ಯುಪಿಐ ಬಳಸುವವರೇ ಎಚ್ಚರ..! ರದ್ದಾಗಲಿವೆ ನಿಷ್ಕ್ರಿಯ ಐಡಿಗಳು; ಎನ್​ಪಿಸಿಐ ಮಾರ್ಗಸೂಚಿ ಗಮನಿಸಿ

Inactive UPI ID: ಟಿಪಿಎಪಿ ಅಥವಾ ಪಿಎಸ್​ಪಿ ಅಪ್ಲಿಕೇಶನ್​ಗಳಿಂದ ಹಣಕಾಸು ವಹಿವಾಟನ್ನಾಗಲೀ ಅಥವಾ ಬ್ಯಾಲನ್ಸ್ ಎನ್​ಕ್ವೈರಿ ಇತ್ಯಾದಿ ಹಣಕಾಸೇತರ ವಹಿವಾಟನ್ನಾಗಲೀ ಮಾಡದೇ ಇದ್ದರೆ ಡೀ ಆಕ್ಟಿವೇಟ್ ಆಗುವ ಸಾಧ್ಯತೆ ಇರುತ್ತದೆ. ಎನ್​ಪಿಸಿಐ ಈ ಸಂಬಂಧ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಯುಪಿಐ ಬಳಸುವವರೇ ಎಚ್ಚರ..! ರದ್ದಾಗಲಿವೆ ನಿಷ್ಕ್ರಿಯ ಐಡಿಗಳು; ಎನ್​ಪಿಸಿಐ ಮಾರ್ಗಸೂಚಿ ಗಮನಿಸಿ
ಯುಪಿಐ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 17, 2023 | 3:54 PM

ನವದೆಹಲಿ, ನವೆಂಬರ್ 17: ನಿಷ್ಕ್ರಿಯವಾಗಿರುವ ಯುಪಿಐ ಬಳಕೆದಾರರಿಗೆ ಎಚ್ಚರಿಕೆಯ ಕರೆಗಂಟೆ ಈ ಸುದ್ದಿ. ಕಳೆದ ಒಂದು ವರ್ಷದಿಂದ ಯಾವುದೇ ವಹಿವಾಟು ನಡೆಸದ ಯುಪಿಐ ಐಡಿ, ಯುಪಿಐ ನಂಬರ್ ಮತ್ತು ಫೋನ್ ನಂಬರ್​ಗಳನ್ನು ಡೀ ಆ್ಯಕ್ಟಿವೇಟ್ ಮಾಡುವ ಸಂಬಂಧ ಎನ್​ಪಿಸಿಐ (NPCI guidelines) ಮಾರ್ಗಸೂಚಿ ಹೊರಡಿಸಿದೆ. ಟಿಪಿಎಪಿ ಅಥವಾ ಪಿಎಸ್​ಪಿ ಅಪ್ಲಿಕೇಶನ್​ಗಳಿಂದ ಹಣಕಾಸು ವಹಿವಾಟನ್ನಾಗಲೀ ಅಥವಾ ಬ್ಯಾಲನ್ಸ್ ಎನ್​ಕ್ವೈರಿ ಇತ್ಯಾದಿ ಹಣಕಾಸೇತರ ವಹಿವಾಟನ್ನಾಗಲೀ (Non Banking Transaction) ಮಾಡದೇ ಇದ್ದರೆ ಡೀ ಆಕ್ಟಿವೇಟ್ ಆಗುವ ಸಾಧ್ಯತೆ ಇರುತ್ತದೆ. ನಿಷ್ಕ್ರಿಯ ಗ್ರಾಹಕರ ಯುಪಿಐ ಐಡಿಗಳನ್ನು ಡೀಆ್ಯಕ್ಟಿವೇಟ್ ಮಾಡಲು 2023ರ ಡಿಸೆಂಬರ್ 31ಕ್ಕೆ ಡೆಡ್​ಲೈನ್ ಹಾಕಲಾಗಿದೆ.

ಟಿಪಿಎಪಿ, ಅಥವಾ ಥರ್ಡ್ ಪಾರ್ಟಿ ಅಪ್ಲಿಕೇಶನ್ ಪ್ರೊವೈಡರ್​ಗಳೆಂದರೆ ಫೋನ್ ಪೇ, ಪೇಟಿಎಂ, ಗೂಗಲ್ ಪೇ ಇತ್ಯಾದಿಯವರು. ಇನ್ನು, ಪಿಎಸ್​ಪಿ ಎಂದರೆ ಪೇಮೆಂಟ್ ಸರ್ವಿಸ್ ಪ್ರೊವೈಡರ್​ಗಳಾಗಿವೆ. ಪೇಮೆಂಟ್ ಒದಗಿಸುವ ಬ್ಯಾಂಕ್ ಇತ್ಯಾದಿಗಳು ಪಿಎಸ್​ಪಿಗಳಾಗಿವೆ.

ಇದನ್ನೂ ಓದಿ: ಯುಪಿಐನಲ್ಲಿ ಕ್ರೆಡಿಟ್ ಕಾರ್ಡ್ ಲಿಂಕ್ ಮಾಡುವ ಫೀಚರ್; ಪ್ರಯೋಜನಗಳೇನು? ಅನನುಕೂಲಗಳೇನು?

ಯುಪಿಐ ಗ್ರಾಹಕರು ತಮ್ಮ ಮೊಬೈಲ್ ನಂಬರ್ ಅನ್ನು ಬದಲಿಸಿ ಹೊಸ ನಂಬರ್ ಅಪ್​ಡೇಟ್ ಮಾಡಿದರೂ ಬ್ಯಾಂಕುಗಳಲ್ಲಿ ಆ ನಂಬರ್ ಅನ್ನು ಬದಲಿಸಿರುವುದಿಲ್ಲ. ಇಂಥ ಹಲವು ನಿದರ್ಶನಗಳು ಗಮನಕ್ಕೆ ಬಂದಿವೆ. ಈ ಹಿನ್ನೆಲೆಯಲ್ಲಿ ಗೈಡ್​ಲೈನ್ಸ್ ಬಿಡುಗಡೆ ಮಾಡಿದ್ದೇವೆ ಎಂದು ಯುಪಿಐ ರೂಪಿಸಿದ ನ್ಯಾಷನಲ್ ಪೇಮೆಂಟ್ ಕಾರ್ಪೊರೇಶನ್ ಸಂಸ್ಥೆ ತಿಳಿಸಿದೆ.

ನಿಷ್ಕ್ರಿಯಗೊಂಡಿರುವ ಯುಪಿಐ ಐಡಿಗಳಿಗೆ ಆಕಸ್ಮಿಕವಾಗಿ ಹಣ ವರ್ಗಾವಣೆ ಆಗುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗುತ್ತಿದೆ. ಯುಪಿಐ ಐಡಿಗಳನ್ನು ಡೀ ಆ್ಯಕ್ಟಿವೇಟ್ ಮಾಡಿದಾಗ ಅವುಗಳ ಮೂಲಕ ಯಾವುದೇ ವಹಿವಾಟ ನಡೆಸಲು ಆಗುವುದಿಲ್ಲ. ಆ ಐಡಿಗೆ ಯಾವ ಹಣವನ್ನೂ ಕಳುಹಿಸಲು ಆಗುವುದಿಲ್ಲ. ಆ ಐಡಿಯಿಂದ ಬೇರೆಯವರಿಗೆ ಹಣ ಕಳುಹಿಸಲೂ ಆಗುವುದಿಲ್ಲ.

ಇದನ್ನೂ ಓದಿ: ಹೊಸ ದಾಖಲೆ; ಅಕ್ಟೋಬರ್ ತಿಂಗಳಲ್ಲಿ ಯುಪಿಐ ಮೂಲಕ ಆದ ವಹಿವಾಟು ಮೌಲ್ಯ 17.16 ಲಕ್ಷಕೋಟಿ ರೂ

ಎನ್​ಪಿಸಿಐನ ಕೆಲ ಮಾರ್ಗಸೂಚಿಗಳು ಇವು

  • ಒಂದು ವರ್ಷದಿಂದ ಯಾವ ವಹಿವಾಟು ನಡೆಸದ ಯುಪಿಐ ಐಡಿಗಳನ್ನು ಎಲ್ಲಾ ಟಿಪಿಎಪಿ ಮತ್ತು ಪಿಎಸ್​ಪಿಗಳು ಗುರುತಿಸಬೇಕು. ಯಾವುದೇ ಹಣ ವರ್ಗಾವಣೆ ಆಗದಂತೆ ಆ ಯುಪಿಐ ಐಡಿ ಮತ್ತು ಯುಪಿಐ ನಂಬರ್​ಗಳನ್ನು ಡಿಸೇಬಲ್ ಮಾಡಬೇಕು.
  • ಈ ಫೋನ್ ನಂಬರ್ ಅನ್ನು ಯುಪಿಐ ಮ್ಯಾಪರ್​ನಿಂದ ಪಿಎಸ್​ಪಿಗಳು (ಬ್ಯಾಂಕ್) ಡೀರಿಜಿಸ್ಟರ್ ಮಾಡಬೇಕು.
  • ಹೀಗೆ ಡಿಸೇಬಲ್ ಆಗಿರುವ ಯುಪಿಐ ಐಡಿಯ ಗ್ರಾಯಕರು ಮತ್ತೊಮ್ಮೆ ಯುಪಿಐ ಆ್ಯಪ್​ಗಳಿಗೆ ನೊಂದಣಿ ಆಗಬೇಕು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ