂ ಆಗುವುದಿಲ್ಲ. ಚಿಕಿತ್ಸಾ ವೆಚ್ಚಕ್ಕೂ ಇನ್ಷೂರೆನ್ಸ್ ಕವರ್ ಇಲ್ಲದಾಯಿತು. ಇಂಥ ಪರಿಸ್ಥಿತಿಯಲ್ಲಿ ವೈಯಕ್ತಿ ಅಪಘಾತ ವಿಮಾ ಪಾಲಿಸಿ ಇದ್ದಿದ್ದರೆ ಅನುಕೂಲವಾಗುತ್ತಿತ್ತು. ರಕ್ಷಣೆಯ ಪ್ರಮಾಣ ಹೆಚ್ಚಿಸಿಕೊಳ್ಳಲು ಸಾವಧಿ ಯೋಜನೆಯೊಂದಿಗೆ ವೈಯಕ್ತಿಕ ಅಪಘಾತ ವಿಮಾ ಯೋಜನೆಯೂ (Personal Accident Insurance Plan) ಅತ್ಯವಶ್ಯಕವಾಗಿದೆ.

“ನೀವೇನಾದರೂ ಸಾವಧಿ ವಿಮಾ ಯೋಜನೆಯೊಂದನ್ನು ಕೊಳ್ಳುವ ಆಲೋಚನೆಯನ್ನು ಹೊಂದಿದ್ದರೆ, ಅದರೊಂದಿಗೆ ಹೆಚ್ಚುವರಿಯಾಗಿ ಒಂದು ಅಪಘಾತ ವಿಮೆಯನ್ನೂ ನೀವು ಆರಿಸಿಕೊಳ್ಳಬಹುದು. ಈಗಾಗಲೇ ಸಾವಧಿ ಯೋಜನೆಯೊಂದನ್ನು ಕೊಂಡಿರುವವರು ಈ ವಿಮಾ ಯೋಜನೆಯನ್ನು ಪ್ರತ್ಯೇಕವಾಗಿ ಕೊಂಡುಕೊಳ್ಳಬಹುದು” ಎಂದು ತೆರಿಗೆ ಮತ್ತು ಹೂಡಿಕೆ ವಿಷಯಗಳ ಪರಿಣಿತರಾದ ಬಲವಂತ್‌ ಜೈನ್‌ ಹೇಳುತ್ತಾರೆ.

ಅಪಘಾತ ವಿಮೆಯು ಬಹು ಮುಖ್ಯವಾಗಿ ಅಪಘಾತಗಳಿಂದ ಉಂಟಾದ ಗಾಯಗಳಿಗೆ ಹಾಗೂ ಅಂಗವೈಕಲ್ಯಕ್ಕೆ ಪರಿಹಾರವನ್ನು ನೀಡುತ್ತದೆ. ಒಂದು ವೇಳೆ ವಿಮಾದಾರನು ಅಪಘಾತದಲ್ಲಿ ಮರಣ ಹೊಂದಿದರೆ, ವಿಮೆಯ ಹಣವನ್ನು ಅವನ ಕುಟುಂಬಕ್ಕೆ ನೀಡಲಾಗುತ್ತದೆ. ಒಂದು ವೇಳೆ, ಅವನೇನಾದರೂ ಶಾಶ್ವತ ಅಂಗವೈಕಲ್ಯಕ್ಕೆ ಈಡಾದರೆ, ಕಂಪನಿಯು ಆಶ್ವಾಸಿತ ವಿಮಾ ಮೊತ್ತದ ಒಂದು ನಿಗದಿತ ಶೇಕಡಾವಾರು ಮೊತ್ತವನ್ನು ನೀಡುತ್ತದೆ. ಈ ಮೊತ್ತವನ್ನು ಅವನ ದೇಹಕ್ಕಾಗಿರುವ ಹಾನಿಯ ಆಧಾರದ ಮೇಲೆ ನಿರ್ಧರಿಸಲಾಗುವುದು.

ಇದನ್ನೂ ಓದಿ: Insurance: ಹುಷಾರ್; ಬ್ಯಾಂಕ್ ಮತ್ತು ಇನ್ಷೂರೆನ್ಸ್ ಏಜೆಂಟ್ ಹೇಳಿದ್ದೇ ಪರಮಸತ್ಯವಲ್ಲ; ವಿಮೆ ಪಾಲಿಸಿ ಪಡೆಯುವ ಮುನ್ನ ಈ ಎಚ್ಚರ ವಹಿಸಿ

ಪರ್ಸನಲ್ ಆ್ಯಕ್ಸಿಡೆಂಟ್: ಎಂತಹ ಪರಿಸ್ಥಿತಿಗಳಲ್ಲಿ, ಎಷ್ಟು ಪರಿಹಾರವನ್ನು ನೀಡಲಾಗುವುದು?

ಉದಾಹರಣೆಗೆ, ಒಂದು ವೇಳೆ, ಎರಡು ಕೈ ಅಥವಾ ಕಾಲುಗಳಿಗೆ ಹಾನಿಯಾದರೆ, ಶೇ 100ರಷ್ಟು ವಿಮಾ ಹಣವನ್ನು ನೀಡುವ ಪ್ರಾವಧಾನ (Provision) ಇದೆ. ಹಾಗೂ ಒಂದು ವೇಳೆ ಒಂದು ಅಂಗಕ್ಕೆ ಹಾನಿಯಾದರೆ ಶೇ 50ರಷ್ಟು ಹಣ ನೀಡಲಾಗುವುದು. ಹಾಗೆಯೇ, ವಿಮಾದಾರನು ತಾತ್ಕಾಲಿಕ ದೈಹಿಕ ಅಸಾಮರ್ಥ್ಯತೆ ಹೊಂದಿದಲ್ಲಿ ಹಾಗೂ ಒಂದು ನಿಗದಿತ ಅವಧಿಯ ನಂತರ ಚೇತರಿಸಿಕೊಳ್ಳುವಂತಿದ್ದರೆ, ಕಂಪನಿಯು ಆಶ್ವಾಸಿತ ಮೊತ್ತದ (Sum Assured) ಒಂದು ನಿಶ್ಚಿತ ಭಾಗವನ್ನು ನೀಡುತ್ತದೆ. ವಿಮಾದಾರನಿಗೆ ಯಾವ ಪ್ರಮಾಣದಲ್ಲಿ ದೈಹಿಕ ಹಾನಿಯಾಗಿದೆ ಎನ್ನುವುದನ್ನು ಆಧರಿಸಿ ಪಾವತಿಸಲಾಗುವ ಹಣದ ಮೊತ್ತವನ್ನು ನಿರ್ಧರಿಸಲಾಗುವುದು.

ಪರ್ಸನಲ್ ಆ್ಯಕ್ಸಿಡೆಂಟ್ ಕವರ್, ಯಾರಿಗೆ ಅವಶ್ಯಕತೆ ಇದೆ?

“ಯುವಜನರು ಅಪಾಯಗಳನ್ನು ಲೆಕ್ಕಿಸದೇ ವಾಹನಗಳನ್ನು ಚಲಾಯಿಸುತ್ತಾರೆ. ಮಹಾನಗರಗಳಲ್ಲಿ ಅಪಘಾತಗಳ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಅಪಘಾತಗಳ ಹೆಚ್ಚಿನ ಸಾಧ್ಯತೆ ಇರುವ ಉದ್ಯೋಗಗಳನ್ನು ಮಾಡುವ ಜನರು ಕಡ್ಡಾಯವಾಗಿ ಇಂತಹ ವಿಮಾ ರಕ್ಷಣೆಯನ್ನು ಪಡೆದುಕೊಳ್ಳಬೇಕು. ನಿಮ್ಮ ವಾರ್ಷಿಕ ಆದಾಯದ 15 ಪಟ್ಟು ಮೊತ್ತಕ್ಕೆ ಸಮನಾದ ವಿಮಾರಕ್ಷಣೆಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು. ವೈಯಕ್ತಿಕ ಅಪಘಾತ ವಿಮೆಯು ಆರೋಗ್ಯ ಮತ್ತು ಜೀವ ವಿಮೆಗಳಿಗಿಂತ ಬಹಳಷ್ಟು ಅಗ್ಗವಾಗಿರುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ, 50 ಲಕ್ಷ ರೂಪಾಯಿಗಳ ವೈಯಕ್ತಿಕ ಅಪಘಾತ ವಿಮೆಯು ಕೇವಲ 3,000 ರೂನಿಂದ 4,000 ರೂಪಾಯಿಗಳ ಒಳಗಿನ ಪ್ರೀಮಿಯಮ್‌ಗಳಲ್ಲಿ ಸುಲಭವಾಗಿ ಸಿಗುತ್ತದೆ” ಎಂದು ಬಲವಂತ್‌ ಜೈನ್‌ರವರು ಹೇಳುತ್ತಾರೆ.

ಇದನ್ನೂ ಓದಿ: Car Insurance: ಮಳೆ ನೀರು ತುಂಬಿದಾಗ ಕಾರು ಸ್ಟಾರ್ಟ್ ಮಾಡದಿರಿ; ಎಂಜಿನ್ ಕೆಡುತ್ತೆ, ಇನ್ಷೂರೆನ್ಸ್ ಕ್ಲೈಮ್ ಕೂಡ ಅಸಾಧ್ಯ

ಯಾರಿಗೆ ಈ ವಿಮಾ ರಕ್ಷಣೆ ಸಿಗುತ್ತದೆ?

ಅಪಘಾತ ವಿಮಾ ಯೋಜನೆಯನ್ನು ವ್ಯಕ್ತಿಗತವಾಗಿ ಪಡೆದರೂ ಸಹ ಕುಟುಂಬದ ಇತರ ಸದಸ್ಯರನ್ನೂ ಅದರಲ್ಲಿ ಸೇರಿಸಬಹುದು. ಕೆಲ ಯೋಜನೆಗಳು ಆಶ್ವಾಸಿತ ಮೊತ್ತದ ಶೇ 50ರಷ್ಟು ರಕ್ಷಣೆಯನ್ನು ವಿಮಾದಾರರ ಪತಿ ಅಥವಾ ಪತ್ನಿಗೆ ಹೆಚ್ಚುವರಿಯಾಗಿ ಒದಗಿಸುತ್ತವೆ. ಇತರ ಯೋಜನೆಗಳು ಆಶ್ವಾಸಿತ ಮೊತ್ತದ ಶೇ 25ರಷ್ಟು ರಕ್ಷಣೆಯನ್ನು ಹೆಚ್ಚುವರಿಯಾಗಿ ಮಕ್ಕಳಿಗೆ ನೀಡುತ್ತವೆ. ಕೆಲ ಕಂಪನಿಗಳು ಸಂಪೂರ್ಣ ಕುಟುಂಬಕ್ಕೆ ಫ್ಲೋಟರ್‌ ಯೋಜನೆಗಳನ್ನು ಒದಗಿಸುತ್ತಿವೆ. ಒಂದೇ ಪಾಲಿಸಿಯಲ್ಲಿ ಇಡೀ ಕುಟುಂಬನ್ನು ಸೇರಿಸಲಾಗುವುದು. ಈ ಪಾಲಿಸಿಯಲ್ಲಿ ಮಕ್ಕಳಿಗೂ ಹಾಗೂ ದೊಡ್ಡವರಿಗೂ ವಿಮಾ ರಕ್ಷಣೆ ಸಿಗುವುದು. ಕೆಲವು ಅಪಘಾತ ವಿಮಾ ಪಾಲಿಸಿಗಳು ವಿಮಾ ಮೊತ್ತದ ಶೇ 50ರಷ್ಟು ಹಣವನ್ನು ವಿಮಾದಾರನ ಮೇಲೆ ಅವಲಂಬಿತರಾದ ಇಬ್ಬರು ಮಕ್ಕಳ ಶಿಕ್ಷಣದ ವೆಚ್ಚಗಳನ್ನು ಭರಿಸಲು ನೀಡುವುವು. ಹೀಗೆ, ಒಂದಲ್ಲಾ ಒಂದು ರೀತಿಯಲ್ಲಿ ಕುಟುಂಬದ ಎಲ್ಲಾ ಸದಸ್ಯರೂ ಒಂದೇ ರೀತಿಯ ಸೌಲಭ್ಯಗಳನ್ನು ಪಡೆಯುವರು. ಹೀಗೆ, ಈ ಎಲ್ಲಾ ಸೌಲಭ್ಯಗಳೂ ಸಿಗುವುದರಿಂದ, ಅಪಘಾತ ವಿಮಾ ಯೋಜನೆಗಳನ್ನು ಕಡ್ಡಾಯವಾಗಿ ಕೊಳ್ಳಲೇಬೇಕು.

ಈ ರಕ್ಷಣೆಯ ಸೌಲಭ್ಯವು ನಿಮಗೆ ಯಾವ ಪರಿಸ್ಥಿತಿಯಲ್ಲಿ ಸಿಗುವುದಿಲ್ಲ?

ಕೆಲವು ಪರಿಸ್ಥಿತಿಗಳಲ್ಲಿ, ವಿಮಾ ಕಂಪನಿಗಳು ಪರಿಹಾರದ ಕ್ಲೈಮ್‌ಗಳನ್ನು ನೀಡುವುದಿಲ್ಲ. ನೀವು ವೈಯಕ್ತಿಕ ಅಪಘಾತ ವಿಮಾ ಯೋಜನೆಯನ್ನು ಕೊಂಡಿದ್ದರೂ ಸಹ ಎಂತಹ ಪರಿಸ್ಥಿತಿಗಳಲ್ಲಿ ವಿಮಾ ಕಂಪನಿಗಳು ನಿಮ್ಮ ಕ್ಲೈಮ್‌ ಅನ್ನು ತಿರಸ್ಕರಿಸುತ್ತವೆ ಎಂಬುದನ್ನು ನೀವು ತಿಳಿದಿರಲೇಬೇಕು. ಇಂತಹ ಯೋಜನೆಗಳು ಆತ್ಮಹತ್ಯೆ, ಸ್ವಾಭಾವಿಕ ಮರಣ, ಮೊದಲೇ ಅಸ್ತಿತ್ವದಲ್ಲಿದ್ದ ಅಸಾಮರ್ಥ್ಯತೆಗಳು, ಹಾಗೂ ಮದ್ಯಪಾನ ಮತ್ತು ಔಷಧಗಳ ಸೇವನೆಯಿಂದ ಉಂಟಾದ ಮರಣಗಳ ಸಂದರ್ಭಗಳಲ್ಲಿ ಕ್ಲೈಮ್‌ಗಳನ್ನು ತಿರಸ್ಕರಿಸುತ್ತವೆ. ಒಂದು ವೇಳೆ, ಯಾವುದಾದರೂ ಕಾನೂನನ್ನು ನೀವು ಉಲ್ಲಂಘಿಸಿದ್ದರೂ ಸಹ ಕ್ಲೈಮ್‌ ಅನ್ನು ತಿರಸ್ಕರಿಸಲಾಗುವುದು. ಒಂದು ವೇಳೆ, ವಿಮಾದಾರನು ತನ್ನ ಉದಾಸೀನತೆಯಿಂದ ಅಥವಾ ಯಾವುದಾದರೂ ಸಾಹಸಕ್ರೀಡೆಯ ಸಂದರ್ಭದಲ್ಲಿ ಅಪಘಾತಕ್ಕೀಡಾಗಿ ಅಂಗವೈಕಲ್ಯ ಹೊಂದಿದ್ದರೆ ಕ್ಲೈಮ್‌ ಮೊತ್ತವನ್ನು ಪಾವತಿಸುವುದಿಲ್ಲ. ಒಂದು ವೇಳೆ, ನೀವೇನಾದರೂ ಅಪಾಯಕಾರಿ ವ್ಯವಹಾರದಲ್ಲಿ ತೊಡಗಿದ್ದರೆ, ನಿಮಗೆ ಕ್ಲೈಮ್‌ ಮೊತ್ತ ಸಿಗುವುದಿಲ್ಲ. ನೀವೇನಾದರೂ ಹೆಲ್ಮೆಟ್‌ ಅಥವಾ ಸೀಟ್‌ಬೆಲ್ಟ್‌ಗಳನ್ನು ಧರಿಸದೇ ವಾಹನ ನಡೆಸಿ ಅಪಘಾತಕ್ಕೀಡಾದರೂ ಸಹ ನಿಮಗೆ ಕ್ಲೈಮ್‌ ಮೊತ್ತ ಸಿಗುವುದಿಲ್ಲ.

ಇದನ್ನೂ ಓದಿ: Edelweiss Tokio Insurance: ಪ್ರೀಮಿಯಂ ಕಟ್ಟದೆಯೇ ನಾಮಿನಿಗೆ ಪಾಲಿಸಿ ಸೌಲಭ್ಯ; ಎಡೆಲ್​ವೀಸ್ ಟೋಕಿಯೋ ಲೈಫ್ ಇನ್ಷೂರೆನ್ಸ್​ನ ಹಿಟ್ ಫೀಚರ್

ಎಂತಹ ಪರಿಸ್ಥಿತಿಗಳಲ್ಲಿ ಎಷ್ಟು ಪ್ರಮಾಣದ ಪರಿಹಾರ ಸಿಗುತ್ತದೆ?

  • ಎರಡು ಅಂಗಗಳು ಹಾನಿಗೊಳಗಾದಲ್ಲಿ, ಶೇ 100ರಷ್ಟು ವಿಮಾ ಮೊತ್ತವನ್ನು ಪಾವತಿಸಲಾಗುವುದು.
  • ಒಂದು ಅಂಗಕ್ಕೆ ಹಾನಿಯಾದಲ್ಲಿ, ಶೆ 50 ರಷ್ಟು ವಿಮಾ ಮೊತ್ತವನ್ನು ಪಾವತಿಸಲಾಗುವುದು.
  • ತಾತ್ಕಾಲಿಕ ದೈಹಿಕ ಅಸಾಮರ್ಥ್ಯಕ್ಕೆ ಆಶ್ವಾಸಿತ ಮೊತ್ತಕ್ಕೆ ಅನುಗುಣವಾಗಿ ಪರಿಹಾರದ ಮೊತ್ತ ಸಿಗುವುದು.
  • ಪರಿಸ್ಥಿತಿಗೆ ಅನುಗುಣವಾಗಿ ಹಣ ಪಾವತಿಯ ಅನುಪಾತವನ್ನು ನಿರ್ಧರಿಸಲಾಗುವುದು.

ಇದನ್ನೂ ಓದಿ: Cancer Insurance: ನೀವು ಕ್ಯಾನ್ಸರ್ ಇನ್ಷೂರೆನ್ಸ್ ಪ್ಲಾನ್ ಪಡೆಯುವ ಮುನ್ನ ಈ 7 ಅಂಶಗಳು ಗಮನದಲ್ಲಿರಲಿ

ವಿಮಾ ರಕ್ಷಣೆಯ ಮೊತ್ತ ಯಾರಿಗೆ ಸಿಗುವುದು?

  • ಅಪಘಾತ ವಿಮೆಗಳು ವೈಯಕ್ತಿಕವಾದವು, ಕೆಲವು ಯೋಜನೆಗಳಲ್ಲಿ ಕುಟುಂಗದ ಇತರ ಸದಸ್ಯರನ್ನೂ ಸೇರಿಸಬಹುದು.
  • ಕೆಲವು ಯೋಜನೆಗಳಲ್ಲಿ, ನಾಮನಿರ್ದೇಶಿತ ವ್ಯಕ್ತಿಯು ಆಶ್ವಾಸಿತ ಮೊತ್ತದ ಶೇ 50ರಷ್ಟನ್ನು ಪಡೆಯುತ್ತಾನೆ.
  • ಪಾಲಿಸಿಯಲ್ಲಿ ಸೇರಿಸಲಾಗಿರುವ ಮಕ್ಕಳಿಗೆ ಶೇ 25ರಷ್ಟು ಹೆಚ್ಚುವರಿ ರಕ್ಷಣೆ ಸಿಗುತ್ತದೆ.
  • ಅನೇಕ ಕಂಪನಿಗಳು ಸಂಪೂರ್ಣ ಕುಟುಂಬಕ್ಕೆ ಫ್ಲೋಟರ್‌ ಸ್ಕೀಮ್‌ಗಳನ್ನು ಹೊರತಂದಿವೆ.
  • ಫ್ಲೋಟರ್‌ ಸ್ಕೀಮ್‌ ಸಂಪೂರ್ಣ ಕುಟುಂಬಕ್ಕೆ ರಕ್ಷಣೆಯನ್ನು ಒದಗಿಸುತ್ತದೆ.
  • ಕೆಲವು ಪಾಲಿಸಿಗಳು ಅವಲಂಬಿತ ಮಕ್ಕಳ ಶಿಕ್ಷಣ ವೆಚ್ಚಗಳನ್ನೂ ಸಹ ಭರಿಸುತ್ತವೆ.
  • ಶಿಕ್ಷಣ ವೆಚ್ಚಗಳನ್ನು ಭರಿಸಲು ವಿಮಾ ಮೊತ್ತದ ಶೇ 50ರಷ್ಟು ಮೊತ್ತವನ್ನು ಪಾವತಿಸಲಾಗುವುದು.

(ಮಾಹಿತಿಕೃಪೆ: ಮನಿ9)

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ